ಮಹಿಳೆ ಆಟೋದಲ್ಲಿ ಬಿಟ್ಟುಹೋಗಿದ್ದ ಚಿನ್ನಾಭರಣ ವಾಪಸ್ ಮಾಡಿ, ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ವೀರಣ್ಣ

| Updated By: ಸಾಧು ಶ್ರೀನಾಥ್​

Updated on: Aug 26, 2021 | 12:35 PM

ಗದಗದ ನರಸಾಪುರದಲ್ಲಿ ಆಟೋ ಹತ್ತಿದ್ದ ವೀಣಾ ಎಂಬುವವರು ಗಂಜಿ ಬಸವೇಶ್ವರ ಸರ್ಕಲ್‌ ಬಳಿ ಇಳಿದು ಹೋಗಿದ್ದರು. ಆದರೆ ಚಿನ್ನವಿದ್ದ ಬ್ಯಾಗ್‌ ಆಟೋದಲ್ಲೇ ಮರೆತುಹೋಗಿದ್ದರು ವೀಣಾ. ಆಟೋ ಚಾಲಕ ವೀರಣ್ಣ ಅವರೂ ಸಹ ಆಟೋವನ್ನು ಮುಂದೆ ಓಡಿಸಿಕೊಂಡು ಹೋಗಿದ್ದರು.

ಮಹಿಳೆ ಆಟೋದಲ್ಲಿ ಬಿಟ್ಟುಹೋಗಿದ್ದ ಚಿನ್ನಾಭರಣ ವಾಪಸ್ ಮಾಡಿ, ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ವೀರಣ್ಣ
ಮಹಿಳೆ ಆಟೋದಲ್ಲಿ ಬಿಟ್ಟುಹೋಗಿದ್ದ ಚಿನ್ನಾಭರಣ ವಾಪಸ್ ಮಾಡಿ, ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ವೀರಣ್ಣ
Follow us on

ಗದಗ: ಮಹಿಳೆ ಆಟೋದಲ್ಲಿ ಬಿಟ್ಟುಹೋಗಿದ್ದ ಚಿನ್ನಾಭರಣ ವಾಪಸ್ ಮಾಡಿ, ಆಟೋ ಚಾಲಕ ವೀರಣ್ಣ ಎಂಬುವವರು ಪ್ರಾಮಾಣಿಕತೆ ಮೆರೆದಿದ್ದಾರೆ. ಗದಗದ ಆಟೋ ಚಾಲಕ ವೀರಣ್ಣ ಯಾವಗಲ್‌ ಪ್ರಾಮಾಣಿಕತೆಗೆ ಮೆಚ್ಚುಗೆಯಾದವರು. ಅಂದಹಾಗೆ ಆಟೋದಲ್ಲಿ ಬಿಟ್ಟು ಹೋಗಿದ್ದ ಆ ಬ್ಯಾಗ್​ನಲ್ಲಿ 8 ತೊಲೆ ಬಂಗಾರವಿತ್ತು.

ಗದಗದ ನರಸಾಪುರದಲ್ಲಿ ಆಟೋ ಹತ್ತಿದ್ದ ವೀಣಾ ಎಂಬುವವರು ಗಂಜಿ ಬಸವೇಶ್ವರ ಸರ್ಕಲ್‌ ಬಳಿ ಇಳಿದು ಹೋಗಿದ್ದರು. ಆದರೆ ಚಿನ್ನವಿದ್ದ ಬ್ಯಾಗ್‌ ಆಟೋದಲ್ಲೇ ಮರೆತುಹೋಗಿದ್ದರು ವೀಣಾ. ಆಟೋ ಚಾಲಕ ವೀರಣ್ಣ ಅವರೂ ಸಹ ಆಟೋವನ್ನು ಮುಂದೆ ಓಡಿಸಿಕೊಂಡು ಹೋಗಿದ್ದರು. ಆದರೆ ಆಟೋ ಚಾಲಕ ವೀರಣ್ಣ ಅವರು ಹಿಂದಿನ ಸೀಟಿನ ಮೆಲಿದ್ದ ಬ್ಯಾಗ್​​ ಗಮನಿಸದೇ ಬೇರೆ ಪ್ರಯಾಣಿಕರನ್ನ ಹತ್ತಿಸಿಕೊಂಡು ಮುಂದೆ ಸಾಗಿದ್ದಾರೆ. ಇದಾದ ಸ್ವಲ್ಪ ಹೊತ್ತಿಗೆ ಮಹಿಳೆಗೆ ತನ್ನ ಚಿನ್ನದ ಬ್ಯಾಗ್​ ಆಟೋದಲ್ಲಿಯೇ ಹೋಗಿದೆ ಅಂತಾ ನೆನಪಾಗಿದೆ.

ಸುಮಾರು ಹೊತ್ತು ಆಟೋ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಸಿಕ್ಕಿಲ್ಲ. ಕೊನೆಗೆ ಎಲ್ಲಾ ಆಟೋಗಳ ಚಾಲಕರಿಗೆ ಮಾಹಿತಿ ನೀಡಿದ್ದಾರೆ. ಅದೇ ಆಟೋವನ್ನ ಹುಡುಕಾಡಿದ್ದಾರೆ. ಆದರೆ ಅದು ಸಿಕ್ಕಿರಲಿಲ್ಲ. ಆದ್ರೆ ಸಂಜೆಯ ಹೊತ್ತಿಗೆ ನಗರದ ಶಹರ್ ಪೊಲೀಸ್ ಠಾಣೆಯಿಂದ ಕರೆಯೊಂದು ಬಂದಿತ್ತು.. ನಿಮ್ಮ ಬ್ಯಾಗ್​ ಸಿಕ್ಕಿದೆ ಬನ್ನಿ ಅಂತಾ. ಆಗ ವೀಣಾ ಅವರಿಗೆ ಮರಳಿ ಜೀವ ಬಂದಂತಾಗಿದೆ.

ಗದಗ ನಗರಕ್ಕೆ ಮನೆ ವಾಸ್ತು ಶಾಂತಿ ಕಾರ್ಯಕ್ರಮಕ್ಕೆ ಬಂದಿದ್ದೆ. ಆಟೋ ಚಿನ್ನದ ಬ್ಯಾಗ್ ಕಳೆದುಕೊಂಡು ಕಂಗಾಲಾಗಿದ್ದೆ. ಸಾಕಷ್ಟು ಆಟೋಗಳು ಹುಡುಕಿದ್ದೆ, ಸಿಕ್ಕಿರಲಿಲ್ಲ. ಆಮೇಲೆ ಪೊಲೀಸ್ ಠಾಣೆಯಿಂದ ನಿಮ್ಮ ಚಿನ್ನ ಸಿಕ್ಕಿದೆ ಅಂತಾ ಕರೆ ಬಂತು. ಹೋದ ಜೀವ ಮರಳಿ ಬಂದಂತಾಯ್ತು. ಭಾಳ ಖುಷಿಯಾಗಿದೆ ಅಂತ ಚಿನ್ನ ಕಳೆದುಕೊಂಡ ವೀಣಾ ಕೊಣ್ಣೂರು ಸಂತಸ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಈ ಚಿನ್ನ ಮರುಕಳಿಸಿದ ಆಟೋ ಚಾಲಕ ವೀರಣ್ಣ ಯಾವಗಲ್ ಅವರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಯಾಕೆಂದರೆ ಮಹಿಳೆ ತಾನು ಯಾವ ಆಟೋ ಹತ್ತಿದ್ದೆ ಅನ್ನೋದನ್ನ ಸರಿಯಾಗಿ ಗಮನಿಸಿಲ್ಲ. ಚಾಲಕನನ್ನೂ ಗಮನಿಸಿಲ್ಲ. ಕೇವಲ ಆಟೋದಲ್ಲಿ ಮಾತ್ರ ಬ್ಯಾಗ್​ ಬಿಟ್ಟೋಗಿದೀನಿ ಅನ್ನೋದಷ್ಟೆ ಆಕೆಗೆ ಗೊತ್ತಿತ್ತು.

ಗದಗನಲ್ಲಿ ಸುಮಾರು 2 ಸಾವಿರ ಆಟೋ ಚಾಲಕರಿದ್ದಾರೆ. ಅಂತಹುದರಲ್ಲಿ ಯಾವ ಆಟೋ ಚಾಲಕ ಅಂತಾ, ಹೇಗೆ ಗುರುತಿಸೋದು? ಅನ್ನೋದೆ ದೊಡ್ಡ ತಲೆನೋವಾಗಿತ್ತು. ಕೊನೆಗೆ ನನ್ನ ಚಿನ್ನ ನನ್ನ ಕೈಬಿಟ್ಟಿದೆ ಅಂತಾನೂ ಭಾವಿಸಿದ್ದೆ. ಆದರೆ ಇತ್ತ ಚಾಲಕ ಇನ್ನೇನು ಸಂಜೆಯಾಯ್ತು ಮನೆಗೆ ಹೋಗಿಬಿಡೋಣ ಅಂತಾ ಅಂದುಕೊಂಡು ಹಿಂದೆ ತಿರುಗಿ ನೋಡಿದಾಗ ಯಾವುದೋ ಒಂದು ಕಪ್ಪನೆಯ ಬ್ಯಾಗ್ ಕಂಡಿದೆ.  ಅದು ಯಾರದಾಗಿರಬಹುದು ಅಂತಾ ತನ್ನಲ್ಲೇ ಲೆಕ್ಕ ಹಾಕಿಕೊಂಡಿದ್ದಾರೆ. ಆದರೆ ಆತನಿಗೂ ಯಾರದೂ ಅಂತಾ ಗೊತ್ತಾಗಿಲ್ಲ. ಕೊನೆಗೆ ದಾರಿ ಹಿಡಿದಿದ್ದು ಪೊಲೀಸರ ಕಡೆಗೆ, ಕೊನೆಗೆ ಪೊಲೀಸ್ ಠಾಣೆಗೆ ಬಂದು ಆ ಬ್ಯಾಗ್ ಒಪ್ಪಿಸಿದ್ದಾರೆ.

ಇದು ನನ್ನ ತಂಗಿಗೆ ಕೊಟ್ಟ ರಕ್ಷಾ ಬಂಧನದ ಉಡುಗೊರೆ ಅಂತಾ ಆಟೋ ಚಾಲಕ ವೀರಣ್ಣ ಯಾವಗಲ್ ಸಂತಸ ವ್ಯಕ್ತಪಡಿಸಿದ್ದಾರೆ. ಇಂತಿಪ್ಪ ಪ್ರಾಮಾಣಿಕ ವೀರಣ್ಣ ಯಾವಗಲ್ ಅವರಿಗೆ ಡಿವೈಎಸ್ಪಿ ಶಿವಾನಂದ ಶಾಲು ಹೊದಿಸಿ, ಸನ್ಮಾನ ಮಾಡಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.  ವೀರಣ್ಣ ಅವರಿಗೆ ಇದು ಎರಡನೇ ಘಟನೆಯಂತೆ. ಹಿಂದೆ ಇದೇ ರೀತಿ ಪ್ರಾಮಾಣಿಕತೆ ಮೆರೆದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

Honesty is the best policy ಎನ್ನುವ ಪ್ರಾಮಾಣಿಕ ಆಟೋ ಚಾಲಕ ವೀರಣ್ಣ ಯಾವಗಲ್‌

ರೈಲಿನಲ್ಲಿ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣ ವಾಪಸ್; ರೈಲ್ವೆ ಪೊಲೀಸರಿಂದ ಪ್ರಶಂಸನೀಯ ಕಾರ್ಯ

ಬೆಂಗಳೂರಿನಲ್ಲಿ ಕಳುವಾಗಿದ್ದ 40 ಕೆ.ಜಿ. ಚಿನ್ನಾಭರಣವನ್ನು ಮಾಲೀಕರಿಗೆ ವಾಪಸ್ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
(gadag auto rickshaw driver honesty returns gold ornaments to woman passenger)

Published On - 8:25 am, Thu, 26 August 21