Gadag News: ವಿಂಡ್​ ಫ್ಯಾನ್​ನಿಂದ ಬೆಳೆ ನಾಶ: ರೈತ ಮಹಿಳೆ ಕಂಗಾಲು, ಸಹಾಯಕ್ಕೆ ಬರುವಂತೆ ಜಿಲ್ಲಾಡಳಿತಕ್ಕೆ‌ ಮನವಿ

ವಿಂಡ್ ಕಂಪನಿಗಳು ರೈತರ ಜಮೀನುಗಳಲ್ಲಿ ವಿಂಡ್ ಫ್ಯಾನ್ ಅಳವಡಿಸಿವೆ. ಇದ್ರಿಂದ ಪಕ್ಕದ ಜಮೀನಿನ ರೈತರ ಬೆಳೆ ಸರ್ವನಾಶ ಆಗುತ್ತಿದೆ. ಪೊಲೀಸರು ರೈತರ ನೆರವಿಗೆ ಬರುತ್ತಿಲ್ಲ. ಹೀಗಾಗಿ ರೈತರು ಜಿಲ್ಲಾಡಳಿತ, ವಿಂಡ್ ಕಂಪನಿಗಳ ವಿರುದ್ಧ ಕೆಂಡಕಾರಿದ್ದಾರೆ.

Gadag News: ವಿಂಡ್​ ಫ್ಯಾನ್​ನಿಂದ ಬೆಳೆ ನಾಶ: ರೈತ ಮಹಿಳೆ ಕಂಗಾಲು, ಸಹಾಯಕ್ಕೆ ಬರುವಂತೆ ಜಿಲ್ಲಾಡಳಿತಕ್ಕೆ‌ ಮನವಿ
ವಿಂಡ್ ಫ್ಯಾನ್​ನ ಗಾಳಿಗೆ ನೆಲಕಚ್ಚುತ್ತಿರುವ ಬೆಳೆಯನ್ನು ಸರಿ ಮಾಡುತ್ತಿರುವ ಕುಟುಂಬಸ್ಥರು
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಆಯೇಷಾ ಬಾನು

Updated on: Aug 01, 2023 | 1:14 PM

ಗದಗ, ಆ.01: ಜಿಲ್ಲೆಯಲ್ಲಿ ಪವನ ವಿದ್ಯುತ್ ಕಂಪನಿಗಳ ಅಟ್ಟಹಾಸ ಮಿತಿಮೀರಿದೆ. ಸರ್ಕಾರದ ನಿಯಮ ಗಾಳಿಗೆ ತೂರಿ ವಿಂಡ್ ಫ್ಯಾನ್ ಅಳವಡಿಸುತ್ತಿದ್ದಾರೆ. ಆದ್ರೂ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ವಿಂಡ್ ಕಂಪನಿಗಳ ಅಟ್ಟಹಾಸ ದಿನೇ ದಿನೇ ಹೆಚ್ಚುತ್ತಿದೆ. ವಿಂಡ್ ಕಂಪನಿಗಳು ರೈತರ(Farmers) ಜೀವ ಹಿಂಡುತ್ತಿವೆ. ವಿಂಡ್ ಕಂಪನಿಗಳು ರೈತರ ಜಮೀನುಗಳಲ್ಲಿ ವಿಂಡ್ ಫ್ಯಾನ್ ಅಳವಡಿಸಿವೆ. ಇದ್ರಿಂದ ಪಕ್ಕದ ಜಮೀನಿನ ರೈತರ ಬೆಳೆ ಸರ್ವನಾಶ ಆಗುತ್ತಿದೆ. ಪೊಲೀಸರು ರೈತರ ನೆರವಿಗೆ ಬರುತ್ತಿಲ್ಲ. ಹೀಗಾಗಿ ರೈತರು ಜಿಲ್ಲಾಡಳಿತ, ವಿಂಡ್ ಕಂಪನಿಗಳ ವಿರುದ್ಧ ಕೆಂಡಕಾರಿದ್ದಾರೆ.

ಕಾನೂನು ಸಚಿವರ ತವರು ಕ್ಷೇತ್ರ, ಗದಗ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ವಿಂಡ್ ಕಂಪನಿಗಳ ಹಾವಳಿ ಮಿತಿಮೀರಿದೆ. ರೈತರ ಕೃಷಿ ಜಮೀನುಗಳಲ್ಲಿ ನಾಯಿಕೊಡೆಗಳಂತೆ ಎದ್ದು ನಿಂತಿವೆ. ಕೆಲವ ರೈತರು ಅನುಮತಿ ಕೊಟ್ರೆ ಇನ್ನೂ ಕೆಲ ರೈತರು ವಿರೋಧ ಮಾಡಿದ್ದಾರೆ. ಆದ್ರೆ ಈಗ ಬುರೋಕಾ ವಿಂಡ್ ಕಂಪನಿ ಅತ್ತಿಕಟ್ಟಿ ಗ್ರಾಮದ ರೈತ ಮಹಿಳೆ ದ್ರೌಪತಿ ಲಮಾಣಿ ಜೀವ ಹಿಂಡುತ್ತಿದೆ. ದ್ರೌಪತಿ ತನ್ನ ಜಮೀನಿನಲ್ಲಿ ಗೋವಿನ ಜೋಳ ಬೆಳೆದಿದ್ದಾರೆ. ಆದ್ರೆ, ಬುರೋಕಾ ವಿಂಡ್ ಕಂಪನಿ ಪಕ್ಕದ ಜಮೀನಿನಲ್ಲಿ ಯಂತ್ರ ಅಳವಡಿಸಿದೆ. ಆದ್ರೆ, ಗಿರಗಿರ ಅಂತ ತಿರುಗೋ ಗಾಳಿಗೆ ದ್ರೌಪತಿ ಜಮೀನಿನಲ್ಲಿನ ಬೆಳೆ ಸರ್ವನಾಶ ಮಾಡ್ತಾಯಿದೆ. ಅಷ್ಟೊಇಷ್ಟು ಮಳೆಯಲ್ಲಿ ಉತ್ತಮ ಗೋವಿನ ಜೋಳ ಬೆಳೆದಿದ್ದಾರೆ. ಬೆಳೆ ಕೂಡ ಭರ್ಜರಿಯಾಗಿದೆ. ಆದ್ರೆ, ಗಿರಗಿರ ತಿರುಗುವ ಫ್ಯಾನ್ ಬೆಳೆ ನೆಲಕಚ್ಚುವಂತೆ ಮಾಡಿದೆ. ಇದು ದ್ರೌಪತಿ ಲಮಾಣಿ ಕುಟುಂಬನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.

ಇದನ್ನೂ ಓದಿ: Tomato Price Hike: ಟೊಮೆಟೊ ಬೆಲೆ ಏರಿಕೆ; ಲಕ್ಷ, ಕೋಟಿ ರೂಪಾಯಿಗಳಲ್ಲಿ ಆದಾಯ ಗಳಿಸುತ್ತಿದ್ದಾರೆ ಕರ್ನಾಟಕದ ರೈತರು

ನ್ಯಾಯ ಕೊಡಿಸದಿದ್ರೆ ಆತ್ಮಹತ್ಯೆಯೊಂದೆ ದಾರಿ

ದ್ರೌಪತಿ ಲಮಾಣಿ ಪುತ್ರರು ಗೋವಾಗೆ ದುಡಿಯಲು ಹೋಗ್ತಾರೆ. ಹೀಗಾಗಿ ಅತ್ತಿಕಟ್ಟ ಗ್ರಾಮದಲ್ಲಿ ದ್ರೌಪತಿ ಲಮಾಣಿ ಮಾತ್ರ ಇರ್ತಾರೆ. ದ್ರೌಪತಿಗೆ 70 ವರ್ಷ ವಯಸ್ಸಾಗಿದೆ. ಹೀಗಾಗಿ ವಿಂಡ್ ಕಂಪನಿ ದಬ್ಬಾಳಿಕೆಯಿಂದ ಜಮೀನಿನಲ್ಲಿ ರಸ್ತೆ ಮಾಡಿದೆ. ದ್ರೌಪತಿ ಪುತ್ರರು ಮುಳಗುಂದ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದಾರಂತೆ. ಅದ್ರೆ, ರೈತ ಕುಟುಂಬದ ನೆರವಿಗೆ ಧಾವಿಸಬೇಕಾದ ಪೊಲೀಸ್ ಅಧಿಕಾರಿಗಳು ವಿಂಡ್ ಕಂಪನಿ ಪರ ಬ್ಯಾಟಿಂಗ್ ಮಾಡ್ತಾಯಿದ್ದಾರೆ ಅಂತ ರೈತ ಕುಟುಂಬ ಆರೋಪಿಸಿದೆ. ಪೊಲೀಸ್ ಅಧಿಕಾರಿಗಳು ನಮಗೆ ಅವಾಜ್ ಹಾಕ್ತಾರೆ. ಕೇಸ್ ಮಾಡಿ ಒಳಗೆ ಹಾಕುವ ಬೆದರಿಕೆ ಹಾಕ್ತಾರೆ ಅಂತ ಆರೋಪಿಸಿದ್ದಾರೆ. ಅನ್ಯಾಯ ಆಗಿದ್ದು ದೂರು ನೀಡಿದ್ದು ನಾವು ಆದ್ರೆ ಪೊಲೀಸ್ ಅಧಿಕಾರಿಗಳು ವಿಂಡ್ ಕಂಪನಿಗಳ ಪರ ಕೆಲಸ ಮಾಡ್ತಾಯಿದ್ದಾರೆ ಅಂತ ಕಿಡಿಕಾರಿದ್ದಾರೆ. ಜಿಲ್ಲಾಡಳಿತ ನಮಗೆ ನ್ಯಾಯ ಕೊಡಿಸದಿದ್ರೆ ಆತ್ಮಹತ್ಯೆಯೊಂದೆ ದಾರಿ ಅಂತ ರೈತ ಕುಟುಂಬ ಎಚ್ಚರಿಕೆ ನೀಡಿದೆ.

Gadag News farmer woman facing crop damage due to wind fans installed in farming land filled case

ದ್ರೌಪತಿ ಲಮಾಣಿ ಕುಟುಂಬಸ್ಥರು

ರೈತರು ಮೊದಲೇ ಕೃಷಿ ಮಾಡಿ ಜೀವನ ನಡೆಸೋದು ಕಷ್ಟವಾಗಿದೆ. ಮಳೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಅಷ್ಟೊ ಇಷ್ಟು ಮಳೆಗೆ ಉತ್ತಮ ಗೋವಿನ ಜೋಳ ಬೆಳೆದ ರೈತರು ಈಗ ವಿಂಡ್ ಕಂಪನಿ ಹಾಳು ಮಾಡ್ತಾಯಿದೆ. ರೈತನ ಕುಟುಂಬದ ನೆರವಿಗೆ ನಿಲ್ಲಬೇಕಾದ ಪೊಲೀಸ್ ಅಧಿಕಾರಿಗಳು ಕಂಪನಿ ಅಧಿಕಾರಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ. ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ. ಹೀಗಾಗಿ ವಿಂಡ್ ಕಂಪನಿಗಳು ರೈತರ ಜೀವ ಹಿಂಡುತ್ತಿವೆ. ಇಷ್ಟೆಲ್ಲಾ ಅನ್ನದಾತರಿಗೆ ಅನ್ಯಾಯ ಆಗ್ತಾಯಿರೋದು ಕಾನೂನು ಸಚಿವ ಎಚ್ ಕೆ ಪಾಟೀಲ್ ತವರು ಕ್ಷೇತ್ರದಲ್ಲಿ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಕೊಡಿಸ್ತಾರಾ ಕಾದುನೋಡಬೇಕಿದೆ.

ಗದಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ