ಇಂದು 41ನೇ ರೈತ ಹುತಾತ್ಮ ದಿನಾಚರಣೆ; ಗದಗದಲ್ಲಿ ಮತ್ತೆ ರೈತರ ರಣಕಹಳೆ

ಹುತಾತ್ಮ ರೈತ ಈರಪ್ಪ ಕೊಡ್ಲಿಕೊಪ್ಪ ಸ್ಮಾರಕಕ್ಕೆ ರೈತರು, ಮುಖಂಡರು, ರಾಜಕೀಯ ವ್ಯಕ್ತಿಗಳು ನಮನ ಸಲ್ಲಿಸುತ್ತಾರೆ. ಬಳಿಕ ಕಳಸಾ-ಬಂಡೂರಿ ಯೋಜನೆ ಜಾರಿಗೆ ರೈತರು ಹೋರಾಟಕ್ಕೆ ಇಳಿಯಲಿದ್ದಾರೆ.

ಇಂದು 41ನೇ ರೈತ ಹುತಾತ್ಮ ದಿನಾಚರಣೆ; ಗದಗದಲ್ಲಿ ಮತ್ತೆ ರೈತರ ರಣಕಹಳೆ
ಕಳೆದ ಬಾರಿ ನಡೆಸಿದ ಪ್ರತಿಭಟನೆ

ಗದಗ: ಇಂದು (ಜುಲೈ 21) 41ನೇ ರೈತ ಹುತಾತ್ಮರ ದಿನಾಚರಣೆ ಹಿನ್ನೆಲೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮತ್ತೆ ರೈತರ ರಣಕಹಳೆ ಮೊಳಗಲಿದೆ. ಹುತಾತ್ಮ ರೈತ ಈರಪ್ಪ ಕೊಡ್ಲಿಕೊಪ್ಪ ಸ್ಮಾರಕಕ್ಕೆ ರೈತರು, ಮುಖಂಡರು, ರಾಜಕೀಯ ವ್ಯಕ್ತಿಗಳು ನಮನ ಸಲ್ಲಿಸುತ್ತಾರೆ. ಬಳಿಕ ಕಳಸಾ-ಬಂಡೂರಿ ಯೋಜನೆ ಜಾರಿಗೆ ರೈತರು ಹೋರಾಟಕ್ಕೆ ಇಳಿಯಲಿದ್ದಾರೆ. ರೈತ ಸಂಪರ್ಕ ಕೇಂದ್ರದ ಬಳಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಲಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಮಹಾದಾಯಿಗಾಗಿ ರೈತ ಸೇನಾ ಕರ್ನಾಟಕ, ಕರ್ನಾಟಕ ರೈತ ಸೇನಾ, ಕೆಪಿಆರ್​ಎಸ್​, ದಲಿತ ಸಂಘರ್ಷ ಸಮಿತಿ, ಸಿಐಟಿಯು, ಉತ್ತರ ಕರ್ನಾಟಕ ರೈತ ಸಂಘ, ಕಾರ್ಮಿಕ, ಕನ್ನಡಪರ ಸಂಘಟನೆಗಳ ಒಕ್ಕೂಟ, ಜನಾಂದೋಲನಗಳ ಮಹಾಮೈತ್ರಿ, ಕರ್ನಾಟಕ ಜನಶಕ್ತಿ ಸಂಘಟನೆಗಳಿಂದ ಹೋರಾಟ ನಡೆಯಲಿದೆ.

ರಾಷ್ಟ್ರೀಯ ರೈತ ಹೋರಾಟದ ಮೂಂಚೂಣಿ ನಾಯಕರಾದ ಹರಿಯಾಣದ ದೀಪಕ ಲಂಬಾ, ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ನೂರಾರು ಮುಖಂಡರು, ಸಾವಿರಾರು ರೈತರು ಭಾಗಿಯಾಗಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ನರಗುಂದ ಪಟ್ಟಣದ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ಹುತಾತ್ಮ ಸ್ಮಾರಕಕ್ಕೆ ಗೌರವ ಸಮರ್ಪಿಸಿ, ರೈತ ಸಂಪರ್ಕ ಕೇಂದ್ರ ಬಳಿ ಬೃಹತ್ ಬಹಿರಂಗ ಸಭೆ ನಡೆಯಲಿದೆ.

ಇದನ್ನೂ ಓದಿ

ಕಾಂಗ್ರೆಸ್ ನಾಯಕರ ದೂರವಾಣಿ ಕದ್ದಾಲಿಕೆ ಪ್ರಕರಣ: ಜುಲೈ 22ರಂದು ಕಾಂಗ್ರೆಸ್ ಶಾಸಕರಿಂದ ರಾಜಭವನ ಮುತ್ತಿಗೆ

ಮುಂಜಾನೆ ಬೆಂಗಳೂರಿನಲ್ಲಿ ಶೂಟೌಟ್; ರೌಡಿಶೀಟರ್ ಬಬ್ಲಿ ಹತ್ಯೆ ಆರೋಪಿಗಳ ಮೇಲೆ ಗುಂಡು, ಇಬ್ಬರ ಬಂಧನ

(Farmers Martyr Day 2021 Gadag Farmers likely to protest today)

Click on your DTH Provider to Add TV9 Kannada