ಪಕ್ಷಕ್ಕೆ ಧಕ್ಕೆಯಾಗುವ ಹೇಳಿಕೆ ನೀಡದಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ: ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ಸಹಕಾರ ಇಲಾಖೆಯ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪಕ್ಷಕ್ಕೆ ಧಕ್ಕೆಯಾಗುವ ಹೇಳಿಕೆ ನೀಡದಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದು ಹಾಗಾಗಿ ಪಕ್ಷಕ್ಕೆ ಧಕ್ಕೆ ಬರುವುದಾದರೆ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸಹಕಾರ ಇಲಾಖೆಯ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಬೆಂಗಳೂರು, ಅಕ್ಟೋಬರ್ 21: ಪಕ್ಷಕ್ಕೆ ಧಕ್ಕೆಯಾಗುವ ಹೇಳಿಕೆ ನೀಡದಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದು ಹಾಗಾಗಿ ಪಕ್ಷಕ್ಕೆ ಧಕ್ಕೆ ಬರುವುದಾದರೆ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸಹಕಾರ ಇಲಾಖೆಯ ಸಚಿವ ಕೆ.ಎನ್.ರಾಜಣ್ಣ (KN Rajanna) ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ, ಲೋಕಸಭೆ ಚುನಾವಣೆ ಹಿನ್ನೆಲೆ DCM ಹುದ್ದೆ ಸೃಷ್ಟಿ ಅಗತ್ಯವೆಂದಿದ್ದೆ. ಯಾರೋ ಹೇಳಿದ್ರು ಅಂತಾ ನಾನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ 136 ಶಾಸಕರು ಗೆದ್ದಿದ್ದೀವಿ ಅಂತಾ ಬೀಗುವ ಸ್ಥಿತಿಯಲ್ಲಿಲ್ಲ. ಲೋಕಸಭೆ ಚುನಾವಣೆಗೆ ಉದಾಸೀನ ಭಾವನೆ ಬರಬಾರದು. ಹೀಗಾಗಿ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ಬಗ್ಗೆ ಮಾತನಾಡಿದ್ದೀನಿ. ಇದನ್ನು ಈಗಾಗಲೇ ಕೇಂದ್ರದ ನಾಯಕರ ಗಮನಕ್ಕೂ ತರಲಾಗಿದೆ ಎಂದರು.
ಅ.25ರಂದು ಕೇಂದ್ರದ ಹಿರಿಯ ಅಧಿಕಾರಿಗಳ ಭೇಟಿಗೆ ಅವಕಾಶ ನೀಡಿದ್ದಾರೆ. ರಾಜ್ಯದಲ್ಲಿನ ಬರದ ಕುರಿತಾಗಿ ಮಾಹಿತಿ ನೀಡುತ್ತೇವೆ. 16 ಸಾವಿರ ಕೋಟಿ ರೂ. ಬರ ಪರಿಹಾರ ಹಣ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಕೇಂದ್ರದ ಮಾನದಂಡದ ಆಧಾರದ ಮೇಲೆ 4,800 ಕೋಟಿ ರೂ. ನೀಡುತ್ತಾರೆ. ರಾಜ್ಯಕ್ಕೆ ಬಂದಿದ್ದ ಬರ ಅಧ್ಯಯನ ತಂಡ ವರದಿ ಸಲ್ಲಿಸಿರುವ ಮಾಹಿತಿ ಇಲ್ಲ ಎಂದು
ಅಧಿಕಾರಕ್ಕೆ ಅಂಟಿಕೊಂಡಿರುವ ವ್ಯಕ್ತಿಯಲ್ಲ, ಸಂತೋಷವಾಗಿ ಹೋಗುವೆ
ಮುಜುಗರ, ಗೊಂದಲ ಆಗದಂತೆ ಅಧ್ಯಕ್ಷರು, ವರಿಷ್ಠರು ಹೇಳಿದ್ದಾರೆ. ಇದನ್ನು ಬಿಟ್ಟು ಏನೂ ಮಾತಾಡೋಕೆ ಯಾರೂ ಹೋಗಲ್ಲ. ಪಕ್ಷದ ಹಿತದೃಷ್ಟಿಯಿಂದ ಸಲಹೆ ಸ್ವೀಕರಿಸೋದು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ. ಸಂಪುಟ ಬದಲಾದರೆ ತ್ಯಾಗ ಮಾಡಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾಳೆಯೇ ನನ್ನನ್ನು ತೆಗೆದ್ರೂ ಆ್ಯಮ್ ಎ ಹ್ಯಾಪಿಸ್ಟ್ ಮ್ಯಾನ್. ಅಧಿಕಾರಕ್ಕೆ ಅಂಟಿಕೊಂಡಿರುವ ವ್ಯಕ್ತಿಯಲ್ಲ, ಸಂತೋಷವಾಗಿ ಹೋಗುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಕಲಿ ವೋಟರ್ ಐಡಿ: ಸಚಿವ ಭೈರತಿ ಸುರೇಶ್ ವಿರುದ್ಧ ಎನ್ ರವಿಕುಮಾರ್ ವಾಗ್ದಾಳಿ
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಮಾಡುವುದಕ್ಕೆ ಏನೂ ಕೆಲಸ ಇಲ್ಲ. ಯಾವ ಸಂದರ್ಭಕ್ಕೆ ಏನು ಬೇಕೋ ಅದನ್ನು ಹೇಳುತ್ತಾ ಹೋಗುತ್ತಾರೆ. ಬರಗಾಲ ಇರುವ ಕಾರಣ ವಿದೇಶ ಪ್ರವಾಸ ಹೋಗದಂತೆ ಸಹಕಾರ ಸಂಘಗಳಿಗೆ ಸೂಚನೆ ನೀಡಿದ್ದೇವೆ ಎಂದರು.
ಸತೀಶ್ ಜಾರಕಿಹೊಳಿಗೆ ಅಸಮಾಧಾನ ಇಲ್ಲ, ಇದ್ದರೂ ಇರಬಹುದು. ಒಂದು ವೇಳೆ ಅಸಮಾಧಾನ ಇದ್ದರೆ ಸಿಎಂ ಬಳಿ ಮಾತಾಡುತ್ತಾರೆ. ನಾನು, ಬಿ.ನಾಗೇಂದ್ರ, ಸತೀಶ್ ವಾಲ್ಮೀಕಿ ಪ್ರಶಸ್ತಿ ಬಗ್ಗೆ ಮಾತನಾಡಿದ್ದೆವು ಎಂದಿದ್ದಾರೆ.
ನಾನು ಯಾರ ಪರ, ವಿರೋಧವೂ ಇಲ್ಲ
ಹಾಸನ ಲೋಕಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ತಯಾರಿ ಚೆನ್ನಾಗಿ ನಡೆಯುತ್ತಿದೆ, ನಾಳೆ ಸಭೆ ಕರೆದಿದ್ದೇನೆ. ಸೋತವರ, ಸ್ಥಳೀಯ ಮುಖಂಡರನ್ನ ಕರೆದು ಸಭೆ ಮಾಡುತ್ತೇವೆ. ಇಲ್ಲಿನ ನಾಯಕರ ನಿರ್ದೇಶನದ ಮೇರೆಗೆ ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ನೋಡೋಣ. ನಾನು ಯಾರ ಪರ, ವಿರೋಧವೂ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಪಿಐಎಂ ಸಭ್ಯ ಭಾಷೆ ಬಳಸಬಹುದಿತ್ತು: ಕೇರಳ ಸಿಎಂ ಪಿಣರಾಯಿ ಹೇಳಿಕೆಗೆ ದೇವೇಗೌಡ ಅಸಮಾಧಾನ
ಸಾಲಮನ್ನಾ, ಬಡ್ಡಿ ಮನ್ನಾ ಮಾಡುವ ವಿಚಾರವಾಗಿ ಮಾತನಾಡಿ, ಅಲ್ಪಾವಧಿ ಬಡ್ಡಿ ಮನ್ನಾ ಮಾಡಬಹುದು. ನಬಾರ್ಡ್ನಿಂದ 4000 ಕೋಟಿ ರೂ. ಬರಬೇಕಿತ್ತು. ಆದರೆ ಇಲ್ಲಿಯವರೆಗೆ ಆ ಹಣ ಬಿಡುಗಡೆಯಾಗಿಲ್ಲ. ಈಗ ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದಾರೆ.
ನವೆಂಬರ್ 2ರಿಂದ ಹಾಸನಾಂಬೆಯ ದರ್ಶನ ಆರಂಭ
ನವೆಂಬರ್ 2ರಿಂದ ಹಾಸನಾಂಬೆಯ ದರ್ಶನ ಆರಂಭ ಆಗಲಿದೆ. ಕಳೆದ ವರ್ಷ 6 ಲಕ್ಷ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದರು. ಪ್ರಸಕ್ತ ವರ್ಷ 10 ಲಕ್ಷ ಭಕ್ತರು ದರ್ಶನ ಪಡೆಯುವ ನಿರೀಕ್ಷೆ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.