ಗದಗ: ಜಿಲ್ಲೆಯಲ್ಲಿ ಆರ್ಸಿಸಿ (RCC) ನಿರ್ಮಾಣ ಕಂಪನಿಯ ಕಲ್ಲು ಗಣಿಗಾರಿಕೆ ಅಬ್ಬರಕ್ಕೆ ರೈತರು (Farmers) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಕಾಬಿಟ್ಟಿ ಬ್ಲಾಸ್ಟಿಂಗ್ಗೆ ರೈತರು ತತ್ತರಿಸಿ ಹೋಗಿದ್ದಾರೆ. ಅವೈಜ್ಞಾನಿಕ ಬ್ಲಾಸ್ಟಿಂಗ್ಗೆ ದೊಡ್ಡ ಪ್ರಮಾಣದ ಕಲ್ಲುಗಳು ಜಮೀನಿನಲ್ಲಿ ಬೀಳುತ್ತಿದ್ದು, ರೈತರು ಜಮೀನಿಂದ ಓಡಿ ಹೋಗುವಂತೆ ಆಗಿದೆ. ಅಷ್ಟೇ ಅಲ್ಲದೆ ರೈತರ ಬೊರ್ವೆಲ್ಗಳ ಜೀವಜಲ ಪಾತಾಳಕ್ಕೆ ಕುಸಿಯುತ್ತಿದೆ. ಕಂಪನಿದ ದಬ್ಬಾಳಿಕೆ ಬಗ್ಗೆ ತಹಶೀಲ್ದಾರ್, ಪೊಲೀಸ್, ಗಣಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ನೆರವಿಗೆ ಬರುತ್ತಿಲ್ಲ ಅಂತ ರೈತರು ಆಕ್ರೋಶಕ್ಕೆ ಹೊರಹಾಕಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದ ರೈತರ ಗೋಳಿನ ಕಥೆ ಇದು. ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಕಾಮಗಾರಿ ನಡೆದಿದೆ. ಈ ಮೊದಲು ಸಧ್ಬವ್ ನಿರ್ಮಾಣ ಕಂಪನಿ ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿತ್ತು. ಆದರೆ ಈಗ ಆರ್ಸಿಸಿ ಕಂಪನಿ ಕಾಮಗಾರಿ ಮಾಡುತ್ತಿದೆ. ಹೀಗಾಗಿ ಹೊಳೆಇಟಗಿ ಗ್ರಾಮದ ಬಳಿ ಸರ್ವೇ ನಂಬರ್ 183/2ಬಿ, 1802ಎ ರಲ್ಲಿ ಬೃಹತ್ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಘಟಕ ಸ್ಥಾಪನೆ ಮಾಡಿದೆ. ಆದರೆ ಕಂಪನಿ ಈಗ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಂಪನಿ ಅಧಿಕಾರಿಗಳ ಅಸಡ್ಡೆ ರೈತರನ್ನು ಹೈರಾಣಾಗಿಸಿದೆ.
ಮೊದಲೆ ಅತಿಯಾದ ಮಳೆಗೆ ಬೆಳೆ ಹಾಳಾಗಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಈಗ ಅಳಿದುಳಿದ ಬೆಳೆ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ನಡುವೆ ಕಂಪನಿ ಅಧಿಕಾರಿಗಳು ಅವೈಜ್ಞಾನಿಕ ಬ್ಲಾಸ್ಟಿಂಗ್ ಮಾಡಿ ರೈತರಿಗೆ ವಿನಾಕಾರಣ ಹಿಂಸೆ ನೀಡುತ್ತಿದ್ದಾರೆ. ಬ್ಲಾಸ್ಟಿಂಗ್ ಸಮಯದಲ್ಲಿ ಸೈರನ್ ಕೊಡಬೇಕು. ಆದರೆ ಕಂಪನಿ ಇದನ್ನು ಪಾಲನೆ ಮಾಡುತ್ತಿಲ್ಲ. ರೈತರು, ಕೂಲಿ ಕಾರ್ಮಿಕರು ಜಮೀನಿನಲ್ಲಿ ಕೆಲಸ ಮಾಡುವಾಗ ಏಕಾಏಕಿ ಬ್ಲಾಸ್ಟಿಂಗ್ ಮಾಡುತ್ತಾರೆ. ಆಗ ಪಕ್ಕದ ಜಮೀನುಗಳಲ್ಲಿ ಬೃಹತ್ ಆಕಾರದ ಕಲ್ಲುಗಳು ರೈತರ ಜಮೀನಿನಲ್ಲಿ ಬೀಳುತ್ತಿವೆ.
ಕ್ರಷರ್ ಘಟಕದ ಅತಿಯಾದ ಧೂಳಿನಿಂದ ಬೆಳೆಗಳು ಸಂಪೂರ್ಣ ಹಾಳಾಗುತ್ತಿವೆ. ರೈತರು ಶಿರಹಟ್ಟಿ ತಹಶೀಲ್ದಾರ್, ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ದೂರು ನೀಡಿದರೂ ಅಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ ಅಂತ ರೈತ ಗುದ್ದಪ್ಪ ತಿಳಿಸಿದರು.
ರೈತರು ರೊಚ್ಚಿಗೆದ್ದಾಗ ಅಧಿಕಾರಿಗಳು ಬಣದು ಕಾಟಾಚಾರಕ್ಕೆ ಕಂಪನಿ ಅಧಿಕಾರಿಗಳಿಗೆ ಹೇಳಿ ವಾಪಸಾಗುತ್ತಾರೆ. ಆದರೆ ಆರ್ಸಿಸಿ ಕಂಪನಿ ಅಧಿಕಾರಿಗಳು ಮತ್ತೆ ತಮ್ಮ ಚಾಳಿ ಮುಂದುವರೆಸುತ್ತಾರೆ. ಎಲ್ಲಿ ಧೂಳು ಆಗುತ್ತೆ, ಅಲ್ಲಿ ನೀರು ಸಿಂಪಡಣೆ ಮಾಡಬೇಕು. ಆದರೆ ಈ ಕಂಪನಿ ಮಾತ್ರ ಹೀಗೆ ಮಾಡುತ್ತಿಲ್ಲ. ಅಧಿಕಾರಿಗಳಿಗೆ ದೂರು ನೀಡಿದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಅಂತ ರೈತ ಶೇಖರಪ್ಪ ಇಟಗಿ ಜಿಲ್ಲಾಡಳಿತ ವಿರುದ್ಧ ಆರೋಪಿಸಿದ್ದಾರೆ.
ವರದಿ: ಸಂಜೀವ ಪಾಂಡ್ರೆ
ಇದನ್ನೂ ಓದಿ
Kajol: ಕಾಜೊಲ್ಗೆ ಕೊವಿಡ್ ಪಾಸಿಟಿವ್; ಪುತ್ರಿ ನ್ಯಾಸಾಳ ಚಿತ್ರ ಹಂಚಿಕೊಂಡು ವಿಶೇಷ ಬರಹ ಬರೆದ ನಟಿ
ಬಾಗಲಕೋಟೆಯಲ್ಲಿ ಅಕ್ರಮ ಅಕ್ಕಿ ಸಂಗ್ರಹ! ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು