AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ-ಉಕ್ರೇನ್​​ ಯುದ್ಧ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಜಾಣನಡೆ, ಮತ್ತೆ ಮತದಾನದಿಂದ ದೂರ !

ರಷ್ಯಾ-ಉಕ್ರೇನ್​ ವಿಚಾರದಲ್ಲಿ ಭಾರತ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಸೂಕ್ಷ್ಮವಾಗಿಯೇ ವರ್ತಿಸುತ್ತಿದೆ. ಕೆಲವೇ ದಿನಗಳ ಹಿಂದೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ, ರಷ್ಯಾ ತನ್ನ ಸೇನೆಯನ್ನು ಉಕ್ರೇನ್​​ನಿಂದ ವಾಪಸ್​ ಪಡೆಯಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯಕ್ಕೆ ಕೂಡ ಭಾರತ ಮತ ಹಾಕಿರಲಿಲ್ಲ.

ರಷ್ಯಾ-ಉಕ್ರೇನ್​​ ಯುದ್ಧ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಜಾಣನಡೆ, ಮತ್ತೆ ಮತದಾನದಿಂದ ದೂರ !
ಟಿಎಸ್​ ತಿರುಮೂರ್ತಿ
TV9 Web
| Edited By: |

Updated on:Mar 24, 2022 | 8:36 AM

Share

ರಷ್ಯಾ ಮತ್ತು ಉಕ್ರೇನ್​ ನಡುವೆ ಉದ್ವಿಗ್ನತೆ (Russia-Ukraine War) ಹೆಚ್ಚುತ್ತಿರುವ ಬೆನ್ನಲ್ಲೇ, ಉಕ್ರೇನ್​​ ಮೇಲಿನ ರಷ್ಯಾದ ಆಕ್ರಮಣ ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತುರ್ತು ವಿಶೇಷ ಅಧಿವೇಶನ ನಡೆಸಲು ವಿಶ್ವ ಸಂಸ್ಥೆ ಭದ್ರತಾ ಮಂಡಳಿ (UNSC) ನಿರ್ಣಯ ಕೈಗೊಂಡಿದೆ. ಈ ನಿರ್ಣಯಕ್ಕೆ ಮತದಾನ ಮಾಡುವುದರಿಂದಲೂ ಭಾರತ ಅಂತರವನ್ನೇ ಕಾಯ್ದುಕೊಂಡಿದೆ. ಆದರೆ ಬೆಲಾರಸ್​ ಬಾರ್ಡರ್​​ನಲ್ಲಿ ಮಾತುಕತೆ ನಡೆಸಲು ಒಪ್ಪಿಕೊಂಡಿರುವ ಮಾಸ್ಕೋ ಮತ್ತು ಕೀವ್​ ನಿರ್ಧಾರವನ್ನು ಸ್ವಾಗತಿಸಿದೆ. ಒಟ್ಟು 15 ಮತಗಳಲ್ಲಿ 11 ಮತಗಳು ತುರ್ತು ಅಧಿವೇಶನ ನಡೆಸುವ ಪರವಾಗಿ ಬಂದಿದ್ದರಿಂದ ಇಂದು ರಾತ್ರಿ (ಭಾರತೀಯ ಕಾಲಮಾನ) ಅಥವಾ ಮಂಗಳವಾರ ಬೆಳಗ್ಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ತುರ್ತು ಅಧಿವೇಶನ ನಡೆಯಲಿದೆ. ಅಂದಹಾಗೇ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಕ್ಕೆ ಭಾರತ, ಚೀನಾ ಮತ್ತು ಯುಎಇ ಯಾವುದೇ ಮತಹಾಕಲಿಲ್ಲ. ರಷ್ಯಾ ನಿರ್ಣಯದ ವಿರುದ್ಧ ಮತದಾನ ಮಾಡಿದೆ.

ಇದು ಅಪರೂಪಕ್ಕೆ ಕರೆಯಲ್ಪಡುವ ತುರ್ತು ಅಧಿವೇಶನವಾಗಿದೆ. ಉಕ್ರೇನ್​ ಮೇಲೆ ರಷ್ಯಾ ಆಕ್ರಮಣಕ್ಕೆ ಸಂಬಂಧಪಟ್ಟಂತೆ ಕರೆಯಲಾಗುತ್ತಿರುವ ಈ ತುರ್ತು ಅಧಿವೇಶನ 1950ರಿಂದ ಈಚೆಗೆ ನಡೆಯುತ್ತಿರುವ 11ನೇ ಅಧಿವೇಶನ ಎಂದು ಹೇಳಲಾಗಿದೆ. ಇದೇ ವೇಳೆ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್​.ತಿರುಮೂರ್ತಿ, ಉಕ್ರೇನ್​​ನಲ್ಲಿ ಪರಿಸ್ಥಿತಿ ದಿನೇದಿನೆ ಹದಗೆಡುತ್ತಿರುವುದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ರಾಜತಾಂತ್ರಿಕ ಮತ್ತು ಶಾಂತಿ ಮಾತುಕತೆಯ ದಾರಿ ತುಳಿಯದೆ ಇದಕ್ಕೆ ಪರಿಹಾರವಿಲ್ಲ. ಈ ನಿಟ್ಟಿನಲ್ಲಿ ಕೀವ್​ ಮತ್ತು ಮಾಸ್ಕೋ ನಡೆಸಲಿರುವ ಮಾತುಕತೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ರಷ್ಯಾ-ಉಕ್ರೇನ್​ ವಿಚಾರದಲ್ಲಿ ಭಾರತ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಸೂಕ್ಷ್ಮವಾಗಿಯೇ ವರ್ತಿಸುತ್ತಿದೆ. ಕೆಲವೇ ದಿನಗಳ ಹಿಂದೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ, ರಷ್ಯಾ ತನ್ನ ಸೇನೆಯನ್ನು ಉಕ್ರೇನ್​​ನಿಂದ ವಾಪಸ್​ ಪಡೆಯಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯಕ್ಕೆ ಕೂಡ ಭಾರತ ಮತ ಹಾಕಿರಲಿಲ್ಲ. ಆಗ ರಷ್ಯಾ ತನ್ನ ವಿಟೋ ಅಧಿಕಾರ ಬಳಸಿ ನಿರ್ಣಯವನ್ನು ಸಂಪೂರ್ಣವಾಗಿ ತಿರಸ್ಕರಿಸಿತ್ತು. (ವೀಟೋ ಅಧಿಕಾರ ಎಂದರೆ- ಭದ್ರತಾ ಮಂಡಳಿಯ 5 ಖಾಯಂ ಸದಸ್ಯ ರಾಷ್ಟ್ರಗಳಿಗೆ ನಿರ್ಣಯಗಳನ್ನು ತಿರಸ್ಕರಿಸಲು ಇರುವ ಅಧಿಕಾರ; ಒಂದು ರಾಷ್ಟ್ರ ನಿರ್ಣಯಗಳನ್ನು ತಿರಸ್ಕರಿಸಿದರೂ ನಿರ್ಣಯಗಳು ವಿಫಲಗೊಳ್ಳುತ್ತವೆ).

ಇದನ್ನೂ ಓದಿ: Russia Ukraine War Live: ಉಕ್ರೇನ್‌ ಮೇಲೆ ಯುದ್ಧ ಮುಂದುವರಿಸಿದ ರಷ್ಯಾ; ಡಾಲರ್ ಎದುರು ರಷ್ಯಾ ಕರೆನ್ಸಿ ರುಬೆಲ್ ಮೌಲ್ಯ ಕುಸಿತ

Published On - 11:25 am, Mon, 28 February 22