Russia Ukraine War Highlights: ನಿಮ್ಮ ಪ್ರಾಣ ಉಳಿಸಿಕೊಳ್ಳಬೇಕಾದ್ರೆ ಉಕ್ರೇನ್‌ ತೊರೆಯಿರಿ: ರಷ್ಯಾ ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ಕೊನೆಯ ಎಚ್ಚರಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 01, 2022 | 6:09 AM

Russia Ukraine Conflict Highlights Updates: ಉಕ್ರೇನ್ ತೊರೆದಿರುವ 15 ಸಾವಿರಕ್ಕೂ ಹೆಚ್ಚು ಜನ ನೆರೆಯ ದೇಶಗಳಾದ ಪೋಲೆಂಡ್ ಮತ್ತು ಮೊಲ್ಡೊವಾಗೆ ಪಲಾಯನವಾಗಿದ್ದಾರೆ. ಇತ್ತ ಉಕ್ರೇನ್​ ಹಾಗೂ ಸ್ಲೋವಾಕಿಯಾದ ಬಾರ್ಡರ್​ನಲ್ಲೂ ಭಾರತೀಯ ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ.

Russia Ukraine War Highlights: ನಿಮ್ಮ ಪ್ರಾಣ ಉಳಿಸಿಕೊಳ್ಳಬೇಕಾದ್ರೆ ಉಕ್ರೇನ್‌ ತೊರೆಯಿರಿ: ರಷ್ಯಾ ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ಕೊನೆಯ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ

ಬಲಾಢ್ಯ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಸಾರಥ್ಯದ ರಷ್ಯಾಕ್ಕೆ ಪುಟ್ಟ ಉಕ್ರೇನ್ ಸಡ್ಡು ಹೊಡೆದು ತನ್ನದೇ ನೆಲದಲ್ಲಿ ಕಾಲೂರಿ ಹೋರಾಟ ನಡೆಸುತ್ತಿದೆ (Russia Ukraine War). ಆದರೆ ಈ ಮಧ್ಯೆ ಕೆಟ್ಟ ಮನಸ್ಥಿತಿ ಬೆಳೆಸಿಕೊಂಡಿರುವ ರಷ್ಯಾ ಉಕ್ರೇನ್ ನಲ್ಲಿ ಕಾಲೂರಿದ್ದ ಜನರನ್ನು ಅಕ್ಷರಶಃ ಕಾಲಿನಿಂದ ಒದೆಯುತ್ತಿದೆ. ಕಾಲಿಗೆ ಸಿಕ್ಕವರ ಒದೆಯುತ್ತಿದ್ದಾರೆ. ಕೈಗೆ ಸಿಕ್ಕವರನ್ನ ನೂಕುತ್ತಿದ್ದಾರೆ. ಮುಂದೆ ಹೆಜ್ಜೆ ಇಡದಂತೆ ಗುಂಡಿನ ಮೊರೆತ. ಬೆಂಕಿಯುಂಡೆ ಆಗಿರೋ ಉಕ್ರೇನ್​ನಿಂದ ತಪ್ಪಿಸಿಕೊಂಡು ಬರುತ್ತಿರುವವರ ಜೀವನ ಅಕ್ಷರಶಃ ನರಕವಾಗಿದೆ. ಜೀವ ಉಳಿಸಿಕೊಂಡ್ರೆ ಸಾಕು ಗಡಿ ದಾಟಿ ಹೋಗಬೇಕು ಅಂತಾ ಆಸೆಯಿಂದ ಬಂದವರಿಗೆ ಸಂಕಷ್ಟ ಶುರುವಾಗಿದೆ. ಈ ಮಧ್ಯೆ ಉಕ್ರೇನ್ ತೊರೆದಿರುವ 15 ಸಾವಿರಕ್ಕೂ ಹೆಚ್ಚು ಜನ ನೆರೆಯ ದೇಶಗಳಾದ ಪೋಲೆಂಡ್ ಮತ್ತು ಮೊಲ್ಡೊವಾಗೆ ಪಲಾಯನವಾಗಿದ್ದಾರೆ. ಇತ್ತ ಉಕ್ರೇನ್​ ಹಾಗೂ ಸ್ಲೋವಾಕಿಯಾದ ಬಾರ್ಡರ್​ನಲ್ಲೂ ಭಾರತೀಯ ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಕ್ರೇನ್ ಇವಾನೋ ಫ್ರಾಂಕ್​ನಿಂದ ಸ್ಲೋವಾಕಿಯಾಗೆ ಹೊರಟಿದ್ದರು. ಅದೂ ಉಕ್ರೇನ್​ನಲ್ಲಿರುವ ಭಾರತೀಯಾ ರಾಯಭಾರಿ ಕಚೇರಿ ಸೂಚನೆ ಮೇರೆಗೆ ತೆರಳ್ತಿದ್ದರು. ಆದ್ರೆ ಅಷ್ಟರಲ್ಲೇ, ಸ್ಲೋವೋಕಿಯಾ ಬಾರ್ಡರ್​ನಲ್ಲಿ ಭಾರತೀಯರನ್ನ ಸ್ಲೋಕಿಯಾ ಪಡೆ ತಡೆದಿದೆ. ಬಳ್ಳಾರಿಯ ಇಬ್ಬರು ವಿದ್ಯಾರ್ಥಿಗಳು ಸೇರಿ ಕರ್ನಾಟಕದ ಹಲವು ವಿದ್ಯಾರ್ಥಿಗಳದ್ದು ಅರಣ್ಯರೋದನವಾಗಿದೆ.

LIVE NEWS & UPDATES

The liveblog has ended.
  • 28 Feb 2022 11:12 PM (IST)

    Russia Ukraine War Live: ರಷ್ಯಾದ ಆರ್ಥಿಕ ಪರಿಸ್ಥಿತಿ ಕುರಿತು ಅಧ್ಯಕ್ಷ ಪುಟಿನ್​ ಚರ್ಚೆ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರೆಸಿದೆ. ರಷ್ಯಾದ ಆರ್ಥಿಕ ಪರಿಸ್ಥಿತಿ ಕುರಿತು ಅಧ್ಯಕ್ಷ ಪುಟಿನ್​ ಚರ್ಚೆ ನಡೆಸಿದ್ದಾರೆ. ಕೀವ್​​ನಲ್ಲಿ ಒಂದರ ಹಿಂದೆ ಒಂದರಂತೆ ಬಾಂಬ್​ಗಳು ಸ್ಫೋಟಗೊಳ್ಳುತ್ತಿವೆ.

  • 28 Feb 2022 10:56 PM (IST)

    Russia Ukraine War Live: ಸಂಕಷ್ಟದಲ್ಲಿ ಶಿವಮೊಗ್ಗದ ಮೆಡಿಕಲ್ ವಿದ್ಯಾರ್ಥಿ ತೇಜಸ್

    ಉಕ್ರೇನ್ ನ ಕಾರ್ಕೀವ್ ನಲ್ಲಿ ಶಿವಮೊಗ್ಗದ ಮೆಡಿಕಲ್ ವಿದ್ಯಾರ್ಥಿ ತೇಜಸ್ ಸಂಕಷ್ಟದಲ್ಲಿ ಸಿಕಿಕೊಂಡಿದ್ದಾನೆ. ತೇಜಸ್ ವಾಸ ಆಗಿರುವ ಸುತ್ತಮುತ್ತಲು ಯುದ್ಧ ಗುಂಡು, ಬಾಂಬ್ ಸದ್ದು ಕೇಳಿಬರುತ್ತಿದೆ. ಸುಮಾರು 2200 ಭಾರತೀಯರು ಕಾರ್ಕೀವ್​ನಲ್ಲಿ ಸಿಲುಕಿಕೊಂಡಿದ್ದಾರೆ. ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಸ್ಪಂದಿಸಿಸುತ್ತಿಲ್ಲ. ಇದರಿಂದ ಕನ್ನಡಿಗರು ಮತ್ತು ಭಾರತೀಯರು ಭಯದಲ್ಲೇ ಬದುಕುತ್ತಿದ್ದಾರೆ. ಆದಷ್ಟು ಬೇಗ ನಮ್ಮನ್ನು ಇಲ್ಲಿಂದ ಏರ್ ಲಿಫ್ಟ್ ಮಾಡಿ ಎಂದು ಟಿವಿ9 ಮೂಲಕ ತೇಜಸ್ ಭಾರತ ಸರಕಾರ ಮತ್ತು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಇದರಲ್ಲಿ ಕರ್ನಾಟಕದ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೇರಿ ಒಟ್ಟು 350 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಎಲ್ಲರೂ ವಾಪಸ್ ಭಾರತಕ್ಕೆ ಬರಲು ಹರಸಾಹಸ ಪಡುತ್ತಿದ್ದಾರೆ.

  • 28 Feb 2022 10:44 PM (IST)

    Russia Ukraine War Live: ಮುಂದಿನ 2 ದಿನಗಳಲ್ಲಿ ಮತ್ತೊಂದು ಸುತ್ತಿನ ಸಭೆಗೆ ನಿರ್ಧಾರ

    ರಷ್ಯಾ-ಉಕ್ರೇನ್ ನಿಯೋಗಗಳ ಮಧ್ಯೆ ಶಾಂತಿ ಸಭೆ ಅಂತ್ಯವಾಗಿದೆ. ಬೆಲಾರಸ್​​ನಲ್ಲಿ ಇಂದು ಒಂದೇ ದಿನ 3 ಸಭೆ ನಡೆಸಲಾಗಿದ್ದು, ಇಂದು ನಡೆದ ಸಭೆ ಒಂದು ಉತ್ತಮ ಬೆಳೆವಣಿಗೆಯಾಗಲಿದೆ. ಮುಂದಿನ 2 ದಿನಗಳಲ್ಲಿ ಮತ್ತೊಂದು ಸುತ್ತಿನ ಸಭೆಗೆ ನಿರ್ಧಾರ ಮಾಡಲಾಗಿದೆ.

  • 28 Feb 2022 10:42 PM (IST)

    Russia Ukraine War Live: ರೊಮೇನಿಯಾ ಸರ್ಕಾರದ ನಿರ್ಧಾರವನ್ನ ಶ್ಲಾಘಿಸಿದ ಮೋದಿ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಸಾರಿದ್ದು, ರೊಮೇನಿಯಾ ಪ್ರಧಾನಿಗೆ ಕರೆ ಮಾಡಿ ಪ್ರಧಾನಿ ಮೋದಿ ಅಭಿನಂದನೆ ತಿಳಿಸಿದ್ದಾರೆ. ವೀಸಾ ಇಲ್ಲದೇ ಭಾರತೀಯರ ಸ್ಥಳಾಂತರಿಸುವಲ್ಲಿ ಅನುಮತಿ ನೀಡಿದ್ದಕ್ಕೆ ರೊಮೇನಿಯಾ ಸರ್ಕಾರದ ನಿರ್ಧಾರವನ್ನ ಮೋದಿ ಶ್ಲಾಘಿಸಿದ್ದಾರೆ.

  • 28 Feb 2022 10:38 PM (IST)

    Russia Ukraine War Live: ಕೀವ್​​ನ ರೈಲ್ವೆ ನಿಲ್ದಾಣದಲ್ಲಿ ತುಂಬಿ ತುಳುಕುತ್ತಿರುವ ಜನರು

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಸಾರಿದೆ. ಉಕ್ರೇನ್​ನಲ್ಲಿ ಜೀವ ಉಳಿಸಿಕೊಳ್ಳಲು ಜನರು ಪರದಾಡುತ್ತಿದ್ದಾರೆ. ರಾಜಧಾನಿ ಕೀವ್​​ ತೊರೆಯಲು ಜನರು ಮುಂದಾಗಿದ್ದು, ಕೀವ್​​ನ ರೈಲ್ವೆ ನಿಲ್ದಾಣದಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಕೀವ್​​ ನಗರದ ಹೊರವಲಯದಲ್ಲಿ ಭಾರಿ ಸ್ಫೋಟ ಕೂಡ ಸಂಭವಿಸಿದೆ.

  • 28 Feb 2022 10:33 PM (IST)

    Russia Ukraine War Live: ಉಕ್ರೇನ್​ ದೇಶಕ್ಕೆ ನೆರವಿನ ಹಸ್ತ ಚಾಚಿದ ಫಿನ್​ಲ್ಯಾಂಡ್​

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರೆದಿದೆ. ಉಕ್ರೇನ್​ ದೇಶಕ್ಕೆ ಫಿನ್​ಲ್ಯಾಂಡ್​ ನೆರವಿನ ಹಸ್ತ ಚಾಚಿದೆ. ಶಸ್ತ್ರಾಸ್ತ್ರ ಪೂರೈಸುವುದಾಗಿ ಫಿನ್​ಲ್ಯಾಂಡ್​ ಘೋಷಣೆ ಮಾಡಿದೆ.

  • 28 Feb 2022 10:01 PM (IST)

    Russia Ukraine War Live: ರಷ್ಯಾಗೆ ಮತ್ತಷ್ಟು ಆರ್ಥಿಕ ನಿರ್ಬಂಧ ವಿಧಿಸಿದ ಇಂಗ್ಲೆಂಡ್​

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರೆಸಿದೆ. ರಷ್ಯಾಗೆ ಇಂಗ್ಲೆಂಡ್​ ಮತ್ತಷ್ಟು ಆರ್ಥಿಕ ನಿರ್ಬಂಧ ವಿಧಿಸಿದೆ. ಯುಕೆ ರಷ್ಯನ್ ಬ್ಯಾಂಕ್​ಗಳ ಆಸ್ತಿ ಮುಟ್ಟುಗೋಲು ಹಾಕಿದೆ. ರಷ್ಯಾ-ಉಕ್ರೇನ್ ನಿಯೋಗಗಳ ಮಧ್ಯೆ ಶಾಂತಿ ಸಭೆ ಅಂತ್ಯವಾಗಿದೆ.

  • 28 Feb 2022 09:58 PM (IST)

    Russia Ukraine War Live: ಉಕ್ರೇನ್ ಮೇಲೆ ದಾಳಿಯನ್ನು ಸಮರ್ಥಿಸಿಕೊಂಡ ರಷ್ಯಾ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರೆದಿದೆ.  ವಿಶ್ವಸಂಸ್ಥೆಯ ತುರ್ತು ವಿಶೇಷ ಸಾಮಾನ್ಯ ಸಭೆ ಮಾಡಲಾಯಿತು. ಉಕ್ರೇನ್ ಮೇಲೆ ದಾಳಿಯನ್ನು ರಷ್ಯಾ ಸಮರ್ಥಿಸಿಕೊಂಡಿದೆ. ಉಕ್ರೇನ್ ಮೇಲೆ ದಾಳಿ ಬಗ್ಗೆ ರಷ್ಯಾ ರಾಯಭಾರಿ ಹೇಳಿಕೆ ನೀಡಿದ್ದು, ರಷ್ಯಾ ವಿರುದ್ಧ ಉಕ್ರೇನ್‌ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ರಷ್ಯಾಗೆ ಉಕ್ರೇನ್‌ನನ್ನು ವಶಪಡಿಸಿಕೊಳ್ಳುವ ಉದ್ದೇಶವಿಲ್ಲ. ಡಾನ್ಬಾಸ್ ನಿವಾಸಿಗಳ ಬಗ್ಗೆ ಉಕ್ರೇನ್‌ಗೆ ಸಹಾನುಭೂತಿ ಇಲ್ಲ. ಡಾನ್ಬಾಸ್ ನಿವಾಸಿಗಳನ್ನು ರಕ್ಷಿಸಲು ಉಕ್ರೇನ್ ಮೇಲೆ ದಾಳಿ ಮಾಡಲಾಗಿದೆ.

  • 28 Feb 2022 09:53 PM (IST)

    Russia Ukraine War Live: ವಿಶ್ವಸಂಸ್ಥೆ ವಿಶೇಷ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಆತಂಕ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ವಿಶ್ವಸಂಸ್ಥೆಯ ತುರ್ತು ವಿಶೇಷ ಸಾಮಾನ್ಯ ಸಭೆ ಮಾಡಿದ್ದು, ರಷ್ಯಾ ಆಕ್ರಮಣಕಾರಿ ನೀತಿ ಉಕ್ರೇನ್ ರಾಯಭಾರಿ ಖಂಡಿಸಿದೆ. ಮಕ್ಕಳು, ಶಾಲೆಗಳ ಮೇಲೆಯೂ ರಷ್ಯಾ ದಾಳಿ ನಡೆಸುತ್ತಿದೆ. ಕೂಡಲೇ ಸೇನಾಪಡೆಯನ್ನು ರಷ್ಯಾ ವಾಪಸ್ ಪಡೆಯಲಿ, ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರಷ್ಯಾ ವಿರುದ್ಧ ಹೋರಾಟ ಮಾಡಲಾಗುವುದು. ಚೆರ್ನೋಬಿಲ್ ಸ್ಥಾವರದಲ್ಲಿ ವಿಕಿರಣ ಸೋರಿಕೆ ಹೆಚ್ಚಾಗುತ್ತಿದೆ. ವಿಶ್ವಸಂಸ್ಥೆ ವಿಶೇಷ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಆತಂಕ ವ್ಯಕ್ತಪಡಿಸಿದೆ.

  • 28 Feb 2022 08:53 PM (IST)

    Russia Ukraine War Live: ಶೀಘ್ರವೇ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಣೆ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಶೀಘ್ರವೇ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಬೇಕಿದೆ ಎಂದು ವಿಶ್ವಸಂಸ್ಥೆಯ ತುರ್ತು ವಿಶೇಷ ಸಾಮಾನ್ಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

  • 28 Feb 2022 08:40 PM (IST)

    Russia Ukraine War Live: ವಿಶ್ವಸಂಸ್ಥೆಯ ವಿಶೇಷ ಸಾಮಾನ್ಯ ಸಭೆ ಆರಂಭ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಉಕ್ರೇನ್​ನ​ ಖಾರ್ಕಿವ್​​ ನಗರದಲ್ಲಿ ರಷ್ಯಾದಿಂದ ಶೆಲ್ ದಾಳಿ ಮಾಡಿದೆ. ಶೆಲ್​ ದಾಳಿಯಲ್ಲಿ ಉಕ್ರೇನ್​​ನ​​​ 11 ನಾಗರಿಕರು ದುರ್ಮರಣ ಹೊಂದಿದ್ದಾರೆ. ವಿಶ್ವಸಂಸ್ಥೆಯ ವಿಶೇಷ ಸಾಮಾನ್ಯ ಸಭೆ ಕೂಡ ಆರಂಭವಾಗಿದೆ. ರಷ್ಯಾ ಆಕ್ರಮಣಕಾರಿ ನೀತಿ ಖಂಡಿಸಲು ಸಭೆ ಕರೆಯಲಾಗಿದೆ.

  • 28 Feb 2022 08:27 PM (IST)

    Russia Ukraine War Live: ಪರಮಾಣು ಕ್ಷಿಪಣಿ ಪಡೆಗಳಿಗೆ ಸನ್ನದ್ಧವಿರುವಂತೆ ರಷ್ಯಾ ಸೂಚನೆ

    ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ ಸೇನೆ, ಪರಮಾಣು ಕ್ಷಿಪಣಿ ಪಡೆಗಳಿಗೆ ಸನ್ನದ್ಧವಿರುವಂತೆ ಸೂಚನೆ ನೀಡಲಾಗಿದೆ. ಸನ್ನದ್ಧವಿರಲು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದ್ದು, ಪರಮಾಣು ಕ್ಷಿಪಣಿ ಪಡೆ, ಉತ್ತರ, ಪೆಸಿಫಿಕ್ ನೌಕಾಪಡೆಗೆ ಸೂಚನೆ ನೀಡಲಾಗಿದೆ.

  • 28 Feb 2022 08:25 PM (IST)

    Russia Ukraine War Live: ಉನ್ನತ ಮಟ್ಟದ ಸಭೆ ನಡೆಸುತ್ತಿರುವ ಉಕ್ರೇನ್​ ಸರ್ಕಾರ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಶಾಂತಿ ಮಾತುಕತೆ ಮುಗಿದ ಬೆನ್ನಲ್ಲೇ ಉಕ್ರೇನ್​ನಲ್ಲಿ ಸಭೆ ಮಾಡಲಾಗುತ್ತಿದ್ದು, ಉಕ್ರೇನ್​ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸುತ್ತಿದೆ.

  • 28 Feb 2022 08:17 PM (IST)

    Russia Ukraine War Live: ರಷ್ಯಾದಿಂದ ಬರುವಂತೆ ಅಮೆರಿಕ ಸರ್ಕಾರದಿಂದ ಸೂಚನೆ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾದಲ್ಲಿರುವ ಅಮೆರಿಕನ್ನರಿಗೆ ಹೊರಡುವಂತೆ ಸೂಚನೆ ನೀಡಲಾಗಿದೆ. ಕೂಡಲೇ ರಷ್ಯಾದಿಂದ ಬರುವಂತೆ ಅಮೆರಿಕ ಸರ್ಕಾರದಿಂದ ಸೂಚಿಸಿದೆ.

  • 28 Feb 2022 08:02 PM (IST)

    Russia Ukraine War Live: ದೆಹಲಿಯಿಂದ ಬೆಂಗಳೂರಿಗೆ‌ ಆಗಮಿಸಿದ ಐವರು ವಿದ್ಯಾರ್ಥಿಗಳು

    ಉಕ್ರೇನ್​ನಿಂದ ಐವರು ವಿದ್ಯಾರ್ಥಿಗಳು ದೆಹಲಿಯಿಂದ ಬೆಂಗಳೂರಿಗೆ‌ ಆಗಮಿಸಿದ್ದಾರೆ. ಶ್ರವಣ ಸಂಗಣ್ಣ ಬಿರಾದಾರ್, ಶಕ್ತಿ ಶ್ರೀ ಶೇಖರ್, ಮೈನಾ ಅನಿಲ್ ನಾಯಕ್, ನಿಹಾರಿಕಾ, ಮತ್ತು ಆಶಾ ವೆಂಕಟೇಶ್ ರೆಡ್ಡಿ ಎನ್ನುವವರು ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ಆಗಮಿಸಿದ್ದಾರೆ. ತಮ್ಮ ಮಕ್ಕಳು ವಾಪಸ್ ಬಂದ ಹಿನ್ನಲೆ ಪೋಷಕರು ಸಂತಸಗೊಂಡಿದ್ದು, ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ವಿದ್ಯಾರ್ಥಿಗಳನ್ನ ಪೋಷಕರು ಆತ್ಮೀಯವಾಗಿ ಬರಮಾಡಿಕೊಂಡರು.

  • 28 Feb 2022 07:58 PM (IST)

    Russia Ukraine War Live: ರಷ್ಯಾ ಮೇಲೆ ಮತ್ತಷ್ಟು ಆರ್ಥಿಕ ನಿರ್ಬಂಧ ಹೇರಿದ ಅಮೆರಿಕ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಅಮೆರಿಕ ರಷ್ಯಾ ಮೇಲೆ ಮತ್ತಷ್ಟು ಆರ್ಥಿಕ ನಿರ್ಬಂಧ ಹೇರಿದೆ. ರಷ್ಯಾಗೆ ಸಂಬಂಧಿಸಿದ ಬ್ಯಾಂಕ್​​ಗಳಲ್ಲಿ ವ್ಯವಹಾರಕ್ಕೆ ನಿರ್ಬಂಧ ಹೇರಲಾಗಿದೆ.

  • 28 Feb 2022 07:45 PM (IST)

    Russia Ukraine War Live: ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಕೆ ಆರೋಪ

    ಉಕ್ರೇನ್​ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಉಕ್ರೇನ್ ದೇಶದ ವಿರುದ್ಧ ರಷ್ಯಾ ಸೇನೆ ಆರೋಪ ಮಾಡಿದೆ.

  • 28 Feb 2022 07:31 PM (IST)

    Russia Ukraine War Live: ರಷ್ಯಾ-ಉಕ್ರೇನ್ ನಿಯೋಗಗಳ ಮಧ್ಯೆ ಶಾಂತಿ ಸಭೆ ಅಂತ್ಯ

    ರಷ್ಯಾ-ಉಕ್ರೇನ್ ನಿಯೋಗಗಳ ಮಧ್ಯೆ ಶಾಂತಿ ಸಭೆ ಅಂತ್ಯವಾಗಿದೆ. ಉಕ್ರೇನ್-ಬೆಲಾರಸ್ ಗಡಿ ಗೋಮೆಲ್‌ನಲ್ಲಿ ಸಭೆ ನಡೆದಿದ್ದು, ಸತತ ಮೂರೂವರೆ ಗಂಟೆಗಳ ಕಾಲ ಸಭೆ ಮಾಡಲಾಗಿದೆ.

  • 28 Feb 2022 07:23 PM (IST)

    Russia Ukraine War Live: ಉಕ್ರೇನ್​​ನಿಂದ ಈವರೆಗೆ 8000 ಭಾರತೀಯರು ವಾಪಸ್​

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಇಲ್ಲಿಯವರೆಗೂ ಉಕ್ರೇನ್​​ನಿಂದ 8000 ಭಾರತೀಯರು ವಾಪಸ್ಸಾಗಿದ್ದಾರೆ. ಕೇಂದ್ರ ಸರ್ಕಾರ ಭಾರತೀಯರನ್ನು ಕರೆತರಲು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿದೆ.

  • 28 Feb 2022 07:15 PM (IST)

    Russia Ukraine War Live: ವಿದ್ಯಾರ್ಥಿಗಳು ಆಗಮಿಸಬೇಕಿದ್ದ ವಿಮಾನ ವಿಳಂಬ

    ಉಕ್ರೇನ್​​ನಿಂದ ದೆಹಲಿಗೆ ಆಗಮಿಸಿದ್ದ ಐವರು ವಿದ್ಯಾರ್ಥಿಗಳ ಆಗಮನ ವಿಳಂಬವಾಗಿದೆ. ಸಂಜೆ 6.40 ವಿದ್ಯಾರ್ಥಿಗಳು ಆಗಮಿಸಬೇಕಿದ್ದ ವಿಮಾನ ವಿಳಂಬವಾಗಿದ್ದು, ಸಂಜೆ 7.30ಕ್ಕೆ ಕೆಐಎಬಿಗೆ ವಿಮಾನ ಆಗಮಿಸಲಿದೆ. ಶ್ರವಣ ಸ‌ಂಗಣ್ಣ ಬಿರಾದಾರ್, ಶಕ್ತಿಶ್ರೀ ಶೇಖರ್, ನಿಹಾರಿಕಾ ಮೈನಾ ಅನಿಲ್​ ನಾಯ್ಕ್, ಆಶಾ ವೆಂಕಟೇಶ್ ರೆಡ್ಡಿ ದೆಹಲಿಯಿಂದ ಐವರು ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

  • 28 Feb 2022 07:05 PM (IST)

    Russia Ukraine War Live: ರಷ್ಯಾ-ಉಕ್ರೇನ್ ನಿಯೋಗಗಳ ಮಧ್ಯೆ ಶಾಂತಿ ಮಾತುಕತೆ

    ರಷ್ಯಾ-ಉಕ್ರೇನ್ ನಿಯೋಗಗಳ ಮಧ್ಯೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಉಕ್ರೇನ್-ಬೆಲಾರಸ್ ಗಡಿ ಗೋಮೆಲ್‌ನಲ್ಲಿ ಶಾಂತಿ ಸಭೆ ಮಾಡಲಾಗುತ್ತಿದೆ. ರಷ್ಯಾ ಸೇನೆ ಹಿಂದೆ ಸರಿಯುವಂತೆ ಉಕ್ರೇನ್​​ನಿಂದ ಪಟ್ಟು ಹಿಡಿದಿದ್ದು, ಉಕ್ರೇನ್ ಅಧ್ಯಕ್ಷರ ಪದವಿಯಿಂದ ಕಿತ್ತೊಗೆಯಲು ರಷ್ಯಾ ಆಗ್ರಹಿಸಿದೆ.

  • 28 Feb 2022 07:03 PM (IST)

    Russia Ukraine War Live: ಪ್ರಧಾನಿ ಮೋದಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರೆದಿದೆ. ಪ್ರಧಾನಿ ಮೋದಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

  • 28 Feb 2022 06:46 PM (IST)

    Russia Ukraine War Live: ಹಲವು ರಾಷ್ಟ್ರಗಳ ವಿಮಾನಯಾನಕ್ಕೆ ರಷ್ಯಾದಿಂದ ನಿರ್ಬಂಧ

    ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ ಸೇನೆ, ಹಲವು ರಾಷ್ಟ್ರಗಳ ವಿಮಾನಯಾನಕ್ಕೆ ರಷ್ಯಾದಿಂದ ನಿರ್ಬಂಧಿಸಲಾಗಿದೆ. ಜರ್ಮನಿ, ಫ್ರಾನ್ಸ್​, ಸ್ಪೇನ್, ಇಟಲಿ ಸೇರಿ 36 ದೇಶಗಳಿಗೆ ವಿಮಾನಯಾನಕ್ಕೆ ನಿರ್ಬಂಧಿಸಲಾಗಿದೆ.

  • 28 Feb 2022 06:18 PM (IST)

    Russia Ukraine War Live: ಉಕ್ರೇನ್​ಗೆ ಔಷಧ ನೆರವು ನೀಡುವುದಾಗಿ ಭಾರತ ಘೋಷಣೆ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದ್ದು, ಉಕ್ರೇನ್​ಗೆ ಔಷಧ ನೆರವು ನೀಡುವುದಾಗಿ ಭಾರತ ಘೋಷಣೆ ಮಾಡಿದೆ.

  • 28 Feb 2022 06:16 PM (IST)

    Russia Ukraine War Live: ಉಕ್ರೇನ್‌ಗೆ ಶಸ್ತ್ರಾಸ್ತ್ರ ನೀಡಲು ಸ್ಲೋವಾಕಿಯಾ ತೀರ್ಮಾನ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಅಮೆರಿಕ ಬೆಲಾರಸ್‌ನ ರಾಯಭಾರ ಕಚೇರಿನ್ನು ಸ್ಥಗಿತಗೊಳಿಸಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರ ನೀಡಲು ಸ್ಲೋವಾಕಿಯಾ ತೀರ್ಮಾನಿಸಿದೆ.

  • 28 Feb 2022 05:49 PM (IST)

    Russia Ukraine War Live: ಉಕ್ರೇನ್‌ನಿಂದ ಈವರೆಗೆ 1,396 ಭಾರತೀಯರ ಸ್ಥಳಾಂತರ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಉಕ್ರೇನ್‌ನಿಂದ ಈವರೆಗೆ 1,396 ಭಾರತೀಯರ ಸ್ಥಳಾಂತರ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಹೇಳಿಕೆ ನೀಡಿದ್ದಾರೆ.

  • 28 Feb 2022 05:39 PM (IST)

    Russia Ukraine War Live: ಉಕ್ರೇನ್​ನ​ ಖಾರ್ಕಿವ್​​ ನಗರದಲ್ಲಿ ರಷ್ಯಾದಿಂದ ರಾಕೆಟ್ ದಾಳಿ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರೆಸಿದೆ. ಉಕ್ರೇನ್​ನ​ ಖಾರ್ಕಿವ್​​ ನಗರದಲ್ಲಿ ರಷ್ಯಾದಿಂದ ರಾಕೆಟ್ ದಾಳಿ ಮಡಲಾಗಿದ್ದು, ದಾಳಿಯಿಂದಾಗಿ 10-12 ಜನ ಮೃತಪಟ್ಟಿರುವುದಾಗಿ ವರದಿಯಾಗಿದೆ.

  • 28 Feb 2022 05:27 PM (IST)

    Russia Ukraine War Live: ಉಕ್ರೇನ್​​ನಿಂದ ಭಾರತಕ್ಕೆ ಬಂದಿಳಿದ 6ನೇ ವಿಮಾನ

    ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರೆದಿದ್ದು, ಉಕ್ರೇನ್​​ನಿಂದ ಭಾರತಕ್ಕೆ 6ನೇ ವಿಮಾನ ಬಂದಿಳಿದೆ. ಉಕ್ರೇನ್​ನಿಂದ 240 ಭಾರತೀಯರನ್ನ ಏರ್​ಇಂಡಿಯಾ ಫ್ಲೈಟ್​ ಕರೆತಂದಿದೆ. ಈತನಕ ಒಟ್ಟು 1406 ಮಂದಿ ಆಗಮಿಸಿದ್ದು, ಅದರಲ್ಲಿ ಒಟ್ಟು 44 ಮಂದಿ ಕನ್ನಡಿಗರಿದ್ದರು.

  • 28 Feb 2022 05:12 PM (IST)

    Russia Ukraine War Live: ಉಕ್ರೇನ್​​ನಲ್ಲಿರುವ ಭಾರತೀಯರಿಗೆ ವಿಶೇಷ ರೈಲುಗಳ ವ್ಯವಸ್ಥೆ

    ಉಕ್ರೇನ್​​ನಲ್ಲಿರುವ ಭಾರತೀಯರಿಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಭಾರತದ ರಾಯಭಾರ ಕಚೇರಿಯಿಂದ ಭಾರತೀಯರಿಗೆ ಸಲಹೆ ನೀಡಲಾಗಿದೆ. ಕೀವ್‌ನಲ್ಲಿ ವೀಕೆಂಡ್​ ಕರ್ಫ್ಯೂ ವಾಪಸ್​ ಪಡೆಯಲಾಗಿದೆ. ಎಲ್ಲ ವಿದ್ಯಾರ್ಥಿಗಳು ಪಶ್ಚಿಮ ಭಾಗಗಳಿಗೆ ಪ್ರಯಾಣಿಸಲು ಸಲಹೆ ನೀಡಲಾಗಿದೆ. ರೈಲ್ವೆ ನಿಲ್ದಾಣಕ್ಕೆ ದಾರಿ ಮಾಡಿಕೊಡುವಂತೆ ಸೂಚಿಸಲಾಗಿದ್ದು, ಉಕ್ರೇನ್ ರೈಲ್ವೆಯಿಂದ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

  • 28 Feb 2022 05:07 PM (IST)

    Russia Ukraine War Live: ಉಕ್ರೇನ್​ನ ಖಾರ್ಕೀವ್​ನಲ್ಲಿ ನಿಲ್ಲದ‌ ಭಾರತೀಯ ವಿದ್ಯಾರ್ಥಿಗಳ ಪರದಾಟ

    ಕೋಲಾರ: ಉಕ್ರೇನ್​ನ ಖಾರ್ಕೀವ್​ನಲ್ಲಿ ಭಾರತೀಯ ವಿದ್ಯಾರ್ಥಿಗಳ ಪರದಾಟ ಇನ್ನೂ ನಿಂತಿಲ್ಲ. ಖಾರ್ಕೀವ್​ನಲ್ಲಿ ಮೈಸೂರು ಮೂಲದ ದೀಕ್ಷಾ ಎನ್ನುವ ವಿದ್ಯಾರ್ಥಿ ಸಿಲುಕಿಕೊಂಡಿದ್ದಾರೆ. ಖಾರ್ಕೀವ್​ನ ಹಾಸ್ಟೆಲ್​ನ ಅಂಡರ್ ಗ್ರೌಂಡ್​ನಲ್ಲಿ ದೀಕ್ಷಾ ಆಶ್ರಯ ಪಡೆದ್ದು, ದೀಕ್ಷಾ ಜೊತೆಗೆ ಕರ್ನಾಟಕದ ೫೦ಕ್ಕೂ ಕನ್ನಡಿಗರಿದ್ದಾರೆ. ಎರಡು ದಿನಗಳಿಂದ ಆಹಾರಕ್ಕಾಗಿ ಪರದಾಡಿದ್ದಾರೆ. ರಷ್ಯಾ ಮಾರ್ಗವಾಗಿ ಭಾರತಕ್ಕೆ ಕರೆತರಲು ಸುಲಭ ಮಾರ್ಗವಿದ್ದು, ಆದಷ್ಟು ಬೇಗ ನಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳಿ ಎಂದು ಕನ್ನಡಿಗರು ಅಂಗಲಾಚುತ್ತಿದ್ದಾರೆ.

  • 28 Feb 2022 05:01 PM (IST)

    Russia Ukraine War Live: ಅಂತಾರಾಷ್ಟ್ರೀಯ ಸೈನ್ಯ ರಚಿಸುವುದಾಗಿ ಝೆಲೆನ್‌ಸ್ಕಿ ಹೇಳಿಕೆ

    ಅಂತಾರಾಷ್ಟ್ರೀಯ ಸೈನ್ಯ ರಚಿಸುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಘೋಷಿಸಿದ್ದಾರೆ. ರಷ್ಯಾ ವಿರುದ್ಧ ಹೋರಾಡಲು ಜನರು ಬಯಸುತ್ತಿದ್ದಾರೆ. ಈ ಬಗ್ಗೆ ವಿಶ್ವದಾದ್ಯಂತ ಸಾವಿರಾರು ಜನರ ಮನವಿ ಇದೆ. ವಿಶ್ವದ ಸುರಕ್ಷತೆಗಾಗಿ ಹೊಸ ಸೇನೆಯನ್ನು ರಚಿಸುತ್ತೇವೆ ಎಂದು ಘೋಷಿಸಿದ್ದಾರೆ.

  • 28 Feb 2022 04:57 PM (IST)

    Russia Ukraine War Live: ರಷ್ಯಾ ಅಧ್ಯಕ್ಷ ಪುಟಿನ್ 21ನೇ ಶತಮಾನದ ಹಿಟ್ಲರ್

    ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಮುಂದುವರೆದಿದೆ. ರಷ್ಯಾ ಅಧ್ಯಕ್ಷ ಪುಟಿನ್ 21ನೇ ಶತಮಾನದ ಹಿಟ್ಲರ್ ಎಂದು ಉಕ್ರೇನ್ ವಿದೇಶಾಂಗ ಸಚಿವ ಹೇಳಿದೆ.

  • 28 Feb 2022 04:16 PM (IST)

    Russia Ukraine War Live: ಮಗನನ್ನು ಕರೆತರುವಂತೆ ಮಾಜಿ ಸಚಿವ ರೇವಣ್ಣಗೆ ಮನವಿ ಸಲ್ಲಿಸಿದ ಹಾಸನದ ತಾಯಿ

    ಹಾಸನ: ಉಕ್ರೇನ್ ಮೇಲೆ ರಷ್ಯಾ ಯುದ್ದ ಮುಂದುವರೆಸಿದೆ. ಹಾಸನದ ಗಗನ್​ಗೌಡ ಎನ್ನುವವರು ಸಿಲುಕಿಕೊಂಡಿದ್ದು, ಗಗನ್ ಗೌಡ ತಾಯಿ ಸುಜಾತ ಕಣ್ಣೀರು ಹಾಕಿದ್ದಾರೆ. ಹಾಸನದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ರೇವಣ್ಣ ಎದುರು ತಾಯಿ ಸುಜಾತ ಅಳಲು ತೋಡಿಕೊಂಡರು. ಉಕ್ರೇನ್ ನ ಕೀವ್ ನ ಬಂಕರ್ ನಲ್ಲಿ ಗಗನ್ ಸಿಲುಕಿದ್ದಾನೆ. ಊಟ, ನೀರು ಇಲ್ಲದೆ ಪರದಾಡುತ್ತಿದ್ದು, ಮಗ ಕಷ್ಟದಲ್ಲಿ ಇದಾನೆ ಸರ್ ಹೇಗಾದ್ರು ಮಾಡಿ ಕರೆಸಿ ಎಂದು ತಾಯಿ ಗೋಳಾಡಿದ್ದಾಳೆ. ತಾಯಿಯಿಂದ ಮಾಹಿತಿ ಪಡೆದು ಅದಿಕಾರಿಗಳ ಜೊತೆ ಮಾತಾಡೊದಾಗಿ ರೇವಣ್ಣ ತಿಳಿಸಿದ್ದಾರೆ.

  • 28 Feb 2022 03:57 PM (IST)

    ರಷ್ಯಾ-ಉಕ್ರೇನ್‌ ನಿಯೋಗದ ಶಾಂತಿ ಮಾತುಕತೆ ಆರಂಭ

    ಯುದ್ಧ ಆರಂಭ ನಂತರ 2ನೇ ಸುತ್ತಿನ ಶಾಂತಿ ಮಾತುಕತೆ ನಡೆಯುತ್ತಿದೆ. ಶಾಂತಿ ಮಾತುಕತೆಯಲ್ಲಿ ಉಕ್ರೇನ್‌ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ. ಮಹತ್ವದ ಶಾಂತಿ ಮಾತುಕತೆ ಬೆಲಾರಸ್​​ನಲ್ಲಿ ನಡೆಯುತ್ತಿದೆ. ನಿನ್ನೆ ಗೋಮೆಲ್ ಪ್ರದೇಶದಲ್ಲಿ ಶಾಂತಿ ಮಾತುಕತೆ ನಡೆದಿತ್ತು.

  • 28 Feb 2022 03:36 PM (IST)

    ರಷ್ಯಾದ ಮತ್ತೊಂದು ಶಸ್ತ್ರಸಜ್ಜಿತ ಸಿಬ್ಬಂದಿ ವಾಹನ ಧ್ವಂಸ

    ಉಕ್ರೇನ್‌ ಸೇನೆ ರಷ್ಯಾದ ಮತ್ತೊಂದು ಶಸ್ತ್ರಸಜ್ಜಿತ ಸಿಬ್ಬಂದಿ ವಾಹನವನ್ನು ಖಾರ್ಕಿವ್‌ನಲ್ಲಿ ಧ್ವಂಸಗೊಳಿಸಿದೆ.

  • 28 Feb 2022 03:35 PM (IST)

    ಭಾರತೀಯ ಪ್ರಜೆಗಳು ಯಾವುದೇ ವೀಸಾ ಇಲ್ಲದೆ ಪೋಲೆಂಡ್ ಗಡಿಯನ್ನು ದಾಟಬಹುದು: ಪೋಲೆಂಡ್ ರಾಯಭಾರಿ ಆಡಮ್

    ಭಾರತೀಯ ವಿದ್ಯಾರ್ಥಿಗಳಿಗೆ ವಿಶೇಷ ವಿಮಾನಗಳು ಇರುತ್ತವೆ. ಪೋಲೆಂಡ್ ಸಹಕರಿಸುತ್ತಿದೆ ಮತ್ತು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಭಾರತದ ಉನ್ನತ ಮಟ್ಟದ ನಿಯೋಗಕ್ಕೆ ಸಹಾಯ ಮಾಡುತ್ತದೆ. ಭಾರತೀಯ ಪ್ರಜೆಗಳು ಯಾವುದೇ ವೀಸಾ ಇಲ್ಲದೆ ಪೋಲೆಂಡ್ ಗಡಿಯನ್ನು ದಾಟಬಹುದು ಎಂದು ಪೋಲೆಂಡ್ ರಾಯಭಾರಿ ಆಡಮ್ ಬುರಾಕೋವ್ಸ್ಕಿ ಹೇಳಿದ್ದಾರೆ.

  • 28 Feb 2022 03:25 PM (IST)

    ಶಾಪಿಂಗ್ ಸೆಂಟರ್ ಮೇಲೆ ಶೆಲ್‌ಗಳಿಂದ ದಾಳಿ

    ಉಕ್ರೇನ್​ನ ಖಾರ್ಕಿವ್‌ನಲ್ಲಿ ರಷ್ಯಾ ಸೇನೆಯ ದಾಳಿ ಮುಂದುವರೆದಿದ್ದು, ಶಾಪಿಂಗ್ ಸೆಂಟರ್ ಮೇಲೆ ಶೆಲ್‌ಗಳು ದಾಳಿ ಮಾಡಿದ್ದಾರೆ.

  • 28 Feb 2022 03:24 PM (IST)

    ಸೇನಾ ಅನುಭವ ಇರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ

    ರಷ್ಯಾ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳಲು ಸಿದ್ಧರಿರುವ ಸೇನಾ ಅನುಭವ ಇರುವ ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.

  • 28 Feb 2022 03:16 PM (IST)

    ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ಸ್ಟೋಲ್ಟೆನ್‌ಬರ್ಗ್ ದೂರವಾಣಿ ಕರೆ

    ರಷ್ಯಾ ವಿರುದ್ಧ ಕೆಚ್ಚೆದೆ ಹೋರಾಟ ಹಿನ್ನೆಲೆ ಝೆಲೆನ್ಸ್ಕಿಗೆ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಕರೆ ಮಾಡಿದ್ದಾರೆ. ಆ ಮೂಲಕ ಪ್ರಶಂಸೆ ನೀಡಿದ್ದಾರೆ. ಝೆಲೆನ್ಸ್ಕಿ ಬಗ್ಗೆ ಸ್ಟೋಲ್ಟೆನ್‌ಬರ್ಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • 28 Feb 2022 03:13 PM (IST)

    ಸಂಜೆ 6.45ಕ್ಕೆ ಐವರು ವಿದ್ಯಾರ್ಥಿಗಳು ಬೆಂಗಳೂರಿಗೆ ವಾಪಸ್

    ಉಕ್ರೇನ್​​ನಿಂದ ದೆಹಲಿಗೆ ಆಗಮಿಸಿದ್ದ ಐವರು ವಿದ್ಯಾರ್ಥಿಗಳು, ಸಂಜೆ 6.45ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ಶ್ರವಣ ಸ‌ಂಗಣ್ಣ ಬಿರಾದಾರ್, ಶಕ್ತಿಶ್ರೀ ಶೇಖರ್, ನಿಹಾರಿಕಾ, ಮೈನಾ ನೈಲ್​ ನಾಯ್ಕ್, ಆಶಾ ವೆಂಕಟೇಶ್ ರೆಡ್ಡಿ ಸಂಜೆ ವಾಪಸ್ ಆಗಲಿದ್ದಾರೆ. ಭಾರತಿ, ಲಕ್ಷ್ಮೀಪುರ ಶ್ರೀನಿವಾಸ ಹೈದರಾಬಾದ್​ಗೆ ಆಗಮಿಸಲಿದ್ದಾರೆ.

  • 28 Feb 2022 03:11 PM (IST)

    ರಷ್ಯಾ ಕೂಡಲೇ ಕದನವಿರಾಮ ಘೋಷಿಸಲಿ: ಉಕ್ರೇನ್ ಅಧ್ಯಕ್ಷ ವ್ಲೋಡೊಮಿರ್ ಝೆಲೆನ್‌ಸ್ಕಿ

    ರಷ್ಯಾ ಉಕ್ರೇನ್‌ನಿಂದ ತಕ್ಷಣ ತನ್ನ ಸೇನೆ ಹಿಂಪಡೆಯಲಿ. ರಷ್ಯಾ ಕೂಡಲೇ ಕದನವಿರಾಮ ಘೋಷಿಸಲಿ ಎಂದು ರಷ್ಯಾ-ಉಕ್ರೇನ್ ಶಾಂತಿ ಸಭೆಗೂ ಮುನ್ನ ಉಕ್ರೇನ್ ಅಧ್ಯಕ್ಷ ವ್ಲೋಡೊಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.

  • 28 Feb 2022 03:08 PM (IST)

    ಉಕ್ರೇನ್​ನಲ್ಲಿ ಅಗತ್ಯದ ಸಮಯದಲ್ಲಿ ಬೆಂಬಲಕ್ಕೆ ನಿಲ್ಲುತ್ತೇವೆ: ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್

    ಉಕ್ರೇನ್‌ನಲ್ಲಿ ಮಾನವೀಯ ಕಾರ್ಯಾಚರಣೆ ಹೆಚ್ಚಿಸಿ, ಅವರ ಅಗತ್ಯದ ಸಮಯದಲ್ಲಿ ಬೆಂಬಲಕ್ಕೆ ನಿಲ್ಲುತ್ತೇವೆ. ಅವರ ಬೆಂಬಲಕ್ಕೆ ನಿಲ್ಲುತ್ತೇವೆಂಬುದನ್ನ ತೋರಿಸಬೇಕು ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಹೇಳಿಕೆ ನೀಡಿದ್ದಾರೆ.

  • 28 Feb 2022 03:06 PM (IST)

    ರಷ್ಯಾ-ಉಕ್ರೇನ್ ನಡುವೆ ಯುದ್ಧ ನಿಲ್ಲದಿದ್ದರೆ ನಿರಾಶ್ರಿತರ ಸಂಖ್ಯೆ ಹೆಚ್ಚಳ: ಡಾ.ಪೊಲಿಖಾ

    ಉಕ್ರೇನ್ ನಿರಾಶ್ರಿತರ ಸಂಖ್ಯೆ 4 ಲಕ್ಷದ ಗಡಿ ದಾಟಿದೆ. ರಷ್ಯಾ-ಉಕ್ರೇನ್ ನಡುವೆ ಯುದ್ಧ ನಿಲ್ಲದಿದ್ದರೆ ಈ ಸಂಖ್ಯೆ ಹೆಚ್ಚಳವಾಗುತ್ತದೆ. ನಿರಾಶ್ರಿತರ ಸಂಖ್ಯೆ 7 ಲಕ್ಷ ತಲುಪುವ ಸಾಧ್ಯತೆ ಇದೆ. ಉಕ್ರೇನ್ ಗಡಿಯಲ್ಲಿ ಜನರ ಉದ್ದದ ಸಾಲು ನಿಂತಿದೆ. ಉಕ್ರೇನ್‌ನ ಲಕ್ಷಾಂತರ ಜನ ಗಡಿದಾಟಲು ನಿಂತಿದ್ದಾರೆ ಎಂದು ಉಕ್ರೇನ್ ನಿರಾಶ್ರಿತರ ಬಗ್ಗೆ ಡಾ.ಪೊಲಿಖಾ ಹೇಳಿಕೆ ನೀಡಿದ್ದಾರೆ.

  • 28 Feb 2022 03:03 PM (IST)

    ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಿಸುತ್ತಿದೆ: ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್

    ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ಉಲ್ಬಣವಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಿಸುತ್ತಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

  • 28 Feb 2022 03:02 PM (IST)

    ಉಕ್ರೇನ್‌ಗೆ ತಕ್ಷಣ ಇಯು ಸದಸ್ಯತ್ವವನ್ನು ನೀಡಬೇಕು: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ

    ಉಕ್ರೇನ್‌ಗೆ ತಕ್ಷಣ ಇಯು ಸದಸ್ಯತ್ವವನ್ನು ನೀಡಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಬೇಡಿಕೆ ಇಟ್ಟಿದ್ದಾರೆ.

  • 28 Feb 2022 03:01 PM (IST)

    ಉಕ್ರೇನ್‌ಗೆ ಎನ್ಎಟಿಒ ಮೈತ್ರಿಕೂಟ ದೇಶಗಳು ಸಹಾಯ ಮಾಡ್ತಿವೆ

    ಉಕ್ರೇನ್‌ಗೆ ಎನ್​ಎಟಿಒ ಮೈತ್ರಿಕೂಟ ದೇಶಗಳು ಸೇನಾ ನೆರವು ಹಾಗೂ ಆರ್ಥಿಕ ನೆರವು ನೀಡುತ್ತಿವೆ.

  • 28 Feb 2022 02:59 PM (IST)

    ಈವರೆಗೆ ರಷ್ಯಾದ 4,500 ಯೋಧರು ಹತರಾಗಿದ್ದಾರೆ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಈವರೆಗೆ ರಷ್ಯಾದ 4,500 ಯೋಧರು ಹತರಾಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

  • 28 Feb 2022 02:58 PM (IST)

    451 ಕನ್ನಡಿಗ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ

    451 ಕನ್ನಡಿಗ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾರೆ. ಈ ಪೈಕಿ 37 ವಿದ್ಯಾರ್ಥಿಗಳು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಬೆಂಗಳೂರು ನಗರ- 170, ಮೈಸೂರು- 29, ಬಾಗಲಕೋಟೆ- 23, ತುಮಕೂರು -22, ದಕ್ಷಿಣ ಕನ್ನಡ- 18, ವಿಜಯಪುರ-18, ಬೆಂಗಳೂರು ಗ್ರಾಮಾಂತರ- 18, ರಾಯಚೂರು- 15, ಹಾಸನ- 13, ಬೆಳಗಾವಿ-13, ಕೊಡಗು-12, ಚಿಕ್ಕಬಳ್ಳಾಪುರ-10, ಹಾವೇರಿ-10, ಕೋಲಾರ-9, ದಾವಣಗೆರೆ-9, ಉಡುಪಿ-8, ಚಿಕ್ಕಮಗಳೂರು-8, ಬಳ್ಳಾರಿ-6, ಚಿತ್ರದುರ್ಗ-5, ಬೀದರ್-5, ಶಿವಮೊಗ್ಗ-4, ಕಲ್ಬುರ್ಗಿ-4, ಧಾರವಾಡ-4, ಚಾಮರಾಜನಗರ-4, ರಾಮನಗರ-3, ಉತ್ತರಕನ್ನಡ-3, ಮಂಡ್ಯ-3, ಕೊಪ್ಪಳ-3, ಗದಗ-2

  • 28 Feb 2022 02:54 PM (IST)

    ರಷ್ಯಾ ವಿರುದ್ಧ ಸೆಣಸ್ತಿರುವ ಉಕ್ರೇನ್ ಪರ ನಿಂತ ಲಾಟ್ವಿಯಾ

    ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ರಷ್ಯಾ ವಿರುದ್ಧ ಸೆಣಸ್ತಿರುವ ಉಕ್ರೇನ್ ಪರ ಲಾಟ್ವಿಯಾ ನಿಂತಿದೆ. ಉಕ್ರೇನ್ ಬೆಂಬಲಿಸಿ ಲಾಟ್ವಿಯಾ ಸಂಸತ್‌ನಲ್ಲಿ ತನ್ನ ನಿರ್ಣಯ ತಿಳಿಸಿದೆ.

  • 28 Feb 2022 02:52 PM (IST)

    ಕೀವ್‌ ನಗರ ಉಕ್ರೇನ್‌ ಸೇನಾಪಡೆಗಳ ನಿಯಂತ್ರಣದಲ್ಲಿದೆ: ಉಕ್ರೇನ್ ಸೇನೆಯಿಂದ ಮಾಹಿತಿ

    ಕೀವ್‌ ನಗರ ಉಕ್ರೇನ್‌ ಸೇನಾಪಡೆಗಳ ನಿಯಂತ್ರಣದಲ್ಲಿದೆ. ರಷ್ಯಾದ 150 ಯುದ್ಧ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿದ್ದೇವೆ. 16 ಬಾಲಕರು ಮೃತಪಟ್ಟಿದ್ದಾರೆ ಎಂದು ರಷ್ಯಾ ವಿರುದ್ಧ ಸೆಣಸ್ತಿರುವ ಉಕ್ರೇನ್ ಸೇನೆ ಮಾಹಿತಿ ನೀಡಿದೆ.

  • 28 Feb 2022 02:48 PM (IST)

    ನಿಮ್ಮ ಪ್ರಾಣ ಉಳಿಸಿಕೊಳ್ಳಬೇಕಾದ್ರೆ ಉಕ್ರೇನ್‌ ತೊರೆಯಿರಿ: ರಷ್ಯಾ ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ಎಚ್ಚರಿಕೆ

    ಕೂಡಲೇ ಉಕ್ರೇನ್‌ ತೊರೆದು ನಿಮ್ಮ ಜೀವ ಉಳಿಸಿಕೊಳ್ಳಿ ಎಂದು ಶತ್ರು ರಾಷ್ಟ್ರ ರಷ್ಯಾ ಸೈನಿಕರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೊನೆಯ ಎಚ್ಚರಿಕೆ ನೀಡಿದ್ದಾರೆ.

  • 28 Feb 2022 02:07 PM (IST)

    ರಷ್ಯಾ, ಉಕ್ರೇನ್ ಮಧ್ಯೆ ಇಂದು 2ನೇ ಶಾಂತಿ ಸಭೆ; ಒಂದು ಒಪ್ಪಂದಕ್ಕೆ ಬರಲು ಆಸಕ್ತಿ ಹೊಂದಿರುವ ರಷ್ಯಾ

    ರಷ್ಯಾ, ಉಕ್ರೇನ್ ಮಧ್ಯೆ ಇಂದು 2ನೇ ಶಾಂತಿ ಸಭೆ ನಡೆಯಲಿದೆ. 2 ಕಡೆಯ ಹಿತಾಸಕ್ತಿಗಳಿಗೆ ಅನುಗುಣವಾಗಿ ರಷ್ಯಾ ಒಂದು ಒಪ್ಪಂದಕ್ಕೆ ಬರುವ ಆಸಕ್ತಿ ಹೊಂದಿದೆ ಎಂದು ರಷ್ಯಾ ಸಂಧಾನಕಾರ ವ್ಲಾಡಿಮಿರ್ ಮೆಡಿನ್‌ಸ್ಕಿ ಹೇಳಿಕೆ ನೀಡಿದ್ದಾರೆ.

  • 28 Feb 2022 02:05 PM (IST)

    ಉಕ್ರೇನ್‌ನ ಇರ್ಪಿನ್‌ನಲ್ಲಿ ರಷ್ಯಾ ಯುದ್ಧ ಸಾಮಗ್ರಿ ನಾಶ

    ಉಕ್ರೇನ್‌ನ ಇರ್ಪಿನ್‌ನಲ್ಲಿನ ರಷ್ಯಾ ಯುದ್ಧ ಸಾಮಗ್ರಿಯನ್ನು ಉಕ್ರೇನ್ ಸೇನೆ ಧ್ವಂಸಗೊಳಿಸಿದೆ.

  • 28 Feb 2022 02:04 PM (IST)

    ಮಗನನ್ನು ಡಾಕ್ಟರ್ ಮಾಡಬೇಕು ಅಂತಾ ಕನಸು ಇತ್ತು: ಪೋಷಕರ ಅಳಲು

    ಬಡತನದಲ್ಲಿ ಕಷ್ಟ ಪಟ್ಟು ಹಣ ಹೊಂದಿಸಿ ಡಾಕ್ಟರ್ ಆಗಲಿ ಅಂತಾ ಉಕ್ರೇನ್‌ಗೆ ಕಳಿಸಿದ್ವಿ. ಮಗನನ್ನು ಡಾಕ್ಟರ್ ಮಾಡಬೇಕು ಅಂತಾ ಕನಸು ಇತ್ತು. ಈಗ ನೋಡಿದ್ರೆ ಯುದ್ಧದಲ್ಲಿ ಸಿಲುಕಿ ವಿದ್ಯಾಭ್ಯಾಸ ಹಾಳಾದಂತೆ ಆಗಿದೆ.ಹೇಗಾದರು ಮಾಡಿ ಸುರಕ್ಷಿತವಾಗಿ ಮಗ ಊರಿಗೆ ಬಂದ್ರೆ ಸಾಕು ಎಂದು ಉಕ್ರೇನ್​ನಲ್ಲಿ ಸಿಲುಕಿದ ಇಮ್ರಾನ್ ನಜೀರ್‌ರ ತಂದೆ ಅಲ್ತಾಪ್ ಚೌದರಿ ಅಳಲು ತೋಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ವಿದ್ಯಾರ್ಥಿ ಇಮ್ರಾನ್ ನಜೀರ್ ಚೌದರಿ, ಉಕ್ರೇನ್‌ನ ಮಿನಿಶಿಯಾ ನ್ಯಾಷನಲ್ ಮೆಮೋರಿಯಲ್ ಪ್ರೀಗಿವ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ.

  • 28 Feb 2022 02:01 PM (IST)

    ಉಕ್ರೇನ್​ನಲ್ಲಿ ಸಂಕಷ್ಟದಲ್ಲಿ ಇದ್ದ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ದ: ಸಚಿವ ಆರ್. ಅಶೋಕ

    ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಇದಕ್ಕಾಗಿ ಐಎಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ‌. ರಾಜ್ಯದ ಯಾವುದೇ ಮಕ್ಕಳು ಉಕ್ರೇನ್​ನಲ್ಲಿ ಸಂಕಷ್ಟದಲ್ಲಿ ಇದ್ದರೇ ಆ ಬಗ್ಗೆ ಮಾಹಿತಿ ಪಡೆದು ಮುಂದಿನ ಕಾರ್ಯ ನಡೆಸಲಾಗುವುದು. ಈಗಿನ ಮಾಹಿತಿ ಪ್ರಕಾರ ರಾಜ್ಯದ 400 ಮಕ್ಕಳ ಬಗ್ಗೆ  ಮಾಹಿತಿ ಇದೆ‌.‌ ಇನ್ನಷ್ಟು ಮಾಹಿತಿ‌ ಸಂಗ್ರಹಿಸಲಾಗುತ್ತಿದೆ. ಸುರಕ್ಷಿತವಾಗಿ ಕನ್ನಡದ ಮಕ್ಕಳನ್ನ ಕರೆತರಲು ಸರ್ಕಾರ ಬದ್ಧ ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಕಂದಾಯ ಸಚಿವ ಆರ್. ಅಶೋಕ ಹೇಳಿಕೆ ನೀಡಿದ್ದಾರೆ.

  • 28 Feb 2022 01:59 PM (IST)

    ಕೀವ್‌ನಲ್ಲಿ ಅಗತ್ಯ ವಸ್ತು ಖರೀದಿಸುತ್ತಿರುವ ಉಕ್ರೇನ್ ಜನ

    ಉಕ್ರೇನ್‌ನ ಕೀವ್ ನಗರದಲ್ಲಿ ಕರ್ಫ್ಯೂ ಹಿಂಪಡೆದ ಹಿನ್ನೆಲೆ ಕೀವ್‌ನಲ್ಲಿ ಉಕ್ರೇನ್ ಜನ ಅಗತ್ಯ ವಸ್ತು ಖರೀದಿಸುತ್ತಿದ್ದಾರೆ.

  • 28 Feb 2022 01:58 PM (IST)

    ಸರ್ವಾನುಮತದಿಂದ ಜನ ಒಪ್ಪಿದರೆ ಯುದ್ಧ ಮಾಡಲು ಅವಕಾಶವಿದೆ

    ಯುದ್ಧ ಮಾಡಲು ಜನ ಒಪ್ಪಿದರೆ ಅವಕಾಶವಿದೆ. ಸರ್ವಾನುಮತದಿಂದ ಜನ ಒಪ್ಪಿದರೆ ಅವಕಾಶವಿದೆ ಎಂದು ಉಕ್ರೇನ್‌ನ ಲಾಟ್ವಿಯಾದ ಸಂಸತ್‌ನಲ್ಲಿ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ.

  • 28 Feb 2022 01:55 PM (IST)

    ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳಿಗೆ ಇಲ್ಲಿ ಮೆಡಿಕಲ್ ಕೋರ್ಸ್​ಗಳು ಮಾಡೋದು ಕಷ್ಟ: ಸಚಿವ ಡಾ. ಅಶ್ವಥ್ ನಾರಾಯಣ

    ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ವ್ಯಾಸಂಗ ಮಾಡಲು ಅವಕಾಶ ಮಾಡಿಕೊಡುವ ವಿಚಾರದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಕೇಂದ್ರ ಸರ್ಕಾರದ ಜೊತೆ ಮಾತಾಡಬೇಕಾಗುತ್ತದೆ. ಮೆಡಿಕಲ್ ಕೋರ್ಸ್​ಗಳು ಮಾಡೋದು ಕಷ್ಟ, ಬೇರೆ ಕೋರ್ಸ್​ಗೆ ಸಮಸ್ಯೆ ಆಗಲ್ಲ. ಆದ್ರೂ ನಿಯಮಗಳ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

  • 28 Feb 2022 01:52 PM (IST)

    ರಷ್ಯಾ ನಮ್ಮ ವಾಯುನೆಲೆಯನ್ನು ಅಕ್ರಮವಾಗಿ ಬಳಸಿಕೊಂಡಿದೆ: ರಷ್ಯಾ ವಿರುದ್ಧ ಕೆನಡಾ ಆರೋಪ

    ರಷ್ಯಾ ನಮ್ಮ ವಾಯುನೆಲೆಯನ್ನು ಅಕ್ರಮವಾಗಿ ಬಳಸಿಕೊಂಡಿದೆ ಎಂದು ರಷ್ಯಾ ವಿರುದ್ಧ ಕೆನಡಾ ಆರೋಪ ಮಾಡಿದೆ.

  • 28 Feb 2022 01:50 PM (IST)

    ಕಾರ್ಗೋ ಶಿಪ್ ಮೇಲೆ ರಷ್ಯಾ ಮಿಸೈಲ್ ದಾಳಿ

    ಕಾರ್ಗೋ ಶಿಪ್ ಮೇಲೆ ರಷ್ಯಾ ಮಿಸೈಲ್ ದಾಳಿ ನಡೆಸಿದೆ. ಉಕ್ರೇನ್‌ನ ದಕ್ಷಿಣ ಕರಾವಳಿ ಭಾಗದಲ್ಲಿ ರಷ್ಯಾ ದಾಳಿಗೆ ಮುಂದಾಗಿದೆ.

  • 28 Feb 2022 01:49 PM (IST)

    ಹಂಗೇರಿಗೆ ತೆರಳಲಿರುವ ಕೇಂದ್ರ ಸಚಿವ ಹರ್ದೀಪ್ ಪುರಿ

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್ ಹಿನ್ನೆಲೆಯಲ್ಲಿ ಉಕ್ರೇನ್ ನೆರೆ ರಾಷ್ಟ್ರಗಳಿಗೆ ಕೇಂದ್ರ ಸಚಿವರು ಪ್ರಯಾಣ ಬೆಳೆಸಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಪುರಿ ಹಂಗೇರಿಗೆ ತೆರಳಲಿದ್ದು, ಸ್ಲೊವಾಕಿಯಾಗೆ ಕಿರಣ್ ರಿಜಿಜು ತೆರಳಲಿದ್ದಾರೆ. ಇನ್ನೂ ರೊಮೇನಿಯಾ, ಮಾಲ್ಡೊವಾಗೆ ಸಿಂಧಿಯಾ ಪ್ರಯಾಣ ಮಾಡುತ್ತಿದ್ದಾರೆ. ಇತ್ತ ಪೋಲೆಂಡ್‌ಗೆ ಜನರಲ್ ವಿ.ಕೆ.ಸಿಂಗ್ ತೆರಳಲಿದ್ದಾರೆ.

  • 28 Feb 2022 01:46 PM (IST)

    ರಷ್ಯಾಗೆ ನಿರ್ಬಂಧ ವಿಧಿಸಲಿರುವ ಸಿಂಗಾಪುರ

    ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮಾಡುತ್ತಿರುವ ಹಿನ್ನೆಲೆಯಲ್ಲಿ ರಷ್ಯಾಗೆ ಸಿಂಗಾಪುರ ನಿರ್ಬಂಧ ವಿಧಿಸಲಿದೆ.

  • 28 Feb 2022 01:41 PM (IST)

    ರಷ್ಯಾ ವಿಮಾನಗಳಿಗೆ ನಿರ್ಬಂಧ ವಿಧಿಸಿದ ಗ್ರೀಸ್

    ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮಾಡುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ವಿಮಾನಗಳಿಗೆ ಗ್ರೀಸ್ ನಿರ್ಬಂಧ ವಿಧಿಸಿದೆ.

  • 28 Feb 2022 01:32 PM (IST)

    ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ತಿದೆ: ಉಕ್ರೇನ್ ದೇಶದ ವಿರುದ್ಧ ರಷ್ಯಾ ಸೇನೆ ಆರೋಪ

    ಉಕ್ರೇನ್ ದೇಶದ ವಿರುದ್ಧ ರಷ್ಯಾ ಸೇನೆ ಆರೋಪ ಮಾಡಿದೆ. ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ತಿದೆ ಎಂದು ತಿಳಿಸಿದೆ.

  • 28 Feb 2022 01:30 PM (IST)

    ಸಂಜೆ 6:45ಕ್ಕೆ ಬೆಂಗಳೂರಿಗೆ ಬರಲಿರುವ ಐದು ವಿದ್ಯಾರ್ಥಿಗಳು

    ಬೆಂಗಳೂರಿನತ್ತ ಐವರು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ದೆಹಲಿಯಿಂದ ಏರ್ ಏಷಿಯಾ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸಂಜೆ ನಾಲ್ಕು ಗಂಟೆಗೆ ವಿಮಾನ ಹೊರಡಲಿದೆ. ಸಂಜೆ 6: 45ಕ್ಕೆ ಲ್ಯಾಡಿಂಗ್ ಆಗಲಿದೆ. ಇಂದು ಬೆಳಗ್ಗೆ ಉಕ್ರೇನ್​ನಿಂದ ಬಂದಿದ್ದ ಆರು ವಿದ್ಯಾರ್ಥಿಗಳ ಪೈಕಿ ಐದು ಮಂದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಓರ್ವ ವಿದ್ಯಾರ್ಥಿ ಹೈದರಾಬಾದ್ ಮೂಲಕ ರಾಯಚೂರಿಗೆ ಪ್ರಯಾಣ ಮಾಡಲಿದ್ದಾನೆ.

  • 28 Feb 2022 01:19 PM (IST)

    ಮಧ್ಯಾಹ್ನ 3.30ಕ್ಕೆ ರಷ್ಯಾ-ಉಕ್ರೇನ್ ಶಾಂತಿ ಸಭೆ

    ಮಧ್ಯಾಹ್ನ 3.30ಕ್ಕೆ ರಷ್ಯಾ-ಉಕ್ರೇನ್ ನಡುವೆ ಬೆಲಾರಸ್‌ನ ಗೊಮೆಲ್‌ನಲ್ಲಿ ಎರಡನೇ ಸುತ್ತಿನ ಶಾಂತಿ ಸಭೆ ನಡೆಯಲಿದೆ.

  • 28 Feb 2022 01:17 PM (IST)

    ಝಪೋರಿಜ್ಜ್ಯಾ ಪರಮಾಣು ಸ್ಥಾವರ ವಶಪಡಿಸಿಕೊಂಡಿಲ್ಲ: ಉಕ್ರೇನ್

    ರಷ್ಯಾದ ಝಪೋರಿಜ್ಜ್ಯಾ ಪರಮಾಣು ಸ್ಥಾವರನ್ನು ವಶಪಡಿಸಿಕೊಂಡಿಲ್ಲ ಎಂದು ಉಕ್ರೇನ್ ತಿಳಿಸಿದೆ. ಆದರೆ ಪರಮಾಣು ಸ್ಥಾವರ ವಶಪಡಿಸಿಕೊಂಡ ಬಗ್ಗೆ ವರದಿಯಾಗಿತ್ತು. ಸದ್ಯ ಈ ವರದಿಯನ್ನು ಉಕ್ರೇನ್ ನಿರಾಕರಿಸಿದೆ.

  • 28 Feb 2022 01:14 PM (IST)

    ಕೀವ್ ತೊರೆಯುವುದಕ್ಕೆ ನಾಗರಿಕರಿಗೆ ಮುಕ್ತ ಅವಕಾಶ

    ಕೀವ್ ತೊರೆಯುವುದಕ್ಕೆ ನಾಗರಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಹೌದು ಉಕ್ರೇನ್ ನಾಗರಿಕರಿಗೆ ರಷ್ಯಾ ಸೇನೆ ಮುಕ್ತ ಅವಕಾಶ ನೀಡಿದೆ.

  • 28 Feb 2022 01:12 PM (IST)

    ರಾಯಭಾರಿ ಕಚೇರಿಯ ಯಾರು ಸಂಪರ್ಕ ಮಾಡಿಲ್ಲ: ಪೋಷಕರ ಆರೋಪ

    ರಷ್ಯಾ – ಉಕ್ರೇನ್ ನಡುವೆ ಯುದ್ಧ ಹಿನ್ನಲೆ ಉಕ್ರೇನ್​ನಲ್ಲಿ ಸಿಲುಕಿರುವ ಮಗಳನ್ನ ಆದಷ್ಟು ಬೇಗ ಕರೆ ತನ್ನಿ ಎಂದು ಪೋಷಕರು ಮನವಿ ಮಾಡಿದ್ದಾರೆ. ಪ್ರೀಯಾ ನಿಡಗುಂದಿ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಎಂಬಿಬಿಎಸ್​ ವ್ಯಾಸಂಗ ಮಾಡುತ್ತಿದ್ದಾಳೆ. ಕಳೆದ ಮೂರು ತಿಂಗಳ ಹಿಂದೆಯಷ್ಟೆ ಹೋಗಿದ್ದಳು. ದಿನದಿಂದ ದಿನಕ್ಕೆ ಯುದ್ಧ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಕಾಲೇಜು ಹಾಸ್ಟೇಲ್ ಬಂಕರ್​ನಲ್ಲಿ ಇದ್ದಾರೆ. ಪ್ರತಿದಿನ ಊಟಕ್ಕೂ ತೊಂದರೆಯಾಗುತ್ತಿದೆ. ರಾಯಭಾರಿ ಕಚೇರಿಯ ಯಾರು ಸಂಪರ್ಕ ಮಾಡಿಲ್ಲ. ಖಾರ್ಕಿವ್​ನಲ್ಲಿ ನನ್ನ ಮಗಳಂತೆ ಸಾಕಷ್ಟು ವಿದ್ಯಾರ್ಥಿಗಳು ಇದ್ದಾರೆ. ಅವರೆಲ್ಲರನ್ನ ಕರೆ ತರುವಂತಹ ಕೆಲಸ ಸರಕಾರ ಮಾಡಬೇಕು. ಸಿಎಂ ಬಸವರಾಜ್ ಬೊಮ್ಮಾಯಿ‌ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಮೂಲಕ ಮನವಿ‌ ಮಾಡಿಕೊಳ್ಳುತ್ತೇವೆ ಎಂದು ಟಿವಿ9 ಮೂಲಕ ಪ್ರೀಯಾ ತಂದೆ ಭಗವಂತ ನಿಡಗುಂದಿ ಮನವಿ ಮಾಡಿದ್ದಾರೆ.

  • 28 Feb 2022 01:09 PM (IST)

    ಇಂದು ಮುಂಜಾನೆಯಿಂದ ಹೆಚ್ಚಾದ ಬಾಂಬ್ ಹಾಗೂ ಗುಂಡಿನ ದಾಳಿ

    ಉಕ್ರೇನ್​ನಲ್ಲಿ ಭಾರತೀಯ ವಿದ್ಯಾರ್ಥಿಗಳ ಪರದಾಟ ಮುಂದುವರೆದಿದೆ. ಇಂದು ಮುಂಜಾನೆಯಿಂದ ಬಾಂಬ್ ಹಾಗೂ ಗುಂಡಿನ ದಾಳಿ ಹೆಚ್ಚಾಗಿದೆ. ಬಂಕರ್​ಗಳಿಂದ ಹೊರಬರಲು ಜನ ಭಯಪಡುತ್ತಿದ್ದಾರೆ. ಉಕ್ರೇನ್​ನ ಖಾರ್ಕೀವ್ ಪ್ರದೇಶದಲ್ಲಿ ಜನರು ಪರದಾಡುತ್ತಿದ್ದಾರೆ. ಖಾರ್ಕೀವ್​ನ ಮೆಟ್ರೋ ಅಂಡರ್ ಪಾಸ್ ಹಾಗೂ ಬಂಕರ್​ಗಳಲ್ಲಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಬಿಸ್ಕೇಟ್ ಹಾಗೂ ಬ್ರೆಡ್ ತಿಂದು ಜೀವನ ಸಾಗಿಸುವ ಸ್ಥಿತಿ ಎದುರಾಗಿದೆ ಈ ಬಗ್ಗೆ ಕೋಲಾರ ಮೂಲದ ವಿದ್ಯಾರ್ಥಿ ಜೀವನ್ ಎಂಬುವವರು ಮಾಹಿತಿ ನೀಡಿದ್ದಾರೆ.

  • 28 Feb 2022 01:01 PM (IST)

    ರಾಜ್ಯಪಾಲರಾದ ಆನಂದಿಬೆನ್ ಪಟೇಲ್​ಗೆ ಮನವಿ ಸಲ್ಲಿಸಲು ಬಂದಿದ್ದ ಪಾಲಕರಿಗೆ ಸಿಗದ ಅವಕಾಶ

    ಬಾಗಲಕೋಟೆಗೆ ಸಚಿವ ಮುರುಗೇಶ್ ನಿರಾಣಿ ಒಡೆತನದ ತೇಜಸ್ ಶಿಕ್ಷಣ ಸಂಸ್ಥೆ ಕಾರ್ಯಕ್ರಮಕ್ಕೆ ರಾಜ್ಯಪಾಲರಾದ ಆನಂದಿಬೆನ್ ಪಟೇಲ್​ಗೆ ಮನವಿ ಸಲ್ಲಿಸಲು ಬಂದಿದ್ದ ಪಾಲಕರಿಗೆ ಅವಕಾಶ ಸಿಗಲಿಲ್ಲ. ಹೀಗಾಗಿ ಅಪೂರ್ವ ತಾಯಿ ಜ್ಯೋತಿ ಕದಾಂಪುರ ಕಣ್ಣೀರು ಹಾಕಿದ್ದಾರೆ. ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಪೊಲೀಸರು ಬಿಡಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

  • 28 Feb 2022 12:49 PM (IST)

    ಉಕ್ರೇನ್‌ನ ಕೀವ್‌ನಲ್ಲಿ ವೀಕೆಂಡ್ ಕರ್ಫ್ಯೂ ವಾಪಸ್; ಭಾರತೀಯ ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣಕ್ಕೆ ತೆರಳಲು ಸೂಚನೆ

    ಕೀವ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣಕ್ಕೆ ತೆರಳಲು ರಾಯಭಾರ ಕಚೇರಿ ಸೂಚನೆ ನೀಡಿದೆ. ಪಶ್ಚಿಮ ಭಾಗಕ್ಕೆ ತೆರಳುವಂತೆ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

  • 28 Feb 2022 12:45 PM (IST)

    ಬಾರ್ಡರ್​ಗೆ ಹೋಗಿ ಎಂದು ದಾರಿ ತಪ್ಪಿಸಲಾಗ್ತಿದೆ ಇದಕ್ಕೆ ವಿದ್ಯಾರ್ಥಿಗಳು ಕಿವಿಗೊಡಬಾರದು: ಮನೋಜ್ ರಾಜನ್

    ಕೀವ್, ಖಾರ್ಕಿವ್ ಮತ್ತು ಸುವಿ ಪ್ರದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಅಲ್ಲಿರುವ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಆದರೆ ಇಂಡಿಯನ್ ಎಂಬಸಿ ಅಲ್ಲಿರುವ ವಿದ್ಯಾರ್ಥಿಗಳಿಗೆ ಸಹಕಾರ ನೀಡ್ತಿದೆ. ಅಲ್ಲಿರುವ ವಿದ್ಯಾರ್ಥಿಗಳಿಗೆ ಊಟ, ನೀರಿನ ವ್ಯವಸ್ಥೆ ಮಾಡುವಂತೆ ಎಂಬಸಿಗೆ ಮನವಿ ಮಾಡಲಾಗಿದೆ. ನಿರಂತರವಾಗಿ ಸ್ಥಳೀಯ ಎಂಬಸಿ ಜತೆಗೆ ಸಂಪರ್ಕದಲ್ಲಿದ್ದೇವೆ. ವಿದ್ಯಾರ್ಥಿಗಳು ಮನೆಯಿಂದ ಹೊರ ಬರಬೇಡಿ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳು ಭಯಭೀತರಾಗಿ ಮನೆಯಿಂದ ಹೊರಬರುವುದು ಸುರಕ್ಷಿತವಲ್ಲ. ಪರಿಸ್ಥಿತಿ ತಿಳಿಯಾದ ತಕ್ಷಣ ಎಲ್ಲರನ್ನೂ ಕರೆ ತರಲಾಗುತ್ತದೆ. ಬಾರ್ಡರ್​ಗೆ ಹೋಗಿ ಎಂದು ದಾರಿ ತಪ್ಪಿಸಲಾಗ್ತಿದೆ. ಇದಕ್ಕೆ ವಿದ್ಯಾರ್ಥಿಗಳು ಕಿವಿಗೊಡಬಾರದು. ಎಂಬಿಸಿ ಅಧಿಕೃತವಾಗಿ ಹೇಳುವ ತನಕ ವಿದ್ಯಾರ್ಥಿಗಳು ಹೊರಬಾರದು ಎಂದು ನೋಡಲ್ ಆಪೀಸರ್​ ಮನೋಜ್ ರಾಜನ್ ಹೇಳಿದ್ದಾರೆ.

  • 28 Feb 2022 12:32 PM (IST)

    ಸರ್ಕಾರ ಸೂಕ್ತವಾದ ವ್ಯವಸ್ಥೆ ಮಾಡಿ ಮನೆ ತಲುಪುವಂತೆ ಮಾಡಿತು: ಮಹ್ಮದ್ ಅಬೀದ ಅಲಿ

    ಮೂರು ತಿಂಗಳಲ್ಲಿಯೇ ವಾಪಸ್ಸು ಬರುತ್ತೇವೆ ಎಂದು ಕನಸಿನಲ್ಲಿಯೂ ಅಂದು ಕೊಂಡಿರಲಿಲ್ಲ. ನಾವು ಎಂಬಿಬಿಎಸ್ ಮುಗಿಸಿಕೊಂಡು ತಾಯಿನಾಡಿಗೆ ಬರುವ ನಿರ್ಧಾರ ಮಾಡಿ ಹೋಗಿದ್ದೇವು. ಆದ್ರೆ ಎಲ್ಲವೂ ಉಲ್ಟಾ ಆಯಿತು‌ ಎಂದು ಉಕ್ರೇನ್​ನಿಂದ ಸ್ವಸ್ಥಳವಾದ ದಾವಣಗೆರೆ ವಾಪಸ್ಸು ಬಂದ ವೈದ್ಯಕೀಯ ವಿದ್ಯಾರ್ಥಿ ಮಹ್ಮದ್ ಅಬೀದ ಅಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

  • 28 Feb 2022 12:26 PM (IST)

    ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಉಕ್ರೇನ್‌ನ ಶೆಹಿನಿಯಿಂದ ಬಸ್‌ಗಳಲ್ಲಿ ಪೋಲೆಂಡ್‌ನ ಬುಡೋಮೈರ್ಜ್‌ಗೆ ಸ್ಥಳಾಂತರ ಮಾಡಲಾಗಿದೆ.

  • 28 Feb 2022 12:17 PM (IST)

    ಸಂಜೆ 4 ಗಂಟೆಯ ವಿಮಾನದಲ್ಲಿ ಬೆಂಗಳೂರಿಗೆ ಹೊರಡಲಿರುವ ವಿದ್ಯಾರ್ಥಿನಿಯರು

    ದೆಹಲಿಯಿಂದ ಸಂಜೆ 4 ಗಂಟೆಯ ವಿಮಾನದಲ್ಲಿ ಬೆಂಗಳೂರಿಗೆ ವಿದ್ಯಾರ್ಥಿನಿಯರು ಹೊರಡಲಿದ್ದಾರೆ. ಬೆಂಗಳೂರಿಗೆ 6 ವಿದ್ಯಾರ್ಥಿನಿಯರು ದೆಹಲಿಯಿಂದ ಹೊರಡಲಿದ್ದಾರೆ. ಬೆಳಗ್ಗೆ 7-30ಕ್ಕೆ ರೊಮಾನಿಯಾದಿಂದ ವಿದ್ಯಾರ್ಥಿನಿಯರು ದೆಹಲಿಗೆ ಬಂದಿದ್ದಾರೆ.

  • 28 Feb 2022 12:11 PM (IST)

    ರಷ್ಯಾಕ್ಕಾಗಿ ಬೆಲಾರಸ್ ಸೇನೆ ಹೋರಾಡಲಿದೆ: ಬೆಲಾರಸ್

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಹೀಗಾಗಿರುವಾಗ ಉಕ್ರೇನ್-ರಷ್ಯಾ ಶಾಂತಿ ಸಭೆ ನಡೆಸಿದ್ದು, ಈ ಮಧ್ಯೆ ಬೆಲಾರಸ್ ಹೇಳಿಕೆ ನೀಡಿದ್ದಾರೆ. ರಷ್ಯಾಕ್ಕಾಗಿ ಬೆಲಾರಸ್ ಸೇನೆ ಹೋರಾಡಲಿದೆ ಎಂದು ಬೆಲಾರಸ್ ತಿಳಿಸಿದ್ದಾರೆ.

  • 28 Feb 2022 12:09 PM (IST)

    ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ವೀಕೆಂಡ್ ಕರ್ಫ್ಯೂ ವಾಪಸ್

    ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯಲಾಗಿದೆ.

  • 28 Feb 2022 12:08 PM (IST)

    ಬಂಕರ್ ತೊರೆಯುವಂತೆ ಅಧಿಕಾರಿಗಳ ಎಚ್ಚರಿಕೆ

    ಇವತ್ತು ಬೆಳ್ಳಂಬೆಳಗ್ಗೆ ರಾಯಭಾರಿ ಕಚೇರಿಯ ಅಧಿಕಾರಿಗಳು ಬಂಕರ್​ಗೆ ಭೇಟಿ ನೀಡಿದ್ದು, ಕೂಡಲೇ ಪಶ್ಚಿಮ ದೇಶಗಳತ್ತ ತೆರಳಲು ಬಲವಂತ ಮಾಡಿದ್ದಾರೆ. ಆದರೆ ಬಂಕರ್​ನಲ್ಲಿರುವ 150 ವಿದ್ಯಾರ್ಥಿಗಳು ವಿರೋಧ‌ ಮಾಡಿದ್ದಾರೆ. ಮಾರ್ಗ ಮಧ್ಯೆ ಅಟ್ಯಾಕ್ ಆದ್ರೆ ರಕ್ಷಣೆ ಹೇಗೆ? ಎಂದು ರಾಯಬಾರಿ ಅಧಿಕಾರಿಗಳಿಗೆ ತಮ್ಮ ಜೊತೆ ಬರುವಂತೆ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಇವತ್ತು ಕರ್ಪ್ಯೂ ಇರಲ್ಲ ಇದೇ ಸೂಕ್ತ ಸಮಯ ಪ್ರಾಣ ಉಳಿಸಿಕೊಳ್ಳಲು ಹೊರಡಿ ಎಂದು ಬಲವಂತ ಮಾಡಿದ್ದಾರೆ. ನಾಳೆಯಿಂದ ಮತ್ತೆ ಕರ್ಪ್ಯೂ ಆರಂಭವಾಗಿ ಹೆಚ್ಚಿನ ದಾಳಿ ಸಾಧ್ಯತೆ ಎಂದು ಎಚ್ಚರಿಕೆ ನೀಡಿದ್ದಾರೆ. ಈಗ ಹೊರಗೆ ಹೊದರೂ ಕಷ್ಟ ಇದ್ದರೂ ಕಷ್ಟ ಎನ್ನವ ಪರಿಸ್ಥಿಯಲ್ಲಿ ಬಳ್ಳಾರಿಯ ಯುವತಿಯರು ಇದ್ದಾರೆ. ರಾಯಭಾರಿಯ ವಾರ್ನಿಂಗ್ ಆಡಿಯೋ ರೆಕಾರ್ಡ್ ಮಾಡಿ ಯುವತಿಯರು ಪೋಷಕರಿಗೆ ಕಳಿಸಿದ್ದಾರೆ.

  • 28 Feb 2022 12:04 PM (IST)

    ಆಪರೇಷನ್ ಗಂಗಾ 6ನೇ ವಿಮಾನ ಟೇಕಾಫ್

    ಆಪರೇಷನ್ ಗಂಗಾ 6ನೇ ವಿಮಾನ ಹಂಗೇರಿಯಾ ಬುಡಾಪೆಸ್ಟ್‌ನಿಂದ ಹೊರಟಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದ 240 ಭಾರತೀಯರನ್ನು ಇಂದು ಏರ್​ಲಿಫ್ಟ್ ಮಾಡಲಾಗುತ್ತದೆ. ಹೀಗಾಗಿ ಬುಡಾಪೆಸ್ಟ್‌ನಿಂದ ದೆಹಲಿಯತ್ತ ವಿಮಾನ ಹೊರಟಿದೆ. ಇಂದು ಬುಡಾಪೆಸ್ಟ್‌ನಿಂದ 240 ಭಾರತೀಯರ ಏರ್‌ಲಿಫ್ಟ್ ಮಾಡಲಾಗುತ್ತದೆ.

  • 28 Feb 2022 11:59 AM (IST)

    ಆಹಾರ, ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ: ಬಂಕರ್ನಲ್ಲಿ ಸಿಲುಕಿರುವ ನಂದಪ್ರಸಾದ್

    ವೈದ್ಯಕೀಯ ಶಿಕ್ಷಕಣಕ್ಕೆ ಖಾರ್ಕಿವ್​ಗೆ ಹೋಗಿರುವ ಚಿಕ್ಕಬಳ್ಳಾಪುರ ಮೂಲದ ವಿದ್ಯಾರ್ಥಿ ಉಕ್ರೇನ್​ನ ಖಾರ್ಕಿವ್​ನಲ್ಲಿ ಸಿಲುಕಿದ್ದಾನೆ. ಚಿಕ್ಕಬಳ್ಳಾಪುರದ ವಿದ್ಯಾರ್ಥಿ ನಂದಪ್ರಸಾದ್ ಖಾರ್ಕೀವ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.  ಸದ್ಯಕ್ಕೆ ಖಾರ್ಕಿವ್ ವಸತಿ ನಿಲಯದ ಬಂಕರ್​ನಲ್ಲಿ ಸಿಲುಕಿರುವ ನಂದಪ್ರಸಾದ್, ತಂದೆ- ತಾಯಿ, ಸಂಬಂಧಿಕರಿಗೆ ನಿನ್ನೆ ಕರೆ ಮಾಡಿ ಅನ್ನ, ಆಹಾರ, ನೀರು ಸಮರ್ಪಕವಾಗಿ ದೊರೆಯುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾನೆ.

  • 28 Feb 2022 11:55 AM (IST)

    ಏರ್‌ಲಿಫ್ಟ್ ವೆಚ್ಚ ಕೇಂದ್ರ ಸರ್ಕಾರವೇ ಭರಿಸಲಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

    ಭಾರತೀಯರ ಏರ್‌ಲಿಫ್ಟ್‌ಗೆ ಎಲ್ಲ ಪ್ರಯತ್ನ ನಡೆಯುತ್ತಿದೆ. ಉಕ್ರೇನ್ ನೆರೆಹೊರೆ ದೇಶಗಳ ಸಹಕಾರ ಪಡೆದಿದ್ದೇವೆ. ಏರ್‌ಲಿಫ್ಟ್ ವೆಚ್ಚ ಕೇಂದ್ರ ಸರ್ಕಾರವೇ ಭರಿಸಲಿದೆ. ಉಕ್ರೇನ್ ಜೊತೆಯೂ ನಿರಂತರವಾಗಿ ಚರ್ಚಿಸುತ್ತಿದ್ದೇವೆ. ನಾವು ರಷ್ಯಾ ಜತೆಗೂ ಮಾತುಕತೆ ಮಾಡಬೇಕಾಗುತ್ತೆ.‌ ಭೌಗೋಳಿಕವಾಗಿ ಉಕ್ರೇನ್ ಬಹಳ ವಿಶಾಲವಾಗಿದೆ. ಇವತ್ತು ಕೆಲವು ವಿಮಾನಗಳು ಹೋಗುತ್ತಿವೆ. ಖಾರ್ಕಿವ್ ಪ್ರದೇಶಕ್ಕೆ ಹೋಗುವುದಕ್ಕೆ ಆಗುತ್ತಿಲ್ಲ. ಯಾವುದೇ ತೊಂದರೆ ಆಗದಂತೆ ಏರ್‌ಲಿಫ್ಟ್ ಮಾಡ್ತೇವೆ. ಪ್ರಧಾನಿ ಮೋದಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.

  • 28 Feb 2022 11:51 AM (IST)

    ಉಕ್ರೇನ್​ನ ಕೀವ್ ಪ್ರದೇಶದಿಂದ ಹೊರಟಿರುವ ಕರ್ನಾಟಕದ ವಿದ್ಯಾರ್ಥಿಗಳು

    ರುಮೇನಿಯಾ ಮೂಲಕ ಬುಡಾಪೆಸ್ಟ್​ಗೆ ವಿದ್ಯಾರ್ಥಿಗಳು ಹೊರಟಿದ್ದಾರೆ. ಒಡಿಸ್ಸಾ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು, ಸುಮಾರು ಹತ್ತು ಬಸ್​ಗಳಲ್ಲಿ ಹೊರಟಿದ್ದ ರುಮೇನಿಯಾ ವಿದ್ಯಾರ್ಥಿಗಳ ಜೊತೆ ಕರ್ನಾಟಕದ ವಿದ್ಯಾರ್ಥಿಗಳು ಹೊರಟಿದ್ದಾರೆ. ಬಸ್​ನಲ್ಲಿ ವಿದ್ಯಾರ್ಥಿಗಳು 1400 ಕಿ.ಮೀ. ಪ್ರಯಾಣ ಮಾಡಿದ್ದಾರೆ. ಕೋಲಾರ ಮೂಲದ ದೀಕ್ಷಿತ್ ರಾಜ್, ವಿಶಾಲ್, ಬೆಂಗಳೂರು ಮೂಲದ ರಮ್ಯಾ,ಮತ್ತು ಮೌನೇಶ್ ಉಕ್ರೇನ್​ನ ಕೀವ್ ಪ್ರದೇಶದಿಂದ ಹೊರಟಿದ್ದಾರೆ.

  • 28 Feb 2022 11:46 AM (IST)

    ಬಳ್ಳಾರಿ: ಉಕ್ರೇನ್ ನಲ್ಲಿ ಒಂದೇ ಕುಟುಬದ ಮೂವರು ಮಕ್ಕಳು ಸಂಕಷ್ಟದಲ್ಲಿ ಸಿಲುಕಿದ್ದಾರೆ

    ಒಂದೇ ಕುಟುಂಬದ ಮೂವರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಲೊವೇಕಿಯಾದಲ್ಲಿರುವ ಬಳ್ಳಾರಿಯ ಶಕೀಬುದ್ದೀನ್, ಕೀವ್ ನಗರದಲ್ಲಿರುವ ಸಬಾ ಕೌಸರ್, ತೈಯಬ್ ಕೌಸರ್ ಉಕ್ರೇನ್​ನಲ್ಲಿ ಸಿಲುಕಿದ್ದಾರೆ. ಎಸ್.ಬಿ.ಮುಲ್ಲಾ, ಗೌಸಿಯಾ ಬೇಗಂರ ಮೂವರು ಮಕ್ಕಳು ಉಕ್ರೇನ್​ನಲ್ಲಿದ್ದಾರೆ.

  • 28 Feb 2022 11:44 AM (IST)

    ಮಕ್ಕಳನ್ನ ನೋಡಲು ಏರ್ಪೋರ್ಟ್​ಗೆ ಆಗಮಿಸುತ್ತಿರುವ ಪೋಷಕರು

    ಉಕ್ರೇನ್​ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ವಾಪಸ್ ಹಿನ್ನೆಲೆ, ಮಕ್ಕಳನ್ನು ನೋಡಲು ಪೋಷಕರು ಏರ್ಪೋರ್ಟ್​ಗೆ ಆಗಮಿಸುತ್ತಿದ್ದಾರೆ. 8:20 ರ‌ ವಿಮಾನದಲ್ಲಿ ಐವರು ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ತುಮಕೂರು ಮೂಲದ ಮಗಳನ್ನ ಬರಮಾಡಿಕೊಳ್ಳಲು ತಾಯಿ ಆಗಮಿಸಿದ್ದಾರೆ. ಎರಡು ದಿನಗಳಿಂದ ಮಗಳ ಮುಖ ನೋಡಿಲ್ಲ ಅಂತ ತಾಯಿಯ ಅಳಲು ತೋಡಿಕೊಂಡಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕಾಗಿ ಮನೆಯೆಲ್ಲ ಮಾರಿ ಮಗಳನ್ನ ಉಕ್ರೇಬ್​ಗೆ ಕಳಿಸಿದ್ದೆ, ಆದ್ರೆ ಇದೀಗ ಮಗಳ ಭವಿಷ್ಯದ ಬಗ್ಗೆ ಆತಂಕ ಮೂಡಿದೆ ಎಂದು ಬೇಸರ ಹೊರಹಾಕಿದ್ದಾರೆ.

  • 28 Feb 2022 11:40 AM (IST)

    ರಷ್ಯಾ, ಉಕ್ರೇನ್ ನಡುವೆ 2ನೇ ಹಂತದ ಶಾಂತಿ ಸಭೆ

    ಬೆಲಾರಸ್‌ನ ಗೊಮೆಲ್‌ನಲ್ಲಿ ರಷ್ಯಾ, ಉಕ್ರೇನ್ ನಡುವೆ 2ನೇ ಹಂತದ ಶಾಂತಿ ಸಭೆ ನಡೆಯಲಿದೆ. ಬೆಲಾರಸ್‌, ಉಕ್ರೇನ್ ಗಡಿಭಾಗದಲ್ಲಿರುವ ಗೊಮೆಲ್​ನಲ್ಲಿ ನಡೆಯುವ ಶಾಂತಿ ಸಭೆಗೆ ಉಕ್ರೇನ್‌ನ ನಿಯೋಗ ತೆರಳಲಿದೆ.

  • 28 Feb 2022 11:29 AM (IST)

    ಉಕ್ರೇನ್‌ನ ಖಾರ್ಕೀವ್ ನಗರದಲ್ಲಿ ಸಿಲುಕಿರುವ ಕನ್ನಡಿಗರು

    ಉಕ್ರೇನ್‌ನ ಖಾರ್ಕೀವ್​ ನಗರದಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಹಾಸ್ಟೆಲ್‌ನ ಬಂಕರ್‌ನಲ್ಲಿರುವ ಮೆಡಿಕಲ್ ಸ್ಟೂಡೆಂಟ್ಸ್, ಹಾಸ್ಟೆಲ್‌ನಲ್ಲಿ ಸೂಕ್ತ ಆಹಾರ ದೊರೆಯುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ಖಾರ್ಕೀವ್​ನಿಂದ ಪೋಲೆಂಡ್‌ಗೆ ಹೋಗುವುದಕ್ಕೆ ಆಗುತ್ತಿಲ್ಲ. ಪರ್ಯಾಯ ವ್ಯವಸ್ಥೆ ಮಾಡುವಂತೆ ಕನ್ನಡಿಗರು ಚಿಂತಾಮಣಿ ತಾಲೂಕಿನ ಹರ್ಷಿತಾ, ನಂದಪ್ರಸಾದ್ ಅಳಲು ತೋಡಿಕೊಂಡಿದ್ದಾರೆ.

  • 28 Feb 2022 11:14 AM (IST)

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್‌ಗಾಗಿ ತೆರಳಲಿರುವ ಕೇಂದ್ರ ಸಚಿವರು

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್‌ಗಾಗಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು, ಜನರಲ್ ವಿ.ಕೆ.ಸಿಂಗ್ ತೆರಳುವ ಸಾಧ್ಯತೆ ಇದೆ. ಉಕ್ರೇನ್‌ನ ನೆರೆಯ ದೇಶಗಳಿಗೆ ಸಚಿವರು ತೆರಳಲಿದ್ದಾರೆ.

  • 28 Feb 2022 11:11 AM (IST)

    ರಷ್ಯಾ ನನ್ನನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದೆ: ಉಕ್ರೇನ್ ಅಧ್ಯಕ್ಷ ವ್ಲೋಡೊಮಿರ್ ಝೆಲೆನ್‌ಸ್ಕಿ

    ಕೀವ್‌ನಲ್ಲಿ ರಷ್ಯಾದ 400 ಯೋಧರಿಂದ ನನ್ನ ಹತ್ಯೆಗೆ ಯತ್ನಿಸಲಾಗಿದೆ. ರಷ್ಯಾ ನನ್ನನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿದೆ ಎಂದು  ಉಕ್ರೇನ್ ಅಧ್ಯಕ್ಷ ವ್ಲೋಡೊಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.

  • 28 Feb 2022 11:10 AM (IST)

    ಉಕ್ರೇನ್​ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕೇಂದ್ರ ಸರಕಾರ ರಕ್ಷಣೆ ಮಾಡುತ್ತಿದೆ: ಬಿಸಿ ಪಾಟೀಲ್

    ಉಕ್ರೇನ್​ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕೇಂದ್ರ ಸರಕಾರ ರಕ್ಷಣೆ ಮಾಡುತ್ತಿದೆ. ಪ್ರಧಾನಿಗಳು ನಿರಂತರವಾಗಿ ಉಕ್ರೇನ್​ನಲ್ಲಿರೋ ಭಾರತೀಯ ರಾಯಭಾರಿಗಳ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ. ನಮ್ಮ ರಾಜ್ಯ ಸರಕಾರವೂ ಸಹ ಅಲ್ಲಿದ್ದವರ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ. ನೂಡಲ್ ಅಧಿಕಾರಿಯನ್ನ ನೇಮಕ ಮಾಡಿ ಕನ್ನಡಿಗರ ಸಂಪರ್ಕ ಮಾಡ್ತಿದ್ದಾರೆ. ಎಲ್ಲಾ ಕನ್ನಡಿಗರನ್ನ ಭಾರತೀಯರನ್ನ ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮಾಡಲಾಗ್ತಿದೆ. ಯಾರೂ ಆತಂಕ ಒಳಗಾಗಬೇಡಿ ಎಂದು ಸಚಿವ ಬಿ. ಸಿ. ಪಾಟೀಲ್ ಹೇಳಿದ್ದಾರೆ.

  • 28 Feb 2022 11:06 AM (IST)

    ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ದೇವೇಗೌಡ ಪತ್ರ

    ರಷ್ಯಾದ ಆಕ್ರಮಣದ ನಂತರ ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರವನ್ನು ತ್ವರಿತಗೊಳಿಸಬೇಕು ಎಂದು ಪ್ರಧಾನಿಗೆ ದೇವೇಗೌಡ ಪತ್ರ ಬರೆದಿದ್ದಾರೆ.

  • 28 Feb 2022 11:02 AM (IST)

    ಮೊಮ್ಮಗಳನ್ನ ಬೇಗ ಕಳುಹಿಸಿ‌ಕೊಡಿ ಸರ್ ಎಂದ 92 ವರ್ಷದ ವೃದ್ಧ

    ಉಕ್ರೇನ್​ನಲ್ಲಿ ಸಿಲುಕಿರುವ ಮೊಮ್ಮಗಳನ್ನು ಬೇಗ ಕಳುಹಿಸಿ‌ಕೊಡಿ ಸರ್ ಎಂದು 92 ವರ್ಷದ ವೃದ್ಧರೊಬ್ಬರು ಮನವಿ ಮಾಡಿಕೊಂಡಿದ್ದಾರೆ. ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿನಿ ಅಂಕಿತಾಳನ್ನು ಬೇಗ ಕರೆದುಕೊಂಡು ಬನ್ನಿ ಎಂದು ವೃದ್ಧ ಕೈಮುಗಿದು ಬೇಡಿಕೊಂಡಿದ್ದಾರೆ.

  • 28 Feb 2022 10:59 AM (IST)

    ಸುರಕ್ಷಿತವಾಗಿ ಸುನೇಹಾ ಮತ್ತು ಇತರರನ್ನು ಭಾರತಕ್ಕೆ ಕರೆ ತನ್ನಿ: ಸುನೇಹಾ ತಂದೆ ಪಿಡಬ್ಲೂಡಿ ಇಂಜಿನಿಯರ್ ತಿಪ್ಪೇಸ್ವಾಮಿ ಮನವಿ

    ಉಕ್ರೇನ್​ನಲ್ಲಿ ಸಿಲುಕಿರುವ ಚಿತ್ರದುರ್ಗದ ವಿದ್ಯಾರ್ಥಿನಿ ಸುನೇಹಾ ಅವರ ತಂದೆ ಟಿವಿ9 ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಉಕ್ರೇನ್​ನ ಕಿವ್ ನಗರದಿಂದ 900 ಕಿ.ಮೀ ಕ್ರಮಿಸಿದ್ದಾರೆ. ಖಾಸಗಿ ಕಾರ್​ನಲ್ಲಿ ಸುನೇಹಾ, ರಚನಾ, ಪ್ರವೀಣ್ ಮತ್ತು ಕುಟುಂಬ ಸಂಚರಿಸಿದೆ. ಹಂಗೇರಿ ದೇಶದ ಬಾರ್ಡರ್ ಬಳಿಗೆ ಬಂದು ಉಳಿದಿದ್ದಾರೆ. ಇಂಡಿಯನ್ ಫ್ಲಾಗ್ ಚಿತ್ರ ಬರೆದಿಟ್ಟುಕೊಂಡು ಕಾರ್​ನಲ್ಲಿ ಸಂಚಾರಿಸಿದ್ದಾರೆ. ಇಂಡಿಯನ್ ಅಂಬಾಸಿ ಸುನೇಹಾ ಜತೆ ಸಂಪರ್ಕಿಸಿದ ಮಾಹಿತಿ ಇದೆ. ಶೀಘ್ರ ಸುರಕ್ಷಿತವಾಗಿ ಸುನೇಹಾ ಮತ್ತು ಇತರರನ್ನು ಭಾರತಕ್ಕೆ ಕರೆ ತರಲು ಸುನೇಹಾ ತಂದೆ ಪಿಡಬ್ಲೂಡಿ ಇಂಜಿನಿಯರ್ ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.

  • 28 Feb 2022 10:54 AM (IST)

    ಡಾಲರ್ ಎದುರು ಕುಸಿದ ರಷ್ಯಾ ಕರೆನ್ಸಿ ರುಬೆಲ್ ಮೌಲ್ಯ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ ಡಾಲರ್ ಎದುರು ರಷ್ಯಾ ಕರೆನ್ಸಿ ರುಬೆಲ್​ ಮೌಲ್ಯ ಕುಸಿದಿದೆ. ಡಾಲರ್ ಎದುರು ಶೇ.40ರಷ್ಟು ಕುಸಿದ ರುಬೆಲ್​ ಮೌಲ್ಯ.

  • 28 Feb 2022 10:51 AM (IST)

    ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಫೋಷಕರು

    ಉಕ್ರೇನ್​ನಲ್ಲಿ ಸಿಲುಕಿರುವ ಕನ್ನಡಿಗರಲ್ಲಿ ಆತಂಕ ಹೆಚ್ಚಾಗಿದೆ. ಬಾಗಲಕೋಟೆ ಮೂಲದ ಅಪೂರ್ವಾ ಪೋಷಕರಲ್ಲಿ ಕ್ಷಣ ಕ್ಷಣಕ್ಕೂ ಭಯ ಹೆಚ್ಚುತ್ತಿದೆ. ಅಪೂರ್ವಾ ಕದಂಪುರ ಖಾರ್ಕೀವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಮ್​ಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ನೆರವಿಗೆ ನಿಲ್ಲುವಂತೆ ಪೋಷಕರು ಮನವಿ ಮಾಡಿದ್ದಾರೆ.

  • 28 Feb 2022 10:45 AM (IST)

    ರಷ್ಯಾ ವಿರುದ್ಧ ತಿರುಗಿಬಿದ್ದ ದಕ್ಷಿಣ ಕೊರಿಯಾ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ವಿರುದ್ಧ ದಕ್ಷಿಣ ಕೊರಿಯಾ ತಿರುಗಿಬಿದ್ದಿದೆ. ರಫ್ತು ಮೇಲೆ ನಿರ್ಬಂಧ ಹೇರಲು ಕೊರಿಯಾ ನಿರ್ಧಾರ ಮಾಡಿದೆ.

  • 28 Feb 2022 10:43 AM (IST)

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಕಷ್ಟದ ದೃಶ್ಯ ಕಂಡು ನನ್ನ ಮನಸ್ಸಿಗೆ ನೋವಾಗಿದೆ: ರಾಹುಲ್ ಗಾಂಧಿ ಟ್ವೀಟ್

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಪರದಾಟ, ಅವರ ಕಷ್ಟದ ದೃಶ್ಯ ಕಂಡು ನನ್ನ ಮನಸ್ಸಿಗೆ ನೋವಾಗಿದೆ. ಕೇಂದ್ರ ಸರ್ಕಾರ ಶೀಘ್ರವೇ ಕ್ರಮಕೈಗೊಳ್ಳಬೇಕು. ಭಾರತೀಯರನ್ನು ಕರೆತರುವುದಕ್ಕೆ ಕ್ರಮಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಕಷ್ಟ ಹೇಳಿಕೊಳ್ಳುವ ವಿಡಿಯೋ ಶೇರ್ ಮಾಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

  • 28 Feb 2022 10:41 AM (IST)

    ಯುದ್ದಭೂಮಿಯಿಂದ ತವರು ಸೇರಿದ ಹಾಸನದ ಮೊದಲ ವಿದ್ಯಾರ್ಥಿನಿ ಕೀರ್ತನಾ

    ಉಕ್ರೇನ್​ನಿಂದ ಹಾಸನದ ವಿದ್ಯಾರ್ಥಿನಿ ಮನೆಗೆ ಮರಳಿದ್ದಾರೆ. ಯುದ್ಧಭೂಮಿಯಿಂದ ತವರು ಸೇರಿದ ಹಾಸನದ ಮೊದಲ ವಿದ್ಯಾರ್ಥಿನಿ ಕೀರ್ತನಾ, ಐದು ದಿನಗಳ ಆತಂಕದ ನಡುವೆ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಮಗಳು ಮನೆಗೆ ಮರಳಿದ್ದರಿಂದ ಕುಟುಂಬ ಸದಸ್ಯರಲ್ಲಿ ಸಂತಸ ಮೂಡಿದೆ. ಮೂರನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಕೀರ್ತನಾ, ಉಕ್ರೇನ್​ನ ಹುಜಾರ್ಡ್​ನಲ್ಲಿ ನೆಲೆಸಿದ್ದರು. ಸದ್ಯ ಮನೆಗೆ ಮರಳಿದ್ದಾರೆ.

  • 28 Feb 2022 10:38 AM (IST)

    ಉಕ್ರೇನ್, ಪೋಲೆಂಡ್ ಗಡಿಯಲ್ಲಿ ಭಾರಿ ನೂಕುನುಗ್ಗಲು

    ಸಾವಿರಾರು ಜನರು ಉಕ್ರೇನ್ ದೇಶ ತೊರೆಯುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್, ಪೋಲೆಂಡ್ ಗಡಿಯಲ್ಲಿ ಭಾರಿ ನೂಕುನುಗ್ಗಲು ಸೃಷ್ಟಿಯಾಗಿದೆ. ನಾಗರಿಕರ ಜತೆ ಸೈನಿಕರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಪೋಲೆಂಡ್ ಸೈನಿಕರು ಬೂಟು ಕಾಲಿನಿಂದ ಒದೆಯುತ್ತಿದ್ದು, ಸೈನಿಕರು ಒದೆಯುವ ದೃಶ್ಯವನ್ನು ವಿದ್ಯಾರ್ಥಿಗಳು ಸೆರೆ ಹಿಡಿದಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಕೂಡ್ಲೂರು ನಿವಾಸಿ ಚಂದನ್ ವಿಡಿಯೋ ಮಾಡಿದ್ದಾರೆ.

  • 28 Feb 2022 10:34 AM (IST)

    ಬೆಳಗಾವಿಯಿಂದ ಇಬ್ಬರು ನೋಡಲ್ ಅಧಿಕಾರಿಗಳ ನೇಮಕ: ಸಚಿವ ಗೋವಿಂದ ಕಾರಜೋಳ

    ಯುದ್ಧಪೀಡಿತ ಉಕ್ರೇನ್‌ನಲ್ಲಿ ಬೆಳಗಾವಿ ವಿದ್ಯಾರ್ಥಿಗಳು ಸಿಲುಕಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದು, ಬೆಳಗಾವಿಯಿಂದ ಇಬ್ಬರು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಎಂಡಿ ಪ್ರವೀಣ್ ಬಾಗೇವಾಡಿ, ಎಸಿ ರವಿ ಕರಲಿಂಗಣ್ಣವರ್ ನೇಮಕ ಮಾಡಲಾಗಿದೆ. ಇಬ್ಬರು ನೋಡಲ್ ಅಧಿಕಾರಿಗಳನ್ನು ಮುಂಬೈಗೆ ಕಳಿಸಿಕೊಟ್ಟಿದ್ದು, ಕಾರ್ಯಪ್ರವೃತ್ತರಾಗಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ತಂದೆ ತಾಯಿ ಆತಂಕಕ್ಕೆ ಒಳಗಾಗಬೇಕಿಲ್ಲ. ಪ್ರಧಾನಿ ಮೋದಿ ಸತತವಾಗಿ ಎಲ್ಲಾ ಪ್ರಯತ್ನ ಮಾಡ್ತಿದ್ದಾರೆ. ಸುರಕ್ಷಿತವಾಗಿ ನಮ್ಮ ರಾಜ್ಯಕ್ಕೆ ಅವರನ್ನು ಕರೆತರಲು ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಹಲವು ಜನ ಬಂದು ಆಯಾ ರಾಜ್ಯಗಳಿಗೆ ಸೇರಿದ್ದಾರೆ. ಉಕ್ರೇನ್‌ನಲ್ಲಿ ನೀರು, ಊಟದ ಸಮಸ್ಯೆಯಾಗಿದೆ. ಜೀವದ ಭಯದಲ್ಲಿದ್ದಾರೆ. ಹೀಗಾಗಿ ಇಲ್ಲಿನ ತಂದೆ- ತಾಯಿ ಬಂಧು ಬಳಗದವರು ನೋವಿನಲ್ಲಿದ್ದಾರೆ. ಯಾರೂ ಆತಂಕ ಪಡಬಾರದು ಎಂದು ಹೇಳಿದ್ದಾರೆ.

  • 28 Feb 2022 10:29 AM (IST)

    ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ನರೇಂದ್ರ ಮೋದಿ

    ಉಕ್ರೇನ್‌ನಲ್ಲಿರುವ ಭಾರತೀಯರ ಏರ್‌ಲಿಫ್ಟ್ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಏರ್‌ಲಿಫ್ಟ್‌ಗಾಗಿ ಸಚಿವರನ್ನು ಕಳಿಸುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

  • 28 Feb 2022 09:54 AM (IST)

    ದೆಹಲಿ ತಲುಪಿದ ಉಕ್ರೇನ್​ನಲ್ಲಿ ಸಿಲುಕಿದ್ದ ಹಿರಿಯೂರು ವಿದ್ಯಾರ್ಥಿನಿ

    ಉಕ್ರೇನ್​ನಲ್ಲಿ ಸಿಲುಕಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ವಿದ್ಯಾರ್ಥಿನಿ ಶಕ್ತಿಶ್ರೀ ಇಂದು ದೆಹಲಿ ತಲುಪಿದ್ದಾಳೆ. ಮೆಡಿಕಲ್ ವಿದ್ಯಾಭ್ಯಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿ ಶಕ್ತಿಶ್ರೀ ಇಂದು ಮಧ್ಯಾಹ್ನಾ ಬೆಂಗಳೂರಿಗೆ ಆಗಮಿಸಲಿದ್ದಾಳೆ. ಬೆಂಗಳೂರಿಗೆ ತೆರಳಿ ಸಂಜೆ ಹಿರಿಯೂರಿಗೆ ಕರೆತರುತ್ತೇವೆಂದು ಶಕ್ತಿಶ್ರೀ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

  • 28 Feb 2022 09:50 AM (IST)

    ವಿದ್ಯಾರ್ಥಿಗಳ ವಾಪಸ್​ಗಾಗಿ ನಾನು ಕೇಂದ್ರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ: ಸಿಎಂ ಬೊಮ್ಮಾಯಿ

    ಉಕ್ರೇನ್ ವಿದ್ಯಾರ್ಥಿಗಳ ವಾಪಸ್​ಗಾಗಿ ನಾನು ಕೇಂದ್ರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ರಾಜ್ಯದ 300 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿದ್ದಾರೆ. ಇನ್ನೆರಡೂ ದಿನಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

  • 28 Feb 2022 09:48 AM (IST)

    ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳ ಏರ್ಲಿಫ್ಟ್​ಗೆ ಸಿದ್ಧತೆ

    ಉಕ್ರೇನ್​ನಿಂದ ಭಾರತೀಯ ವಿದ್ಯಾರ್ಥಿಗಳ ಏರ್​ಲಿಫ್ಟ್​ಗೆ ಸಿದ್ಧತೆ ನಡೆದಿದ್ದು, ಕೊಡಗಿನ ವಿದ್ಯಾರ್ಥಿನಿ ಅಲಿಷಾ ಆಲಿಯನ್ನು ಕೂಡ ಇಂದು ಏರ್​ಲಿಫ್ಟ್ ಮಾಡಲಾಗುತ್ತದೆ. ಉಕ್ರೇನ್ ಗಡಿ ದಾಟಿ ವಿದ್ಯಾರ್ಥಿಗಳು ರೊಮೇನಿಯಾ ಪ್ರವೇಶಿಸಿದ್ದಾರೆ. ರೊಮೇನಿಯಾ ಪ್ರವೇಶಿಸಲು ಹಲವು ದೇಶಗಳ ಜನರು ಮುಗಿಬಿದ್ದಿದ್ದಾರೆ. ಈ ಮಧ್ಯೆ ನೂಕು‌ನುಗ್ಗಲಿನಲ್ಲಿ ಅಲಿಷಾ ಆಲಿ ಲಗ್ಗೇಜ್ ಕಳೆದುಕೊಂಡಿದ್ದಾಳೆ. ಅಲಿಷಾ ಆಲಿ ಕೊಡಗಿನ ಗೋಣಿಕೊಪ್ಪಲು ನಿವಾಸಿ. ಇನ್ನೂ ನೂಕು ನುಗ್ಗಲಿನಲ್ಲಿ ಜನರು ಕೈಕಾಲು ಮುರಿದುಕೊಂಡಿದ್ದಾರೆ.

  • 28 Feb 2022 09:40 AM (IST)

    ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳಿಗೆ ಕೆಎಸ್ಆರ್​ಟಿಸಿ ಬಸ್ ಉಚಿತ ಪ್ರಯಾಣ

    ಕರ್ನಾಟಕದ ಹತ್ತಿರದ ವಿಮಾನ ನಿಲ್ದಾಣದಿಂದ ರಾಜ್ಯದೊಳಗಿನ ಅವರ ಸ್ಥಳೀಯ ಸ್ಥಳಗಳಿಗೆ ಹೋಗಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣವನ್ನು ನೀಡಲು ನಿರ್ಧರಿಸಲಾಗಿದೆ. ಕರ್ನಾಟಕ ರಾಜ್ಯ ವಿಮಾನ ನಿಲ್ದಾಣದೊಳಗಿನ ಎಲ್ಲಾ ನೋಡಲ್ ಅಧಿಕಾರಿಗಳು, ರಸ್ತೆ ಸಾರಿಗೆ ಸಂಸ್ಥೆಯ ಸಂಬಂಧಪಟ್ಟ ವ್ಯಾಪ್ತಿಯ ಅಧಿಕಾರಿಗಳು ಸಮನ್ವಯ ಸಾಧಿಸಿ ಉಚಿತ ಪ್ರಯಾಣವನ್ನು ಅನುವು ಮಾಡಿಕೊಡಬೇಕು ಎಂದು ಕೆಎಸ್ಆರ್​ಟಿಸಿ ಎಂಡಿ  ಶಿವಯೋಗಿ ಸಿ.ಕಳಸದ ಆದೇಶ ನೀಡಿದ್ದಾರೆ.

  • 28 Feb 2022 09:38 AM (IST)

    ಲಕ್ಷ ಲಕ್ಷ ಸಾಲ ಮಾಡಿ ಮಗನನ್ನು ಓದಿಸಲು ಉಕ್ರೇನ್​ಗೆ ಕಳುಹಿಸಿದ್ದೆ: ಉರಗ ತಜ್ಞ ಅಪ್ಸರ್

    ಉಕ್ರೇನ್​ನಲ್ಲಿ ಉರಗ ತಜ್ಞರೊಬ್ಬರ ಮಗ ಸಿಲುಕಿಕೊಂಡಿದ್ದು, ಲಕ್ಷ ಲಕ್ಷ ಸಾಲ ಮಾಡಿ ಮಗನನ್ನು ಓದಿಸಲು ಉಕ್ರೇನ್​ಗೆ ಕಳುಹಿಸಿದ್ದೆ. ಮಗನನ್ನು ವೈದ್ಯನನ್ನಾಗಿ ಮಾಡಬೇಕೆಂದು ಆಸೆ ಹೊಂದಿದ್ದೆ. ಆದರೆ ಈಗ ಹೀಗಾಗಿದೆ ಎಂದು ಮಗನ ಸ್ಥಿತಿ ಕಂಡು ಉರಗ ತಜ್ಞ ಅಫ್ಸರ್ ಬೇಸರ ವ್ಯಕ್ತಪಡಿಸಿದ್ದಾರೆ.

  • 28 Feb 2022 09:29 AM (IST)

    ಪೋಲ್ಯಾಂಡ್ ಗಡಿಯಲ್ಲಿ ಸೈನಿಕರ ದುರ್ವರ್ತನೆ

    ಖಾರ್ಕೀವ್​ನಿಂದ ತಾಯ್ನಾಡಿಗೆ ತೆರಳಲು ಹೋಗಿರುವ ವಿವಿಧ ದೇಶಗಳ ವಿದ್ಯಾರ್ಥಿಗಳ ಮೇಲೆ ಪೋಲ್ಯಾಂಡ್ ಗಡಿಯಲ್ಲಿ ಸೈನಿಕರು ಹಲ್ಲೆ ಮಾಡಿದ್ದಾರೆ. ಇಸ್ರೇಲ್, ಟರ್ಕಿ, ಭಾರತ, ಸೇರಿಂದತೆ ಹಲವು ದೇಶಗಳ ನಾಗರೀಕರು, ಪೋಲ್ಯಾಂಡ್ ಗಡಿ ಪ್ರವೇಶ ಮಾಡಲು ಪೋಲ್ಯಾಂಡ್ ಸೈನಿಕರು ನಿಷೇಧಿಸುತ್ತಿದ್ದಾರೆ. ನಿನ್ನೆಯಷ್ಟೆ ಏಳು ಬಸ್​ಗಳಲ್ಲಿ ಇಸ್ರೇಲ್ ಹಾಗೂ ಟರ್ಕಿ ತನ್ನ ನಾಗರೀಕರನ್ನು ಕರೆದುಕೊಂಡು ಹೋಗಿತ್ತು. ಪಾಕಿಸ್ತಾನ ಸಹ ತನ್ನ ದೇಶದ ವಿದ್ಯಾರ್ಥಿಗಳನ್ನು ಕರೆದೊಯ್ಯುಲು ವ್ಯವಸ್ಥೆ ಮಾಡಲಾಗುತ್ತಿದೆ. ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆಸಿಕೊಳ್ಳಲು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಎಂದು ಉಕ್ರೇನ್​ನ ಖಾರ್ಕೀವದಲ್ಲಿ ಸಿಲುಕಿರುವ ಕೋಲಾರ ಮೂಲದ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

  • 28 Feb 2022 09:22 AM (IST)

    ಬೆಲಾರಸ್‌ನ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಿದ ಜಪಾನ್

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಬೆಲಾರಸ್‌ನ ಅಧಿಕಾರಿಗಳಿಗೆ ಜಪಾನ್ ನಿರ್ಬಂಧ ವಿಧಿಸಿದೆ. ಇನ್ನೂ ಕೆಲ ನಾಯಕರಿಗೆ ನಿರ್ಬಂಧ ಹೇರಲಾಗಿದೆ ಎಂದು ಜಪಾನ್ ವಿದೇಶಾಂಗ ಸಚಿವರು ಮಾಹಿತಿ ನೀಡಿದ್ದಾರೆ.

  • 28 Feb 2022 09:16 AM (IST)

    ಶಾಂತಿ ಸಭೆ ನಡೆಯುತ್ತಿದ್ದರೂ ಕೀವ್, ಖಾರ್ಕಿವ್ನಲ್ಲಿ ಸ್ಫೋಟ

    ಉಕ್ರೇನ್, ರಷ್ಯಾ ದೇಶದ ನಡುವೆ ಶಾಂತಿ ಸಭೆ ನಡೆಯುತ್ತಿದೆ. ಆದರೆ ಇದನ್ನೂ ಲೆಕ್ಕಿಸದೆ ಶಾಂತಿ ಸಭೆ ನಡೆಯುತ್ತಿದ್ದರೂ ಕೀವ್, ಖಾರ್ಕಿವ್​ನಲ್ಲಿ ಸ್ಫೋಟವಾಗುತ್ತಿದೆ.

  • 28 Feb 2022 09:05 AM (IST)

    ಯುರೋಪಿಯನ್ ಕಮಿಷನ್ ಅಧ್ಯಕ್ಷರ ಜತೆ ಝೆಲೆನ್‌ಸ್ಕಿ ಚರ್ಚೆ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಉರ್ಸುಲಾ ವಾನ್‌ಡೆರ್ ಲೇಯೆನ್, ಝೆಲೆನ್‌ಸ್ಕಿ ಚರ್ಚೆ ನಡೆಸಿದ್ದಾರೆ. ರಕ್ಷಣಾ, ಹಣಕಾಸು ನೆರವು ಕೋರಿದ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ, ಯುರೋಪ್ ಒಕ್ಕೂಟದಲ್ಲಿ ಉಕ್ರೇನ್ ಬೆಂಬಲಕ್ಕೆ ಮನವಿ ಮಾಡಿದ್ದಾರೆ.

  • 28 Feb 2022 09:01 AM (IST)

    ಕೊನೆಗೂ ಹಂಗೇರಿ ತಲುಪಿದ ಹಾಸನದ ವಿದ್ಯಾರ್ಥಿಗಳು

    ಉಕ್ರೇನ್‌ನಿಂದ ಕೊನೆಗೂ ವಿದ್ಯಾರ್ಥಿಗಳು ಹಂಗೇರಿಗೆ ಆಗಮಿಸಿದ್ದಾರೆ. ರಾತ್ರಿ 1 ಗಂಟೆಗೆ ವಿದ್ಯಾರ್ಥಿಗಳು ಹಂಗೇರಿ ತಲುಪಿದ್ದಾರೆ. ಸತತ 15 ಗಂಟೆಗಳ ಪ್ರಯತ್ನದಿಂದ ಏರ್‌ಪೋರ್ಟ್ ತಲುಪಿದ್ದಾರೆ. ಕೆಲವೇ ಕ್ಷಣಗಳಲ್ಲಿ ಭಾರತದತ್ತ ಹಾಸನ ವಿದ್ಯಾರ್ಥಿಗಳು ಬರಲಿದ್ದಾರೆ. ಹಿಮನ್ ರಾಜ್, ಅರ್ಪಿತಾ, ಧನುಜಾ ಸೇರಿದಂತೆ ಕರ್ನಾಟಕದ ನಾಲ್ವರು ವಿದ್ಯಾರ್ಥಿಗಳಿರುವ ತಂಡ ಹಂಗೇರಿ ತಲುಪಿದೆ.

  • 28 Feb 2022 08:57 AM (IST)

    ಉಕ್ರೇನ್‌ನಲ್ಲಿರುವ ಮೈಸೂರು ವಿದ್ಯಾರ್ಥಿಗಳ ಪೋಷಕರಿಂದ ಸರ್ಕಾರಕ್ಕೆ ಮನವಿ

    ರಷ್ಯಾ ಉಕ್ರೇನ್ ಯುದ್ದ ಹಿನ್ನೆಲೆ ಇನ್ನು ಉಕ್ರೇನ್‌‌ನಲ್ಲಿರುವ ಮೈಸೂರು ವಿದ್ಯಾರ್ಥಿಗಳ ಪೋಷಕರು ನಮ್ಮ ಮಕ್ಕಳನ್ನು ವಾಪಸ್ಸು ಕರೆಸಿಕೊಡಿ ಎಂದು ಟಿವಿ9 ಮೂಲಕ ಮನವಿ ಮಾಡಿದ್ದಾರೆ. ಮೈಸೂರಿನ ರವಿ ಈ ಬಗ್ಗೆ ಮಾತನಾಡಿದ್ದು, ಉಕ್ರೇನ್‌ನಲ್ಲಿರುವ ಮಗಳು ಪೂಜಾ ಮತ್ತು ಆಕೆಯ ಸ್ನೇಹಿತರನ್ನು ಕರೆಸಿಕೊಡಿ ಎಂದು ಮನವಿ ಮಾಡಿದ್ದಾರೆ.

  • 28 Feb 2022 08:55 AM (IST)

    ರಷ್ಯಾದ ಸುಮಾರು 4,300 ಯೋಧರ ಹತ್ಯೆ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ರಷ್ಯಾದ ಸುಮಾರು 4,300 ಯೋಧರ ಹತ್ಯೆ ಮಾಡಿದೆ. 200ಕ್ಕೂ ಹೆಚ್ಚು ಯೋಧರನ್ನು ಬಂಧಿಸಿದ್ದೇವೆ. ಆದರೆ ರಷ್ಯಾ ಇದನ್ನು ನಿರಾಕರಣೆ ಮಾಡುತ್ತಿದೆ. ಉಕ್ರೇನ್ ಹೆಲ್ಪ್‌ಲೈನ್ ಕೂಡ ಆರಂಭ ಮಾಡಿದೆ. ಉಕ್ರೇನ್ ಯೋಧರ ಕುಟುಂಬಗಳ ಸಂಪರ್ಕ ಮಾಡಲಾಗಿದ್ದು, ಒಂದೇ ಗಂಟೆಯಲ್ಲಿ 100ಕ್ಕೂ ಹೆಚ್ಚು ಕರೆ ಸ್ವೀಕರಿಸಲಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಉಕ್ರೇನ್ ಮಾಹಿತಿ ನೀಡಿದೆ.

  • 28 Feb 2022 08:51 AM (IST)

    ರಷ್ಯಾ, ಉಕ್ರೇನ್ ದೇಶಗಳ ನಡುವೆ ಮಾತುಕತೆ

    ಬೆಲಾರಸ್-ಉಕ್ರೇನ್​ ಗಡಿಯಲ್ಲಿ ರಷ್ಯಾ, ಉಕ್ರೇನ್ ದೇಶಗಳ ನಡುವೆ ಮಾತುಕತೆ ನಡೆದಿದೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯಿಂದ ಮಾಹಿತಿ ದೊರೆತಿದೆ.

  • 28 Feb 2022 08:50 AM (IST)

    ಉಕ್ರೇನ್ ನಾಶ ಮಾಡುವುದೇ ರಷ್ಯಾ ಗುರಿಯಾಗಿದೆ: ಉಕ್ರೇನ್ ವಿದೇಶಾಂಗ ಸಚಿವ

    ಉಕ್ರೇನ್ ನಾಶ ಮಾಡುವುದೇ ರಷ್ಯಾ ಗುರಿಯಾಗಿದೆ. ಆದರೆ ಉಕ್ರೇನ್ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಉಕ್ರೇನ್ ವಿದೇಶಾಂಗ ಸಚಿವ ಹೇಳಿಕೆ ನೀಡಿದ್ದಾರೆ.

  • 28 Feb 2022 08:48 AM (IST)

    4 ದಶಕಗಳ ಬಳಿಕ ಮೊದಲ ಬಾರಿಗೆ ತುರ್ತು ಅಧಿವೇಶನ

    ಉಕ್ರೇನ್ ಸಂಬಂಧ ಯುಎನ್​ಜಿಎ ತುರ್ತು ಅಧಿವೇಶನಕ್ಕೆ ನಿರ್ಧಾರ ಮಾಡಲಾಗಿದೆ. 4 ದಶಕಗಳ ಬಳಿಕ ಮೊದಲ ಬಾರಿಗೆ ತುರ್ತು ಅಧಿವೇಶನ ಮಾಡಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಧಾರ ಮಾಡಿದೆ. ಅಧಿವೇಶನದ ಪರವಾಗಿ 11 ರಾಷ್ಟ್ರಗಳು ಮತ ಹಾಕಿವೆ. ವಿಶ್ವ ಸಂಸ್ಥೆ ಭದ್ರತಾ ಮಂಡಳಿ ನಿರ್ಧಾರದ ಪರ ಮತದಾನ ಮಾಡಲಾಗಿದೆ. ಆದರೆ ತುರ್ತು ಅಧಿವೇಶನದ ವಿರುದ್ಧ ರಷ್ಯಾ ಮತ ಹಾಕಿದೆ. ಇನ್ನೂ ಮತದಾನದಿಂದ ಭಾರತ, ಚೀನಾ, ಯುಎಇ ದೂರ ಉಳಿದಿದೆ.

  • 28 Feb 2022 08:45 AM (IST)

    ಉಕ್ರೇನ್‌ನಲ್ಲಿ ಈವರೆಗೆ 14 ಮಕ್ಕಳು ಸೇರಿದಂತೆ 352 ನಾಗರಿಕರ ಸಾವುಉಕ್ರೇನ್‌ನಲ್ಲಿ ಈವರೆಗೆ 352 ನಾಗರಿಕರ ಸಾವನ್ನಪ್ಪಿದ್ದಾರೆ. 14 ಮಕ್ಕಳು ಸೇರಿದಂತೆ 352 ನಾಗರಿಕರ ಸಾವನ್ನಪ್ಪಿದ್ದಾರೆ. 116 ಮಕ್ಕಳು ಸೇರಿದಂತೆ 1,684 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.

    ಉಕ್ರೇನ್‌ನಲ್ಲಿ ಈವರೆಗೆ 352 ನಾಗರಿಕರ ಸಾವನ್ನಪ್ಪಿದ್ದಾರೆ. 14 ಮಕ್ಕಳು ಸೇರಿದಂತೆ 352 ನಾಗರಿಕರ ಸಾವನ್ನಪ್ಪಿದ್ದಾರೆ. 116 ಮಕ್ಕಳು ಸೇರಿದಂತೆ 1,684 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.

  • 28 Feb 2022 08:43 AM (IST)

    ಯುಕೆ ಪಿಎಂ, ಪೋಲೆಂಡ್ ಅಧ್ಯಕ್ಷರ ಜೊತೆ ಮಾತುಕತೆ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಯುಕೆ ಪಿಎಂ, ಪೋಲೆಂಡ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಾಗಿದೆ. ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ ಚರ್ಚೆ ನಡೆಸಲಾಗಿದೆ. ಸದ್ಯದ ಭದ್ರತಾ ಪರಿಸ್ಥಿತಿಯ ಬಗ್ಗೆ ಝೆಲೆನ್‌ಸ್ಕಿ ಮಾತುಕತೆ ನಡೆಸಿದ್ದಾರೆ. ಆಕ್ರಮಣಕಾರರನ್ನು ಎದುರಿಸಲು ಜಂಟಿ ಕ್ರಮಗಳಿಗೆ ಉಕ್ರೇನ್ ಅಧ್ಯಕ್ಷ, ಯುಕೆ ಪಿಎಂ ಬೋರಿಸ್ ಜಾನ್ಸನ್, ಪೋಲಿಷ್ ಅಧ್ಯಕ್ಷ ದುಡಾ ಜೊತೆ ಚರ್ಚೆ ವೇಳೆ ಒಪ್ಪಿಗೆ ನೀಡಲಾಗಿದೆ.

  • 28 Feb 2022 08:41 AM (IST)

    ಉಕ್ರೇನ್‌ನ ಕೀವ್, ಖಾರ್ಕಿವ್‌ನಲ್ಲಿ ಮತ್ತೆ ಸ್ಫೋಟ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಪರಿಣಾಮವಾಗಿ ಉಕ್ರೇನ್‌ನ ಕೀವ್, ಖಾರ್ಕಿವ್‌ನಲ್ಲಿ ಮತ್ತೆ ಸ್ಫೋಟ ಶುರುವಾಗಿದೆ.

  • 28 Feb 2022 08:39 AM (IST)

    ಉಕ್ರೇನ್ ಗಡಿ ದಾಟುವುದೇ ದೊಡ್ಡ ಸವಾಲಾಗಿದೆ: ದೆಹಲಿಗೆ ವಾಪಸಾದ ವಿದ್ಯಾರ್ಥಿ

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್ ಮಾಡಲಾಗಿದೆ. ಏರ್‌ಲಿಫ್ಟ್‌ಗೆ ಕೇಂದ್ರ ಸರ್ಕಾರ ತುಂಬಾ ಸಹಕಾರ ನೀಡಿದೆ. ಆದರೆ ಉಕ್ರೇನ್ ಗಡಿ ದಾಟುವುದೇ ದೊಡ್ಡ ಸವಾಲಾಗಿದೆ. ಉಕ್ರೇನ್‌ನಲ್ಲಿ ಹೆಚ್ಚು ಭಾರತೀಯರು ಸಿಲುಕಿದ್ದಾರೆ. ಎಲ್ಲ ಭಾರತೀಯರನ್ನು ಏರ್‌ಲಿಫ್ಟ್ ಮಾಡುವ ಭರವಸೆ ಇದೆ ಎಂದು ಉಕ್ರೇನ್‌ನಿಂದ ದೆಹಲಿಗೆ ವಾಪಸಾದ ವಿದ್ಯಾರ್ಥಿ ಹೇಳಿಕೆ ನೀಡಿದ್ದಾರೆ.

  • 28 Feb 2022 08:38 AM (IST)

    ದೆಹಲಿಗೆ ಆಗಮಿಸಿದ ಆಪರೇಷನ್ ಗಂಗಾ 5ನೇ ವಿಮಾನ

    ಉಕ್ರೇನ್‌ನಲ್ಲಿ ಸಿಲುಕಿದ್ದ 249 ಭಾರತೀಯರ ಏರ್‌ಲಿಫ್ಟ್ ಮಾಡಿದ ಆಪರೇಷನ್ ಗಂಗಾ 5ನೇ ವಿಮಾನ ದೆಹಲಿಗೆ ಆಗಮಿಸಿದೆ. ರೊಮೇನಿಯಾದ ಬುಕಾರೆಸ್ಟ್‌ನಿಂದ ದೆಹಲಿಗೆ ಆಗಮಿಸಿದೆ. 5ನೇ ತಂಡದಲ್ಲಿ 6 ಕನ್ನಡಿಗರು ದೆಹಲಿಗೆ ಆಗಮಿಸಿದ್ದಾರೆ. ಉಕ್ರೇನ್‌ನಿಂದ ಈವರೆಗೆ 37 ಕನ್ನಡಿಗರು ಭಾರತಕ್ಕೆ ವಾಪಸ್ ಆಗಿದ್ದಾರೆ.

  • 28 Feb 2022 08:36 AM (IST)

    ಉಕ್ರೇನ್ ದೇಶದ ನೆರವಿಗೆ ನಿಂತ ಆಸ್ಟ್ರೇಲಿಯಾ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್ ದೇಶದ ನೆರವಿಗೆ ಆಸ್ಟ್ರೇಲಿಯಾ ನಿಂತಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರ, ವೈದ್ಯಕೀಯ ಉಪಕರಣ ಸೇರಿದಂತೆ ನ್ಯಾಟೋ ಟ್ರಸ್ಟ್ ಫಂಡ್‌ಗೆ 3 ಮಿಲಿಯನ್ ನೆರವು ನೀಡಿದೆ.

  • 28 Feb 2022 08:34 AM (IST)

    ಯುದ್ದ ಭೂಮಿ ಉಕ್ರೇನ್​ನಲ್ಲಿ ಸಿಲುಕಿಕೊಂಡ ಗದಗ ಯುವಕ

    ಉಕ್ರೇನ್-ರಷ್ಯಾ ನಡುವೆ ಯುದ್ದ ಹಿನ್ನೆಲೆ ಯುದ್ದ ಭೂಮಿ ಉಕ್ರೇನ್​ನಲ್ಲಿ ಗದಗ ಮೂಲದ ಯುವಕ ಸಿಲುಕಿಕೊಂಡಿದ್ದಾನೆ. ಖಾರ್ಕಿವ್ ನಗರದಲ್ಲಿ ಸಿಲುಕಿರುವ ಪುತ್ರನ ನೆನೆದು ಪೋಷಕರು ಕಣ್ಣೀರು ಹಾಕಿದ್ದಾರೆ. ಗದಗ ನಗರದ ಪಂಚಾಕ್ಷರಿ ನಗರದ ಶೇಖರಗೌಡ ಪೊಲೀಸ್ ಪಾಟೀಲ್ ದಂಪತಿ ಕಣ್ಣೀರು ಹಾಕಿದ್ದಾರೆ. ಪುತ್ರನನ್ನು ಸೇಫ್ ಆಗಿ ಕರೆ ತರುವಂತೆ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

  • 28 Feb 2022 08:32 AM (IST)

    ರಾಯಚೂರು ನಗರದ ವಿದ್ಯಾರ್ಥಿ ಮಯೂರ್ ತಾಯಿ ಕಣ್ಣೀರು

    ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿದ್ದು, ರಾಯಚೂರು ನಗರದ ವಿದ್ಯಾರ್ಥಿ ಮಯೂರ್ ತಾಯಿ ಕಣ್ಣೀರು ಹಾಕಿದ್ದಾರೆ. ಕಳೆದ ಮೂರು ದಿನಗಳಿಂದ ಊಟ, ನಿದ್ದೆ ಮಾಡದ ಕುಟುಂಬಸ್ಥರು, ಮಗನ ಸ್ಥಿತಿ ಕಂಡು ಟಿವಿ9 ಎದುರು ತಾಯಿ ಶ್ರೀದೇವಿ ಕಣ್ಣೀರಿಟ್ಟಿದ್ದಾರೆ. ಮಯೂರ್​ಗೆ ಊಟ, ನಿದ್ದೆಯಿಲ್ಲ. ಕರೆ ಮಾಡಿದ್ರೆ ಫೋನ್‌ ಚಾರ್ಜಿಂಗ್, ನೆಟವರ್ಕ್ ಸಮಸ್ಯೆ. ಆತ ನಿನ್ನೆ ಫೋನ್ ಪಿಕ್ ಮಾಡದೇ ಇದ್ದಾಗ ಗಾಬರಿಯಾಗಿದ್ವಿ. ವಾರ್ ನಡೆಸುತ್ತಿದ್ರು ಕ್ಲಾಸ್ ತೆಗೆದುಕೊಂಡಿದ್ದೇ ಇಷ್ಟಕ್ಕೆಲ್ಲಾ ಕಾರಣ. ಅಲ್ಲಿ ಬಾಂಬ್ ಬ್ಲಾಸ್ಟ್​ ಆಗ್ತಿರೋದನ್ನ ನೋಡಿದ್ರೆ ಭಯ ಆಗ್ತಿದೆ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ.

  • 28 Feb 2022 08:28 AM (IST)

    ಈವರೆಗೆ ಒಟ್ಟು 3 ಬ್ಯಾಚ್ನಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಆಗಮನ

    ಮೊದಲ ಬ್ಯಾಚ್​ನಲ್ಲಿ 12 ವಿದ್ಯಾರ್ಥಿಗಳು ಮುಂಬೈ ಏರ್​ಪೋರ್ಟ್ ಮೂಲಕ ಬೆಳಗ್ಗೆ  8.40ಕ್ಕೆ ಬೆಂಗಳೂರಿಗೆ ಬಂದಿದ್ದಾರೆ. ಎರಡನೇ ಬ್ಯಾಚ್​ನಲ್ಲಿ 13 ವಿದ್ಯಾರ್ಥಿಗಳು ದೆಹಲಿ ಏರ್​ಪೋರ್ಟ್ ಮೂಲಕ ಇಂದು ರಾತ್ರಿ 9 ಗಂಟೆಗೆ ಬೆಂಗಳೂರು ಬಂದಿದ್ದಾರೆ. ಮೂರನೇ‌ ಬ್ಯಾಚ್​ನಲ್ಲಿ 5 ವಿದ್ಯಾರ್ಥಿಗಳು ದೆಹಲಿ ಏರ್​ಪೋರ್ಟ್ ಮೂಲಕ ಇಂದು ರಾತ್ರಿ 8.25ಕ್ಕೆ ಬೆಂಗಳೂರು ಬಂದಿದ್ದಾರೆ.

  • 28 Feb 2022 08:26 AM (IST)

    ಉಕ್ರೇನ್‌ನಲ್ಲಿ ಆಹಾರ, ನೀರಿಗಾಗಿ ಕನ್ನಡಿಗರ ಪರದಾಟ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಆಹಾರ, ನೀರಿಗಾಗಿ ಕನ್ನಡಿಗರು ಪರದಾಟ ನಡೆಸುವಂತಾಗಿದೆ. ಸೂಕ್ತ ಶೌಚಾಲಯ ವ್ಯವಸ್ಥೆಯೂ ಇಲ್ಲವೆಂದು ಕನ್ನಡಿಗರು ಅಳಲು ತೋಡಿಕೊಂಡಿದ್ದಾರೆ. ಇಲ್ಲಿ ನಮ್ಮ ಪರಿಸ್ಥಿತಿ ತುಂಬಾ ಘನಘೋರವಾಗಿದೆ. ದಯವಿಟ್ಟು ನಮ್ಮ ನೆರವಿಗೆ ಬನ್ನಿ ಎಂದು ಭಾರತದ ರಾಯಭಾರ ಕಚೇರಿಗೆ ಚಿಕ್ಕಮಗಳೂರು ಮೂಲದ ಸಾಕ್ಷಿ ಸುಧಾಕರ್ ಮನವಿ ಮಾಡಿದ್ದಾರೆ.

  • 28 Feb 2022 08:23 AM (IST)

    ರಷ್ಯಾ ನಾಯಕರಿಗೆ ನಿರ್ಬಂಧ ವಿಧಿಸಿದ ಆಸ್ಟ್ರೇಲಿಯಾ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ನಾಯಕರಿಗೆ ಆಸ್ಟ್ರೇಲಿಯಾ ನಿರ್ಬಂಧ ವಿಧಿಸಿದೆ. ರಷ್ಯಾದ 350ಕ್ಕೂ ಹೆಚ್ಚು ನಾಯಕರಿಗೆ ನಿರ್ಬಂಧ ವಿಧಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ ಸೇರಿ 350ಕ್ಕೂ ಹೆಚ್ಚು ನಾಯಕರಿಗೆ ನಿರ್ಬಂಧ ಹೇರಿದ್ದಾರೆ.

  • 28 Feb 2022 08:21 AM (IST)

    ರಷ್ಯಾ ಜೊತೆಗಿನ ಒಪೆಕ್+ ಒಪ್ಪಂದಕ್ಕೆ ಸೌದಿ ಬದ್ಧ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಜೊತೆಗಿನ ಒಪೆಕ್+ ಒಪ್ಪಂದಕ್ಕೆ ಸೌದಿ ಬದ್ಧವಾಗಿರುವುದಾಗಿ ಸ್ಪಷ್ಟನೆ ನೀಡಿದೆ.

  • 28 Feb 2022 08:19 AM (IST)

    ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸತತ 2 ಗಂಟೆಗಳ ಕಾಲ ಸಭೆ ನಡೆಸಿದ ಪ್ರಧಾನಿ ಮೋದಿ, ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರ ಕುರಿತು ಚರ್ಚೆ ನಡೆಸಿದ್ದಾರೆ. ತ್ವರಿತಗತಿಯಲ್ಲಿ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ಉಕ್ರೇನ್‌ನ ನೆರೆಯ ರಾಷ್ಟ್ರಗಳ ಸಹಕಾರಕ್ಕೆ ಕೂಡ ಸೂಚನೆ ನೀಡಿದ್ದಾರೆ.

  • 28 Feb 2022 08:13 AM (IST)

    ರಷ್ಯಾ ವಿರುದ್ಧ ತಿರುಗಿಬಿದ್ದ ಯುರೋಪ್‌ ಒಕ್ಕೂಟ

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ವಿರುದ್ಧ ಯುರೋಪ್‌ ಒಕ್ಕೂಟ ತಿರುಗಿಬಿದ್ದಿದೆ. ರಷ್ಯಾದ ಸೆಂಟ್ರಲ್ ಬ್ಯಾಂಕ್ ವಹಿವಾಟುಗಳಿಗೆ ನಿಷೇಧ ಹೇರಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಲು ನಿರ್ಧಾರ ಮಾಡಿದೆ. 450 ಮಿಲಿಯನ್ ಯುರೋ ಮೌಲ್ಯದ ಶಸ್ತ್ರಾಸ್ತ್ರ ನೀಡಲು ನಿರ್ಧಾರ ಮಾಡಿದೆ.

  • Published On - Feb 28,2022 8:10 AM

    Follow us
    ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
    ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
    ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
    ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
    ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
    ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
    ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
    ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
    ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
    ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
    ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
    ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
    ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
    ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
    ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
    ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
    ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
    ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
    ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
    ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್