ಗದಗ: ಸರ್ಕಾರಿ ಬಸ್​-ಲಾರಿ ನಡುವೆ ಅಪಘಾತ; ಇಬ್ಬರು ದುರ್ಮರಣ

ಗದಗ ಜಿಲ್ಲೆಯ ಮು‌ಂಡರಗಿ (Mundaragi) ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಸರ್ಕಾರಿ ಬಸ್​ ಹಾಗೂ ಲಾರಿ ನಡುವೆ ಭೀಕರ ಅಪಘಾತ(Accident) ಸಂಭವಿಸಿದ್ದು, ತಮಿಳುನಾಡು ಮೂಲದ ಲಾರಿ ಚಾಲಕ ವಿನೋದ್ ಕುಮಾರ್ (38) ಹಾಗೂ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಕೊಪ್ಪಳದ ಭಾಗ್ಯನಗರದ ನಿವಸಿ ಗೀತಾ ಕಲಾಲ್ (40)  ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗದಗ: ಸರ್ಕಾರಿ ಬಸ್​-ಲಾರಿ ನಡುವೆ ಅಪಘಾತ; ಇಬ್ಬರು ದುರ್ಮರಣ
ಗದಗ ಬಸ್​ ಮತ್ತು ಲಾರಿ ಅಪಘಾತ
Edited By:

Updated on: Jan 24, 2024 | 5:47 PM

ಗದಗ, ಜ.24: ಸರ್ಕಾರಿ ಬಸ್​ ಹಾಗೂ ಲಾರಿ ನಡುವೆ ಭೀಕರ ಅಪಘಾತ(Accident) ಸಂಭವಿಸಿದ್ದು, ತಮಿಳುನಾಡು ಮೂಲದ ಲಾರಿ ಚಾಲಕ ವಿನೋದ್ ಕುಮಾರ್ (38) ಹಾಗೂ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಕೊಪ್ಪಳದ ಭಾಗ್ಯನಗರದ ನಿವಸಿ ಗೀತಾ ಕಲಾಲ್ (40)  ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮು‌ಂಡರಗಿ (Mundaragi) ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ನಡೆದಿದೆ. ನಾಳೆ ಹುಣ್ಣಿಮೆ ಇರುವ ಹಿನ್ನಲೆ ಸಹೋದರಿಯರು ಯಲ್ಲಮ್ಮನ ಗುಡ್ಡಕ್ಕೆ ಹೋಗುತ್ತಿದ್ದರು. ಇದೀಗ ಮನೆ ಬಿಟ್ಟು ಅರ್ಧಗಂಟೆಯಲ್ಲೇ ಸಾವಿನ ಸುದ್ದಿ ಬಂದಿದ್ದು, ಸಂಬಂಧಿಕರ ಗೋಳಾಟ ಮುಗಿಲುಮುಟ್ಟಿದೆ. ಇನ್ನುಳಿದಂತೆ ಬಸ್​ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸ್​- ಲಾರಿ ಮಧ್ಯೆ ಸಿಲುಕಿ ಬೈಕ್​ ಸವಾರ ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 44 ರ ಶೆಟ್​ ದಿನ್ನೆ ಬಳಿ ಬಸ್​ ಹಾಗೂ ಲಾರಿ ಮಧ್ಯೆ ಸಿಲುಕಿ ಬೈಕ್​ ಸವಾರ ಸ್ಥಳದಲ್ಲೇ ಮೃತರಾಗಿದ್ದಾರೆ. ಗೊಳ್ಳಚಿಕ್ಕನಹಳ್ಳಿ ಗ್ರಾಮದ ಸುಭಾಷ್ ಎಂಬಾತ ಮೃತ ರ್ದುದೈವಿ. 2 ವಾಹನಗಳ ಮಧ್ಯೆ ಓವರ್​ಟೇಕ್​ ಮಾಡಲು ಹೋಗಿ ಈ ದುರ್ಘಟನೆ ನಡೆದಿದ್ದು, ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಪಘಾತವೋ, ಕೊಲೆಯೋ!? ನಾಪತ್ತೆಯಾಗಿದ್ದ ವ್ಯಕ್ತಿ 11 ದಿನ ಬಳಿಕ ರಸ್ತೆ ಬದಿ ನೀರಿನ ಹೊಂಡದಲ್ಲಿ ಕಾರು ಸಮೇತ ಶವವಾಗಿ ಪತ್ತೆ

ಆಟೋಗೆ ಕಾರು ಡಿಕ್ಕಿ; ಇಬ್ಬರ ಸಾವು

ಬಾಗಲಕೋಟೆ: ಆಟೋಗೆ ಕಾರು ಡಿಕ್ಕಿಯಾಗಿ ಆಟೋದಲ್ಲಿದ್ದಇಬ್ಬರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ತಾಲೂಕಿನ ‌ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ. ಗದ್ದನಕೇರಿ ಗ್ರಾಮದ ವಿಜಯ ತೇಲಿ(62) ಹಾಗೂ ಒಂದು ವರ್ಷದ ಗೌರಿ ಭ,ಚವ್ಹಾಣ(1) ಮೃತ ರ್ದುದೈವಿಗಳು. ಈ ಕುರಿತು ಕಲಾದಗಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ