ಗದಗ, ಅಕ್ಟೋಬರ್ 21: ನಗರದ ಭೀಷ್ಮ ಕೆರೆ ಆವರಣದಲ್ಲಿ ಅಕ್ಟೋಬರ್ 21 ರಿಂದ ನವೆಂಬರ್ 5 ರವರೆಗೆ ಏಳು ವರ್ಷ ಮೇಲ್ಪಟ್ಟ ಮಕ್ಕಳು, ಯುವಕರು ಹಾಗೂ ವಯಸ್ಕರಿಗಾಗಿ ಏರ್ಪಡಿಸಿದ ಹಾಯಿ ದೋಣಿ ಜಲಕ್ರೀಡಾ ತರಬೇತಿ ಶಿಬಿರಕ್ಕೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ (H K Patil) ಅವರು ಚಾಲನೆ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಸ್ಪೋರ್ಟ ಅಸೋಸಿಯೇಷನ್ ಸಹಯೋಗದಲ್ಲಿ ಈ ಹಾಯಿ ದೋಣಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 22 ರಿಂದ 26 ರವರೆಗೆ ಮೊದಲ ಹಂತದ ತರಬೇತಿ, ಅಕ್ಟೋಬರ್ 27 ರಿಂದ 31 ರವರೆಗೆ ಎರಡನೇ ಹಂತದ ತರಬೇತಿ, ನವೆಂಬರ್ 1 ರಿಂದ ನವೆಂಬರ್ 5 ರವರೆಗೆ ಮೂರನೇ ಹಂತದ ತರಬೇತಿ ಬ್ಯಾಚ್ಗಳು ನಡೆಯಲಿವೆ. ಪ್ರತಿ ದಿನ ಮೊದಲ ಬ್ಯಾಚ್ ಬೆಳಿಗ್ಗೆ 9.30 ರಿಂದ ಮ. 1.30 ರವರೆಗೆ ಹಾಗೂ ಎರಡನೇ ಬ್ಯಾಚ್ ಮ.2.30 ರಿಂದ 6.30 ರವರೆಗೆ ನಿರಂತರವಾಗಿ ನಡೆಯಲಿವೆ.
ಇದನ್ನೂ ಓದಿ: ಬಡ ರೋಗಿಗಳ ಜೀವದ ಜೊತೆ ಗದಗ ಜಿಮ್ಸ್ ಆಡಳಿತ ಚೆಲ್ಲಾಟ!ಡಯಾಲಿಸಸ್ ರೋಗಿಗಳ ನರಳಾಟ
ಸಚಿವ ಎಚ್.ಕೆ.ಪಾಟೀಲ ಅವರು ಹಾಯಿ ದೋಣಿಗಳಿಗೆ ಹಾಗೂ ಭೀಷ್ಮ ಕೆರೆಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದರು. ಹಾಯಿ ದೋಣಿ ಕ್ರೀಡೆಯು ಓಲಂಪಿಕ್ ಕ್ರೀಡೆಯಾಗಿದ್ದು ಈ ಹಾಯಿ ದೋಣಿ ತರಬೇತಿ ಪಡೆಯುವ ಮೂಲಕ ಯುವ ಸಮುದಾಯ ಓಲಂಪಿಕ್ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಿದೆ ಎಂದು ತರಬೇತಿ ಶಿಬಿರ ಯಶಸ್ವಿಯಾಗಲೆಂದು ಶುಭ ಕೋರಿದರು.
ಇದನ್ನೂ ಓದಿ: ಗದಗದಲ್ಲಿ ಅಕ್ರಮ ಕಬ್ಬಿಣದ ಅದಿರು ಸಂಗ್ರಹ; ಗಣಿ ಇಲಾಖೆ ಕುಮ್ಮಕ್ಕಿನಿಂದಲೇ ನಡಿತಿದ್ಯಾ ಗಣಿಗಾರಿಕೆ?
ಈ ಸಂದರ್ಭದಲ್ಲಿ ಸರ್ಕಾರಿ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ , ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ, ಗಣ್ಯರಾದ ಸಿದ್ದು ಪಾಟೀಲ, ವಾಸಣ್ಣ ಕುರಡಗಿ, ಪ್ರಭು ಬುರಬುರೆ, ಬಿ.ಬಿ.ಅಸೂಟಿ, ಫಾರೂಕ, ಅಶೋಕ ಮಂದಾಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು , ಸಾರ್ವಜನಿಕರು ಹಾಜರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.