ಗಣಿ ಮಾಲೀಕರ ದಬ್ಬಾಳಿಕೆಗೆ ಅನ್ನದಾತರು ವಿಲವಿಲ: ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರಿಂದ ಧಮಕಿ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 06, 2023 | 8:53 PM

ಗದಗ ತಾಲೂಕಿ ಶಿತಾಲಹರಿ, ಮುಳಗುಂದ ಗ್ರಾಮಗಳ ಸುತ್ತಮುತ್ತ ನಡೆಯುವ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಘಟಗಳಿಂದ ದಬ್ಬಾಳಿಗೆ ಅಕ್ಷರಶಃ ರೈತರು ನಲುಗಿ ಹೋಗಿದ್ದಾರೆ. ಅನ್ನದಾತರು ಗಣಿ ಕುಳಗಳ ವಿರುದ್ಧ ಕೆಂಡವಾಗಿದ್ದಾರೆ. ಗಣಿ ಮಾಲೀಕರನ್ನು ಪ್ರಶ್ನೆ ಮಾಡಿದರೆ ಪೊಲೀಸರಿಂದ ಧಮಕಿ ಆರೋಪ ಮಾಡಿದ್ದಾರೆ.

ಗಣಿ ಮಾಲೀಕರ ದಬ್ಬಾಳಿಕೆಗೆ ಅನ್ನದಾತರು ವಿಲವಿಲ: ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರಿಂದ ಧಮಕಿ ಆರೋಪ
ಗಣಿಗಾರಿಕೆಯಿಂದಾಗಿ ಹೊಲಗಳಲ್ಲಿ ಬಿದ್ದಿರುವ ಕಲ್ಲುಗಳನ್ನು ತೆಗೆಯುತ್ತಿರುವ ರೈತರು
Follow us on

ಗದಗ: ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಅಬ್ಬರಕ್ಕೆ ಅಕ್ಷರಶಃ ರೈತರು (farmers) ನಲುಗಿ ಹೋಗಿದ್ದಾರೆ. ಬ್ಲಾಸ್ಟಿಂಗ್ ಕಲ್ಲುಗಳು ಸಿಡಿದು ರೈತರ ಜಮೀನುಗಳಲ್ಲಿ ಬೀಳುತ್ತಿವೆ. ಅಷ್ಟೇ ಅಲ್ಲ ಕಲ್ಲು ಪುಡಿ ಮಾಡುವ ಕ್ರಷರ್ ಘಟಕಗಳಿಂದ ಬರುವ ಧೂಳು ರೈತರ ಬೆಳೆ ಹಾಳು ಮಾಡುತ್ತಿದೆ. ಯಾವುದೇ ಸುರಕ್ಷಾ ಕ್ರಮಗಳು ಕೈಗೊಳ್ಳದೇ ಗಣಿ ಮಾಲೀಕರು ನಾವು ಆಡಿದ್ದೇ ಆಟ ಅಂತಿದ್ದಾರೆ. ರೈತರು ಪ್ರಶ್ನೆ ಮಾಡಿದರೆ ಪೊಲೀಸ್ ಅಧಿಕಾರಿಗಳನ್ನು ಕರೆಸಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರಂತೆ. ಹೀಗಾಗಿ ರೊಚ್ಚಿಗೆದ್ದ ರೈತರು ಡಿಸಿ ಹಾಗೂ ಗಣಿ ಇಲಾಖೆ ದೂರು ನೀಡಿದ್ದಾರೆ. ಆದರೆ ಜಿಲ್ಲಾಡಳಿತ ಮಾತ್ರ ರೈತರ ಸಮಸ್ಯೆಗೆ ಡೋಂಟ್ ಕೇರ್ ಅಂತಿದ್ದಾರೆ. ಇದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ ತಾಲೂಕಿ ಶಿತಾಲಹರಿ, ಮುಳಗುಂದ ಗ್ರಾಮಗಳ ಸುತ್ತಮುತ್ತ ನಡೆಯುವ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಘಟಗಳಿಂದ ದಬ್ಬಾಳಿಗೆ ಅಕ್ಷರಶಃ ರೈತರು ನಲುಗಿ ಹೋಗಿದ್ದಾರೆ. ಅನ್ನದಾತರು ಗಣಿ ಕುಳಗಳ ವಿರುದ್ಧ ಕೆಂಡವಾಗಿದ್ದಾರೆ. ಗಣಿ ಮಾಲೀಕರು ನಿಯಮ ಉಲ್ಲಂಘಿಸಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೇ ಬ್ಲಾಸ್ಟಿಂಗ್ ಮಾಡುತ್ತಿದ್ದಾರೆ.

ಮೊದಲೇ ಮಳೆ ಇಲ್ಲದೇ ಕಂಗಾಲಾದ ರೈತರಿಗೆ ಗಣಿ ಮಾಲೀಕರ ಅಟ್ಟಹಾಸ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೋ ನೀರಾವರಿ ಮೂಲಕ ಚೆಂಡೂ ಹೂವು, ಶೇಂಗಾ ಸೇರಿ ಹಲವು ಬೆಳೆಗಳು ಬೆಳೆಯಲಾಗಿದೆ. ಆದರೆ ಗಣಿ ಮಾಲೀಕರ ದಬ್ಬಾಳಿಗೆ ಬೆಳೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಗಣಿ ಮಾಲೀಕರಿಗೆ ರೈತರು ಜಮೀನು, ಬೆಳೆ ಹಾಳಾಗುತ್ತಿದೆ. ನಿಯಮ ಪಾಲಿಸಿ ಗಣಿಗಾರಿಕೆ ಮಾಡಿ ಅಂತ ಪರಿ ಪರಿಯಾಗಿ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: Gadag: ದಕ್ಷಿಣದಲ್ಲಿರುವ ಮಳೆ ಉತ್ತರದಲ್ಲಿಲ್ಲ, ಬಿತ್ತನೆ ಮಾಡಿ ಮಳೆಯಿಲ್ಲದೆ ಕಂಗಾಲಾದ ಗದಗ ರೈತರು

ಹಾಗಾಗಿ ರೊಚ್ಚಿಗೆದ್ದ ರೈತರು ಗಣಿಗಾರಿಗೆ ಬಂದ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಆಗ ಗಣಿ ಮಾಲೀಕರು ಮುಳಗುಂದ ಪೊಲೀಸ್ ಅಧಿಕಾರಿಗಳನ್ನು ಕರೆಸಿ ರೈತರಿಗೆ ಧಮಕಿ ಹಾಕಿಸಿದ್ದಾರೆ ಎನ್ನಲಾಗಿದೆ. ಅನ್ಯಾಯ ಆಗ್ತಾಯಿರೋದು ನಮಗೆ, ಪೊಲೀಸರು ಅಧಿಕಾರಿಗಳು ರೈತರ ನೆರವಿಗೆ ಬರಬೇಕು. ಆದರೆ ಗಣಿ ಮಾಲೀಕರ ಮಾತು ಕೇಳಿ ನಮ್ಮನ್ನೇ ಒದ್ದು ಒಳಗೆ ಹಾಕುತ್ತೇವೆ ಅಂತ ಬೆದರಿಕೆ ಹಾಕ್ತಾಯಿದ್ದಾರೆ ಅಂತ ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.

ಸರ್ಕಾರ ಅನ್ನದಾತರಿಗೆ ಆಗುತ್ತಿರೋ ಅನ್ಯಾಯ ಬಗ್ಗೆ ಕಣ್ಣು ತೆರೆಯಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಗುತ್ತೆ ಅಂತ ರೈತ ಮುಖಂಡ ಬಸವರಾಜ್ ಸಾಬಳೆ ಎಚ್ಚರಿಕೆ ನೀಡಿದ್ದಾರೆ.

ಇದು ಸಿವಿಲ್ ವಿಷಯ. ಕ್ರಮಿನಲ್ ಕೇಸ್ ಅಲ್ಲ. ಪೊಲೀಸರು ಯಾಕೇ ಬರ್ತಾರೆ ಅಂತ ರೈತರು ಕಿಡಿಕಾರಿದ್ದಾರೆ. ಕಲ್ಲು ಗಣಿಗಾರಿಕೆ ಮಾಲೀಕರಿಂದ ಆಗುತ್ತಿರುವ ದಬ್ಬಾಳಿಕೆಗೆ ರೋಸಿಹೋದ ಮುಳಗುಂದ, ಶೀತಾಲಹರಿ ಗ್ರಾಮಗಳ ರೈತರು ಗಣಿ ಮಾಲೀಕರ ದಬ್ಬಾಳಿಕೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬಳಿಕ ಗಣಿ ಇಲಾಖೆ ಕಚೇರಿಗೆ ಎಂಟ್ರಿ ಕೊಟ್ಟ ರೈತರು ಗಣಿ ಇಲಾಖೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಗಣಿ ಇಲಾಖೆ ನಿಯಮಗಳೇನು. ಬ್ಲಾಸ್ಟಿಂಗ್ ನಿಯಮ ಏನೂ ಹೀಗಾಗಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ತರಾಟೆಗೆ ತೆಗೆದುಕೊಂಡ್ರು. ನಿಯಮ ಮೀರಿ ಗಣಿಕಾರಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಗಣಿ ಮಾಲೀಕರು ಪೊಲೀಸರನ್ನು ಕರೆತಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಬೇಕಾಬಿಟ್ಟಿ ಬ್ಲಾಸ್ಟಿಂಗ್, ಕ್ರಷರ್ ಘಟಕಗಳಿಂದ ಬರುವ ಧೂಳಿನಿಂದ ನಮ್ಮ ಬೆಳೆಗಳು ಹಾಳಾಗುತ್ತಿವೆ. ಪೊಲೀಸ್​ರಿಗೆ ಕರೆಸಿ ಭಯ ಹುಟ್ಟಿಸುತ್ತಿದ್ದಾರೆ. ಹೀಗಾಗಿ ಗಣಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ದೇವಪ್ಪ ಒತ್ತಾಯಿಸಿದ್ದಾರೆ.

ಎಲ್ಲೆಲ್ಲಿ ಬ್ಲಾಸ್ಟಿಂಗ್

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ, ಪರಸಾಪೂರ, ಕೊಂಚಿಗೇರಿ, ಚಿಕ್ಕಸವಣೂರ ಹಾಗೂ ಗದಗ ತಾಲೂಕಿನ ಮಿಳಗುಂದ, ಶೀತಾಲಹರಿ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯ ಕಲ್ಲು ಗಣಿಗಾರಿಕೆಯಲ್ಲಿ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ನೋಂದಣಿ ಕಾರ್ಯ ಶೀಘ್ರ ಪೂರ್ಣ: ವಿಶ್ವಾಸ ವ್ಯಕ್ತಪಡಿಸಿದ ಸಚಿವ ಎಚ್​ಕೆ ಪಾಟೀಲ್​

ಯಾವ ಬೆಳೆಗೆ ಕಂಟಕ

ಶೇಂಗಾ, ಚೆಂಡೂ ಹೂವು, ಸೂರ್ಯಕಾಂತಿ, ಮೆಣಸಿನಕಾಯಿ, ಗೋವಿನಜೋಳ ಸೇರಿ ಹಲವು ಬೆಳೆಗಳಿಗೆ ಕಂಟಕವಾಗಿದೆ.

ಸೂಕ್ತ ಕ್ರಮದ ಭರವಸೆ

ಈ ಬಗ್ಗೆ ಗಣಿ‌ ಇಲಾಖೆ ಅಧಿಕಾರಿ ಚಿದಂಬರ ಅವ್ರನ್ನು ಕೇಳಿದರೆ ರೈತರು ಬ್ಲಾಸ್ಟಿಂಗ್ ಬಗ್ಗೆ ದೂರು ನೀಡಿದ್ದಾರೆ. ರೈತರಿಗೆ ಸಮಸ್ಯೆಯಾಗದಂತೆ ಗಣಿ ಮಾಲೀಕರು ನಿಯಮ ಪಾಲಿಸಿ ಬ್ಲಾಸ್ಟಿಂಗ್ ಮಾಡಬೇಕು. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಸೂಕ್ತ ಕಾನೂನು‌ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಬೇಕಾಬಿಟ್ಟಿ ಬ್ಲಾಸ್ಟಿಂಗ್ ಮಾಡೋದ್ರಿಂದ ಕೃಷಿ ಕಾರ್ಮಿಕರು ಜೀವ ಭಯದಿಂದ ಕೆಲಸಕ್ಕೆ ಬರ್ತಾಯಿಲ್ಲ. ಹೀಗಾಗಿ ಕೃಷಿ ಚಟುವಟಿಕೆ ಮಾಡೋದೇ ಕಷ್ಟವಾಗಿದೆ. ಗದಗ ಜಿಲ್ಲೆಯಲ್ಲಿ ರೈತರಿಗೆ ಆಗುತ್ತಿರೋ ಅನ್ಯಾಯ, ದಬ್ಬಾಳಿಕೆ ಬಗ್ಗೆ ಕೇಳುವವರು ಇಲ್ಲದಂತಾಗಿದೆ. ಜಿಲ್ಲಾಡಳಿತ ಕೂಡ ನಮ್ಮ ನೆರವಿಗೆ ಬರ್ತಾಯಿಲ್ಲ ಅಂತ ರೈತರು ಕಿಡಿಕಾರಿದ್ದಾರೆ. ಜಿಲ್ಲೆಯಲ್ಲಿ ನಮ್ಮ ಸಮಸ್ಯೆ ಯಾರಿಗೆ ಹೇಳೋಣ ಅಂತ ರೈತರು ಗೋಳಾಡುತ್ತಿದ್ದಾರೆ. ಹೀಗಾಗಿ ಉಸ್ತುವಾರಿ ಸಚಿವ ಎಚ್​ಕೆ ಪಾಟೀಲ್​ ಅವರು ಅನ್ನದಾತರಿಗೆ ಆಗುತ್ತಿರುವ ಅನ್ಯಾಯ, ದಬ್ಬಾಳಿಕೆ ಬಗ್ಗೆ ಗಮನಹರಿಸಿ ನ್ಯಾಯ ಕೊಡಿಸಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:52 pm, Thu, 6 July 23