ಬೆಂಗಳೂರಿನಲ್ಲಿ ಕಳುವಾಗಿದ್ದ 40 ಕೆ.ಜಿ. ಚಿನ್ನಾಭರಣವನ್ನು ಮಾಲೀಕರಿಗೆ ವಾಪಸ್ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ನನ್ನ ಪೊಲೀಸ್ ಇಲಾಖೆ ನನ್ನ ಹೆಮ್ಮೆ. ಪೊಲೀಸರ ಕೆಲಸ ನೋಡಿ ನನ್ನ ಹೃದಯ ತುಂಬಿ ಬಂದಿದೆ. ಕಾರಣ ಅಷ್ಟೊಂದು ಕೇಸ್​ಗಳನ್ನು ಭೇದಿಸಿದ್ದಾರೆ. ಸೈಬರ್ ಕ್ರೈಂ ಸ್ಟೇಷನ್​ಗೂ ನಾನು ಭೇಟಿ ಕೊಟ್ಟಿದ್ದೇನೆ.

ಬೆಂಗಳೂರಿನಲ್ಲಿ ಕಳುವಾಗಿದ್ದ 40 ಕೆ.ಜಿ. ಚಿನ್ನಾಭರಣವನ್ನು ಮಾಲೀಕರಿಗೆ ವಾಪಸ್ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಚಿನ್ನಾಭರಣವನ್ನು ಮಾಲೀಕರಿಗೆ ವಾಪಸ್ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ
Follow us
TV9 Web
| Updated By: sandhya thejappa

Updated on: Aug 18, 2021 | 11:25 AM

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕಳುವಾಗಿದ್ದ 40 ಕೆ.ಜಿ.ಯಷ್ಟು ಚಿನ್ನಾಭರಣವನ್ನು ಮಾಲೀಕರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಾಪಸ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಸಾವಿರಾರು ಕೆ.ಜಿ ಗಾಂಜಾ, ಡ್ರಗ್ಸ್​ನ ನಗರ ಪೊಲೀಸರು ಪ್ರದರ್ಶನ ಮಾಡಿದರು. ಜೊತೆಗೆ ರಾಬರಿ, ಕೊಲೆ, ಕಳ್ಳತನ ಕೇಸ್​ನಲ್ಲಿ ವಶಪಡಿಸಿಕೊಂಡಿದ್ದ ಮಾಲುಗಳು ಮತ್ತು ಕೋಟ್ಯಂತರ ಬೆಲೆಯ ಅಂಬರ್ ಗ್ರೀಸ್​ನ ಪ್ರದರ್ಶನ ಮಾಡಿದರು. ಈ ಕಾರ್ಯಕ್ರಮದಲ್ಲಿ ಚಿನ್ನಾಭರಣವನ್ನು ಮಾಲೀಕರಿಗೆ ಗೃಹ ಸಚಿವರು ವಾಪಸ್ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಆರಗ ಜ್ಞಾನೇಂದ್ರ, ನನ್ನ ಪೊಲೀಸ್ ಇಲಾಖೆ ನನ್ನ ಹೆಮ್ಮೆ. ಪೊಲೀಸರ ಕೆಲಸ ನೋಡಿ ನನ್ನ ಹೃದಯ ತುಂಬಿ ಬಂದಿದೆ. ಕಾರಣ ಅಷ್ಟೊಂದು ಕೇಸ್​ಗಳನ್ನು ಭೇದಿಸಿದ್ದಾರೆ. ಸೈಬರ್ ಕ್ರೈಂ ಸ್ಟೇಷನ್​ಗೂ ನಾನು ಭೇಟಿ ಕೊಟ್ಟಿದ್ದೇನೆ. ಸೈಬರ್ ಕ್ರೈಂ ಪ್ರಕರಣನ್ನು ಭೇದಿಸುವುದು ನೋಡಿದರೆ ಖುಷಿ ಆನಿಸುತ್ತೆ. ಅಂತರಾಷ್ಟ್ರೀಯ ಪೊಲೀಸರು ಸಹ ಬಂದು ತರಬೇತಿ ಪಡೆಯುತ್ತಿದ್ದಾರೆ. 32 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಇವತ್ತು ಪೊಲೀಸರು ಪ್ರದರ್ಶನ ಮಾಡಿದ್ದಾರೆ. ಕೇಸ್ ಭೇದಿಸುವುದನ್ನು ಸಿನಿಮಾಗಳಲ್ಲಿ ನೋಡುತ್ತಿದ್ದೆವು. ಆದರೆ ಈಗ ಕಣ್ಣ ಮುಂದೆ ನೋಡಿದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಬರ್ ಗ್ರೀಸ್ ಅನ್ನೋದು ನನಗೆ ಗೊತ್ತೇ ಇರಲಿಲ್ಲ. ಅದು ಒಂದು ಕೆ.ಜಿಗೆ ಒಂದು ಕೋಟಿ ಅಂತೆ. ಅದನ್ನು ಕೂಡ ಈಗ ರಿಕವರಿ ಮಾಡಿದ್ದಾರೆ. ಕಳ್ಳತನದಿಂದ ಆ ಸಂಪತ್ತು ಬೇರೆಯವರ ಪಾಲಾಗುತಿತ್ತು. ಅದನ್ನ ಹಿಡಿದು ದೇಶದ ಖಜಾನೆ ತುಂಬುವ ಕೆಲಸ ಮಾಡಿದ್ದಾರೆ. ಕೋಟ್ಯಂತರ ಬೆಲೆ ಬಾಳುವ ಮಾದಕ ವಸ್ತು ಪತ್ತೆ ಹಚ್ಚಿದ್ದಾರೆ. ನೂರಾರು ಕೋಟಿ ವೆಚ್ಚದಲ್ಲಿ ಡ್ರಗ್ಸ್ ಮಾಫಿಯಾ ನಡಿಯುತ್ತಿದೆ. ಡ್ರಗ್ಸ್ ಯುವ ಜನಾಂಗದ ಜೀವನ ಹಾಳು ಮಾಡುತ್ತಿದೆ. ಇದನ್ನ ತಡೆಯುವಲ್ಲಿ ಪೊಲೀಸರ ಕಾರ್ಯ ಮೆಚ್ಚುವಂತದ್ದು ಎಂದು ತಿಳಿಸಿದ ಗೃಹ ಸಚಿವರು, ಪೊಲೀಸ್ ಇಲಾಖೆಗೆ ಕೋಟಿ ಕೋಟಿ ಸೆಲ್ಯೂಟ್ ಎಂದರು.

ಪೊಲೀಸರು ಪ್ರಾಮಾಣಿಕರಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಮಾಜ ಹಾಳಾಗುತ್ತದೆ. ಅಪ್ರಾಮಾಣಿಕ ಪೊಲೀಸರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಕೊಲೆ ಪ್ರಕರಣಗಳಲ್ಲಿ ಕೆಲ ಪೊಲೀಸರು ಭಾಗಿಯಾಗುತ್ತಾರೆ. ಅಂತಹ ಪೊಲೀಸರನ್ನು ನೋಡಿದರೆ ಅವಮಾನವಾಗುತ್ತದೆ. ಪ್ರಾಮಾಣಿಕ ಪೊಲೀಸರ ಬೆನ್ನು ತಟ್ಟುವ ಕೆಲಸ ಮಾಡುತ್ತೇವೆ. ಅಪ್ರಾಮಾಣಿಕ ಪೊಲೀಸರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಅಪರಾಧಿಗಳ ಪರ ನಿಲ್ಲುವಂತಹ ಪೊಲೀಸರ ಪಟ್ಟಿ ಮಾಡಿ ಎಂದು ಆರಗ ಜ್ಞಾನೇಂದ್ರ ಸೂಚನೆ ನೀಡಿದರು.

ಇದನ್ನೂ ಓದಿ

ದೆಹಲಿ ರೇಪ್​ ಕೇಸ್​; ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಗೆ ಫೇಸ್​​ಬುಕ್​ನಿಂದ ನೋಟಿಸ್​​

ನವರಂಗಿ ಆಟ, ಮೈ ಮಾಟದಿಂದ ಹನಿಟ್ರ್ಯಾಪ್ ಮಾಡುತ್ತಿದ್ದ ಕಿರಾತಕರ ಗ್ಯಾಂಗ್ ಅರೆಸ್ಟ್

(Araga Jnanendra returned 40 kg of theft jewelery to the owner in Bengaluru)

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್