ಚಿಕ್ಕಬಳ್ಳಾಪುರ: ಗಣಿ ಮಾಫಿಯಾದಿಂದ 1.48 ಕೋಟಿ ರೂ. ದಂಡ ವಸೂಲಿ ಮಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಟಿಪ್ಪರ್​ಗಳಲ್ಲಿ ಅಕ್ರಮವಾಗಿ ಜಲ್ಲಿ, ಎಂ.ಸ್ಯಾಂಡ್ ಸೇರಿದಂತೆ ಕಲ್ಲಿನ ಉತ್ಪನ್ನಗಳನ್ನು ಸಾಗಿಸುತ್ತಿದ್ದಾಗ 2022-23 ಹಾಗೂ 2023-24ನೇ ಸಾಲಿನಲ್ಲಿ ಟಿಪ್ಪರ್​​ಗಳನ್ನು ತಡೆದು, ಅವುಗಳ ಮಾಲೀಕರಿಂದ 1,26,43,043 ರೂಪಾಯಿಗಳ ದಂಡ ವಸೂಲಿ ಮಾಡಲಾಗಿದ್ದು, 373 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಚಿಕ್ಕಬಳ್ಳಾಪುರ: ಗಣಿ ಮಾಫಿಯಾದಿಂದ 1.48 ಕೋಟಿ ರೂ. ದಂಡ ವಸೂಲಿ ಮಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಗಣಿ ಮಾಫಿಯಾದಿಂದ 1.48 ಕೋಟಿ ರೂ. ದಂಡ ವಸೂಲಿ ಮಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: Rakesh Nayak Manchi

Updated on: Oct 15, 2023 | 2:33 PM

ಚಿಕ್ಕಬಳ್ಳಾಪುರ, ಅ.15: ಬಳ್ಳಾರಿಯ ಗಣಿಯನ್ನೇ ಮೀರಿಸುವ ಹಾಗೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ಕಲ್ಲು ಗಣಿಗಾರಿಕೆ ಬೆಳೆದು ನಿಂತಿದೆ. 202 ಕಲ್ಲು ಕ್ವಾರಿಗಳು ಹಾಗೂ 77 ಕ್ರಷರ್ ಘಟಕಗಳು ಆರ್ಭಟಿಸುತ್ತಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನ್ಯಾಯಯುತವಾಗಿ ಕಟ್ಟಬೇಕಾಗಿರುವ ರಾಜಧನ ವಂಚಿಸಿ, ಕಳ್ಳ ಮಾರ್ಗದಲ್ಲಿ ಕಲ್ಲು ಹಾಗೂ ಕಲ್ಲಿನ ಉತ್ಪನ್ನಗಳನ್ನು ರಸ್ತೆಯಲ್ಲಿ ಸಾಗಿಸುತ್ತಿದ್ದಾಗ ಅದನ್ನು ತಡೆದು ಬರೋಬ್ಬರಿ 1,48,32,817 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಅಕ್ರಮವಾಗಿ ಕಲ್ಲಿನ ಉತ್ಪನ್ನಗಳ ಸಾಗಾಟ

ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಟಿಪ್ಪರ್​ಗಳಲ್ಲಿ ಅಕ್ರಮವಾಗಿ ಜಲ್ಲಿ, ಎಂ.ಸ್ಯಾಂಡ್ ಸೇರಿದಂತೆ ಕಲ್ಲಿನ ಉತ್ಪನ್ನಗಳನ್ನು ಸಾಗಿಸುತ್ತಿದ್ದಾಗ 2022-23 ಹಾಗೂ 2023-24ನೇ ಸಾಲಿನಲ್ಲಿ ಟಿಪ್ಪರ್​​ಗಳನ್ನು ತಡೆದು, ಅವುಗಳ ಮಾಲೀಕರಿಂದ 1,26,43,043 ರೂಪಾಯಿಗಳ ದಂಡ ವಸೂಲಿ ಮಾಡಲಾಗಿದ್ದು, 373 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರದಿಂದ ಸರ್ಕಸ್, ಚಿನ್ನದ ಮೊಟ್ಟೆ ಗಣಿ ಇಲಾಖೆಯಲ್ಲಿ ರಾಜಧನ ಸೊರಿಕೆ ತಡೆಗೆ ವಿನೂತನ ಪ್ಲಾನ್!

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಗ್ರಾನೈಟ್ ದಿಂಡುಗಳು ಸೇರಿದಂತೆ ಅಕ್ರಮವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಅವರಿಂದ 21,89,774 ರೂಪಾಯಿಗಳ ದಂಡ ವಸೂಲಿ ಮಾಡಲಾಗಿದ್ದು, 26 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಒಟ್ಟಿನಲ್ಲಿ, ರಾಜ್ಯಸರ್ಕಾರಕ್ಕೆ ರಾಜಧನ ವಂಚಿಸಿ ಕಲ್ಲಿನ ಉತ್ಪನ್ನಗಳ ಸಾಗಾಟ ಒಂದಡೆಯಾದರೆ, ಮತ್ತೊಂದಡೆ ಅಕ್ರಮ ಗಣಿಗಾರಿಕೆ ಪ್ರಕರಣಗಳು ಕಂಡುಬಂದಿವೆ. ಇದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಆಗಾಗ್ಗೆ ಕಾರ್ಯಾಚರಣೆ ನಡೆಸಿ ದಂಡ ವಸೂಲಿ ಮಾಡಿ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ