ಮುದ್ರಣ ಕಾಶಿ ಗದಗ ಕಾದು ಕೆಂಡವಾಗುತ್ತಿದೆ, ರಣ ರಣ ಬಿಸಿಲಿಗೆ ಜನರು ಹೈರಾಣ

| Updated By: ಸಾಧು ಶ್ರೀನಾಥ್​

Updated on: Mar 30, 2024 | 4:14 PM

ರಣ ರಣ ಬಿಸಿಲಿನ ತಾಪಕ್ಕೆ ಗದಗ ಜಿಲ್ಲೆ ಜನ್ರು ಹೈರಾಣಾಗಿದ್ದಾರೆ.‌ ವಾರದಿಂದ ದಿನೇ ದಿನೆ ಬಿಸಿಲು ಹೆಚ್ಚೇ ಆಗ್ತಿದೆ. ಇನ್ನೂ ಎರಡು ತಿಂಗಳು ರಣ ಬಿಸಿಲು ಜನ್ರ ಚರ್ಮವನ್ನು ಸುಡಲಿದೆ. ಸದ್ಯ ರಣ ಬಿಸಿಲು ಯಾವಾಗ ಹೋಗುತ್ತೋ ಅಂತಾ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಮುದ್ರಣ ಕಾಶಿ ಗದಗ ಕಾದು ಕೆಂಡವಾಗುತ್ತಿದೆ, ರಣ ರಣ ಬಿಸಿಲಿಗೆ ಜನರು ಹೈರಾಣ
ಮುದ್ರಣ ಕಾಶಿ ಗದಗ ಕಾದು ಕೆಂಡವಾಗುತ್ತಿದೆ
Follow us on

ಮುದ್ರಣ ಕಾಶಿ ಗದಗ ಜಿಲ್ಲೆ ಕಾದು ಕೆಂಡವಾಗುತ್ತಿದೆ. ರಣ ರಣ ಬಿಸಿಲಿಗೆ ಜನ್ರು ಹೈರಾಣಾಗುತ್ತಿದ್ದಾರೆ. ಹೌದು ಕಳೆದ ಒಂದು ವಾರದಿಂದ ವಿಪರೀತವಾಗಿ ಸೂರ್ಯ ತನ್ನ ಪ್ರತಾಪ ತೋರಿಸುತ್ತಿದ್ದಾನೆ. ಹೀಗಾಗಿ ಜನ್ರು ತಂಪು ಪಾನೀಯಗಳ ಮೊರೆ ಹೋಗ್ತಾಯಿದ್ದಾರೆ. ಅದರಲ್ಲೂ ಈ ಬಾರಿ ಭೀಕರ ಬರಗಾಲ ಆವರಿಸಿದೆ‌, ಸ್ಥಳೀಯವಾಗಿ ಕಲ್ಲಂಗಡಿ ಹಣ್ಣು ಸಿಗ್ತಾಯಿಲ್ಲಾ, ಹೊರ ರಾಜ್ಯಗಳಿಂದ ಆಮದು ಮಾಡಿಕೊಂಡು ಮಾರಾಟ ಮಾಡ್ತಾಯಿದ್ದಾರೆ. ಹೀಗಾಗಿ ಗ್ರಾಹಕರ ಜೇಬು ಕೂಡಾ ಬಿಸಿ ಆಗ್ತಾಯಿದೆ.. (Gadag summer 2024)

ಗದಗ ಜಿಲ್ಲೆಯಲ್ಲಿ ಸೂರ್ಯನ ಪ್ರತಾಪಕ್ಕೆ ಜನ್ರು ಹೈರಾಣ..! ಇಲ್ಲಿನ ಸದ್ಯದ ಪರಿಸ್ಥಿತಿ ಹೀಗಿದೆ – ಬಿಸಿಲಿನ ತಾಪಕ್ಕೆ, ಮನೆಯಿಂದ ಹೊರಬರಲು ಹಿಂದೇಟು ಹಾಕ್ತಾಯಿರೋ ಜನ್ರು..! ಹಣ್ಣು ಹಾಗೂ ತಂಪು ಪಾನೀಯಗಳಿಗೆ ತಟ್ಟಿದ ಬರಗಾಲದ ಎಫೆಕ್ಟ್..! ಆಂದ್ರ ಪ್ರದೇಶ ಹಾಗೂ ತಮಿಳುನಾಡಿನಿಂದ ಕಲ್ಲಂಗಡಿ ಹಣ್ಣು ಆಮದು..! ಕಲ್ಲಂಗಡಿ ಹಣ್ಣು, ಎಳನೀರು ಬೆಲೆ ಏರಿಕೆ, ಗ್ರಾಹಕರ ಜೇಬಿಗೆ ಕತ್ತರಿ..!

ಗದಗ ಜಿಲ್ಲೆಯಾದ್ಯಂತ ರಣ ರಣ ಬಿಸಿಲಿನ ಹೊಡೆತಕ್ಕೆ ಜನ್ರು ಹೈರಾಣಾಗಿದ್ದಾರೆ. ಮಕ್ಕಳು, ವಯೋವೃದ್ದರು ಮತ್ತಷ್ಟು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಹೌದು ಕಳೆದ ಒಂದು ವಾರದಿಂದ ಸೂರ್ಯ ತನ್ನ ಪ್ರತಾಪ್‌ ಹೆಚ್ಚಿಗೆ ಮಾಡಿದ್ದಾನೆ. ಹೀಗಾಗಿ ಜನ್ರು ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. 12 ಗಂಟೆಯಿಂದ ಸಂಜೆ 4 ಗಂಟೆಯವರಿಗೆ ಜನ್ರು ಮನೆಯಿಂದ ಹೊರಗಡೆ ಬರಲು ಜನ್ರು ಹೆದರುತ್ತಿದ್ದಾರೆ.

ಬಿಸಿಲಿನ ಧಗೆಯಿಂದ ಪಾರಾಗಲು ಜನ್ರು ಹಣ್ಣು ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಗದಗ ನಗರದ ತೋಂಟದಾರ್ಯ ಮಠದ ರಸ್ತೆ, ಗಾಂಧಿ ಸರ್ಕಲ್ ಸೇರಿದಂತೆ ಹಲವು ಕಡೆ ಕಲ್ಲಂಗಡಿ ಹಣ್ಣಿನ ಅಂಗಡಿ, ಎಳೆನೀರು, ಕಬ್ಬಿನ ಹಾಲಿನ ಅಂಗಡಿಗಳು ತಲೆ ಎತ್ತಿವೆ. ಜನ್ರು ಕೂಡಾ ಕಲ್ಲಂಗಡಿ ಹಣ್ಣು ಎಳೆ ನೀರ ಸೇವನೆ ಮಾಡ್ತಾ ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಬರಗಾಲದ ಹಿನ್ನಲೆಯಲ್ಲಿ ಈ ಬಾರಿ ಕಲ್ಲಂಗಡಿ ಹಣ್ಣು ಎಳನೀರು ಬೆಲೆ ಕೂಡಾ ಹೆಚ್ಚಾಗಿಯಾಗಿದೆ. ಅನಿವಾರ್ಯವಾಗಿ ಸೇವನೆ ಮಾಡ್ಬೇಕು ಅಂತಾರೆ ಜನ್ರು.

ಮುದ್ರಣ ಕಾಶಿ ಗದಗ ಕಾದು ಕೆಂಡವಾಗುತ್ತಿದೆ

ಗದಗ ಜಿಲ್ಲೆಯಾದ್ಯಂತ 35 ರಿಂದ 39 ಸೆಲ್ಸಿಯಸ್ ತಾಪಮಾನ ದಾಖಲು ಆಗ್ತಾಯಿದೆ. ಹೀಗಾಗಿ ಜನ್ರು ಈ ರಣ ರಣ ಬಿಸಿಲು ತಡೆದುಕೊಳ್ಳಲು ಹೆಣಗಾಟ ನಡೆಸಿದ್ದಾರೆ. ಅದರಲ್ಲೂ ಈ ಬಾರಿ ಗದಗ ಜಿಲ್ಲೆಯಾದ್ಯಂತ ಭೀಕರವಾದ ಬರಗಾಲ ಆವರಿಸಿದೆ. ಹೀಗಾಗಿ ಗದಗ ಜಿಲ್ಲೆಯಲ್ಲಿ ಕಲ್ಲಂಗಡಿ ಹಣ್ಣು ಬೆಳೆಯುವ ರೈತರ ಸಂಖ್ಯೆ ಬಹಳ ಕಡಿಮೆಯಾಗಿದೆ. ಹೀಗಾಗಿ ಆಂದ್ರ ಪ್ರದೇಶದ, ತಮಿಳುನಾಡು ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿದ್ದಾರೆ ವ್ಯಾಪಾರಸ್ಥರು.

ಸಕಳೆದ ಭಾರಿ ಒಂದು ಪ್ಲೇಟ್ ಕಲ್ಲಂಗಡಿ ಹಣ್ಣಿಗೆ 10 ರೂಪಾಯಿ ಇತ್ತು, ಈವಾಗ 15 ರೂಪಾಯಿ ಮಾಡಿದ್ದಾರೆ. ‌ಒಂದು ಕೆಜಿ ಕಲ್ಲಂಗಡಿ ಹಣ್ಣಿಗೆ 35 ರಿಂದ 40 ರೂಪಾಯಿ ಮಾರಾಟ ಮಾಡಲಾಗುತ್ತಿದೆ. ಹಾಗೇ ಎಳನೀರು ಕೂಡಾ ದುಬಾರಿಯಾಗಿದೆ. ಕಳೆದ‌ ಬಾರಿ 30 ರಿಂದ 35 ರೂಪಾಯಿ ಒಂದು ಎಳನೀರು ಮಾರಾಟ ಮಾಡ್ತಾಯಿದ್ರು. ಈವಾಗ ಒಂದು ಎಳನೀರಿಗೆ 40 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ‌ಬರಗಾಲದಿಂದಾಗಿ ಸ್ಥಳೀಯವಾಗಿ ಎಳನೀರು ಹಾಗೂ ಕಲ್ಲಂಗಡಿ ಹಣ್ಣು ಸಿಗ್ತಾಯಿಲ್ಲಾ. ಬೇರೆ ಕಡೆಯಿಂದ ತಂದು ಮಾರಾಟ ಮಾಡುವದಿಂದ ಬೆಲೆ ಕೂಡಾ ಹೆಚ್ಚಾಗಿಯಾಗಿದೆ.

ರಣ ರಣ ಬಿಸಲಿನ ತಾಪಕ್ಕೆ ಜನ್ರು ಹೈರಾಣಾಗಿದ್ದಾರೆ.‌ ವಾರದಿಂದ ದಿನೇ ದಿನೆ ಬಿಸಿಲು ಹೆಚ್ಚೇ ಆಗ್ತಾಯಿದೆ. ಇನ್ನೂ ಎರಡು ತಿಂಗಳು ರಣ ಬಿಸಿಲು ಜನ್ರ ಚರ್ಮವನ್ನು ಸುಡಲಿದೆ. ಒಟ್ನಲ್ಲಿ ರಣ ಬಿಸಿಲು ಯಾವಾಗ ಹೋಗುತ್ತೋ ಅಂತಾ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Sat, 30 March 24