ಗದಗ: ಬರ ಅಧ್ಯಯನದ ವೇಳೆ ಆಗಮಿಸದ ಶಾಸಕ ಲಮಾಣಿ, ಸಂಸದ ಉದಾಸಿ ವಿರುದ್ಧ ರೈತರ ಆಕ್ರೋಶ

ಬರ ಅಧ್ಯಯನ ನಡೆಸಲು ಕೇಂದ್ರದ ಅಧಿಕಾರಿಗಳ ತಂಡ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿಗೆ ಆಗಮಿಸಿದ್ದು, ಈ ವೇಳೆ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಹಾಗೂ ಗದಗ-ಹಾವೇರಿ ಸಂಸದ ಶಿವಕುಮಾರ್ ಉದಾಸಿ ಸ್ಥಳಕ್ಕೆ ಭೇಟಿ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಲುಮಾಣಿ ವಿರುದ್ಧ ಆಕ್ರೋಶ ಹಾಕಿದರು.

ಗದಗ: ಬರ ಅಧ್ಯಯನದ ವೇಳೆ ಆಗಮಿಸದ ಶಾಸಕ ಲಮಾಣಿ, ಸಂಸದ ಉದಾಸಿ ವಿರುದ್ಧ ರೈತರ ಆಕ್ರೋಶ
ಶಾಸಕ ಡಾ.ಚಂದ್ರು ಲಮಾಣಿ ಮತ್ತು ಸಂಸದ ಶಿವಕುಮಾರ್ ಉದಾಸಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Rakesh Nayak Manchi

Updated on: Oct 07, 2023 | 2:56 PM

ಗದಗ, ಅ.7: ಬರ ಅಧ್ಯಯನ ನಡೆಸಲು ಕೇಂದ್ರದ ಅಧಿಕಾರಿಗಳ ತಂಡ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿಗೆ ಆಗಮಿಸಿದ್ದು, ಈ ವೇಳೆ ಶಾಸಕ ಚಂದ್ರು ಲಮಾಣಿ (Dr.Chandru Lamani) ಹಾಗೂ ಗದಗ-ಹಾವೇರಿ ಸಂಸದ ಶಿವಕುಮಾರ್ ಉದಾಸಿ (Shivakumar Udasi) ಸ್ಥಳಕ್ಕೆ ಭೇಟಿ ನೀಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಲುಮಾಣಿ ವಿರುದ್ಧ ಆಕ್ರೋಶ ಹಾಕಿದ್ದಾರೆ.

ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದಾಗ ಸ್ಥಳಕ್ಕೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಶಾಸಕ ಲಮಾಣಿ ಹಾಗೂ ಸಂಸದ ಉದಾಸಿ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ನಾಯಕರನ್ನು ಪತ್ತೆ ಮಾಡುವಂತೆ ಲಕ್ಷ್ಮೇಶ್ವರ ಠಾಣಾ ಪೊಲೀಸರಿಗೆ ಮನವಿ ಮಾಡಿದರು.

ರೈತರೊಂದಿಗೆ ಕ್ಷೇತ್ರವನ್ನು ಸುತ್ತಿ, ಬರದ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗಿತ್ತು. ಆದರೆ ಕ್ಷೇತ್ರಕ್ಕೆ ಆಗಮಿಸದ ಜನಪ್ರತಿನಿಧಿಗಳ ವಿರುದ್ಧ ಹೋರಾಟ ನಡೆಸಲು ರೈತರು ಮುಂದಾಗಿದ್ದಾರೆ. ಹೋರಾಟಕ್ಕೆ ಬಂದೋಬಸ್ತ್ ನೀಡುವಂತೆ ಲಕ್ಷ್ಮೇಶ್ವರ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿಗಳು ಬೇಡ, ಸಾಲ ಮನ್ನಾ ಮಾಡಿ ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತ ಮಹಿಳೆಯರ ಅಳಲು

ಲಕ್ಷ್ಮೇಶ್ವರ ಪಟ್ಟಣದ ಹಾವಳಿ ಹನುಮಂತ ದೇವಸ್ಥಾನದಿಂದ ಹೋಸ ಬಸ್ ನಿಲ್ದಾಣದವರಿಗೆ ಪಕ್ಷಾತೀತ ಹೋರಾಟ ವೇದಿಕೆಯಿಂದ ಶಾಸಕರ ವಿರುದ್ಧ ಹೋರಾಟಕ್ಕೆ ಪ್ಲಾನ್ ಮಾಡಲಾಗಿದೆ.

ಸಮಸ್ಯೆ ತೋಡಿಕೊಳ್ಳಲು ಭಾಷಾ ಸಮಸ್ಯೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿಗೆ ಬರ ಅಧ್ಯಯನ ನಡೆಸಲು ಬಂದ ಅಧಿಕಾರಿಗಳೊಂದಿಗೆ ಮಾತನಾಡಲು ರೈತರಿಗೆ ಭಾಷಾ ಸಮಸ್ಯೆ ಎದುರಾಗಿದೆ. ಶಾಸಕರು ಎಲ್ಲ ಭಾಷೆ ಬಲ್ಲವರಾಗಿದ್ದಾರೆ. ವಿದ್ಯಾವಂತ, ಬುದ್ಧಿವಂತರಾಗಿದ್ದಾರೆ. ಆದರೆ ರೈತರ ಸಂಕಷ್ಟದ ವೇಳೆ ಅವರು ಜೊತೆ ಇರಬೇಕಿತ್ತು. ಕೇಂದ್ರ ಅಧ್ಯಯನ ತಂಡ ಬಂದಾಗ ರೈತರ ಸಮಸ್ಯೆಗಳು ಕೇಂದ್ರ ತಂಡಕ್ಕೆ ಹೇಳಬಹುದಿತ್ತು. ಆದರೆ ರೈತರ ಸಂಕಷ್ಟದ ವೇಳೆ ನೀವು ನಾಪತ್ತೆಯಾಗಿದ್ದೀರಿ ಅಂತ ರೈತರು ಆಕ್ರೋಶ ಹೊರಹಾಕಿದರು.

ನೀವು ರೈತ ವಿರೋಧಿ ಶಾಸಕರು ಅಂತ ಲಮಾಣಿ ವಿರುದ್ಧ ಕಿಡಿ ಕಾರಿದ ರೈತರು, ನೀವು ಸುಮ್ಮನೆ ಇರಬೇಡಿ ಬರದಿಂದ ಕಂಗೆಟ್ಟ ರೈತರ ಜೊತೆ ಇರಿ ಅಂತ ತಾಕೀತು ಮಾಡಿದರು.

ಶಾಸಕ ನಿರ್ಲಕ್ಷ್ಯ ಖಂಡಿಸಿ ರೈತರು ಹಾವಳಿ ಆಂಜನೇಯ ದೇವಸ್ಥಾನದಿಂದ ಬಸ್ ನಿಲ್ದಾಣದವರಿಗೆ ರೈತರು ಪಾದಯಾತ್ರೆ ನಡೆಸಿದರು. ಹಲಗೆ ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ ರೈತರು, ಕಪ್ಪು ಬಟ್ಟೆ ಪ್ರದರ್ಶನ ಮಾಡಿದರಲ್ಲದೆ, ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ