SGB Scheme 2021-22 Series X: ಸವರನ್ ಗೋಲ್ಡ್ ಬಾಂಡ್ ಸಬ್ಸ್ಕ್ರಿಪ್ಷನ್ ಇಂದಿನಿಂದ ಶುರು; ದರ ಇತರ ವಿವರ ಹೀಗಿದೆ
ಸವರನ್ ಗೋಲ್ಡ್ ಬಾಂಡ್ 2021-22ನೇ ಸಾಲಿನ ಹತ್ತನೇ ಕಂತಿನ ಚಂದಾದಾರಿಕೆ ಫೆಬ್ರವರಿ 28ನೇ ತಾರೀಕಿನಿಂದ ಶುರುವಾಗಿದೆ. ಮಾರ್ಚ್ 4ನೇ ತಾರೀಕಿನ ತನಕ ಇರುತ್ತದೆ. ದರ ಮತ್ತಿತರ ವಿವರ ಇಲ್ಲಿದೆ.
ಸವರನ್ ಗೋಲ್ಡ್ ಬಾಂಡ್ ಯೋಜನೆ 2021-22 (Sovereign Gold Bond Scheme) ಸರಣಿ X ಅಥವಾ ಹತ್ತನೇ ಕಂತು ಇಂದಿನಿಂದ (ಸೋಮವಾರ, ಫೆಬ್ರವರಿ 28) ಸಬ್ಸ್ಕ್ರಿಪ್ಷನ್ಗಾಗಿ ತೆರೆದಿರುತ್ತದೆ. ಎಸ್ಜಿಬಿ ಐದು ದಿನಗಳ ಅವಧಿಗೆ, ಅಂದರೆ ಫೆಬ್ರವರಿ 28ರಿಂದ ಮಾರ್ಚ್ 4ರ ವರೆಗೆ ಸಬ್ಸಕ್ರಿಪ್ಷನ್ಗಾಗಿ ತೆರೆದಿರುತ್ತದೆ. ಪ್ರತಿ ಗ್ರಾಂಗೆ 5,109 ರೂಪಾಯಿ ನಿಗದಿಪಡಿಸಲಾಗಿದೆ. “ಬಾಂಡ್‌ನ ನಾಮಿನಲ್ ಮೌಲ್ಯ 5,109 ರೂಪಾಯಿ ಆಗುತ್ತದೆ” ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಭಾರತ ಸರ್ಕಾರವು ಆರ್‌ಬಿಐ ಜೊತೆ ಸಮಾಲೋಚಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ 50 ರೂಪಾಯಿಗಳ ರಿಯಾಯಿತಿ ನೀಡಲು ನಿರ್ಧರಿಸಿದೆ. “ಅಂತಹ ಹೂಡಿಕೆದಾರರಿಗೆ, ಗೋಲ್ಡ್ ಬಾಂಡ್‌ನ ವಿತರಣೆಯ ಬೆಲೆ ಪ್ರತಿ ಗ್ರಾಂ ಚಿನ್ನಕ್ಕೆ ರೂ. 5,059 ಆಗಿರುತ್ತದೆ,” ಎಂದು ಆರ್‌ಬಿಐ ಹೇಳಿದೆ.
ಬಾಂಡ್‌ನ ಅವಧಿಯು ಎಂಟು ವರ್ಷಗಳ ಅವಧಿಗೆ ಇರುತ್ತದೆ. ಐದನೇ ವರ್ಷದ ನಂತರ ನಿರ್ಗಮನ ಆಯ್ಕೆಯೊಂದಿಗೆ ಮುಂದಿನ ಬಡ್ಡಿ ಪಾವತಿ ದಿನಾಂಕಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಕನಿಷ್ಠ ಅನುಮತಿಸುವ ಹೂಡಿಕೆಯು 1 ಗ್ರಾಂ ಚಿನ್ನವಾಗಿದೆ. ಸಬ್ಸ್ಕ್ರಿಪ್ಷನ್ ಗರಿಷ್ಠ ಮಿತಿಯು ವ್ಯಕ್ತಿಗೆ 4 ಕೇಜಿ, ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೇಜಿ ಮತ್ತು ಪ್ರತಿ ಹಣಕಾಸು ವರ್ಷಕ್ಕೆ (ಏಪ್ರಿಲ್-ಮಾರ್ಚ್) ಟ್ರಸ್ಟ್‌ಗಳು ಮತ್ತು ಅಂತಹುದೇ ಘಟಕಗಳಿಗೆ 20 ಕೇಜಿ ಇದೆ. ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (KYC) ನಿಯಮಗಳು ಭೌತಿಕ ಚಿನ್ನದ ಖರೀದಿಗೆ ಒಂದೇ ಆಗಿರುತ್ತವೆ. ಎಸ್ಜಿಬಿ ಯೋಜನೆಯನ್ನು 2015 ನವೆಂಬರ್ನಲ್ಲಿ ಪ್ರಾರಂಭಿಸಲಾಯಿತು. ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡಲು ಮತ್ತು ಚಿನ್ನದ ಖರೀದಿಗೆ ಬಳಸುವ ದೇಶೀಯ ಉಳಿತಾಯದ ಒಂದು ಭಾಗವನ್ನು ಆರ್ಥಿಕ ಉಳಿತಾಯಕ್ಕೆ ಬದಲಾಯಿಸುವ ಉದ್ದೇಶದಿಂದ ಹೀಗೆ ಮಾಡಲಾಯಿತು.
ರಷ್ಯಾ- ಉಕ್ರೇನ್ ಮಧ್ಯದ ಬಿಕ್ಕಟ್ಟಿನ ಕಾರಣಕ್ಕೆ ಚಿನ್ನದ ಬೆಲೆಯು ಔನ್ಸ್ಗೆ 2000 ಡಾಲರ್ ದಾಟುವ ಸಾಧ್ಯತೆ ಇದೆ. ಇದು ಮಾರುಕಟ್ಟೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ವೇಗ ಎಂದು ಹೇಳಲಾಗಿದೆ.
ಸವರನ್ ಗೋಲ್ಡ್ ಬಾಂಡ್ ಸ್ಕೀಮ್ ಎಂದರೇನು? ಸವರನ್ ಗೋಲ್ಡ್ ಬಾಂಡ್ ಸ್ಕೀಮ್ ಗ್ರಾಂ ಲೆಕ್ಕದ ಚಿನ್ನದಲ್ಲಿ ಗುರುತಿಸಲಾದ ಸರ್ಕಾರಿ ಸೆಕ್ಯೂರಿಟಿ ಆಗಿವೆ. ಅವು ಭೌತಿಕ ಚಿನ್ನವನ್ನು ಇಟ್ಟುಕೊಳ್ಳಲು ಪರ್ಯಾಯವಾಗಿ ಇರುತ್ತವೆ. ಹೂಡಿಕೆದಾರರು ಇಶ್ಯೂ ಬೆಲೆಯನ್ನು ನಗದು ರೂಪದಲ್ಲಿ ಪಾವತಿಸಬೇಕು ಮತ್ತು ಬಾಂಡ್‌ಗಳನ್ನು ಮೆಚ್ಯೂರಿಟಿ ವೇಳೆಯಲ್ಲಿ ನಗದು ರೂಪದಲ್ಲಿ ರಿಡೀಮ್ ಮಾಡಲಾಗುತ್ತದೆ. ಬಾಂಡ್ ಅನ್ನು ಭಾರತ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ನೀಡುತ್ತದೆ.
ಸವರನ್ ಗೋಲ್ಡ್ ಬಾಂಡ್ ಸ್ಕೀಮ್ ಹೇಗೆ ಮಾರಾಟ ಮಾಡಲಾಗುತ್ತದೆ? ನಿಗದಿತ ವಾಣಿಜ್ಯ ಬ್ಯಾಂಕ್‌ಗಳು (ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಪೇಮೆಂಟ್ ಬ್ಯಾಂಕ್‌ಗಳನ್ನು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ನಿರ್ದಿಷ್ಟ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮೂಲಕ ಬಾಂಡ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಸೀಮಿತಗೊಳಿಸಲಾಗಿದೆ.
ಸವರನ್ ಗೋಲ್ಡ್ ಬಾಂಡ್ ಸ್ಕೀಮ್ ಅನ್ನು ಯಾರು ಖರೀದಿಸಬಹುದು? ಬಾಂಡ್‌ಗಳನ್ನು ಭಾರತದ ನಿವಾಸಿಗಳು, ಹಿಂದೂ ಅವಿಭಕ್ತ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳಿಗೆ ಮಾರಾಟ ಮಾಡಬಹುದು.
ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?