Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ ಅಂತ ರೈತರಿಗೆ ಇಲ್ಲ ಖುಷಿ, ಕಳ್ಳರ ಹಾವಳಿಗೆ ಗದಗ ಅನ್ನದಾತರು ಬೆಚ್ಚಿಬಿದ್ದಿದ್ದಾರೆ!

ಗದಗ ಜಿಲ್ಲೆಯಲ್ಲಿ 2 ವರ್ಷಗಳಿಂದ ಅತಿಯಾದ ಮಳೆಗೆ ಬೆಳೆ ಹಾನಿ. ಈ ವರ್ಷ ಭೀಕರ ಬರಕ್ಕೆ ಬೆಳೆ ಹಾನಿಗೊಂಡಿದ್ದು ರೈತರ ಜೀವ ಹಿಂಡಿದೆ. ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೇ ಬೆಳೆಗಳಿಗೆ ನೀರುಣಿಸಿ ಕಷ್ಟಪಟ್ಟು ಬೆಳೆದ ಮೆಣಸಿನಕಾಯಿ ಉಳಿಸಿಕೊಳ್ಳಲು ರೈತರು ಸರ್ಕಸ್ ಮಾಡ್ತಾಯಿದ್ದಾರೆ. ಹೀಗಾಗಿ ಸರ್ಕಾರ ರೈತರಿಗೆ ರಕ್ಷಣೆಗೆ ಬರಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ ಅಂತ ರೈತರಿಗೆ ಇಲ್ಲ ಖುಷಿ, ಕಳ್ಳರ ಹಾವಳಿಗೆ ಗದಗ ಅನ್ನದಾತರು ಬೆಚ್ಚಿಬಿದ್ದಿದ್ದಾರೆ!
ಮೆಣಸಿನಕಾಯಿಗೆ ಚಿನ್ನದ ಬೆಲೆಯೆಂದು ರೈತರು ಖುಷಿಯಲ್ಲಿಲ್ಲ, ಕಳ್ಳರ ಹಾವಳಿ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on: Dec 01, 2023 | 10:22 AM

ಕೆಂಪು ಸುಂದರಿ ಈಗ ಭರ್ಜರಿಯಾಗಿ ಬೆಳೆದು ನಿಂತಿದ್ದಾಳೆ. ಆದ್ರೆ, ಈಗ ಖದೀಮರು, ಕಳ್ಳಕಾಕರರು ಈ ಸುಂದರಿಯ ಬೆನ್ನುಬಿದ್ದಿದ್ದಾರೆ. ಆದರೆ ಕೆಂಪು ಸುಂದರಿ ಕಾವಲಿಗೆ ಅನ್ನದಾತರು (Farmers) ಟೊಂಕಕಟ್ಟಿ ನಿಂತಿದ್ದಾರೆ. ಸ್ವಲ್ಪ ಯಾಮಾರಿದ್ರೂ ರಾತ್ರೋತಾತ್ರಿ ಕೆಂಪು ಸುಂದರಿಯನ್ನು ಎಸ್ಕೇಪ್ ಮಾಡೋ ಕಳ್ಳರ ಗ್ಯಾಂಗ್ ಇಲ್ಲಿ ಬೀಡುಬಿಟ್ಟಿದೆ. ಹೀಗಾಗಿ ಕೈಯಲ್ಲಿ ಕೋಲು, ಟಾರ್ಚ್ ಹಿಡಿದು ರಾತ್ರಿಯಿಡೀ ರೈತರು ಕೆಂಪು ಸುಂದರಿ ಕಾವಲಿಗೆ ನಿಂತಿ್ದ್ದಾರೆ. ರೈತರ ಗಸ್ತು ಹೇಗಿದೆ. ಏನಿದು ಕೆಂಪು ಸುಂದರಿ (chilis) ಕಥೆ ಅಂತೀರಾ ಈ ಸ್ಟೋರಿ ನೋಡಿ… ಕೆಂಪು ಸುಂದರಿಗೆ ಭಾರಿ ಬೇಡಿಕೆ.. ಹೆಚ್ಚಾದ ಕಳ್ಳರ (theft) ಕಾಟ…! ಮಾರಕಾಸ್ತ್ರಗಳೊಂದಿಗೆ ಕೆಂಪು ಸುಂದರಿಗೆ ರಾತ್ರೋರಾತ್ರಿ ಕಳ್ಳತನ…! ಕೆಂಪು ಸುಂದರಿ ಕಾಪಾಡಲು ರೈತರ ಕಸರತ್ತು…! ರಾತ್ರಿಯಿಡೀ ಕೋಲು, ಟಾರ್ಚ್ ಹಿಡಿದು ಕಾವಲು…! ಹಿಡಿರೋ ಕಳ್ಳ ಅಲ್ಲಿ ಬಂದ. ಬಿಡ ಬ್ಯಾಡ್ರಿ ಹಿಡೀರ್ರೂ ಅಂತ ರೈತರ ಕೂಗಾಟ. ಏಯ್ ಓಡ್ತಾನೆ ಹಿಡ್ರೋ. ಏಯ್ ಇಲ್ಲಿ ಬಂದ್ರೆ ನಿನ್ನ ಬಿಡಲ್ಲ ಅಂತ ರಾತ್ರಿ ರೈತರ ಗಸ್ತು. ಹೌದು ಈ ದೃಶ್ಯಗಳು ಕಂಡಿದ್ದು ಗದಗ (Gadag) ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ.

ರೈತರಿಗೆ ಮಳೆ ಬಂದ್ರೂ ಕಷ್ಟ.. ಬರದಿದ್ರೆ ಇನ್ನೂ ಕಷ್ಟ.. ಭರ್ಜರಿ ಬೆಳೆ ಬಂದ್ರೂ ಈಗ ಕಷ್ಟ ಎಂಬಂತಾಗಿದೆ. ಮೊದ್ಲೆ ಭೀಕರ ಬರಕ್ಕೆ ಸಿಲುಕಿ ರೈತರು ವಿಲವಿಲ ಅಂತಿದ್ದಾರೆ. ಮಳೆ ಕೊರತೆಯಿಂದ ಯಾವುದೇ ಬೆಳೆ ಇಲ್ಲದೇ ರೈತರು ಈ ಬಾರಿ ಅಕ್ಷರಶಃ ಕಂಗಲಾಗಿದ್ದಾರೆ. ಈ ನಡುವೆ ಕೆಲ ರೈತರು ಅಷ್ಟೋಇಷ್ಟು ನೀರಾವರಿ ಮಾಡಿ ಕೆಲ ವಾಣಿಜ್ಯ ಬೆಳೆಗಳು ಭರ್ಜರಿಯಾಗಿ ಬೆಳೆದಿದ್ದಾರೆ. ಆದ್ರೆ, ಬಂಪರ್ ಬೆಳೆ, ರೇಟ್ ಎರಡು ಇದ್ರೂ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ.

ಹೌದು ಗದಗ ಜಿಲ್ಲೆಯಲ್ಲಿ ಕೆಂಪು ಸುಂದರಿ ಅಂದ್ರೆ ಬ್ಯಾಡಗಿ ಮೆಣಸಿನಕಾಯಿ ಭರ್ಜರಿಯಾಗಿ ಬೆಳೆದ ರೈತರಿಗೆ ಈಗ ಕಳ್ಳರ ಕಾಟ ಶುರುವಾಗಿದೆ. ರೇಟ್ ಕೂಡ ಸಧ್ಯಕ್ಕೆ ಕ್ವಿಂಟಾಲ್ ಗೆ 40-50 ಸಾವಿರ ಇದೆ. ಅಷ್ಟೇ ಅಲ್ಲ ಇನ್ನೂ ತಿಂಗಳಲ್ಲಿ 60-70 ಸಾವಿರ ಕ್ವಿಂಟಾಲ್ ಗೆ ಆಗುವ ಸಾಧ್ಯತೆ ಇದೆ. ಹೀಗಾಗಿ ಮೆಣಸಿನಕಾಯಿ ಜಮೀನುಗಳಿಗೆ ಕಳ್ಳರು ರಾತ್ರೋರಾತ್ರಿ ಕನ್ನ ಹಾಕ್ತಾಯಿದ್ದಾರೆ.

ಮಾರಕಾಸ್ತ್ರಗಳೊಂದಿಗೆ ಕಳ್ಳರು ರಾತ್ರಿ ಜಮೀನುಗಳಿಗೆ ಮೆಣಸಿನಕಾಯಿ ಕಟಾವು ಮಾಡಿಕೊಂಡು ಲೂಟಿ ಮಾಡ್ತಾಯಿದ್ದಾರೆ. ಇದು ರೈತರ ನಿದ್ದೆಗೆಡಿಸಿದೆ. ಕಳ್ಳರ ಸದೆಬಡಿಯಿಲು ಹಾಗೂ ಬೆಳೆ ಉಳಿಸಿಕೊಳ್ಳಲು ರೈತರು ಕೂಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ರಾತ್ರಿಯಿಡೀ ಅಕ್ಕಪಕ್ಕ ಜಮೀನುಗಳ ರೈತರೆಲ್ಲ ಸೇರಿಕೊಂಡು ಗ್ಯಾಂಗ್ ರೆಡಿ ಮಾಡಿಕೊಂಡಿದ್ದಾರೆ. ಒಂದೊಂದು ಗ್ಯಾಂಗ್ ನಲ್ಲಿ 10-15 ರೈತರು ಇರ್ತಾರೆ. ಎಲ್ಲರ ಕೈಯಲ್ಲೊಂದು ಕೋಲು, ಟಾರ್ಚ್ ಇರ್ತಾವೆ. ಈ ಮೂಲಕ ರಾತ್ರಿಯಿಡೀ ಕಾವಲು ಮಾಡುವ ಮೂಲಕ ತಮ್ಮಗಳ ಕೆಂಪು ಸುಂದರಿಯನ್ನು ಕಾಪಾಡಿಕೊಳ್ತಾಯಿದ್ದಾರೆ.

ಇದನ್ನೂ  ಓದಿ: ಮೆಣಸಿನಕಾಯಿ ಕಳ್ಳತನ: ಕಂಬಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಥಳಿತ

ನಾಲ್ಕು ದಿನಗಳ ಹಿಂದೆ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಮೆಣಸಿನಕಾಯಿ ಕಳ್ಳತನ ಮಾಡುವ ಇಬ್ಬರು ಕಳ್ಳರು ರೆಡ್ ಹ್ಯಾಂಡ್ ಸಿಕ್ಕಾಕಿಕೊಂಡಿದ್ರು. ಆಗ ಕಳ್ಳರ ಹಿಡಿದ ರೈತರು ಹಿಗ್ಗಾಮುಗ್ಗಾ ಥಳಿಸಿ ಪಾಠ ಕಲಿಸಿದ್ರು. ಕಳ್ಳರ ಹಾವಳಿಗೆ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಉತ್ತಮ‌ ಮೆಣಸಿನಕಾಯಿ ಬೆಳೆದ ರೈತರಿಗಿಲ್ಲ ನೆಮ್ಮದಿ ಇಲ್ಲದಂತಾಗಿದೆ. 24 ಗಂಟೆ ಕಾಯುವ ಸ್ಥಿತಿ ಬಂದಿದೆ. ಮನೆಯಲ್ಲಿ ಒಬ್ಬೊಬರು ರೈತರು. ಆಳುಗಳ ಕರೆತಂದು ಜಮೀನು ಕಾಯುವಂತ ಸ್ಥಿತಿ ಬಂದಿದೆ. ಈ ಬಾರಿ ಬರ ಇದ್ದಕಾರಣ ಸ್ವಲ್ಪವಾದ್ರೂ ಬರುತ್ತೆ ಅಂತ ಆಸೆ ಇದೆ. ಅದಕ್ಕೂ ಕಳ್ಳರ ಕನ್ನ ಹಾಕ್ತಾಯಿದ್ದಾರೆ. ಹೀಗಾಗಿ ಸರ್ಕಾರ ರೈತರಿಗೆ ರಕ್ಷಣೆಗೆ ಬರಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದೆ ಅಂತ ರೈತರು ಖುಷಿಯಲ್ಲಿಲ್ಲ. ಪೂರ್ಣ  ಕಟಾವ್ ಆಗಿ ಮಾರ್ಕೆಟ್ ಹೋಗುವವರೆಗೂ ನಿದ್ದೆ ಮಾಡುವಂತಿಲ್ಲ. ಕಳ್ಳರ ಹಾವಳಿಗೆ ಅನ್ನದಾತರು ಬೆಚ್ಚಿಬಿದ್ದಿದ್ದಾರೆ. ಕಳ್ಳತನವಾದ ಮಾಲೀಕರು ಮುಂಡರಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ, ಇನ್ನೂ ಕಳ್ಳರ ಪತ್ತೆಯಾಗಿಲ್ಲ. ಇನ್ನಾದ್ರೂ ಪೊಲೀಸ್ ಇಲಾಖೆ ಅನ್ನದಾತರು ಬೆವರು ಹರಿಸಿದ ಬೆಳೆ ಕದ್ದ ಕಳ್ಳರಿಗೆ ತಕ್ಕ ಪಾಠ ಕಲಿಸಬೇಕಿದೆ..

ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಗ್ಯಾಸ್​ ಸಿಲಿಂಡರ್​ ತುಂಬಿದ್ದ ಲಾರಿ ಬ್ರೇಕ್​ ಫೇಲ್​ ಆಗಿ ಮರಕ್ಕೆ ಡಿಕ್ಕಿ
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ ಸೋಂಕು ಬೆಕ್ಕುಗಳಲ್ಲಿ ಸಾಂಕ್ರಾಮಿಕ!
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಜಾಗಿಂಗ್
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ದಾವಣಗೆರೆ: ನೋಡ ನೋಡ್ತಿದ್ದಂತೆಯೇ ಸುಟ್ಟು ಕರಕಲಾದ ಕಾರುಗಳು
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಕೋಲಾರ: ಹೆಲ್ಮೆಟ್ ತೆಗೀತಿದ್ದಂತೆ ಬುಸ್ ಎಂದ ನಾಗಪ್ಪ! ಆಮೇಲೇನಾಯ್ತು ನೋಡಿ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
ಧಗ ಧಗನೆ ಹೊತ್ತಿ ಉರಿದ ಸಿಲಿಂಡರ್ ತುಂಬಿದ್ದ ಟ್ರಕ್, ಹಲವು ಬಾರಿ ಸ್ಫೋಟ
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್
VIDEO: ರನೌಟ್ ಮಾಡಲು ಕುಲ್ದೀಪ್ ಯಾದವ್​ನ ತಳ್ಳಿದ ರಿಷಭ್ ಪಂತ್