AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ಮಕ್ಕಳ ತಾಯಿ ಮುಸ್ಲಿಂ ಯುವಕನ ಜತೆ ಪರಾರಿ: ಲವ್‌ ಜಿಹಾದ್‌ ಆರೋಪ

ಓರ್ವ ಯುವಕ ಗೋವಾದಲ್ಲೇ ಒಂದು ಕುಟುಂಬವನ್ನು ಪರಿಚಯ ಮಾಡಿಕೊಂಡು ಗದಗ್‌ನಲ್ಲಿ ಗಾಳ ಹಾಕಿ ಕೊನೆಗೆ ನಾಲ್ಕು ಮಕ್ಕಳ ತಾಯಿಯನ್ನೇ ಪಟಾಯಿಸಿದ್ದಾನೆ. ಆದ್ರೆ ಪ್ರೀತಿ ಹೆಸರಲ್ಲಿ ಧರ್ಮದ ಮತಾಂತರ ನಡೆಯುತ್ತಿದ್ಯಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ನಾಲ್ಕು ಮಕ್ಕಳ ತಾಯಿ ಮುಸ್ಲಿಂ ಯುವಕನ ಜತೆ ಪರಾರಿ: ಲವ್‌ ಜಿಹಾದ್‌ ಆರೋಪ
ನಾಲ್ಕು ಮಕ್ಕಳ ತಾಯಿ ಮುಸ್ಲಿಂ ಯುವಕನ ಜತೆ ಪರಾರಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 20, 2023 | 12:10 AM

ಗದಗ: ಅವರದ್ದು ದಶಕಗಳ ಸಂಸಾರ. ಆ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಹಿರಿಮಗಳ ಮದುವೆ ಬಗ್ಗೆ ಯೋಚನೆ ಮಾಡಬೇಕಿದ್ದ ತಾಯಿ(Mother) ಮತ್ತೊಬ್ಬನ ಜತೆ ಜೂಟ್‌ ಆಗಿದ್ದಾಳೆ. ಅದರಲ್ಲೂ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದು ಲವ್‌ ಜಿಹಾದ್‌ನ(Love Jihad) ಆರೋಪ ಕೇಳಿ ಬಂದಿದೆ. ಹೌದು..ಗದಗನ (Gadag)  ಜೇನಿನಗೂಡಿನಂಥಾ ಸಂಸಾರ ಇದು. ನಾಲ್ಕು ಜನ ಮಕ್ಕಳಿದ್ರೂ ತಂದೆ, ತಾಯಿ ಯಾವುದಕ್ಕೂ ಕೊರತೆ ಮಾಡಿರಲಿಲ್ಲ. ಹೆಂಡ್ತಿಯನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದ್ರೆ ಆಕೆಯ ಚಿತ್ತವೇ ಬೇರೆ ಕಡೆ ಹರಿದಿತ್ತು. ನಾಲ್ಕು ಮಕ್ಕಳ ತಾಯಿಯಾಗಿದ್ದ ಈಕೆ ಮುಸ್ಲಿಂ ಯುವಕನ ಹಿಂದೆ ಹೋಗಿದ್ದಾಳೆ . ಆತನನ್ನೇ ಮದುವೆಯಾಗಿ ಇಸ್ಲಾಂಗೆ ಮತಾಂತರ ಆಗಿದ್ದಾಳೆ. ಇದೇ ಪ್ರಕರಣದ ಹಿಂದೆ ಲವ್‌ ಜಿಹಾದ್‌ನ ಆರೋಪ ಕೇಳಿ ಬಂದಿದೆ. ನನ್ನ ಪತ್ನಿ ನನಗೆ ಬೇಕು ಎಂದು ಗಂಡ ಕಣ್ಣೀರು ಹಾಕುತ್ತಿದ್ದಾನೆ.

ಇದನ್ನೂ ಓದಿ: ತುಮಕೂರು ಜಿಲ್ಲೆಯಲ್ಲಿ ದಾರುಣ ಘಟನೆ: ಮೂವರು ಅನಾಥ ಸಹೋದರಿಯರು ಆತ್ಮಹತ್ಯೆಗೆ ಶರಣು

ನಾಲ್ಕು ಮಕ್ಕಳ ತಾಯಿ ಮುಸ್ಲಿಂ ಯುವಕನ ಜತೆ ಪರಾರಿ

ಕೂತರು ಆಕೆಯದ್ದೇ ಧ್ಯಾನ. ನಿಂತ್ರೂ ಆಕೆಯದ್ದೇ ಚಿಂತೆ. ಹೃದಯದ ಶಸ್ತ್ರಚಿಕಿತ್ಸೆ ಆಗಿ ಅನಾರೋಗ್ಯಕ್ಕೆ ಜಾರಿದ್ರೂ ಪತ್ನಿ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಅಷ್ಟಕ್ಕೂ ಗದಗ ನಗರದ ನಿವಾಸಿಯಾಗಿರುವ ಪ್ರಕಾಶ್‌ ಎನ್ನುವರು ಹೇಮಾವತಿ ಎಂಬಾಕೆಯನ್ನ ಮದುವೆಯಾಗಿದ್ದರು. ಇವರ ಸುಖ ಸಂಸಾರಕ್ಕೆ ನಾಲ್ಕು ಮಂದಿ ಮಕ್ಕಳಿದ್ದರು. ದಶಕಗಳಿಂದಲೂ ಚೆನ್ನಾಗಿದ್ದ ಇವರ ಸಂಸಾರದಲ್ಲಿ ಅದೊಬ್ಬ ಹುಳಿ ಹಿಂಡಿದ್ದಾನೆ. 6 ತಿಂಗಳ ಹಿಂದೆ ಹೇಮಾವತಿ ಇದ್ದಕ್ಕಿದ್ದಂತೆ ತನ್ನ ಚಿಕ್ಕ ಮಗಳ ಜತೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಪ್ರಕಾಶ್‌ ನಾಪತ್ತೆ ಕೇಸ್‌ ದಾಖಲಿಸಿದ್ದ. ಆಗ ಗೊತ್ತಾಗಿದ್ದೇ ಆಕೆಯ ಸೆಕೆಂಡ್‌ ಇನ್ನಿಂಗ್ಸ್‌. ಮಕ್ಬುಲ್ ಅನ್ನೋ ಮುಸ್ಲಿಂ ಯುವಕ ಹೇಮಾವತಿಯನ್ನ ಮದುವೆಯಾಗಿರುವುದು ಗೊತ್ತಾಗಿದೆ.

ಇನ್ನು ಹಾವೇರಿ ಜಿಲ್ಲೆ ಸವಣೂರ ಗ್ರಾಮದ ಮಕ್ಬುಲ್‌ ಕೂಡಾ ಗೋವಾಕ್ಕೆ ದುಡಿಯಲು ಹೋಗಿದ್ದ. ಅಲ್ಲೇ ಪ್ರಕಾಶ್‌ ಫ್ಯಾಮಿಲಿಯ ಪರಿಚಯ ಆಗಿತ್ತು. ಗೋವಾದಲ್ಲಿ ಬಾಡಿಗೆ ಮನೆ ಕೊಡಿಸಲು ನೆರವಾಗಿದ್ದವನು ಪ್ರಕಾಶ್‌ ಹೆಂಡ್ತಿಯನ್ನೇ ಪಟಾಯಿಸಿದ್ದ. ಆಕೆಯ ತಲೆಗೆ ಇಲ್ಲಸಲ್ಲದ್ದನ್ನ ತುಂಬಿದ್ದಾನೆ .ಕೊನೆಗೆ ಮೂವರು ಮಕ್ಕಳು ಹಾಗೂ ಗಂಡನನ್ನೇ ಬಿಟ್ಟುಬರುವಷ್ಟು ಬ್ರೇನ್‌ವಾಷ್‌ ಮಾಡಿದ್ದಾನೆ ಎನ್ನುವುದು ಆಕೆಯ ಪತಿ ಪ್ರಕಾಶ್ ಆರೋಪವಾಗಿದೆ.

ಪ್ರೀತಿ ಹೆಸರಲ್ಲಿ ಧರ್ಮದ ಮತಾಂತರ ನಡೆಯುತ್ತಿದ್ಯಾ?

ಗದಗ ನಗರದ ನಿವಾಸಿ ಪ್ರಕಾಶ್ ಗುಜರಾತಿ ಎನ್ನುವ ಕುಟುಂಬ ಸದ್ಯ ಅಕ್ಷರಶಃ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಸುಮಾರು ಆರೇಳು ತಿಂಗಳಿಂದ ಹೆಂಡತಿ ಕಾಣ್ತಿಲ್ಲ, ನಾಲ್ಕು ಜನ ಮಕ್ಕಳಲ್ಲಿ ಒಬ್ಬ ಮಗಳೂ ನಾಪತ್ತೆಯಾಗಿದ್ದಳು. ಪೊಲೀಸರಿಗೆ ದೂರು ಕೊಟ್ಟಾಗಲೇ ಗೊತ್ತಾಗಿದ್ದು ಮನೆ ಬಾಡಿಗೆ ಕೊಡಿಸಿದ್ದ ಮುಸ್ಲಿಂ ಯುವಕನ ಜೊತೆ ಹೆಂಡತಿ ಪರಾರಿಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾಳೆ ಎಂಬ ಕಟುಸತ್ಯ. ಕಳೆದ ಲಾಕ್ ಡೌನ್ ನಲ್ಲಿ ಗೋವಾಕ್ಕೆ ತೆರಳಿದ್ದಾಗ ಬಾಡಿಗೆ ಮನೆ ಕೊಡಿಸುವುದಾಗಿ ಹೇಳಿ ಪರಿಚಯವಾದ ಮುಸ್ಲಿಂ ಯುವಕ ಮುಕ್ಬೂಲ್ ಬಾಯಬಡಕಿ, ಪ್ರಕಾಶ್ ಗುಜರಾತಿ ಅವರ ಹೆಂಡತಿಯನ್ನ ಪುಸಲಾಯಿಸಿ ಆಕೆಯನ್ನ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸಿ ಆಕೆಯನ್ನೇ ಮದುವೆಯಾಗಿದ್ದಾನೆ ಎಂದು ಪ್ರಕಾಶ್ ಗುಜರಾತಿ ಆರೋಪಿಸಿದ್ದಾನೆ. ಇದಷ್ಟೇ ಅಲ್ಲದೆ ಸದ್ಯ ನಾಲ್ಕು ಜನ ಮಕ್ಕಳಲ್ಲಿ ಒಬ್ಬ ಅಪ್ರಾಪ್ತೆ ಬಾಲಕಿಯನ್ನೂ ಸಹ ಆ ಮುಸ್ಲೀಂ ಯುವಕನೇ ಕರೆದುಕೊಂಡು ಹೋಗಿ ಮತಾಂತರ ಮಾಡಿದ್ದಾನೆ ಎಂದು ಪ್ರಕಾಶ ಅನುಮಾನ ಹೊರಹಾಕಿದ್ದಾನೆ.

ಇನ್ನು ಪೊಲೀಸ್‌ ಕೇಸ್‌ನಿಂದ ಯಾವ ಪ್ರಯೋಜನೆವಾಗಿಲ್ಲದಿದ್ದರಿಂದ ಶ್ರೀರಾಮ ಸೇನೆ ಕೂಡಾ ಎಂಟ್ರಿಯಾಗಿದೆ. ಲವ್‌ ಜಿಹಾದ್‌ ವಿರುದ್ಧ, ಮತಾಂತರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಸಿದ್ದಾರೆ.

ಒಟ್ಟಿನಲ್ಲಿ ಮನೆ ಬಾಡಿಗೆ ಎಂದು ಬಂದವನು ಮನೆ ಯಜಮಾನಿಯನ್ನೇ ಪಟಾಯಿಸಿದ್ದಾನೆ. ಇದಎ ಹಿಂದೆ ಲವ್‌ ಜಿಹಾದ್ ಆರೋಪ ಕೇಳಿ ಬಂದಿದ್ದು, ಪೊಲೀಸರು ತನಿಖೆ ನಡೆಸಬೇಕಿದೆ.

Published On - 11:56 pm, Thu, 19 January 23

ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್