BV Nagarathna: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಕರ್ನಾಟಕದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೆಸರು ಶಿಫಾರಸು
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಕರ್ನಾಟಕದ ಮಹಿಳಾ ನ್ಯಾಯಮೂರ್ತಿ ಹೆಸರನ್ನು ಶಿಫಾರಸು ಮಾಡಲಾಗಿದೆ. ಕರ್ನಾಟಕದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಕರ್ನಾಟಕದ ಮಹಿಳಾ ನ್ಯಾಯಮೂರ್ತಿ ಹೆಸರನ್ನು ಶಿಫಾರಸು ಮಾಡಲಾಗಿದೆ. ಕರ್ನಾಟಕದ ಹಿರಿಯ ನ್ಯಾಯಮೂರ್ತಿ ಬಿ.ವಿ. ನಾಗರತ್ನ (Justice B.V. Nagarathna) ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಶಿಫಾರಸು ಮಾಡಲಾಗಿದೆ. ನಾಗರತ್ನ ಅವರು ಕರ್ನಾಟಕ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ. ಸುಪ್ರೀಂ ಕೋರ್ಟ್ನ ಹಾಲಿ ಮುಖ್ಯ ನ್ಯಾಯಾಧೀಶರಾದ ಚೀಫ್ ಜಸ್ಟೀಸ್ ಎನ್ ವಿ ರಮಣ (Chief Justice NV Ramana ) ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಬಿ.ವಿ. ನಾಗರತ್ನ ಅವರ ಹೆಸರನ್ನು ಶಿಫಾರಸು ಮಾಡಿದೆ.
ಸುಪ್ರೀಂ ಕೋರ್ಟ್ನ ಸಮಿತಿಯಿಂದ ಹೆಸರು ಶಿಫಾರಸು
ಜಸ್ಟೀಸ್ ನಾಗರತ್ನ ಅವರ ತಂದೆ ಇ ಎಸ್ ವೆಂಕಟರಾಮಯ್ಯ (ES Venkataramiah) ಅವರು 1989ರಲ್ಲಿ ಅರು ತಿಂಗಳ ಕಾಲ ಚೀಫ್ ಜಸ್ಟೀಸ್ ಆಫ್ ಇಂಡಿಯಾ (CJI) ಆಗಿದ್ದರು. ಒಂದು ವೇಳೆ ಈಗ ನಾಗರತ್ನ ಅವರ ಹೆಸರು ಸುಪ್ರೀಂ ಕೋರ್ಟ್ಗೆ ನೇಮಕಗೊಂಡರೆ 2027ರಲ್ಲಿ ಒಂದು ತಿಂಗಳ ಅವಧಿಗೆ ಮಹಿಳಾ ಚೀಫ್ ಜಸ್ಟೀಸ್ ಆಫ್ ಇಂಡಿಯಾ ಆಗಿ ಸೇವೆ ಸಲ್ಲಿಸುವ ಸಾಧ್ಯತೆಯಿದೆ.
ಬಿ.ವಿ. ನಾಗರತ್ನಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶೆಯಾಗಿ (First Woman Chief Justice Of India) ನೇಮಕಗೊಂಡರೆ ಭಾರತಕ್ಕೆ ಮಹಿಳಾ ಸುಪ್ರೀಂ ನ್ಯಾಯಾಧೀಶೆ ಬೇಕೆಂಬ ಬಹುದಿನದ ಬೇಡಿಕೆ ಈಡೇರಿದಂತಾಗುತ್ತದೆ. ಇನ್ನು, ಕರ್ನಾಟಕ ಹೈಕೋರ್ಟ್ ಹಾಲಿ ಸಿಜೆ ಎ.ಎಸ್. ಒಕಾ ಸುಪ್ರೀಂಕೋರ್ಟ್ಗೆ ಪದೋನ್ನತಿ ಪಡೆಯಲಿದ್ದು, ಅವರ ಹೆಸರನ್ನು ಸಹ ಶಿಫಾರಸು ಮಾಡಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂನಿಂದ 9 ಹೆಸರುಗಳು ಶಿಫಾರಸುಗೊಂಡಿವೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ವಿವಿಧ ರಾಜ್ಯಗಳ 9 ನ್ಯಾಯಮೂರ್ತಿಗಳ ಹೆಸರುಗಳನ್ನೂ ಶಿಫಾರಸು ಮಾಡಲಾಗಿದೆ.
(BV Nagarathna from karnataka may be first Woman Chief Justice Of India in supreme court)
Published On - 9:54 am, Wed, 18 August 21