ಯಾಕ್ರೀ ಇಷ್ಟು ಲೇಟು? ನಾನೇ ಬೇಗ ಬಂದೆ, ನೀವು ಇಷ್ಟು ಲೇಟಾಗಿ ಬರೋದಾ? ಗದಗ ಡಿಸಿ ಬೆವರಿಳಿಸಿದ ಸಚಿವ ಬಿಸಿ ಪಾಟೀಲ್

ಸಚಿವ ಬಿಸಿ ಪಾಟೀಲ್ ಇಂದು ವಿವಿಧ ಕಾಮಗಾರಿಗಳ ಪರಿಶೀಲನೆ ಮತ್ತು ಅಧಿಕಾರಿಗಳ ಜೊತೆಗೆ ಸಭೆ ಮಾಡಲಿದ್ದಾರೆ. ಹೀಗಾಗಿ ಸಚಿವರು ಪ್ರವಾಸಿ ಮಂದಿರಕ್ಕೆ ಬಂದಿದ್ದು ಈ ವೇಳೆ ಕಾಯುವಂತ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಒಂದು ಗಂಟೆ ತಡವಾಗಿ ಬಂದಿದಕ್ಕೆ ಡಿಸಿ ವಿರುದ್ಧ ಸಚಿವರು ಗರಂ ಆಗಿದ್ದಾರೆ.

ಯಾಕ್ರೀ ಇಷ್ಟು ಲೇಟು? ನಾನೇ ಬೇಗ ಬಂದೆ, ನೀವು ಇಷ್ಟು ಲೇಟಾಗಿ ಬರೋದಾ? ಗದಗ ಡಿಸಿ ಬೆವರಿಳಿಸಿದ ಸಚಿವ ಬಿಸಿ ಪಾಟೀಲ್
ಸಚಿವ ಬಿಸಿ ಪಾಟೀಲ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 28, 2022 | 1:14 PM

ಗದಗ: ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲ್(BC Patil) ಗದಗ ಡಿಸಿಗೆ ಬೆವರಿಳಿಸಿದ ಘಟನೆ ನಡೆದಿದೆ. ಲೇಟಾಗಿ ಬಂದ ಗದಗ ಡಿಸಿ ಸುಂದರೇಶಬಾಬುರಿಗೆ ಯಾಕ್ರೀ ಇಷ್ಟು ಲೇಟು? ಎಂದು ಪ್ರಶ್ನಿಸಿ ಗರಂ ಆಗಿದ್ದಾರೆ. ನಾನು 8.30ಕ್ಕೆ ಬಂದಿದ್ದೀನಿ. ನೀವು ಇಷ್ಟು ಲೇಟಾಗಿ ಬರೋದಾ? ಎಂದು ಗದಗ ಪ್ರವಾಸಿ ಮಂದಿರದಲ್ಲಿ ಡಿಸಿ ಸುಂದರೇಶಬಾಬುರಿಗೆ ಸಚಿವ ಬಿಸಿ ಪಾಟೀಲ್ ತರಾಟೆಗೆ ತೆಗೆದುಕೊಂಡ್ರು.

ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಬಿಸಿ ಪಾಟೀಲ್ ಎರಡನೇ ಬಾರಿಗೆ ಗದಗಕ್ಕೆ ಬಂದಿದ್ದಾರೆ. ಸದ್ಯ ಸಚಿವ ಬಿಸಿ ಪಾಟೀಲ್ ಇಂದು ವಿವಿಧ ಕಾಮಗಾರಿಗಳ ಪರಿಶೀಲನೆ ಮತ್ತು ಅಧಿಕಾರಿಗಳ ಜೊತೆಗೆ ಸಭೆ ಮಾಡಲಿದ್ದಾರೆ. ಹೀಗಾಗಿ ಸಚಿವರು ಪ್ರವಾಸಿ ಮಂದಿರಕ್ಕೆ ಬಂದಿದ್ದು ಈ ವೇಳೆ ಕಾಯುವಂತ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಒಂದು ಗಂಟೆ ತಡವಾಗಿ ಬಂದಿದಕ್ಕೆ ಡಿಸಿ ವಿರುದ್ಧ ಸಚಿವರು ಗರಂ ಆಗಿದ್ದಾರೆ. ಈ ವೇಳೆ ನೀವು 9.30ಕ್ಕೆ ಬರೋದಾಗಿ ಹೇಳಿದ್ರಿ ಸರ್ ಅಂತ ಡಿಸಿ ಉತ್ತರಿಸಿದ್ದು ಘಟನೆಯಿಂದ ಡಿಸಿ ಮುಜುಗರಕ್ಕೊಳಗಾದ ಸನ್ನಿವೇಶ ನಡೆದಿದೆ.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಸಚಿವ ಬಿಸಿ ಪಾಟೀಲ್ ಆಕ್ರೋಶ ಇನ್ನು ಮತ್ತೊಂದು ಕಡೆ ಇದೇ ವೇಳೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಸಚಿವ ಬಿಸಿ ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆ. ಜನ್ರು ಕಾಂಗ್ರೆಸ್ ಪಕ್ಷಕ್ಕೆ ಛೀ ಥೂ ಅಂತಿದ್ದಾರೆ. ಈಗಾಗಲೇ ಕಾಂಗ್ರೆಸ್ ಮೂರು ದಿನ ವಿಧಾನ ಸೌಧದಲ್ಲಿ ನಿದ್ದೆ ಮಾಡಿದೆ ಇನ್ನೂ ಎಚ್ಚರ ಆಗಿಲ್ಲ ಎಂದು ಗದಗನಲ್ಲಿ ಉಸ್ತುವಾರಿ ಸಚಿವ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಆರು ದಿನ ಕಲಾಪ ಹಾಳು ಮಾಡಿದ್ದಾರೆ. ಯಾವ ಪುರುಷಾರ್ಥಕ್ಕೆ ಮಾಡಿದ್ರೋ ಅಂತ ಕಿಡಿಕಾರಿದ್ದಾರೆ.

ಯಾವ ಅಭಿವೃದ್ಧಿ, ಸಮಸ್ಯೆ ಬಗ್ಗೆ ಚರ್ಚೆ ಮಾಡಲಿಲ್ಲ. ಅದಕ್ಕೆ ಜನ್ರು ಕಾಂಗ್ರೆಸ್ ಅಂದ್ರೆ ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದಾರೆ. ಜನ್ರ ಗಮನ ಸೆಳೆಯಲು ಮೇಕೆದಾಟು 2.O. ಯಾರ ವಿರುದ್ಧ ಹೋರಾಟ ಮಾಡ್ತಾಯಿದ್ದಾರೆ. ಬಿಜೆಪಿ ಮೇಕೆದಾಟುಗೆ ವಿರೋಧಿ ಇಲ್ಲ. ಈಗಾಗಲೇ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಪರಿಸರ ಇಲಾಖೆಯಿಂದ ಕ್ಲೀಯರನ್ಸ್ ಸಿಕ್ಕ ತಕ್ಷಣ ಕೆಲಸ ಆರಂಭ ಆಗುತ್ತೆ. ಇಷ್ಟು ವರ್ಷ ಯಾಕೆ ಮೇಕೆದಾಟು ಬಗ್ಗೆ ಚಿಂತನೆ ಮಾಡಿಲ್ಲ ಎಂದು ಬಿಸಿ ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ನವರು ಯಾಕೆ ಕಳಸಾ ಬಂಡೂರಿ, ಮಹದಾಯಿ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್ ನ್ನು ಜನ್ರು ಮರೀತಾಯಿದ್ದಾರೆ. ಮುಳುಗಿ ಹೋಗಿದೆ. ತೋರಿಸಿ ಕೊಡಲು ರಾಜಕೀಯ ಗಿಮಿಕ್. ಸರ್ಕಾರದ ವಿರುದ್ಧ ಹೋರಾಟ ಮಾಡಲು ಯಾವ ವಿಷಯ ಇಲ್ಲ. ಉತ್ತರ ಕರ್ನಾಟಕ ಬಗ್ಗೆ ಕಾಂಗ್ರೆಸ್ ಗೆ ಚಿಂತನೆ ಇಲ್ಲ. ಇದು ಡಿಕೆ ಶಿವಕುಮಾರ್ ಅವ್ರ ಸ್ವಪ್ರತಿಷ್ಟೇ ಇದು. ಡಿಕೆಶಿ ಅವ್ರ ಶಕ್ತಿ ಪ್ರದರ್ಶನ. ತಾನು ಎಷ್ಟು ಬಲಿಷ್ಠ ಇದ್ದೇನೆ ಅನ್ನೋದು ತೋರಿಸಲು‌ ಜನ ಸೇರಿಸಿದ್ದಾರೆ. ಯಾವ ಸಾಧನೆ ಸಾಧ್ಯ ಇಲ್ಲ. ಡಿಕೆಶಿ ನೀರಾವರಿ ಸಚಿವರು ಆಗಿದ್ದಾಗ ಏನೂ‌ ಮಾಡಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾಕೇ ಮಾಡಲಿಲ್ಲ. ಚುನಾವಣೆ ಹತ್ತಿರ ಬಂದಿದೆ. ಅದಕ್ಕೆ ಗಿಮಿಕ್ ಅಂತ ಕಿಡಿಕಾರಿದ್ದಾರೆ.

ಇದನ್ನೂ ಓದಿ: SGB Scheme 2021-22 Series X: ಸವರನ್ ಗೋಲ್ಡ್ ಬಾಂಡ್ ಸಬ್​ಸ್ಕ್ರಿಪ್ಷನ್ ಇಂದಿನಿಂದ ಶುರು; ದರ ಇತರ ವಿವರ ಹೀಗಿದೆ

ರಷ್ಯಾ-ಉಕ್ರೇನ್​​ ಯುದ್ಧ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಜಾಣನಡೆ, ಮತ್ತೆ ಮತದಾನದಿಂದ ದೂರ !

Published On - 12:44 pm, Mon, 28 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್