ಗದಗ: ಶೂ ಧರಿಸಿ ಧ್ವಜಾರೋಹಣ ಮಾಡಿದ ಅಬಕಾರಿ ಅಧಿಕಾರಿಗಳು

| Updated By: Rakesh Nayak Manchi

Updated on: Aug 15, 2023 | 3:53 PM

ಮುಂಡರಗಿ ಪಟ್ಟಣದ ಅಬಕಾರಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಆದರೆ, ಅಧಿಕಾರಿಗಳು ಶೂ ಧರಿಸಿಕೊಂಡೇ ಧ್ವಜಾರೋಹಣ ಮಾಡಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಅಲ್ಲದೆ, ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟಿಲ್ಲ ಎಂದು ದಲಿತ ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಗದಗ: ಶೂ ಧರಿಸಿ ಧ್ವಜಾರೋಹಣ ಮಾಡಿದ ಅಬಕಾರಿ ಅಧಿಕಾರಿಗಳು
ಶೂ ಧರಿಸಿ ಧ್ವಜಾರೋಹಣ ಮಾಡಿದ ಅಬಕಾರಿ ಅಧಿಕಾರಿಗಳು
Follow us on

ಗದಗ, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ (Independence Day) ವೇಳೆ ಅಧಿಕಾರಿಗಳು ಶೂ ಧರಿಸಿಕೊಂಡೇ ಧ್ವಜಾರೋಹಣ ನಡೆಸುವ ಮೂಲಕ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದ ಅಬಕಾರಿ ಕಚೇರಿಯಲ್ಲಿ ನಡೆದಿದೆ. ಈ ಯಡವಟ್ಟಿನ ನಡುವೆ, ಆಚರಣೆ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಕೇವಲ ಮಹಾತ್ಮ ಗಾಂಧಿ ಪೋಟೋ ಇಟ್ಟು, ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿರುವುದು ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಶೂ ಧರಿಸಿ ಧ್ವಜಾರೋಹಣ ನಡೆಸಿದ್ದನ್ನೂ ಟೀಕಿಸಿದ್ದಾರೆ.

ಇದನ್ನೂ ಓದಿ: Independence Day 2023: ತಮಿಳುನಾಡು; ನೀರಿನಾಳದೊಳಗೆ ತ್ರಿವರ್ಣ ಧ್ವಜಾರೋಹಣ; ಹೆಮ್ಮೆಪಟ್ಟ ನೆಟ್ಟಿಗರು

ತಪ್ಪೊಪ್ಪಿಕೊಂಡ ಗದಗ ಸಾರಿಗೆ ವಿಭಾಗದ ಜಿಲ್ಲಾಧಿಕಾರಿ

ಮುಳಗುಂದ ನಾಕಾ ಬಳಿ ಇರುವ ಕೆಎಸ್​ಆರ್​ಟಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂಬೇಡ್ಕರ್ ಫೋಟೋ ಇಡದೇ ಸ್ವಾತಂತ್ರ್ಯ ದಿನಾಚರಣೆ ನಡೆಸಿರುವುದನ್ನು ಖಂಡಿಸಿದ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದವು. ವಿವಾದದ ಬಳಿಕ ಎಚ್ಚೆತ್ತ ದಲಿತ ಪರ ಸಂಘಟನೆಗಳ ಕ್ಷಮೆ ಕೇಳಿದ ಗದಗ ಸಾರಿಗೆ ವಿಭಾಗದ ಜಿಲ್ಲಾಧಿಕಾರಿ ಶೀನಯ್ಯ, ಅಚಾತುರ್ಯದಿಂದ ಆದ ಘಟನೆಗೆ ಕ್ಷಮೆ ಕೇಳಿದರು. ನಂತರ, ಅಂಬೇಡ್ಕರ್ ಅವರ ಭಾವಚಿತ್ರ ಇರಿಸಿ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರಕರಣಕ್ಕೆ ತೆರೆ ಎಳೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ