ಗದಗ: ಇಬ್ಬರು ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ ವಿಷ ಸೇವಿಸಿದ ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆಲೂರ ಗ್ರಾಮದ ನಿವಾಸಿ ನಿರ್ಮಲಾ ಪಾಟೀಲ್ (34) ಎಂಬ ಮಹಿಳೆ ಗದಗ ಜಿಮ್ಸ್ನಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೋರ್ವ ಮಹಿಳೆ ಸರೋಜವ್ವ ಪಾಟೀಲ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನೆ ಹಿನ್ನೆಲೆ:
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೆಲೂರ ಗ್ರಾಮದಲ್ಲಿ ಬಗರ್ ಹುಕುಂ ಸಾಗುವಳಿ ಜಮೀನಿನಲ್ಲಿ ಅರಣ್ಯ ಇಲಾಖೆ ಟ್ರೆಂಚ್ ಹಾಕುವುದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇಬ್ಬರು ರೈತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ಸಾಗುವಳಿದಾರರಿಗೆ ಒಕ್ಕಲೆಬ್ಬಿಸಲು ಕಿರುಕುಳ ಆರೋಪದ ಹಿನ್ನೆಲೆ ಮಹಿಳೆಯರು ವಿಷ ಸೇವಿಸಿದ್ದರು. ರೈತ ಮಹಿಳೆಯರಾದ ಸರೋಜವ್ವ, ನಿರ್ಮಲಾ ಪಾಟೀಲ್ ಈ ವೇಳೆ ಅಸ್ವಸ್ಥ ಆಗಿದ್ದು, ಅಸ್ವಸ್ಥ ರೈತ ಮಹಿಳೆಯರಿಗೆ ಮುಂಡರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ನಿರ್ಮಲಾ ಪಾಟೀಲ್ ಎಂಬ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಕೆಲೂರ ಗ್ರಾಮದಲ್ಲಿ ಗ್ರಾಮಸ್ಥರು ರೊಚ್ಚಿಗೆದಿದ್ದಾರೆ. ನಿರ್ಮಲಾ ಸಾವಿನ ಸುದ್ದಿ ಕೇಳುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಮಹಿಳೆ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ಕಾರಣ ಅಂತ ಗರಂ ಆಗಿದ್ದಾರೆ. ಜಮೀನುಗಳಲ್ಲಿ ಟ್ರೆಂಚ್ ಹಾಕಲು ಬಂದ ಜೆಸಿಬಿ ಹಾಗೂ ವಾಹನಗಳ ಮೇಲೆ ಗ್ರಾಮಸ್ಥರು ದೊಣ್ಣೆಗಳಿಂದ ಅಟ್ಯಾಕ್ ಮಾಡಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.
ಹಣ, ಚಿನ್ನ ಮುಟ್ಟದೆ ಕೇವಲ ಲ್ಯಾಪ್ಟಾಪ್, ಮೊಬೈಲ್ ಕದಿಯುವ ಡಿಫರೆಂಟ್ ಕಳ್ಳ
ಬೆಂಗಳೂರಿನಲ್ಲಿ ಒಬ್ಬ ಡಿಫರೆಂಟ್ ಕಳ್ಳನಿದ್ದಾನೆ. ಎಲ್ರೂ ಚಿನ್ನಾಭರಣ, ಹಣ ಕದ್ದರೆ ಈತ ಅದನ್ನು ಮುಟ್ಟೋದಿಲ್ಲ. ಮನೆಗೆ ನುಗ್ಗಿದರೂ ಒಡವೆ, ಹಣಕ್ಕೆ ಕೈ ಹಾಕದ ಖದೀಮ ಕೇವಲ ಮೊಬೈಲ್, ಲ್ಯಾಪ್ ಟಾಪ್ ಮಾತ್ರ ಕಳ್ಳತನ ಮಾಡುತ್ತಾನೆ. ಮನೆಗೆ ನುಗ್ಗಿ ಮೊಬೈಲ್ ಲ್ಯಾಪ್ ಟಾಪ್ ಕಳ್ಳತನ ನಡೆಸ್ತಾ ಇದ್ದ ಚಾಲಕಿ ಆರೋಪಿಯನ್ನು ಇದೀಗ ಬಂಧಿಸಲಾಗಿದೆ. ಬೈಯಪ್ಪನಹಳ್ಳಿ ಪೊಲೀಸರಿಂದ ಆರೋಪಿಯ ಬಂಧನ ಮಾಡಲಾಗಿದೆ. ನಾಗಲ್ಯಾಂಡ್ ಮೂಲದ ತಾಂಗ್ ಸೈನ್ ಬಂಧಿತ ಆರೋಪಿ ಆಗಿದ್ದಾನೆ. ಆರೋಪಿಯಿಂದ ಸುಮಾರು 9 ಲಕ್ಷ ಮೌಲ್ಯದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಯಾಕ್ರೀ ಇಷ್ಟು ಲೇಟು? ನಾನೇ ಬೇಗ ಬಂದೆ, ನೀವು ಇಷ್ಟು ಲೇಟಾಗಿ ಬರೋದಾ? ಗದಗ ಡಿಸಿ ಬೆವರಿಳಿಸಿದ ಸಚಿವ ಬಿಸಿ ಪಾಟೀಲ್
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿಕೊಂಡ ಗದಗನ ವೈದ್ಯಕೀಯ ವಿದ್ಯಾರ್ಥಿ; ಮಗನನ್ನು ಸುರಕ್ಷಿತವಾಗಿ ಕರೆತರುವಂತೆ ಸರ್ಕಾರಕ್ಕೆ ಪೋಷಕರ ಮನವಿ
Published On - 2:48 pm, Mon, 7 March 22