ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ: ಜಾಗೃತ ಅಧಿಕಾರಿಗಳಿಂದ ತರಾಟೆ, ​ಹಣ ವಾಪಸ್​ ನೀಡಿದ ವೈದ್ಯ, ನರ್ಸ್​

ಪ್ರತ್ಯೆಕ ಎರಡು ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಲಂಚ ಸ್ವೀಕರಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನ ಆರೋಗ್ಯ ಸೌದದ ಮುಖ್ಯ ಜಾಗೃತ ಕೋಶದ ಅಧಿಕಾರಿಗಳು ವೈದ್ಯರಿಗೆ ಮತ್ತು ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದು, ಹಣ ವಾಪಸ್​​ ನೀಡಿದ್ದಾರೆ.

ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ: ಜಾಗೃತ ಅಧಿಕಾರಿಗಳಿಂದ ತರಾಟೆ, ​ಹಣ ವಾಪಸ್​ ನೀಡಿದ ವೈದ್ಯ, ನರ್ಸ್​
ನರ್ಸ್​ಗೆ ತರಾಟೆ
Follow us
| Updated By: ವಿವೇಕ ಬಿರಾದಾರ

Updated on:Dec 15, 2023 | 10:48 AM

ತುಮಕೂರು, ಡಿಸೆಂಬರ್​ 15: ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ (Madhugiri Government Hospital) ಲಂಚ (Bribe) ತಾಂಡವಾಡುತ್ತಿದೆ. ವೈದ್ಯರು (Doctors) ಹಾಗೂ ಸಿಬ್ಬಂದಿಗಳು ಆಸ್ಪತ್ರೆಗೆ ಬರುವ ಬಡರೋಗಿಯಿಂದ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೌದು ಪ್ರತ್ಯೆಕ ಎರಡು ಪ್ರಕರಣದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಲಂಚ ಸ್ವೀಕರಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನ ಆರೋಗ್ಯ ಸೌದದ ಮುಖ್ಯ ಜಾಗೃತ ಕೋಶದ ಅಧಿಕಾರಿಗಳು ವೈದ್ಯರಿಗೆ ಮತ್ತು ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದು, ಹಣ ವಾಪಸ್​​ ನೀಡಿದ್ದಾರೆ.

ಗರ್ಭಿಣಿಯಿಂದ ನರ್ಸ್ ಲಂಚ ವಾಪಸ್

ಕೊರಟಗೆರೆ ತಾಲೂಕಿನ ಅನುಸೂಯ ಎಂಬವರು ಹೆರಿಗೆಗೆ ಆಸ್ಪತ್ರೆಗೆ ಬಂದಿದ್ದರು. ಗರ್ಭಿಣಿ ಕಡೆಯಿಂದ ನರ್ಸ್​​ ಐದು ಸಾವಿರ ರೂ. ಲಂಪಡೆದಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಜಾಗೃತ ಅಧಿಕಾರಿಗಳು ಅನಸೂಯ ಅವರನ್ನು ಪೋನ್​ ಮೂಲಕ ಸಂಪರ್ಕ ಮಾಡಿದ್ದರು. ನರ್ಸ್​​​ಗೆ ಐದು ಸಾವಿರ ನೀಡಿರುವುದಾಗಿ ಅನುಸೂಯ ಅಧಿಕಾರಿಗಳಿಗೆ ತಿಳಿಸಿದರು. ಕೂಡಲೆ ಅಧಿಕಾರಿಗಳು ನರ್ಸ್​​ ಅನ್ನು ತರಾಟೆಗೆ ತೆಗೆದುಕೊಂಡು, ಗರ್ಭಿಣಿಗೆ ಹಣ ವಾಪಸ್​ ನೀಡುವಂತೆ ಮಾಡಿದರು.

ಇದನ್ನೂ ಓದಿ: ಗದಗ ಜಿಲ್ಲಾ ಪಂಚಾಯತ್: ಸಿಬ್ಬಂದಿ ನೇಮಕಾತಿಗೆ ವಿಳಂಬ ಧೋರಣೆ, ಅಧಿಕಾರಿಯ ಲಂಚಾವತಾರ ಕಾರಣ?

1500 ರೂ. ಲಂಚ ಪಡೆದಿದ್ದ ವೈದ್ಯ

ಮತ್ತೊಂದು ಪ್ರಕರಣದಲ್ಲಿ ಕಣ್ಣಿನ ವೈಧ್ಯ ಡಾ. ಗಂಗಾಧರ ಓರ್ವ ವಿದ್ಯಾರ್ಥಿನಿಯಿಂದ 1500 ರೂ. ಲಂಚ ಪಡೆದಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ಜಾಗೃದ ಅಧಿಕಾರಿಗಳಿಗೆ ದೂರು ನೀಡಿದ್ದಳು. ಕೂಡಲೆ ಅಧಿಕಾರಿಗಳು ವೈದ್ಯನನ್ನು ತರಾಟೆಗೆ ತೆಗೆದುಕೊಂಡು ಹಣ ವಾವಸ್​ ನೀಡುವಂತೆ ಸೂಚಿಸಿದರು. ಇನ್ನು ವೈದ್ಯರ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ‌‌ ಕೈಗೊಳ್ಳಲು ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:48 am, Fri, 15 December 23

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ