ಮೂವರು ಯುವಕರನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು: ಮದ್ಯ ಸೇವಿಸಿ, ಮನಸ್ಸೋ ಇಚ್ಚೆ ಥಳಿಸಿದರಾ?

| Updated By: ಸಾಧು ಶ್ರೀನಾಥ್​

Updated on: Sep 22, 2022 | 2:51 PM

Gadag Police: ಬಂಗಾರ ಕಳ್ಳತನ ಮಾಡಿದ್ದೀರಿ ಅಂತಾ ಗದಗ ಗ್ರಾಮೀಣ ಪೊಲೀಸರು ತಮ್ಮನ್ನು ಥಳಿಸಿದ್ದಾರೆ. ಪೊಲೀಸರು ಮದ್ಯ ಸೇವನೆ ಮಾಡಿ, ಮನಸ್ಸೋ ಇಚ್ಚೆ ಥಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಮೂರೂ ಯುವಕರು ನಿರಪರಾಧಿಗಳು ಎಂದು ಗೊತ್ತಾದ ಮೇಲೆ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದ್ದಾರೆ.

ಮೂವರು ಯುವಕರನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು: ಮದ್ಯ ಸೇವಿಸಿ, ಮನಸ್ಸೋ ಇಚ್ಚೆ ಥಳಿಸಿದರಾ?
ಮೂವರು ಯುವಕರನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು: ಮದ್ಯ ಸೇವಿಸಿ, ಮನಸ್ಸೋ ಇಚ್ಚೆ ಥಳಿಸಿದರಾ?
Follow us on

ಗದಗ: ತಿಮ್ಮಾಪೂರ ಗ್ರಾಮದ ಮೂವರು ಯುವಕರನ್ನು ಕರೆದ್ಯೊಯ್ದು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಧಿತ ಯುವಕರು ಗದಗ ಗ್ರಾಮೀಣ ಪೊಲೀಸರ (Gadag Police) ವಿರುದ್ಧ ಈ ಆರೋಪ ಮಾಡಿದ್ದಾರೆ. ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ಯುವಕರಾದ ಕಳಕಪ್ಪ ಹಡಪದ, ಮಂಜುನಾಥ ಗುಡಿಗೇರಿ ಮತ್ತು ನಾಗರಾಜ ಬೂದುಗುಂಪ್ಪ ಎಂಬ ಯುವಕರಿಗೆ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರ ಅಮಾನವೀಯ ವರ್ತನೆಗೆ ತಿಮ್ಮಾಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಗಾರ ಕಳ್ಳತನ ಮಾಡಿದ್ದೀರಿ ಅಂತ ಥಳಿಸಿದ ಪೊಲೀಸರು?

ನಿನ್ನೆ ಸಾಯಂಕಾಲ ಗ್ರಾಮದಿಂದ ಕರೆದ್ಯೊಯ್ದು ಬಿಂಕದಕಟ್ಟಿ ಗ್ರಾಮದ ಹೊರವಲಯದಲ್ಲಿ ಫೈಬರ್ ಪೈಪ್ ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರ ಹೊಡೆತಕ್ಕೆ ಜರ್ಜರಿತರಾದ ಯುವಕರು ಅಲವತ್ತುಕೊಂಡಿದ್ದಾರೆ. ದೇಹದ ವಿವಿಧ ಭಾಗಗಳಲ್ಲಿ ಯುವಕರಿಗೆ ಬಾಸುಂಡೆ ಬಂದಿದ್ದು, ಪೊಲೀಸರ ಹೊಡೆತದಿಂದ ನರಳಾಡುತ್ತಿದ್ದಾರೆ.

ಪೊಲೀಸರ ದುಡುಕಿನ ನಿರ್ಧಾರಕ್ಕೆ ಯುವಕರ ನರಳಾಟ..

ಬಂಗಾರ ಕಳ್ಳತನ (gold theft) ಮಾಡಿದ್ದೀರಿ ಅಂತ ಗದಗ ಗ್ರಾಮೀಣ ಪೊಲೀಸರು ತಮ್ಮನ್ನು ಥಳಿಸಿದ್ದಾರೆ. ಪೊಲೀಸರು ಮದ್ಯ ಸೇವನೆ ಮಾಡಿ, ಮನಸ್ಸೋ ಇಚ್ಚೆ ಥಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಮೂರೂ ಯುವಕರು ನಿರಪರಾಧಿಗಳು ಎಂದು ಗೊತ್ತಾದ ಮೇಲೆ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದ್ದಾರೆ.

ಯಾದಗಿರಿ: ಮಕ್ಕಳು ಕಳ್ಳರು ಎಂದು ಭಿಕ್ಷುಕನನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿಬಿಟ್ಟರು! ಆ ಮೇಲೆ ಆಧಾರ‌ ಕಾರ್ಡ್ ನೋಡಿ…

ಮಕ್ಕಳು ಕಳ್ಳರು ಎಂಬ ವದಂತಿಗಳು ರಾಜ್ಯದ ಅಲ್ಲಲ್ಲಿ ಭಾರೀ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಇಂತಹುದೇ ಘಟನೆಯೊಂದು ಯಾದಗಿರಿ ನಗರದಲ್ಲಿ ನಡೆದಿದೆ. ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ಬಳಿ ಭಿಕ್ಷುಕನನ್ನ ಹಿಡಿದು ನೂರಾರು ಮಂದಿ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೊನೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಭಿಕ್ಷುಕನನ್ನ ರಕ್ಷಣೆ ಮಾಡಿದ್ದಾರೆ. ಬಳಿಕ ಭಿಕ್ಷುಕನ ಆಧಾರ‌ ಕಾರ್ಡ್ ಪರಿಶೀಲನೆ ಮಾಡಿದ ಪೊಲೀಸರು ಯಾದಗಿರಿ ಜಿಲ್ಲೆಯ ಸುರಪುರ ನಿವಾಸಿ ಭಿಕ್ಷುಕ ಎಂದು ಗುರುತು ಹಿಡಿದಿದ್ದಾರೆ. ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 2:29 pm, Thu, 22 September 22