ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಪರದಾಡಿದ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದರು. ಗಾಯಾಳುವನ್ನು ಕೂಡಲೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ ರಾತ್ರಿ ಪಾಳಯದ ವೈದ್ಯ ಕೆಲಸಕ್ಕೆ ಬರುವುದು ತಡವಾದ ಹಿನ್ನೆಲೆಯಲ್ಲಿ ಗಾಯಾಳು ಪರದಾಡುವಂತಾಯಿತು.

ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಪರದಾಡಿದ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ
ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ
Follow us
| Updated By: ವಿವೇಕ ಬಿರಾದಾರ

Updated on: Jan 24, 2024 | 2:40 PM

ದೊಡ್ಡಬಳ್ಳಾಪುರ, ಜನವರಿ 24: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ರಾತ್ರಿ ಪಾಳಯದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಹೌದು ಮಂಗಳವಾರ (ಜ.23) ರಾತ್ರಿ ಅಪಘಾತದಲ್ಲಿ ಗಾಯಗೊಂಡು ಓರ್ವ ವ್ಯಕ್ತಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಗಾಯಾಳು ಬಂದ ಸಮಯದಲ್ಲಿ ಶಿಪ್ಟ್ ಬದಲಾವಣೆಯಾಗಿದ್ದು, ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇರಲಿಲ್ಲ. ಗಂಟೆ ಗಟ್ಟಲೆ ಕಾದರು ವೈದ್ಯರು ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಲು ಬರಲಿಲ್ಲ. ಇದರಿಂದ ಗಾಯೋಳು ನೋವಿನಿಂದ ತೊಂದರೆ ನರಳುವಂತಾಯಿತು. ಕಡೆಗೆ ಕೆಲ ಸಮಯದ ನಂತರ ಓರ್ವ ವೈದ್ಯ ಬಂದು ಚಿಕಿತ್ಸೆ ನೀಡಿದರು.

ಆದರೆ ರಾತ್ರಿ ಪಾಳಯದಲ್ಲಿ ಕೇವಲ ಒಬ್ಬ ವೈದ್ಯರು ಮಾತ್ರ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಇವರು ಒಬ್ಬರೇ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಚಿಕಿತ್ಸೆ ನೀಡಲು ತಡವಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಿ ಹೆಚ್ಚುವರಿ ಸಿಬ್ಬಂದಿ ನೇಮಿಸುವಂತೆ ಸ್ಥಳಿಯರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ: ಜಾಗೃತ ಅಧಿಕಾರಿಗಳಿಂದ ತರಾಟೆ, ​ಹಣ ವಾಪಸ್​ ನೀಡಿದ ವೈದ್ಯ, ನರ್ಸ್​

ಆಂಬ್ಯುಲೆನ್ಸ್​ಗಾಗಿ ಪರದಾಡಿದ ಬಾಣಂತಿ

ಯಾದಗಿರಿ: ಆಂಬ್ಯುಲೆನ್ಸ್​ಗಾಗಿ ಬಾಣಂತಿ ಪರದಾಡಿರುವ ಘಟನೆ ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ (ಜ.24) ರಾತ್ರಿ‌ ನಡೆದಿದೆ. ವಡಗೇರ ತಾಲೂಕಿನ ತುಮಕುರ ಗ್ರಾಮದ ಗರ್ಭಿಣಿ ಆಸ್ಪತ್ರೆಗೆ ದಾಖಲಾಗಿದ್ದು, ಐದು ದಿನಗಳ ಹಿಂದೆ ಮಗು ಜನಿಸಿದೆ. ಆದರೆ ಮಗು ಬಿಳಿ ರಕ್ತ ಕಣಗಳ ಕೊರತೆಯಿಂದ ಬಳಲುತ್ತಿದೆ.

ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಯ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಹೇಳಿದ್ದರು. ಹೀಗಾಗಿ ನವಜಾತ ಶಿಶುವನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು, ಆಂಬ್ಯುಲೆನ್ಸ್​ಗಾಗಿ ಬಾಣಂತಿ ಹಾಗೂ ಸಂಬಂಧಿಕರು ಗಂಟೆಗಟ್ಟಲೇ ಕಾದು ಕುಳಿತಿದ್ದಾರೆ. ಕೊನೆಗೂ ಶಿರವಾಳ ಗ್ರಾಮದಿಂದ ಆಂಬ್ಯುಲೆನ್ಸ್ ಆಗಮಿಸಿದ್ದು, ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ