ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ಮಕ್ಕಳಿಗಿಲ್ಲ ರಕ್ಷಣೆ: ಅನುಮಾನಕ್ಕೆ ಕಾರಣವಾಯ್ತು ಅಧಿಕಾರಿಗಳ ಹೇಳಿಕೆ!
ಗದಗ ನಗರದ ಬೆಟಗೇರಿಯ ಬಾಲಕರ ಬಾಲ ಮಂದಿರದಲ್ಲಿ 15 ವರ್ಷದ ಬಾಲಕನ ಬೆನ್ನು ಸುಟ್ಟು ಗಂಭೀರ ಗಾಯಗೊಂಡು ಒದ್ದಾಡುತ್ತಿದ್ದಾನೆ. ಆದರೆ ಈ ಬಾಲಕನಿಗೆ ಸುಟ್ಟ ಗಾಯ ಆಗಿದ್ದಾದ್ರೂ ಹೇಗೆ ಅನ್ನೋ ಸಾಕಷ್ಟು ಚರ್ಚೆ, ಅನುಮಾನ ಕಾಡ್ತಾಯಿದೆ. ಅಕ್ಟೋಬರ್ 3 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗದಗ, ನವೆಂಬರ್ 16: ಗದಗ ಬಾಲಕರ ಬಾಲ ಮಂದಿರ (kindergarten) ದಲ್ಲಿ ಮಕ್ಕಳಿಗಿಲ್ಲ ರಕ್ಷಣೆ ಇಲ್ಲದಂತಾಗಿದೆ. ತಂದೆ, ತಾಯಿ ಇಲ್ಲದ ಅನಾಥ ಮಕ್ಕಳು ಸೇರಿದ ಸಾಕಷ್ಟು ಮಕ್ಕಳು ಇದ್ದಾರೆ. ಬೇರೆ ಬೇರೆ ಕಾರಣಗಳಿಂದ ಸಾಕಷ್ಟು ಮಕ್ಕಳು ಬಾಲಕರ ಬಾಲ ಮಂದಿರ ಸೇರಿದ್ದಾರೆ. ಆದರೆ ಇಲ್ಲಿ ಈಗ ಮಕ್ಕಳ ರಕ್ಷಣೆ ಇದೆಯಾ ಅನ್ನೋ ಅನುಮಾನ ಕಾಡ್ತಾಯಿದೆ. ನಾಲ್ಕು ದಿನಗಳ ಹಿಂದೆ ನಡೆದ ಘಟನೆ ಬಾಲಕನ ದೇಹವೆ ಸುಟ್ಟು ಹೋಗಿದೆ. ಮಗು ವಿಲವಿಲ ಅಂತಿದೆ. ಆದರೆ ಇದು ಮಕ್ಕಳ ಆಟದಲ್ಲಿ ಈ ರೀತಿ ಆಗಿದೆ ಅಂತ ಅಧಿಕಾರಿಗಳು ಹೇಳ್ತಾಯಿದ್ದಾರೆ. ಆದರೆ ಮಗುವಿನ ದೇಹ ಸುಡಲು ಕಾರಣದ ಬಗ್ಗೆ ಅಧಿಕಾರಿಗಳು ನೀಡಿರುವ ಹೇಳಿಕೆ ಸಾಕಷ್ಟು ಅನುಮಾನ ಹುಟ್ಟಿಸಿದೆ.
ಗದಗ ನಗರದ ಬೆಟಗೇರಿಯ ಬಾಲಕರ ಬಾಲ ಮಂದಿರದಲ್ಲಿ 15 ವರ್ಷದ ಬಾಲಕನ ಬೆನ್ನು ಸುಟ್ಟು ಗಂಭೀರ ಗಾಯಗೊಂಡು ಒದ್ದಾಡುತ್ತಿದ್ದಾನೆ. ಆದರೆ ಈ ಬಾಲಕನಿಗೆ ಸುಟ್ಟ ಗಾಯ ಆಗಿದ್ದಾದ್ರೂ ಹೇಗೆ ಅನ್ನೋ ಸಾಕಷ್ಟು ಚರ್ಚೆ, ಅನುಮಾನ ಕಾಡ್ತಾಯಿದೆ. ಅಕ್ಟೋಬರ್ 3 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಓರ್ವ ಬಾಲಕನಿಗೆ ಬೆಂಕಿ ತಗುಲು ಬೆನ್ನು ಸಂಪೂರ್ಣ ಸುಟ್ಟು ಹೋಗಿದೆ. ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಚಿಕಿತ್ಸೆ ಕೊಡಿಸಿದ್ದಾರೆ. ನಾಲ್ಕೈದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ವಾಪಸ ಬಾಲ ಮಂದಿರಕ್ಕೆ ಕರೆತಂದಿದ್ದಾರೆ. ಈಗ ಬಾಲಕ ಬಾಲ ಮಂದಿರದಲ್ಲಿ ನೋವಿನಿಂದ ನರಳುತ್ತಿದ್ದಾನೆ. ಆದರೆ ಬಾಲ ಮಂದಿರದ ಬಾಲಕರು ಆವರಣದಲ್ಲಿ ಸ್ಯಾನಿಟೈಜರ್ ಮೂಲಕ ಆಟ ಆಡುತ್ತಿರುವಾಗ ಈ ಬಾಲಕನ ಮೇಲೆ ಸ್ಯಾನಿಟೈಜರ್ ಚೆಲ್ಲಿದೆ. ಆಗ ಓರ್ವ ಬಾಲಕ ಬೆಂಕಿ ಗೀರಿದ್ದಾನೆ. ಆಗ ಈ ಘಟನೆ ನಡೆದಿದೆ ಅಂತ ಬಾಲ ಮಂದಿರ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ತಾಂಡದಲ್ಲಿ ದೀಪಾವಳಿ ಸಂಭ್ರಮ;ಬೆಟ್ಟಹತ್ತಿ ಹೂ ತಂದು ದೇವಸ್ಥಾನದ ಎದುರು ನೃತ್ಯ
ಸ್ಯಾನಿಟೈಜರ್ ಬಾಲ ಮಂದಿರದ ಮಕ್ಕಳಿಗೆ ಸಿಕ್ಕಿದ್ದಾದ್ರೂ ಹೇಗೆ ಅನ್ನೋ ಪ್ರಶ್ನೆ ಕಾಡ್ತಾಯಿದೆ. ಶಾಲೆಯಿಂದ ಬರುವಾಗಿ ಈ ಬಾಲಕನಿಗೆ ಸ್ಯಾನಿಟೈಜರ್ ಬಾಟಲ್ ಸಿಕ್ಕಿದೆ. ರಾತ್ರಿ ಊಟದ ನಂತರ ಸ್ಯಾನಿಟೈಜರ್ ಎರಚುತ್ತಾ ಆಟ ಆಡುವಾಗ ಘಟನೆ ಎಂದ ಸಿಬ್ಬಂದಿ ಹೇಳ್ತಾಯಿದ್ದಾರೆ. ಆದ್ರೆ, ಬಾಲಕ ಘಟನೆಯಿಂದ ಜರ್ಜರಿತನಾಗಿದ್ದಾನೆ.
ಬಾಲ ಮಂದಿರ ರಕ್ಷಕರು, ಗೃಹಪಾಲಕರು, ಸಿಬ್ಬಂದಿಗಳ ನಿರ್ಲಕ್ಷವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಬಾಲ ಮಂದಿರದಲ್ಲಿ ಮಕ್ಕಳಿಗೆ ರಕ್ಷಣೆ ಇದೆಯಾ ಅನ್ನೋ ಪ್ರಶ್ನೆ ಕಾಡ್ತಾಯಿದೆ. ಮಕ್ಕಳು ಸ್ಯಾನಿಟೈಜರ್ ತೆಗೆದುಕೊಂಡು ಆಟವಾಡ್ತಾಯಿದ್ದಾರೆ. ಇನ್ನೊಂದು ಮಗು ಬೆಂಕಿ ಗೀರರ್ತಾನೆ ಅಂದ್ರೆ, ಈ ವೇಳೆ ಬಾಲ ಮಂದಿರ ಅಧಿಕಾರಿಗಳು, ಸಿಬ್ಬಂದಿಗಳು ಏನ್ ಮಾಡ್ತಾಯಿದ್ದರು. ಅಷ್ಟಕ್ಕೂ ಇಲ್ಲಿ ನಡೆದಿದ್ದಾದ್ರೂ ಏನೂ ಅನ್ನೋ ಪ್ರಶ್ನೆ ಕಾಡುತ್ತಿದೆ.
ಇದನ್ನೂ ಓದಿ: ಭೀಕರ ಬರಗಾಲದಿಂದ ರಾಜ್ಯ ತತ್ತರಿಸಿದ್ದರೆ, ಮುಂಡರಗಿ ತಹಸೀಲ್ದಾರನಿಗೆ ಬರ್ತ್ಡೇ ಆಚರಿಸಿಕೊಳ್ಳುವ ಉಮೇದಿ!
ಬಾಲಕರ ಬಾಲ ಮಂದಿರದ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವತ್ತು ಬೆಳಗಾವಿ ವಿಭಾಗ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಹೋಗಿದ್ದಾರಂತೆ. ಗದಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕೂಡ ಭೇಟಿ ನೀಡಿ ಬಾಲಕನ ಕೌನ್ಸಿಲಿಂಗ್ ಮಾಡಿದ್ದಾರೆ. ಆ ಘಟನೆಯಿಂದ ಬಾಲಕ ಹೊರ ಬಂದಿಲ್ಲ. ಪೂರ್ಣ ಚೇತರಿಕೆ ಬಳಿಕ ಪೂರ್ಣ ತನಿಖೆ ಮಾಡಿ. ಈ ಘಟನೆ ಹಿಂದೆ ಬೇರೆ ಏನಾದ್ರೂ ಇದೆಯಾ ಅನ್ನೋ ಬಗ್ಗೆ ಪತ್ತೆ ಹಚ್ಚಲಾಗುವುದು ಅಂತ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹೇಳಿದ್ದಾರೆ.
ಬಾಲಕನಿಗೆ ತಂದೆ, ತಾಯಿ ಇಬ್ಬರೂ ಇಲ್ಲ. ಅಜ್ಜಿಯೊಬ್ಬಳು ಇದ್ದಾಳೆ. ಅನಾಥ ಬಾಲಕ ಈಗ ಹೆತ್ತವ್ರ ಆರೈಕೆ ಇಲ್ಲದೇ ಒದ್ದಾಡುತ್ತಿದ್ದಾನೆ. ಗದಗ ಬಾಲಕರ ಬಾಲ ಮಂದಿರಲ್ಲಿ ಏನೂ ನಡೀತಾಯಿದೆ ಅನ್ನೋ ಅನುಮಾನ ಜನ್ರನ್ನು ಕಾಡ್ತಾಯಿದೆ. ಬೇರೆ ಯಾವಕಾರಣಕ್ಕಾದ್ರೂ ಈ ಘಟನೆ ನಡೆದಿದೆಯಾ ಅನ್ನೋ ಗುಸು ಗುಸು ಕೇಳಿ ಬರ್ತಾಯಿದೆ. ಏನೇ ಇರಲಿ ಬಾಲಕನ ಸುಟ್ಟು ಗಾಯದಿಂದ ಒದ್ದಾಡುತ್ತಿದ್ದಾರೆ. ಈ ಘಟನೆಗೆ ನಿಜವಾದ ಕಾರಣ ಏನೂ ಅನ್ನೋದು ಅಧಿಕಾರಿಗಳು ಪತ್ತೆ ಹಚ್ಚಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.