ದೆಹಲಿ ರೇಪ್​ ಕೇಸ್​; ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಗೆ ಫೇಸ್​​ಬುಕ್​ನಿಂದ ನೋಟಿಸ್​​

Facebook: ಆಗಸ್ಟ್​ 1ರಂದು ದೆಹಲಿಯ 9 ವರ್ಷದ ಬಾಲಕಿ ಮೇಲೆ ಚಿತಾಗಾರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ದಕ್ಷಿಣ ದೆಹಲಿಯಲ್ಲಿ ನಡೆದ ಈ ರೇಪ್​ ಕೇಸ್​ಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ದೆಹಲಿ ರೇಪ್​ ಕೇಸ್​; ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಗೆ ಫೇಸ್​​ಬುಕ್​ನಿಂದ ನೋಟಿಸ್​​
ರಾಹುಲ್ ಗಾಂಧಿ
Follow us
TV9 Web
| Updated By: Lakshmi Hegde

Updated on:Aug 18, 2021 | 9:54 AM

ದೆಹಲಿಯ ಚಿತಾಗಾರವೊಂದರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋವನ್ನು ಇನ್​​ಸ್ಟಾಗ್ರಾಂನಲ್ಲಿ ಹಾಕಿರುವ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯವರಿಗೆ ಫೇಸ್​​ಬುಕ್​ ನೋಟಿಸ್​ ನೀಡಿದೆ. ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಸಮಾಧಾನ ಹೇಳಿದ್ದ ರಾಹುಲ್​ ಗಾಂಧಿ, ನಂತರ ಫೋಟೋವನ್ನು ಟ್ವಿಟರ್​, ಇನ್​ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಆದರೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಟ್ವಿಟರ್​ ರಾಹುಲ್​ ಗಾಂಧಿಯವರ ಅಕೌಂಟ್​​ನ್ನೇ ಲಾಕ್​ ಮಾಡಿತ್ತು. ರಾಹುಲ್​ ಗಾಂಧಿ ಟ್ವಿಟರ್​ ಪೋಸ್ಟ್​ ರಿಮೂವ್​ ಆಗಿದ್ದಕ್ಕೆ ಕಾಂಗ್ರೆಸ್​ ಕಿಡಿಕಾರುತ್ತಿದೆ. ಈ ಮಧ್ಯೆ ಇನ್​ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್​ ಕೂಡ ತೆಗೆದುಹಾಕುವಂತೆ ಫೇಸ್​ಬುಕ್​ ನೋಟಿಸ್​ ನೀಡಿದೆ.

ಆಗಸ್ಟ್​ 1ರಂದು ದೆಹಲಿಯ 9 ವರ್ಷದ ಬಾಲಕಿ ಮೇಲೆ ಚಿತಾಗಾರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ದಕ್ಷಿಣ ದೆಹಲಿಯಲ್ಲಿ ನಡೆದ ಈ ರೇಪ್​ ಕೇಸ್​ಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅದಾದ ಎರಡು-ಮೂರು ದಿನಗಳಲ್ಲಿ ರಾಹುಲ್​ ಗಾಂಧಿ, ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ್ದರು. ನ್ಯಾಯದ ಹೋರಾಟದ ಹಾದಿಯಲ್ಲಿ ನಾನು ಸದಾ ನಿಮ್ಮ ಜತೆಗಿರುತ್ತೇನೆ ಎಂದು ಭರವಸೆ ನೀಡಿದ್ದರು. ಅದಾದ ಬಳಿಕ ಸೋಷಿಯಲ್​ ಮೀಡಿಯಾಗಳಲ್ಲಿ ಫೋಟೊ ಶೇರ್ ಮಾಡಿಕೊಂಡಿದ್ದರು.

ಫೇಸ್​ಬುಕ್​ನಿಂದ ನೋಟಿಸ್​ ಇದೀಗ ಇನ್​ಸ್ಟಾಗ್ರಾಂನಲ್ಲಿ ಹಾಕಿರುವ ಫೋಟೋ ತೆಗೆಯವಂತೆ ರಾಹುಲ್​ ಗಾಂಧಿಗೆ ನೋಟಿಸ್​ ನೀಡಿರುವ ಫೇಸ್​ಬುಕ್​, ಬಾಲನ್ಯಾಯ ಕಾಯ್ದೆ 2015ರ 74ನೇ ಸೆಕ್ಷನ್​ ಮತ್ತು ಪೊಸ್ಕೊ ಕಾಯ್ದೆ 2012ರ ಸೆಕ್ಷನ್​ 23 ಮತ್ತು, ಭಾರತೀಯ ದಂಡ ಸಂಹಿತೆಯ 288ನೇ ಸೆಕ್ಷನ್​​ನಡಿ, ನೀವು ಇನ್​ಸ್ಟಾಗ್ರಾಂನಲ್ಲಿ ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋವನ್ನು ಹಾಕಿ, ಅವರ ಗುರುತು ಬಹಿರಂಗಪಡಿಸಿದ್ದು ಕಾನೂನು ಬಾಹಿರವಾಗಿದೆ. ಮಕ್ಕಳ ಹಕ್ಕು ರಕ್ಷಣಾ ರಾಷ್ಟ್ರೀಯ ಆಯೋಗ (NCPCR)ದ ಸೂಚನೆ ಅನ್ವಯ ನೀವು ಆ ಪೋಸ್ಟ್​​ನ್ನು ಕೂಡಲೇ ತೆಗೆದುಹಾಕಬೇಕು ಎಂದು ನೋಟಿಸ್​​ನಲ್ಲಿ ಉಲ್ಲೇಖಿಸಿದೆ.

ಇನ್​ಸ್ಟಾಗ್ರಾಂ ಕೂಡ ಫೇಸ್​ಬುಕ್​ ಮಾಲೀಕತ್ವದಲ್ಲೇ ಇದೆ. ಹಾಗಾಗಿ ಈಗ ಫೇಸ್​​ಬುಕ್​ನಿಂದಲೇ ಸೂಚನೆ ನೀಡಲಾಗಿದೆ. ರಾಹುಲ್​ ಗಾಂಧಿ ಸಂತ್ರಸ್ತೆಯ ಪಾಲಕರ ಫೋಟೋ ಬಹಿರಂಗ ಪಡಿಸಿದ್ದರ ವಿರುದ್ಧ ಮಕ್ಕಳ ಹಕ್ಕು ರಕ್ಷಣಾ ರಾಷ್ಟ್ರೀಯ ಆಯೋಗ ತಿರುಗಿಬಿದ್ದಿದೆ. ಇದು ಟ್ವಿಟರ್ ಹಾಗೂ ಫೇಸ್​ಬುಕ್​ ಎರಡೂ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್​ ನೀಡಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

ಇದನ್ನೂ ಓದಿ: Alia Bhatt: ಚಿತ್ರೀಕರಣದ ಸೆಟ್​ಗೆ ರಿಕ್ಷಾದಲ್ಲಿ ಬಂದ ಆಲಿಯಾ; ಅದೇನು ದೊಡ್ಡ ವಿಷಯ ಅಲ್ಲ ಎಂದು ಕುಟುಕಿದ ನೆಟ್ಟಿಗರು

ಉಪನ್ಯಾಸಕ ಹುದ್ದೆ ತೊರೆದ ವ್ಯಕ್ತಿಗೆ ಕೃಷಿಯೇ ಪ್ರಯೋಗ ಶಾಲೆ; ನೀರಿನ ಮಿತ ಬಳಕೆ ಹಾಗೂ ಸಹಜ ಕೃಷಿಯೇ ಮೂಲ ಮಂತ್ರ

(Facebook sends notice to Rahul Gandhi over revealing identity victim’s family)

Published On - 9:45 am, Wed, 18 August 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ