AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag News: ಗದಗ ಜಿಲ್ಲೆಯಲ್ಲಿ ಟೊಮೆಟೊ ಬೆಳೆದ ಏಕೈಕ ರೈತ, ಲಕ್ಷ ಲಕ್ಷ ಹಣ ಗಳಿಸಿದ ಅದೃಷ್ಟವಂತ

ಗದಗ ಜಿಲ್ಲೆಯ ರೈತರನಿಗೂ ಕೆಂಪು ಸುಂದರಿ ಒಲಿದಿದ್ದಾಳೆ. ಈ ರೈತ ಜೀವಮಾನದಲ್ಲೇ ಪಡೆಯದಷ್ಟು ಲಾಭ ಮೂರೇ ತಿಂಗಳಲ್ಲಿ ಪಡೆದಿದ್ದಾನೆ. ಬಸವನಗೌಡ ತಿಮ್ಮನಗೌಡರ ಎಂಬ ರೈತ ಕೇವಲ ಒಂದೂವರೆ ಎಕೆರೆಯಲ್ಲಿ ಟೊಮೆಟೊ ಬೆಳೆದು 20 ಲಕ್ಷದಷ್ಟು ಲಾಭ ಪಡೆಯುತ್ತಿದ್ದಾನೆ.

Gadag News: ಗದಗ ಜಿಲ್ಲೆಯಲ್ಲಿ ಟೊಮೆಟೊ ಬೆಳೆದ ಏಕೈಕ ರೈತ, ಲಕ್ಷ ಲಕ್ಷ ಹಣ ಗಳಿಸಿದ ಅದೃಷ್ಟವಂತ
ಗದಗದಲ್ಲಿ ಟೊಮೆಟೊ ಬೆಳದು ಹಣ ಗಳಿಸುತ್ತಿರುವ ರೈತ
TV9 Web
| Updated By: ಆಯೇಷಾ ಬಾನು|

Updated on: Aug 03, 2023 | 11:30 AM

Share

ಗದಗ, ಆ.03: ಕೆಂಪು ಸುಂದರಿಗೆ ಈಗ ಭಾರಿ ಬೇಡಿಕೆ ಬಂದಿದೆ. ಈ ಕೆಂಪು ಸುಂದರಿಯನ್ನು(Tomato) ಬೆಳೆದು ರೈತರು ಕೋಟ್ಯಾಧಿಪತಿಯಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಸಧ್ಯಕ್ಕೆ ಟೊಮೆಟೊ ಬೆಳೆದ ಏಕೈಕ ರೈತ ಜೀವಮಾನದಲ್ಲೇ ಪಡೆಯದ ಭರ್ಜರಿ ಲಾಭ ಪಡೆದಿದ್ದಾನೆ. ಚಿನ್ನದ ಬೆಲೆ ಬಂದಾಗ, ಭರ್ಜರಿ ಟೊಮೆಟೊ ಫಸಲು ಬೆಳೆದ ಅದೃಷ್ಟವಂತ ರೈತನಾಗಿದ್ದಾನೆ. ದಲ್ಲಾಲಿಗಳು ಈ ರೈತನ ತೋಟಕ್ಕೆ ಬಂದು ಕೆಂಪು ಸುಂದರಿಯನ್ನು ಖರೀದಿ ಮಾಡ್ತಿದ್ದಾರೆ. ಹೀಗಾಗಿ ಈ ರೈತ ಬೆಳೆದ ಕೆಂಪು ಸುಂದರಿಗೆ ಜಿಲ್ಲೆಯಲ್ಲಿ ಭಾರಿ ಡಿಮ್ಯಾಂಡ್ ಬಂದಿದೆ.

ಕೆಂಪು ಸುಂದರಿಗೆ ಚಿನ್ನದ ಬೆಲೆ, ಗದಗ ರೈತನಿಗೆ ಖುಲಾಯಿಸಿದ ಅದೃಷ್ಟ

ಈಗ ದೇಶದಲ್ಲಿ ಕೆಂಪು ಸುಂದರಿಯದ್ದೇ ಮಾತು. ಈಗಾಗಲೇ ಅದೆಷ್ಟೊ ರೈತರು ಕೆಂಪು ಸುಂದರಿ ಟೊಮೆಟೊ ಬೆಳೆದು ಕೊಟ್ಯಾಧಿಪತಿಗಳಾಗಿದ್ದಾರೆ. ಟೊಮೆಟೊ ಬೆಳೆ ರಕ್ಷಣೆಗೆ ಸಿಸಿ ಕ್ಯಾಮರಾ ಅಳವಡಿಸಿ ಕಾಪಾಡಿಕೊಳ್ತಾಯಿದ್ದಾರೆ. ಈಗ ಗದಗ ಜಿಲ್ಲೆಯ ರೈತರನಿಗೂ ಕೆಂಪು ಸುಂದರಿ ಒಲಿದಿದ್ದಾಳೆ. ಈ ರೈತ ಜೀವಮಾನದಲ್ಲೇ ಪಡೆಯದಷ್ಟು ಲಾಭ ಮೂರೇ ತಿಂಗಳಲ್ಲಿ ಪಡೆದಿದ್ದಾನೆ. ಹೌದು ಈ ಅದೃಷ್ಟವಂತ ರೈತ ಇರೋದು ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ. ಬಸವನಗೌಡ ತಿಮ್ಮನಗೌಡರ ಎಂಬ ರೈತ ಕೇವಲ ಒಂದೂವರೆ ಎಕೆರೆಯಲ್ಲಿ ಟೊಮೆಟೊ ಬೆಳೆದು 20 ಲಕ್ಷದಷ್ಟು ಲಾಭ ಪಡೆಯುತ್ತಿದ್ದಾನೆ. ಬಿಂಕದಕಟ್ಟಿ ಬಸವನಗೌಡ ತಿಮ್ಮನಗೌಡರ ಟೊಮೆಟೊಗೆ ಈಗ ಮಾರ್ಕೆಟ್ ನಲ್ಲೂ ಭಾರಿ ಡಿಮ್ಯಾಂಡ್ ಬಂದಿದೆ.

ಇದನ್ನೂ ಓದಿ: ಕೋಲಾರದ ಹೋಲ್ ಸೇಲ್ ಮಾರ್ಕೆಟ್ ನಲ್ಲೇ ಒಂದು ಕ್ರೇಟ್ ಟೊಮೆಟೊ ಬೆಲೆ ರೂ. 2,500; ಅಂದರೆ ಕೇಜಿಗೆ ರೂ.170! ಈ ಕುಟುಂಬ ಕಳೆದ 20 ವರ್ಷಗಳಿಂದ ಟೊಮೆಟೊ ಬೆಳೆಯನ್ನೇ ಬೆಳೆಯುತ್ತಿದೆ. ಸಾಕಷ್ಟು ಬಾರಿ ಲಾಭ ಪಡೆದಿದ್ದಾರೆ. ಅಷ್ಟೇ ಸಲ ನಷ್ಟವೂ ಅನುಭವಿಸಿದ್ದಾರೆ. ಕೆಲ ಬಾರಿ ಟೊಮೆಟೊಗೆ ಬೆಲೆ ಇಲ್ಲದಾಗ ತೋಟದಲ್ಲೇ ಟೊಮೆಟೊ ಕೊಳೆತು ನಷ್ಟ ಕೂಡ ಅನುಭವಿಸಿದ್ದಾರೆ. ಆದ್ರೂ ಕೆಂಪು ಸುಂದರಿಯ ಕೈ ಈ ರೈತ ಕುಟುಂಬ ಬಿಟ್ಟಿಲ್ಲ. ನಂಬಿದ್ರೆ ಯಾವತ್ತೂ ನಷ್ಟವಿಲ್ಲ ಅಂತಾರಲ್ಲ. ಹಾಗೇ ಲಾಭ, ನಷ್ಟ ಅನುಭವಿಸಿದ್ರೂ ರೈತ ಬಸವನಗೌಡ ಟೊಮೆಟೊ ಬೆಳೆ ಬೆಳೆಯುವುದನ್ನು ನಿಲ್ಲಿಸಿಲ್ಲ. ಆದ್ರೆ, ಈಗ ರೈತ ಬಸವನಗೌಡ ತಿಮ್ಮನಗೌಡರಗೆ ಅದೃಷ್ಟ ಖುಲಾಯಿಸಿದೆ. ಹೌದು ಈಗ ಕೆಂಪು ಸುಂದರಿ ಟೊಮೆಟೊಗೆ ಭಾರಿ ಬೆಲೆ ಬಂದಿದೆ. ಈಗ ಗದಗ ಜಿಲ್ಲೆಯಲ್ಲೇ ಏಕೈಕ ಟೊಮೆಟೊ ಫಸಲು ಹೊಂದಿದ ರೈತನಾಗಿದ್ದಾನೆ. ಬಹುತೇಕ ರೈತರು ಬೆಳೆದ ಟೊಮೆಟೊ ನಾಶವಾಗಿದೆ. ಈಗ ಹೆಚ್ಚಿನ ಬೆಲೆ ಬಂದಿರೋದ್ರಿಂದ ಸಾಕಷ್ಟು ರೈತರು ಈಗ ನಾಟಿ ಮಾಡ್ತಾಯಿದ್ದಾರೆ. ಆದ್ರೆ, ಈ ರೈತ ಚಿನ್ನದ ಬೆಲೆ ಬಂದಾಗ, ಭರ್ಜರಿ ಟೊಮೆಟೊ ಫಸಲು ಪಡೆದ ಅದೃಷ್ಟವಂತನಾಗಿದ್ದಾನೆ. ಈಗಾಗಲೇ 5-6ಲಕ್ಷ ಮೊತ್ತದ ಟೊಮೆಟೊ ಮಾರಾಟ ಮಾಡಿದ್ದಾನೆ. ಇನ್ನೂ 15-16 ಲಕ್ಷದಷ್ಟು ಟೊಮೆಟೊ ತೋಟದಲ್ಲಿದೆ. ನನ್ನ 50 ವರ್ಷದ ಕೃಷಿ ಕಾಯಕದಲ್ಲಿ ಇಷ್ಟೊಂದು ಬೆಲೆ ಕಂಡಿಲ್ಲಾ ಅಂತ ರೈತ ಹೇಳಿದ್ದಾನೆ. ನಂಬಿದ ಬೆಲೆ ಕೊನೆಗೂ ಕೈ ಹಿಡಿದಿದೆ. ಈ ನಾನು ಫುಲ್ ಖುಷಿಯಾಗಿದ್ದೇನೆ ಎಂದು ರೈತ ಬಸವನಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಒಂದೂವರೆ ಎಕರೆ ಟೊಮೆಟೊದಿಂದ ಲಕ್ಷ ಲಕ್ಷ ಗಳಿಕೆ

ಈ ರೈತ ಬೆಳೆದಿದ್ದು ಕೇವಲ ಒಂದೂವರೆ ಎಕರೆ ಜಮೀನಿನಲ್ಲಿ. ಒಂದೂವರೆ ಎಕರೆ ಟೊಮೆಟೊ ಬೆಳೆಸಲು ರೈತ ಖರ್ಚು ಮಾಡಿದ್ದು, ಕೇವಲ 70 ಸಾವಿರ ರೂಪಾಯಿ ಮಾತ್ರ. ಹನಿ ನೀರಾವರಿ ಮೂಲಕ ಟೊಮೆಟೊ ಬೆಳೆದು ರೈತ ತನ್ನ ಬಾಳು ಬಂಗಾರವಾಗಿಸಿಕೊಂಡಿದ್ದಾನೆ. ಸಮೃದ್ಧವಾಗಿ ಬೆಳೆದ ಟೊಮೆಟೊ ಹಣ್ಣುಗಳಿಗೆ ಗದಗ ಜಿಲ್ಲೆಯಲ್ಲಿ ಭಾರಿ ಡಿಮ್ಯಾಂಡ್ ಬಂದಿದೆ. ಯಾಕಂದ್ರೆ ಈ ಮೊದಲು ಕೋಲಾರ, ಅಕ್ಕಪಕ್ಕದ ಜಿಲ್ಲೆಗಳಿಂದ ಗದಗ ಜಿಲ್ಲೆಗೆ ಟೊಮೆಟೋ ಬರ್ತಾಯಿತ್ತು. ಈಗ ಬಹುತೇಕ ಜಿಲ್ಲೆಯಲ್ಲಿ ಮೆಳೆ ಕೈಕೊಟ್ಟಿದ್ದರಿಂದ ಟೊಮೆಟೊ ಬೆಳೆ ಕಡಿಮೆಯಾಗಿದೆ. ಹೀಗಾಗಿ ಗದಗ ಜಿಲ್ಲೆಯಲ್ಲೂ ಮಳೆ ಕೊರತೆಯಿಂದ ಮಳೆ ಅವಲಂಬಿತ ರೈತರು ಟೊಮೆಟೊ ಬೆಳೆದಿಲ್ಲ. ಹೀಗಾಗಿ ಟೊಮೆಟೊ ಕೊರತೆಯಾಗಿದೆ. ಕೊಲಾರದಿಂದಲೂ ಟೊಮೆಟೊ ಆಮದು ಕಡಿಮೆಯಾಗಿದೆ. ಹೀಗಾಗಿ ಮಹಾರಾಷ್ಟ್ರದಿಂದ ಸ್ವಲ್ಪ ಪ್ರಮಾಣದಲ್ಲಿ ಬರ್ತಾಯಿದೆ. ಸಧ್ಯ ಗದಗ ಜಿಲ್ಲೆಯಲ್ಲಿ ಭರ್ಜರಿ ಫಸಲು ಬಂದ ಟೊಮೆಟೊ ಅಂದ್ರೆ ಬಿಂಕದಕಟ್ಟಿ ಸವನಗೌಡರದ್ದು ಮಾತ್ರ. ಹೀಗಾಗಿ ಭಾರಿ ಬೇಡಿಕೆ ಇದೆ. ದಲ್ಲಾಲಿಗಳೇ ತೋಟಕ್ಕೆ ಬಂದು ರೈತನ ಟೊಮೆಟೊ ಖರೀದಿ ಮಾಡ್ತಾಯಿದ್ದಾರೆ. ರೈತನ ಮಕ್ಕಳು ಹಾಗೂ ಅವರ ಕುಟುಂಬಸ್ಥರ ಹಗಲು ರಾತ್ರಿ ಎನ್ನದೆ ಟೊಮೆಟೊ ಬೆಳೆಯನ್ನು ಕಾಯುತ್ತಿದ್ದಾರೆ. ಪಿಯುಸಿ, ಹಾಗೂ ಐಐಟಿ ಮುಗಿಸಿದ ಮಕ್ಕಳಿಗೆ ಕೆಂಪು ಸುಂದರಿ ದಾರಿ ದೀಪವಾಗಿದ್ದಾಳೆ.

ಮೊದಲಿನಿಂದಲೂ ಗುಣಮಟ್ಟದ ಟೊಮೆಟೊ ಬೆಳೆಯುವ ರೈತ ಅಂತಲೇ ಹೆಸರು ಪಡೆದ ಬಸವನಗೌಡರ ಟೊಮೆಟೊಗೆ ಈಗ ಚಿನ್ನದ ಬೆಲೆ ಬಂದಿರೋದಕ್ಕೆ ಸಕ್ಕತ್ ಖುಷಿಯಲ್ಲಿ ಅನ್ನದಾತ ಹಾಗೂ ಆತನ ಕುಟುಂಬಸ್ಥರು ಇದ್ದಾರೆ. ಸದಾ ಅತಿವೃಷ್ಠಿ, ಅನಾವೃಷ್ಠಿಯಿಂದ ಕಂಗಾಲಾಗಿದ್ದ ರೈತರಿಗೆ ಈ ಬಾರಿ ಟೊಮೆಟೊ ಬೆಳೆ ಮರುಜೀವನ ನೀಡಿದೆ. ಸಾಷಕ್ಟು ಬಾರಿ ಟೊಮೆಟೊ ಬೆಳೆದು ಕೈಸುಟ್ಟುಕೊಂಡ್ರು. ಮತ್ತೆ ಮತ್ತೆ ಟೊಮೆಟೊ ಬೆಳೆದ ರೈತ ಬಸವನಗೌಡರಗೆ ಈ ಬಾರಿ ಟೊಮೆಟೊ ರೈತನ ಅದೃಷ್ಟವೇ ಬದಲಾಯಿಸಿದೆ. ಏನೇ ಇರಲಿ ದೇಶಕ್ಕೆ ಅನ್ನನೀಡುವ ಅನ್ನದಾತ ಖಷಿಯಾಗಿದ್ದು, ಮಾತ್ರ ರೈತ ಸಮೂಹಕ್ಕೆ ಸಂತೋಷವಾಗಿದೆ.

ಗದಗ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ