AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗದಲ್ಲಿ ಅಕ್ರಮ ಕಬ್ಬಿಣದ ಅದಿರು ಸಂಗ್ರಹ; ಗಣಿ ಇಲಾಖೆ ಕುಮ್ಮಕ್ಕಿನಿಂದಲೇ ನಡಿತಿದ್ಯಾ ಗಣಿಗಾರಿಕೆ?

ಕಬ್ಬಿಣದ ಅದಿರು ಪ್ರತ್ಯೇಕ ಮಾಡಿ ಸಾಗಾಟ ಮಾಡಲು ತಯ್ಯಾರಿ ನಡೆಸಿದ್ದು, ಈ ಕುರಿತು ಗದಗ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಗದಗ ತಹಶೀಲ್ದಾರ್​ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿದ ಕಬ್ಬಿಣದ ಅದಿರು ವಶಕ್ಕೆ ಪಡೆಯಲಾಗಿದೆ.

ಗದಗದಲ್ಲಿ ಅಕ್ರಮ ಕಬ್ಬಿಣದ ಅದಿರು ಸಂಗ್ರಹ; ಗಣಿ ಇಲಾಖೆ ಕುಮ್ಮಕ್ಕಿನಿಂದಲೇ ನಡಿತಿದ್ಯಾ ಗಣಿಗಾರಿಕೆ?
ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Oct 19, 2023 | 9:55 PM

Share

ಗದಗ, ಅ.19: ಜಿಲ್ಲೆಯ ಹುಲಕೋಟಿ ಗ್ರಾಮದ ಸಮೀಪದ ಜಮೀನೊಂದರಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರನ್ನು ಲೂಟಿ ಮಾಡಿ ಜಮೀನೊಂದರಲ್ಲಿ ಸಂಗ್ರಹ ಮಾಡಿದ್ದಾರೆ. ಹೌದು, ಗದಗ(Gadag) ಜಿಲ್ಲೆ ಪಂಚಖನಿಜ ಸಂಪತ್ತು ಹೊಂದಿದ ಜಿಲ್ಲೆಯಾಗಿದ್ದು, ಹೀಗಾಗಿ ಅಕ್ರಮ ದಂಧೆಕೋರರ ಕೆಂಗಣ್ಣು ಯಾವಾಗಲೂ ಈ ಜಿಲ್ಲೆಯ ಮೇಲೆ ಇದೆ. ಈ ಹಿಂದೆ ಗದಗ ತಾಲೂಕಿನ ಹಲವು ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಕಬ್ಬಿಣದ ಅದಿರು ಅಕ್ರಮ ಸಾಗಾಟ ಮಾಡಲಾಗಿದೆ. ಕೆಲ ಪ್ರದೇಶದಲ್ಲಿ 40-42 ಗ್ರೇಡ್ ಕಬ್ಬಿಣದ ಅದಿರು ಇದೆ ಎಂದು ಈ ಹಿಂದೆ ಗಣಿ ಅಧಿಕಾರಿಗಳೇ ಹೇಳಿಕೊಂಡಿದ್ದಾರೆ. ಅಂದು ದೊಡ್ಡ ದೊಡ್ಡ ಗಣಿ ಕುಳಗಳು ಜೈಲು ಸೇರಿದ ಬಳಿಕ ಸಣ್ಣಪುಟ್ಟ ದಂಧೆಕರೋರರು ಸೈಲೆಂಟ್ ಆಗಿದ್ದರು. ಆದ್ರೆ, ಈಗ ಮತ್ತೆ ಸದ್ದಿಲ್ಲದೇ ಬಾಲ ಬಿಚ್ಚಿದ್ದಾರೆ. ರಾತ್ರೋರಾತ್ರಿ ಗುಡ್ಡಗಳನ್ನು ಅಗೆದು, ರೈತರ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅಲ್ಲಿಂದ ಕಬ್ಬಿಣದ ಅದಿರು ಪ್ರತ್ಯೇಕ ಮಾಡಿ ಸಾಗಾಟ ಮಾಡಲು ತಯ್ಯಾರಿ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಗದಗ ತಹಶೀಲ್ದಾರ್​ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿದ ಕಬ್ಬಿಣದ ಅದಿರು ವಶಕ್ಕೆ ಪಡೆಯಲಾಗಿದೆ. ಸರ್ವೇ ನಂಬತ್ 35/1+2ಬಿ ಸುಮಾರು 201ಕ್ಯೂಬಿಕ್ ಮೀಟರ್ ನಷ್ಟು ಅಕ್ರಮ ಕಬ್ಬಿಣದ ಅದಿರು ಸಂಗ್ರಹ ಮಾಡಿದ್ದು, ಎಲ್ಲವೂ ಜಪ್ತಿ ಮಾಡಲಾಗಿದೆ. ಉಮರ ಬಬ್ಲು ಎಂಬ ವ್ಯಕ್ತಿ ಅಕ್ರಮ ಕಬ್ಬಿಣ ಅದಿರು ಸಂಗ್ರಹ ಮಾಡಿದ್ದ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಗಣಿ ಮಾಫಿಯಾದಿಂದ 1.48 ಕೋಟಿ ರೂ. ದಂಡ ವಸೂಲಿ ಮಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಕಬ್ಬಿಣದ ಅದಿರು ಸಂಗ್ರಹ ಮಾಡಿ ಟೆಸ್ಟ್​ಗೆ

ಹುಲಕೋಟಿ ಬಳಿ ಜಮೀನಿನಲ್ಲಿ ಸಂಗ್ರಹ ಮಾಡಿದ ಕಬ್ಬಿಣದ ಅದಿರು ಸಂಗ್ರಹ ಮಾಡಿ ಟೆಸ್ಟ್ ಗೆ ಲ್ಯಾಬ್ ಗೆ ಕಳಿಸಲಾಗಿದ್ದು, ಘಟನೆ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲು ಮಾಡಲಾಗಿದೆ. ಈ ಅಕ್ರಮ ಅದಿರು ಎಲ್ಲಿಂದ ತರಲಾಗಿದೆ ಅನ್ನೋ ಬಗ್ಗೆ ತನಿಖೆ ನಡೆದಿದೆ. ತನಿಖೆ ಬಳಿಕ ಈ ಕಬ್ಬಿಣದ ಅದಿರು ಎಲ್ಲಿಂದ ತರಲಾಗಿದೆ. ಈ ದಂಧೆ ಹಿಂದೆ ಯಾರ್ಯಾರು ಇದ್ದಾರೆ ಎನ್ನುವ ಬಗ್ಗೆ ಗೋತ್ತಾಗಲಿದೆ ಎಂದು ಗದಗ ತಹಶೀಲ್ದಾರ್​ ತಿಳಿಸಿದ್ದಾರೆ. ದಂಧೆಕೋರರು ರಾಜಾರೋಷವಾಗಿ ಜಮೀನಿನಲ್ಲಿ ಕಬ್ಬಿಣ ಅದಿರು ಸಂಗ್ರಹ ಮಾಡಿ, ಗ್ರೇಡಿಂಗ್ ಕೂಡ ಮಾಡ್ತಾಯಿದ್ದಾರೆ. ಇಷ್ಟೆಲ್ಲ ನಡೆದರೂ ಗಣಿ ಇಲಾಖೆ ಮಾತ್ರ ಕುಂಭಕರ್ಣ ನಿದ್ದೆಗೆ ಜಾರಿದೆ. ಇನ್ನು ಗದಗ ಜಿಲ್ಲೆಯ ಹಲವು ಗುಡ್ಡಗಳಲ್ಲಿ ಕಬ್ಬಿಣದ ಅದಿರು ಹೆಚ್ಚಿದೆ.

ಗಣಿಗಾರಿಕೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರಾ?

ಹೀಗಾಗಿ ಆ ಪ್ರದೇಶಗಳಿಂದಲೇ ರಾತ್ರೋರಾತ್ರಿ ಲೂಟಿ ಮಾಡಿ ಇಲ್ಲಿ ಸಂಗ್ರಹ ಮಾಡಲಾಗಿದೆಯಾ ಎನ್ನುವ ಅನುಮಾನ ಮೂಡುತ್ತಿದೆ. ಜಿಲ್ಲೆಯ ಹಲವಡೆ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆದಿದೆ. ಆದ್ರೆ, ಗಣಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ರು ಗಪ್ ಚುಪ್ ಇದ್ದಾರೆ. ಹೀಗಾಗಿ ಈ ಅಕ್ರಮ ಅದಿರು ಗಣಿಗಾರಿಕೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರ ತವರಲ್ಲೇ ಕಾನೂನು ಉಲ್ಲಂಘಿಸಿ ಅಕ್ರಮ ದಂಧೆ ನಡೆದಿದ್ದು, ವಿಪರ್ಯಾಸವೇ ಸರಿ. ಇನ್ನಾದರೂ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ಮಾಡುವ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ