ಗುರ್ಗಾಂವ್ನ ಸಿಎನ್ಜಿ ಪಂಪ್ನ ಮೂವರು ಉದ್ಯೋಗಿಗಳ ಭೀಕರ ಹತ್ಯೆ; ತಡರಾತ್ರಿ ದುಷ್ಕರ್ಮಿಗಳಿಂದ ಕೃತ್ಯ
ಮೂವರಲ್ಲಿ ಇಬ್ಬರ ಮೃತದೇಹ ಸಿಎನ್ಜಿ ಪಂಪ್ನ ಮ್ಯಾನೇಜರ್ ಕೋಣೆಯಲ್ಲಿ ಸಿಕ್ಕಿದ್ದು, ಇನ್ನೊಬ್ಬಾತನ ಶವ ಕೋಣೆಯ ಹೊರಗೆ ಬಿದ್ದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗುರ್ಗಾಂವ್ನ ಸೆಕ್ಟರ್ 31ರಲ್ಲಿರುವ ಸಿಎನ್ಜಿ ಪಂಪ್ (CNG Pump-ಸಂಕುಚಿತ ನೈಸರ್ಗಿಕ ಅನಿಲ ತುಂಬುವ ಸ್ಥಳ)ನ ಮೂವರು ಉದ್ಯೋಗಿಗಳನ್ನು ನಿನ್ನೆ ತಡರಾತ್ರಿ ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ತಡರಾತ್ರಿ 2.40ರ ಹೊತ್ತಿಗೆ ಘಟನೆ ನಡೆದಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಮೃತರನ್ನು ಭೂಪೇಂದ್ರ, ಪುಷ್ಪೇಂದ್ರ ಮತ್ತು ನರೇಶ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಉತ್ತರ ಪ್ರದೇಶದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳು ನಾಪತ್ತೆಯಾಗಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದು ದರೋಡೆಗಾಗಿ ನಡೆದ ಹತ್ಯೆ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿರುವ ಆರಕ್ಷಕರು ಸದ್ಯ ಮೃತದೇಹಗಳನ್ನು ಪೋಸ್ಟ್ಮಾರ್ಟಮ್ಗೆ ಕಳಿಸಿದ್ದಾರೆ. ಮೂವರಲ್ಲಿ ಇಬ್ಬರ ಮೃತದೇಹ ಸಿಎನ್ಜಿ ಪಂಪ್ನ ಮ್ಯಾನೇಜರ್ ಕೋಣೆಯಲ್ಲಿ ಸಿಕ್ಕಿದ್ದು, ಇನ್ನೊಬ್ಬಾತನ ಶವ ಕೋಣೆಯ ಹೊರಗೆ ಬಿದ್ದಿತ್ತು. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೃತ ಭೂಪೇಂದ್ರ ಸಹೋದರ ಧರ್ಮೇಂದ್ರ, ನನಗೆ ಇಂದು ಬೆಳಕು ಹರಿಯುವುದಕ್ಕೂ ಮೊದಲು ಒಂದು ಕರೆ ಬಂತು. ಕೂಡಲೇ ಸಿಎನ್ಜಿ ಪಂಪ್ ಬಳಿ ಹೋದೆ. ಅಲ್ಲಿಗೆ ನನ್ನ ಸೋದರ ಭೂಪೇಂದ್ರ ಶವವಾಗಿ ಬಿದ್ದಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ: Video: ಗಡಿಯಲ್ಲಿ ಭಾರತೀಯರಿಗೆ ಹಿಂಸೆ ನೀಡಿದ ರಷ್ಯಾ ಸೈನಿಕರು; ತುಂಬ ಸಂಕಟವಾಗುತ್ತಿದೆ ಎಂದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ
Published On - 9:54 am, Mon, 28 February 22




