ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ: ಬಡ ರೋಗಿಗಳ ಪರದಾಟ

Bengaluru Government Hispitals: ಕಳೆದ ಆರು ತಿಂಗಳಿನಿಂದ ಸರ್ಕಾರ ಹೊಸದಾಗಿ ಔಷಧಿಗಳ ಟೆಂಡರ್ ಕರೆದಿಲ್ಲ ಹಿಂದಿನ ಟೆಂಡರ್ ಪೂರೈಕೆಯ ಅವಧಿ ಮುಗದಿದ್ದು ಹೊಸ ಟೆಂಡರ್ ಕರೆಯಲು ತಡಮಾಡಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ತಾತ್ಕಲಿಕವಾಗಿ ಔಷಧಗಳ ಖರೀದಿಗೆ ಅವಕಾಶ ನೀಡಿದರೂ ಸಾಕಷ್ಟು ಪ್ರಮಾಣದಲ್ಲಿ ಔಷಧಗಳಿಲ್ಲದೆ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ: ಬಡ ರೋಗಿಗಳ ಪರದಾಟ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: Ganapathi Sharma

Updated on: Dec 15, 2023 | 7:02 AM

ಬೆಂಗಳೂರು, ಡಿಸೆಂಬರ್ 15: ರಾಜ್ಯ ರಾಜಧಾನಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ (Bengaluru Government Hispitals) ಔಷಧ ಕೊರತೆ (Medicine Shortage) ಕಂಡುಬಂದಿರುವುದು ಬಡ ರೋಗಿಗಳ ಸಂಕಷ್ಟಕ್ಕೆ ಕಾರಣವಾಗಿದೆ. ‘ಇಲ್ಲಿ ಔಷಧ ಸಿಗುತ್ತಿಲ್ಲ, ನಾವು ಬಡವರು ಮೆಡಿಕಲ್​ಗೆ ಹೋಗಿ ಖರೀದಿಸುವಷ್ಟು ಹಣ ಇಲ್ಲ’ ಎಂಬ ಗೋಳು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಕೊಳ್ಳಲು ಬರುವ ಪ್ರತಿಯೊಬ್ಬ ಬಡ ರೋಗಿಯ ಬಾಯಲ್ಲಿ ಕೇಳಿ ಬರುತ್ತಿದೆ. ಐದು ಗ್ಯಾರಂಟಿಗಳನ್ನು ನೀಡಿರುವ ಸರ್ಕಾರ ಪಂಚ್ ಬಡ ರೋಗಿಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿಲ್ಲ ಎಂಬ ಕೂಗು ಸಾರ್ವಜನಿಕರಿಂದ ಕೇಳಿಬಂದಿದೆ.

ವೃದ್ಧರು, ಮಕ್ಕಳು, ಬಡ ರೋಗಿಗಳು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಗತ್ಯ ಔಷಧ ಪಡೆಯಲು ಪರದಾಡುತ್ತಿದ್ದಾರೆ. ಅಗತ್ಯ ಔಷಧಗಳು ಇಲ್ಲದೆ ಜನರು ಪರದಾಡುವಂತಾಗಿದೆ. ಒಂದು ಔಷಧ ನೀಡಿದ್ರೆ ಇನ್ನೊಂದು ಔಷಧ ನೀಡುತ್ತಿಲ್ಲ, ನಮ್ಮ ಹತ್ರ ಹಣ ಇಲ್ಲ, ಮೆಡಿಕಲ್ ಶಾಪ್​​ನಲ್ಲಿ ಖರೀದಿಸಿ ಎನ್ನುತ್ತಿದ್ದಾರೆ ಎಂದು ರೋಗಿಗಳು ಅಲವತ್ತುಕೊಂಡಿದ್ದಾರೆ.

ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಸೇರಿ ಬಹುತೇಕ ಆಸ್ಪತ್ರೆಗಳಲ್ಲಿ ಔಷಧ ಸ್ಟಾಕ್ ಇಲ್ಲದ ಸನ್ನಿವೇಶ ನಿರ್ಮಾಣವಾಗಿದೆ. ಹಣ ಕೊಟ್ಟು ಔಷಧಿ ಖರೀದಿಸಲಾಗದೇ, ಸಪ್ಪೆ ಮೋರೆ ಹಾಕಿಕೊಂಡು ಹೋಗುವ ಸ್ಥಿತಿ ಬಡ ರೋಗಿಗಳಿಗೆ ಎದುರಾಗಿದೆ.

ಟೆಂಡರ್ ಕರೆಯದ ಸರ್ಕಾರ

ಕಳೆದ ಆರು ತಿಂಗಳಿನಿಂದ ಸರ್ಕಾರ ಹೊಸದಾಗಿ ಔಷಧಿಗಳ ಟೆಂಡರ್ ಕರೆದಿಲ್ಲ ಹಿಂದಿನ ಟೆಂಡರ್ ಪೂರೈಕೆಯ ಅವಧಿ ಮುಗದಿದ್ದು ಹೊಸ ಟೆಂಡರ್ ಕರೆಯಲು ತಡಮಾಡಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ತಾತ್ಕಲಿಕವಾಗಿ ಔಷಧಗಳ ಖರೀದಿಗೆ ಅವಕಾಶ ನೀಡಿದರೂ ಸಾಕಷ್ಟು ಪ್ರಮಾಣದಲ್ಲಿ ಔಷಧಗಳಿಲ್ಲದೆ ಸಂಕಷ್ಟ ಎದುರಾಗಿದೆ.

ಆಸ್ಪತ್ರೆ ಸೇರಿದಂತೆ ಪಾರ್ಮಸಿ ಹಾಗೂ ಜನೌಷಧ ಕೇಂದ್ರದಲ್ಲೂ ಕೆಲವು ಔಷಧಗಳು ಇಲ್ಲವೆಂದು ಹೊರಗಡೆಗೆ ಬರೆದು ಕಳುಹಿಸಲಾಗುತ್ತಿದೆ. ಔಷಧಕ್ಕಾಗಿ ಬಡ ರೋಗಿಗಳು ಪರದಾಡುತ್ತಿದ್ದಾರೆ.

ಯಾವೆಲ್ಲ ಔಷಧ ಕೊರತೆ?

ಬಿ ಕಾಂಪ್ಲೇಕ್ಸ್, ವಿಡಿಮಿಟ್ – ಡಿ, ರ್ಯಾಟೆಕ್, ಕಾಫ್ ಸಿರಪ್, ಅಮೊಕ್ಸಿಕ್ಲಾವ್ -625, 228.5 ಸಿರಪ್, ಅಜಿಟ್ರೋಮೈಸಿನ್ 500 ಎಂ.ಜಿ ಟ್ಯಾಬ್, ಸೈಪಿಕ್ಸಿಮ್ 200 ಎಂ.ಜಿ ಟ್ಯಾಬ್, ಮಲ್ಟಿವಿಟಮಿನ್ ಸಿರಪ್, ಸಿಪಿ.ಎಂ ಸಿರಪ್, ಸಿಪಿಕ್ಸಿಮ್ ಸಿರಪ್ 50 ಎಂ.ಜಿ, ಕ್ಯಾಲ್ಸಿಯಂ ಸಿರಪ್, ಮಲ್ಟಿವಿಟಮಿನ್, ಡೈಕ್ಲೊಪೇನಾಕ್ ಜೆಲ್, ಟ್ಯಾಮಸೋಸುಲಿನ್ ಟ್ಯಾಬ್ -4 ಎಂ.ಜಿ, ಸಿಟ್ರಿಜಿನ್ ಸಿರಪ್, ಸಿಪಿಕ್ಸಿಮ್ ಸಿ.ವಿ 200 ಟ್ಯಾಬ್, ಡೂಲಾಕ್ಸಿಟಿನ್ 20 ಎಂ.ಜಿ ಟ್ಯಾಬ್ ಕ್ಯಾಲಸಿಯಂ ಸೇರಿದಂತೆ ವಿವಿಧ ಔಷಧಿಗಳು ದೊರೆಯುತ್ತಿಲ್ಲ.

ಇದನ್ನೂ ಓದಿ: ನೆಚ್ಚಿನ ಬೂಟುಗಳು ಸಹ ನಿಮಗೆ ಅನಾರೋಗ್ಯ ತರುತ್ತದೆ, ಎಚ್ಚರವಿರಲಿ

ಟೆಂಡರ್ ಲೇಟ್ ಹಿನ್ನಲೆ ಸಾಕಷ್ಟು ಜನ ಔಷಧ ಸಿಗದೆ ಪರದಾಟ ಎದುರಿಸುತ್ತಿದ್ದಾರೆ. ಆದ್ರೆ ಕೆಸಿ ಜನರಲ್ ಆಸ್ಪತ್ರೆಯ ಆರ್​​ಎಂಒ ಮಾತ್ರ ಎಲ್ಲ ಔಷಧ ಇದೆ ಸಮಸ್ಯೆ ಇಲ್ಲ ಎನ್ನುತ್ತಿದ್ದಾರೆ.

ಡೆಂಗ್ಯೂ ಹೆಚ್ಚಳ ಪರಿಣಾಮ ನೂರಾರು ಮಂದಿ ಆಸ್ಪತ್ರೆಗೆ

ಸದ್ಯ ನಗರದಲ್ಲಿ ಡೆಂಗ್ಯೂ ಕೇಸ್ ಕೂಡ ಹೆಚ್ಚಳ ಕಂಡಿದೆ. ನಿತ್ಯ ನೂರಾರೂ ರೋಗಿಗಳೂ ಓಪಿಡಿಗೆ ಬರ್ತಿದ್ದಾರೆ. ಅಗತ್ಯ ಔಷಧಗಳ ಸ್ಟಾಕ್ ಈ ಹೊತ್ತಿನಲ್ಲಿ ಅವಶ್ಯವಿದೆ. ಆದರೆ ಔಷಧ ಪೂರೈಕೆ ಟೆಂಡರ್ ಮುಗಿದಿದ್ದು, ಹೊಸ ಟೆಂಡರ್ ಕರೆಯಬೇಕಿದೆ. ಹೊಸ ಟೆಂಡರ್ ಕರೆಯಲು ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ದುರಂತ ಎಂದರೆ ಹಾವು ಕಡಿತ, ನಾಯಿ ಕಡಿತದಂತಹ ಪ್ರಕರಣಗಳಿಗೆ ಅಗತ್ಯ ಔಷಧಗಳು ಸಿಗದೇ ಪರದಾಡುವ ಸ್ಥಿತಿ ಸದ್ಯ ನಿರ್ಮಾಣಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್