ಅಪಘಾತವೋ, ಕೊಲೆಯೋ!? ನಾಪತ್ತೆಯಾಗಿದ್ದ ವ್ಯಕ್ತಿ 11 ದಿನ ಬಳಿಕ ರಸ್ತೆ ಬದಿ ನೀರಿನ ಹೊಂಡದಲ್ಲಿ ಕಾರು ಸಮೇತ ಶವವಾಗಿ ಪತ್ತೆ

ಅದೆನೇ ಇರಲಿ ಹೊಂಡದಲ್ಲಿ ಕಾರಿನ ಸಮೇತ ಅಮೃತ್ ಮೃತದೇಹ ಪತ್ತೆಯಾಗಿರೋ ಪ್ರಕರಣದ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಅಪಘಾತವಾಗಿ ಕಾರು ಹೊಂಡದಲ್ಲಿ ಬಿದ್ದಿದೆಯಾ ಅಥವಾ ಯಾರಾದರೂ ಕೊಲೆ ಮಾಡಿ ಕಾರಿನ ಸಮೇತ ಮೃತದೇಹವನ್ನ ಹೊಂಡದಲ್ಲಿ ಬಿಸಾಕಿದ್ದಾರಾ ಅನ್ನೊದು ತನಿಖೆಯಿಂದ ತಿಳಿಯಲಿದೆ.

ಅಪಘಾತವೋ, ಕೊಲೆಯೋ!? ನಾಪತ್ತೆಯಾಗಿದ್ದ ವ್ಯಕ್ತಿ 11 ದಿನ ಬಳಿಕ ರಸ್ತೆ ಬದಿ ನೀರಿನ ಹೊಂಡದಲ್ಲಿ ಕಾರು ಸಮೇತ ಶವವಾಗಿ ಪತ್ತೆ
ನಾಪತ್ತೆಯಾಗಿದ್ದ ವ್ಯಕ್ತಿ ರಸ್ತೆ ಬದಿ ನೀರಿನ ಹೊಂಡದಲ್ಲಿ ಕಾರು ಸಮೇತ ಶವವಾಗಿ ಪತ್ತೆ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಸಾಧು ಶ್ರೀನಾಥ್​

Updated on:Jan 24, 2024 | 12:37 PM

ಆ ವ್ಯಕ್ತಿ ತಾನಾಯಿತು ತನ್ನ ಕೆಲಸವಾಯಿತು ಅಂತಾ ಜೀವನ ಸಾಗಿಸುತ್ತಿದ್ದನು.. ಆದರೆ ಅದೇನಾಯ್ತೋ ಗೊತ್ತಿಲ್ಲ, ಜನವರಿ 11 ರಂದು ಕಾರಿನ ಸಮೇತ ನಾಪತ್ತೆಯಾಗಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ರಸ್ತೆ  ಬದಿಯ ನೀರಿನ ಹೊಂಡದಲ್ಲಿ ಬಿದ್ದ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ. ಸದ್ಯ ಮೃತದೇಹ ಹೊರಗಡೆ ತೆಗೆಯಲಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಮುಳುಗಡೆಯಾಗಿರೋ ಕಾರು….. ಕಾರಿನಿಂದ ಹೊರ ತೆಗೆಯುತ್ತಿರೋ ಮೃತದೇಹ.. ಮತ್ತೊಂದೆಡೆ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ.. ಅಷ್ಟಕ್ಕೂ ಈ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ತಾಲೂಕಿನ ಫಿರೋಜಬಾದ್ ಬಳಿ..

ಈ ಫೋಟೊದಲ್ಲಿ ಕಾಣ್ತಾಯಿರೋ 40 ವರ್ಷದ ವ್ಯಕ್ತಿಯ ಹೆಸರು ಅಮೃತ್.. ಕಲಬುರಗಿ ‌ನಗರದ ಸುಂದರ ನಗರ ಬಡಾವಣೆಯ ನಿವಾಸಿಯಾದ ಅಮೃತ್, ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಜನವರಿ 11 ರಂದು ಕಾರಿನ ಸಮೇತ ನಾಪತ್ತೆಯಾಗಿದ್ದ. ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ನಗರದ ಬ್ರಹ್ಮಪುರ ಠಾಣೆಯಲ್ಲಿ ಅಮೃತ್ ನಾಪತ್ತೆಯಾಗಿರೋ ಬಗ್ಗೆ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡಿದ್ದ ಪೊಲೀಸರು ಅಮೃತ್‌ಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆದರೆ ನಿನ್ನೆ ಜ. 23 ಫಿರೋಜಬಾದ್ ಗ್ರಾಮದ ಬಳಿಯ ಹೊಂಡದಲ್ಲಿ ಕಾರು ಸಮೇತ ಮೃತದೇಹ ಪತ್ತೆಯಾಗಿದೆ. ಹೀಗಾಗೇ ಅಮೃತ್ ಸಾವಿನ ಸುತ್ತ ನೂರೆಂಟು ಅನುಮಾನದ ಹುತ್ತ ಬೆಳೆದಿದ್ದು, ನಾಪತ್ತೆಯಾಗಿದ್ದ ಅಮೃತ್ ಕೊಲೆಯಾದ್ರಾ.. ಅಥವಾ ಅಪಘಾತದಿಂದ ಮೃತಪಟ್ಟನಾ ಎನ್ನೋ ಬಗ್ಗೆ ಪೊಲೀಸರು ತನಿಖೆ ಮಾಡ್ತಿದ್ದಾರೆ.

ಜನವರಿ 11 ರಂದು ಅಮೃತ್ ನಾಪತ್ತೆಯಾದ ನಂತರ ಆತ ಕಾರಿನಲ್ಲಿ ಎಲ್ಲಿಗೆ ಹೊರಟಿದ್ದರು. ಆತನ ಜೊತೆಗೆ ಇನ್ನೂ ಯಾರು ಯಾರು ಇದ್ದರು ಅನ್ನೊದೆಲ್ಲ ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ ಅಮೃತ್‌ ನಿಗೂಢವಾಗಿ ಸಾವನ್ನಪ್ಪಿದ್ದರ ಹಿಂದೆ ಅನುಮಾನಗಳು ಕಾಡಲಾಂಭಿಸಿವೆ.

Also Read: ರಾಜಸ್ಥಾನದ ಯುವತಿ- ಬಾಗಲಕೋಟೆ ಯುವಕನ ಮೂಕ ಪ್ರೀತಿ, ಯುವತಿಯ ಎಳೆದೊಯ್ದ ಸಹೋದರರು: ಪ್ರೇಮಪಕ್ಷಿಗಳ ಮೂಕರೋದನೆ

ಅಷ್ಟಕ್ಕೂ ಅಮೃತ್‌ನ್ನ ಯಾರಾದರೂ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಮೃತದೇಹ ಸಮೇತ ಕಾರನ್ನ ಹೊಂಡದಲ್ಲಿ ಬಿಸಾಕಿದ್ದಾರಾ ಅನ್ನುವ ಶಂಕೆ ಕೂಡ ವ್ಯಕ್ತವಾಗಿದೆ. ಇಂದು ಬೆಳಗ್ಗೆ ಹೊಂಡದಲ್ಲಿ ಕಾರು ಬಿದ್ದಿದ್ದನ್ನ ಕುರಿಗಾಹಿಯೋರ್ವ ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ.

ತಕ್ಷಣ ಟ್ರಾಫಿಕ್ 1 ಪೊಲೀಸರು ಹಾಗೂ ಫರಹತ್ತಬಾದ್ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಹೊಂಡದಲ್ಲಿ ಬಿದ್ದಿದ್ದ ಕಾರನ್ನ ಮೇಲಕ್ಕೆ ಎತ್ತಿ ಮೃತದೇಹವನ್ನ ಜಿಲ್ಲಾಸ್ಪತ್ರೆ ಶವಗಾರಕ್ಕೆ ರವಾನಿಸಿದ್ದಾರೆ. ಫರಹತ್ತಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Wed, 24 January 24