ಅಕ್ರಮ ಪಡಿತರ ಅಕ್ಕಿ ಮಾರಾಟ ದಂಧೆಗೆ ಬ್ರೇಕ್​ ಹಾಕಲು ಗದಗ ಜಿಲ್ಲಾಡಳಿತದಿಂದ ಮೇಗಾ ಪ್ಲಾನ್

| Updated By: ವಿವೇಕ ಬಿರಾದಾರ

Updated on: Nov 06, 2022 | 7:37 PM

ಗದಗ ಜಿಲ್ಲೆಯಲ್ಲಿ ಬಡವರ ಹೊಟ್ಟೆ ಸೇರಬೇಕಾದ ಅಕ್ಕಿ ಎಗ್ಗಿಲ್ಲದೆ ಕಾಳ ಸಂತೆಯಲ್ಲಿ ರಾಜಾರೋಷವಾಗಿ ಮಾರಾಟ ಮಾಡುವ ದಂಧೆ ನಡೆಯುತ್ತಿದೆ.

ಅಕ್ರಮ ಪಡಿತರ ಅಕ್ಕಿ ಮಾರಾಟ ದಂಧೆಗೆ ಬ್ರೇಕ್​ ಹಾಕಲು ಗದಗ ಜಿಲ್ಲಾಡಳಿತದಿಂದ ಮೇಗಾ ಪ್ಲಾನ್
ಗದಗ ಜಿಲ್ಲಾಢಳಿತ ಭವನ
Follow us on

ಗದಗ ಜಿಲ್ಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯೊಂದು ಸಂಪೂರ್ಣ ಹಳ್ಳ ಹಿಡಿದಿದೆ. ಬಡವರ ಹೊಟ್ಟೆ ಸೇರಬೇಕಾದ ಅಕ್ಕಿ ಎಗ್ಗಿಲ್ಲದೆ ಕಾಳ ಸಂತೆಯಲ್ಲಿ ರಾಜಾರೋಷವಾಗಿ ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ಹೀಗಾಗಿ ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಮೇಗಾ ಪ್ಲಾನ್​ವೊಂದು ಮಾಡಿದೆ. ಹೌದು ಎರಡು ಬಾರಿ ಅಕ್ರಮವಾಗಿ ಅಕ್ಕಿ ಮಾರಾಟ ದಂಧೆಯಲ್ಲಿ ಸಿಕ್ಕಿಬಿದ್ದರೇ ಅಂಥ ದಂಧೆಕೋರರ ಮೇಲೆ ಗೂಂಡಾ ಕಾಯ್ದೆಯಡಿ ಕೇಸ್ ಹಾಕಲು ಜಿಲ್ಲಾಢಳಿತ ಖಡಕ್ ನಿರ್ಧಾರ ತೆಗೆದುಕೊಂಡಿದ್ದು, ಅಕ್ಕಿ ದಂಧೆಕೋರರಿಗೆ ನಡುಕ ಹುಟ್ಟಿಸಿದೆ.

ಗದಗ ಜಿಲ್ಲೆಯಲ್ಲಿ. ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಜಾಲ ಬೀಡುಬಿಟ್ಟಿದೆ. ವ್ಯವಸ್ಥಿತವಾಗಿ ಅಕ್ರಮ ದಂಧೆಕೋರರು ಬಡವರ ಪಾಲಿನ ಅಕ್ಕಿಯನ್ನು ಸಂಗ್ರಹ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಸಾಗಾಟ ಮಾಡಿ ಮಾಡಿ ಕಮಾಯಿ ಮಾಡುತ್ತಿದೆ. ಗದಗ- ಬೆಟಗೇರಿ ಅವಳಿ, ಗಜೇಂದ್ರಗಡ, ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ, ನರಗುಂದ ಸೇರಿದಂತೆ ಜಿಲ್ಲೆಯಲ್ಲಿ ಅಕ್ರಮ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಇದರ ವಿರುದ್ಧ ಸಮರ ಸಾರಿದ ಜಿಲ್ಲಾಡಳಿತ ನಿರಂತ ದಾಳಿ ಮಾಡಿ ಅಕ್ರಮ ಅಕ್ಕಿ ದಂಧೆಕರೋರರಿಗೆ ಎಚ್ಚರಿಕೆ ನೀಡುತ್ತಾ ಇದೆ.

ಆದರೂ ಕೂಡ ಅಕ್ರಮ ಅಕ್ಕಿ ಮರಾಟ ಮಾತ್ರ ನಿಂತಿಲ್ಲ. ಹೀಗಾಗಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್​ ಅವರು ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ಸಾಗಾಣಿಕೆಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದ್ದಾರೆ. ಪದೇ ಪದೇ ಅಕ್ರಮ ಅಕ್ಕಿ ಸಾಗಾಣಿಕೆಯಲ್ಲಿ ಸಿಕ್ಕಿ ಬಿದ್ದರೇ ಅಂತವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಗೂಂಡಾ ಕಾಯ್ದೆಯಡಿ ದೂರು ದಾಖಲು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗದಗ ಜಿಲ್ಲೆಯಾದ್ಯಂತ ಒಂದು ವರ್ಷದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಸಾಕಷ್ಟು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೂ ಕೂಡ ದಂಧೆ ಮಾತ್ರ ನಿಂತ್ತಿಲ್ಲ ಎನ್ನುವದು ಸಾರ್ವಜನಿಕರು ಆರೋಪವಾಗಿದೆ. ಜಿಲ್ಲೆಯಾದ್ಯಂತ ಎಂಟು ತಿಂಗಳಲ್ಲಿ 22 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, 14 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಹಾಗೇ 15 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೂ ಕೂಡಾ ಅಕ್ರಮ ಪಡಿತರ ಸಾಗಾಣಿಕೆ ದಂಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಅಕ್ರಮ ದಂಧೆಗೆ ಕಡಿವಾಣ ಹಾಕಲು ಎರಡು ಬಾರಿ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ದಂಧೆಯಲ್ಲಿ ಭಾಗಿಯಾದ ಆರೋಪಿಗಳ ಲಿಸ್ಟ್ ಮಾಡಲಾಗುತ್ತಿದೆ. ಪಟ್ಟಿ ಸಿದ್ಧವಾದ ಬಳಿಕ ಗದಗ ಪೊಲೀಸ ಇಲಾಖೆ ನೀಡಲಾಗುತ್ತೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎರಡು ಬಾರಿ ಅಕ್ಕಿ ದಂಧೆಯಲ್ಲಿ ಬಾಗಿಯಾದ ಆರೋಪಿಯ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಲಾಗುತ್ತದೆ ಅಂತಾರೆ ಆಹಾರ ಇಲಾಖೆ ಅಧಿಕಾರಿ ಜಿಲ್ಲಾಡಳಿತ ಖಡಕ ನಿರ್ಧಾರಕ್ಕೆ ಅಕ್ರಮ ಅಕ್ಕಿ ದಂಧೆಕೋರರು ಪದರಗುಟ್ಟಿ ಹೋಗಿದ್ದಾರೆ. ಇನ್ನಾದರೂ ದಂಧೆಕೋರರು ಎಚ್ಚೆತ್ತುಕೊಳ್ಳುತ್ತಾರಾ ನೋಡಬೇಕು.

ವರದಿ- ಸಂಜೀವ ಪಾಂಡ್ರೆ, ಟಿವಿ9 ಗದಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:37 pm, Sun, 6 November 22