ಗದಗ: ನಡುರಸ್ತೆಯಲ್ಲೇ ಕೆಟ್ಟುನಿಂತ ಕೆಎಸ್​ಆರ್​ಟಿಸಿ ಬಸ್​; ಪ್ರಯಾಣಿಕರು, ಪೊಲೀಸರೇ ತಳ್ಳಿ ಸ್ಟಾರ್ಟ್​

ಗದಗ ನಗರದ ಪುಟ್ಟರಾಜ್ ಗವಾಯಿಗಳ ಬಸ್ ನಿಲ್ದಾಣದಿಂದ ಮುಳಗುಂದ ಪಟ್ಟಣಕ್ಕೆ ಬಸ್ ಪ್ರಯಾಣಿಕರನ್ನು ಕರೆದ್ಯೊಯುತ್ತಿತ್ತು. ಪುಟ್ಟರಾಜ್ ಗವಾಯಿಗಳ ಸರ್ಕಲ್​ನಲ್ಲಿ ಬಸ್ ಏಕಾಏಕಿ ಬಂದ್ ಆಗಿದೆ. ಬಳಿಕ ಚಾಲಕ ಬಸ್ ಸ್ಟಾರ್ಟ್ ಮಾಡಲು ಸಾಕಷ್ಟು ಪ್ರಯತ್ನ ಪಟ್ಟು ಕೊನೆಗೆ ಪೊಲೀಸ್ ಸಿಬ್ಬಂದಿ, ಪ್ರಯಾಣಿಕರು ಸೇರಿ ಬಸ್ ತಳ್ಳಿ ಸ್ಟಾರ್ಟ್​ ಮಾಡಿದ ಘಟನೆ ನಡೆದಿದೆ.

Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 06, 2024 | 3:54 PM

ಗದಗ, ಜ.06: ಜಿಲ್ಲೆಯ ಸಾರಿಗೆ ಇಲಾಖೆಯ ಮತ್ತೊಂದು ಅಸಲಿ ಮುಖವಾಡ ಕಳಿಚಿದೆ. ಕಳೆದ ತಿಂಗಳ ಗದಗ (Gadag) ಜಿಲ್ಲೆಯಲ್ಲಿನ ಬ್ರೇಕ್, ಕ್ಲಚ್ ಇಲ್ಲದ ಅಪಾಯಕಾರಿ ಡಕೋಟ್ ಬಸ್(Bus)​ಗಳ ಕುರಿತು ಟಿವಿ9 ವಿಸ್ತೃತ ವರದಿ ಮಾಡಿತ್ತು. ಈಗ ಬಸ್​ಗಳ ಕಂಡಿಷನ್ ಮತ್ತಷ್ಟು ಹದಗೆಟ್ಟು ಹೋಗಿವೆ. ಪ್ರಯಾಣಿಕನ್ನು ಹೊತ್ತೊಯುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ಗಳು ನಡುರಸ್ತೆಯಲ್ಲೇ ಕೆಟ್ಟು ನಿಲ್ಲುತ್ತಿವೆ. ಅದರಂತೆ ಇಂದು ಗದಗ ನಗರದ ನಡುರಸ್ತೆಯಲ್ಲೇ ಸರ್ಕಾರಿ ಬಸ್ ಕೆಟ್ಟು ನಿಂತಿದೆ. ಪ್ರಯಾಣಿಕರು, ಪೊಲೀಸರು, ಸಾರ್ವಜನಿಕರೇ ಬಸ್ ತಳ್ಳಿದ್ದಾರೆ.

ಗದಗ ನಗರದ ಪುಟ್ಟರಾಜ್ ಗವಾಯಿಗಳ ಬಸ್ ನಿಲ್ದಾಣದಿಂದ ಮುಳಗುಂದ ಪಟ್ಟಣಕ್ಕೆ ಬಸ್ ಪ್ರಯಾಣಿಕರನ್ನು ಕರೆದ್ಯೊಯುತ್ತಿತ್ತು. ಪುಟ್ಟರಾಜ್ ಗವಾಯಿಗಳ ಸರ್ಕಲ್​ನಲ್ಲಿ ಬಸ್ ಏಕಾಏಕಿ ಬಂದ್ ಆಗಿದೆ. ಬಳಿಕ ಚಾಲಕ ಬಸ್ ಸ್ಟಾರ್ಟ್ ಮಾಡಲು ಸಾಕಷ್ಟು ಪ್ರಯತ್ನ ಪಟ್ಟು ಸ್ಟಾರ್ಟ್ ಆಗಲೇ ಇಲ್ಲ. ಇದ್ರಿಂದ ಸಿಗ್ನಲ್​ನಲ್ಲಿ ಬಸ್ ಕೆಟ್ಟು ನಿಂತಿದ್ದು, ಟ್ರಾಫಿಕ್ ಸಮಸ್ಯೆಯಾಗಿತ್ತು.

ಇದನ್ನೂ ಓದಿ:ಚಾಲಕ ಸ್ಟೇರಿಂಗ್ ತಿರುಗಿಸುತ್ತಿದ್ದರೂ ಚಕ್ರಗಳು ತಿರುಗಲೇ ಇಲ್ಲ! ಗದಗ ಸಾರಿಗೆ ಇಲಾಖೆ‌ಯಲ್ಲಿ ಮತ್ತೊಂದು ಅಧ್ವಾನ

ಆಗ ಪೊಲೀಸ್ ಸಿಬ್ಬಂದಿ, ಪ್ರಯಾಣಿಕರು ಸೇರಿ ಬಸ್ ತಳ್ಳಿದ್ದಾರೆ. ಡಕೋಟಾ ಬಸ್ ,ತಳ್ಳು ಗೋವಿಂದಾ ತಳ್ಳು ಎಂದು ತಳ್ಳಿದ್ದಾರೆ. ಆಗ ಟ್ರಾಫಿಕ್ ನಲ್ಲಿ ಬೈಕ್ ಸವಾರರು ಡಕೋಟಾ ಬಸ್ ಗಳ ಅಸಲಿಯತ್ತು ಪ್ರಸಾರ ಮಾಡಿ ಎಂದುಕೊಂಡು ತೆರಳಿದ್ದಾರೆ. ಸರ್ಕಾರ ಬಸ್​ಗಳ ರಿಪೇರಿ ಗೆಸಾಕಷ್ಟು ಹಣ ಇದೆ ಎಂದು ಹೇಳುತ್ತಿದೆ. ಆದ್ರೆ, ಗದಗ ಜಿಲ್ಲೆಯ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ರಿಪೇರಿಗೆ ಹಣವೇ ಇಲ್ಲ. ಏನ್ ಮಾಡೋಣ ಅಂತಿದ್ದಾರೆ. ಹೀಗಾಗಿ ಗಂಡ-ಹೆಂಡಿರ ನಡುವೆ ಕೂಸು ಬಡvಆಯ್ತು ಎಂಬಂತೆ ಪ್ರಯಾಣಿಕರು, ಚಾಲಕರು ಸಫರ್ ಆಗ್ತಾಯಿದ್ದಾರೆ.

ಬಸ್​ಗಲ ಕಂಡಿಷನ್ ಇಲ್ಲದಿದ್ರೂ ಅಧಿಕಾರಿಗಳು ಬಸ್​ಗಳು ರಸ್ತೆ ಇಳಿಸುತ್ತಿದ್ದಾರೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಏನಾದ್ರೂ ದುರಂತ ಆದ್ರೆ, ಹೊಣೆ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ದುರಂತ ನಡೆಯುವ ಮುನ್ನವೇ ಇನ್ನಾದರೂ ಸಾರಿಗೆ ಇಲಾಖೆ, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಡಕೋಟಾ ಬಸ್​ಗಳಿಗೆ ಮುಕ್ತಿ ನೀಡಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Sat, 6 January 24

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ