Video: ಗಡಿಯಲ್ಲಿ ಭಾರತೀಯರಿಗೆ ಹಿಂಸೆ ನೀಡಿದ ರಷ್ಯಾ ಸೈನಿಕರು; ತುಂಬ ಸಂಕಟವಾಗುತ್ತಿದೆ ಎಂದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ
ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಪ್ರತಿಪಕ್ಷಗಳ ಹಲವು ನಾಯಕರು ಇದೇ ವಿಚಾರವನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬೆನ್ನಲ್ಲೇ ಉಕ್ರೇನ್ನಿಂದ ಭಾರತೀಯರನ್ನು ವಾಪಸ್ ಕರೆತರುವ ಕಾರ್ಯ ಭರದಿಂದ ಸಾಗುತ್ತಿದೆ. ಆಪರೇಶನ್ ಗಂಗಾ (Operation Ganga) ಹೆಸರಿನ ಕಾರ್ಯಾಚರಣೆಯಡಿ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದೆ. ಅಷ್ಟಾಗ್ಯೂ ಕೂಡ ಇನ್ನೂ ಸಾವಿರಾರು ಮಂದಿ ಉಕ್ರೇನ್ನಲ್ಲಿಯೇ ಸಿಲುಕಿದ್ದಾರೆ. ರಷ್ಯಾ ಸೈನಿಕರ ಕ್ರೌರ್ಯ ಮಿತಿಮೀರಿದ್ದು ಪೋಲ್ಯಾಂಡ್, ರೊಮೇನಿಯಾ ಗಡಿ ಭಾಗಕ್ಕೆ ತೆರಳಿರುವ ಭಾರತೀಯರು ಸೇರಿ ಇನ್ನಿತರ ದೇಶಗಳ ಜನರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಉಕ್ರೇನ್ ವಾಯುಮಾರ್ಗ ಬಂದ್ ಆಗಿರುವ ಹಿನ್ನೆಲೆಯಲ್ಲಿ ಭಾರತೀಯರು ಸೇರಿ ಉಳಿದ ದೇಶಗಳ ಜನರು ಪೋಲ್ಯಾಂಡ್ ಮತ್ತು ರೊಮೇನಿಯಾ ಗಡಿಯವರಿಗೆ ರಸ್ತೆ ಮಾರ್ಗದ ಮೂಲಕ ಬಂದು, ಅಲ್ಲಿಂದ ತಮ್ಮ ತಾಯ್ನಾಡಿನ ವಿಮಾನ ಹತ್ತುತ್ತಿದ್ದಾರೆ. ಆದರೆ ಹೀಗೆ ಗಡಿ ಭಾಗಕ್ಕೆ ಬಂದಿರುವ ಜನರ ಮೇಲೆ ರಷ್ಯಾ ಸೈನಿಕರು ದೌರ್ಜನ್ಯ ಎಸಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರೂ ಕೂಡ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇಂಥ ಹಿಂಸೆಯನ್ನು ಅನುಭವಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ನೋಡಲು ತುಂಬ ದುಃಖವಾಗುತ್ತಿದೆ. ಈ ವಿಡಿಯೋವನ್ನು ಅವರ ಪಾಲಕರೂ ನೋಡುತ್ತಾರೆ. ತಮ್ಮ ಮಕ್ಕಳಿಗೆ ಹೀಗೆಲ್ಲ ಹಿಂಸೆ ನೀಡುವ ದೃಶ್ಯವನ್ನು ನೋಡುವ ಸ್ಥಿತಿ ಯಾವ ಪಾಲಕರಿಗೂ ಬರಬಾರದು. ಇವರನ್ನೆಲ್ಲ ಅಲ್ಲಿಂದ ಭಾರತಕ್ಕೆ ಕರೆತರಲು ಭಾರತ ಸರ್ಕಾರ ಏನೆಲ್ಲ ಯೋಜನೆ ರೂಪಿಸಿದೆ ಎಂಬುದನ್ನು ತಿಳಿಸಬೇಕು. ವಿದ್ಯಾರ್ಥಿಗಳ ಕುಟುಂಬಕ್ಕೂ ಹೇಳುವ ಮೂಲಕ ಸಮಾಧಾನ ಮಾಡಬೇಕು. ನಮ್ಮ ಜನರು ಹೀಗೆ ಅನಾಥರಾಗಲು ಬಿಡಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
My heart goes out to the Indian students suffering such violence and their family watching these videos. No parent should go through this.
GOI must urgently share the detailed evacuation plan with those stranded as well as their families.
We can’t abandon our own people. pic.twitter.com/MVzOPWIm8D
— Rahul Gandhi (@RahulGandhi) February 28, 2022
ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಪ್ರತಿಪಕ್ಷಗಳ ಹಲವು ನಾಯಕರು ಇದೇ ವಿಚಾರವನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಇಬ್ಬರು ವಿದ್ಯಾರ್ಥಿಗಳು ಮಾತನಾಡುತ್ತಿದ್ದ ವಿಡಿಯೋ ಶೇರ್ ಮಾಡಿಕೊಂಡಿದ್ದ ರಾಹುಲ್ ಗಾಂಧಿ, ಭಾರತೀಯ ವಿದ್ಯಾರ್ಥಿಗಳು ಬಂಕರ್ನಲ್ಲಿ ಇರುವ ದೃಶ್ಯ ನೋಡಿದರೆ ಮನಸಿಗೆ ಕಿರಿಕಿರಿಯಾಗುತ್ತದೆ. ರಷ್ಯಾದ ಆಕ್ರಮಣ ತೀವ್ರವಾಗಿರುವ ಪೂರ್ವ ಉಕ್ರೇನ್ನಲ್ಲಿ ಭಾರತೀಯರು ಅನೇಕರು ಸಿಲುಕಿದ್ದಾರೆ. ಅಲ್ಲಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಬಗ್ಗೆ ನೋವಾಗುತ್ತದೆ. ಭಾರತೀಯರನ್ನು ಸ್ಥಳಾಂತರ ಮಾಡುವ ಕೆಲಸ ಎಷ್ಟಾಗತ್ತೋ ಅಷ್ಟು ಬೇಗ ಮಾಡಬೇಕು ಎಂದು ನಾನು ಭಾರತ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದಿದ್ದರು.
Published On - 9:47 am, Mon, 28 February 22