ಗದಗ ಗಣಿ ಇಲಾಖೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ: ಕಂಗಾಲಾದ ಅಧಿಕಾರಿಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2023 | 9:42 PM

ಗದಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಮರಳು ದಂಧೆ ನಡೆದಿದೆ. ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆದ ಗುತ್ತಿಗೆದಾರರು ಸರ್ಕಾರಕ್ಕೆ ಕೋಟಿ ಕೋಟಿ ರೂ. ವಂಚನೆ ಮಾಡ್ತಾಯಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಇಂದು ಗಣಿ ಇಲಾಖೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. 

ಗದಗ ಗಣಿ ಇಲಾಖೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ: ಕಂಗಾಲಾದ ಅಧಿಕಾರಿಗಳು
ಲೋಕಾಯುಕ್ತ ದಾಳಿ
Follow us on

ಗದಗ, ಡಿಸೆಂಬರ್​ 11: ಜಿಲ್ಲೆಯಲ್ಲಿ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಮರಳು ಗಣಿಗಾರಿಕೆ (Sand mining)
ಎಗ್ಗಿಲ್ಲದೇ ನಡೆದಿದೆ. ಸರ್ಕಾರ ಚಾಪೇ ಕೆಳಗಿ ನುಗ್ಗಿದರೆ, ದಂಧೆಕೋರರು ರಂಗೋಲಿ ಕೆಳಗೆ ನುಸುಳ್ತಾಯಿದ್ದಾರೆ. ಮರಳು ಪರ್ಮಿಟ್ ದೂರದ ಉಡಪಿ ಜಿಲ್ಲೆಗೆ ಪಡೆದು ಒಂದೇ ಪರ್ಮಿಟ್​ನಲ್ಲಿ ಪಕ್ಕದ ಹುಬ್ಬಳ್ಳಿಗೆ ಎರಡು, ಮೂರು ಟಿಪ್ಪರ್ ಸಾಗಿಸುವ ಮೂಲಕ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡ್ತಾಯಿದ್ದಾರೆ. ಜಿಪಿಎಸ್ ಮೇಲೆ ನಿಗಾ ವಹಿಸಬೇಕಿದ್ದ ಗಣಿ ಇಲಾಖೆ ಗಪ್ ಚುಪ್ ಆಗಿದ್ದು, ತಿಂಗಳಿಗೆ ಕೋಟ್ಯಾಂತರ ತೆರಿಗೆ ಸರ್ಕಾರಕ್ಕೆ ಮೋಸ್ ಆಗ್ತಾಯಿದೆ. ಇದೇ ವಿಷಯ ಪ್ರಮುಖವಾಗಿ ಇಟ್ಕೊಂಡು ಇಂದು ಗಣಿ ಇಲಾಖೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ.

ಜಿಲ್ಲೆಯಲ್ಲಿ ಎಗ್ಗಿಲ್ಲದೇ ಮರಳು ದಂಧೆ ನಡೆದಿದೆ. ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆದ ಗುತ್ತಿಗೆದಾರರು ಸರ್ಕಾರಕ್ಕೆ ಕೋಟಿ ಕೋಟಿ ರೂ. ವಂಚನೆ ಮಾಡ್ತಾಯಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಒಂದೇ ಮರಳು ಪರ್ಮಿಟ್ ಪಡೆದ ಮೂರು ಟಿಪ್ಪರ್ ಸಾಗಾಟ ಮಾಡಿ ಸರ್ಕಾರಕ್ಕೆ ತೆರಿಗೆ ವಂಚನೆ ಭರ್ಜರಿಯಾಗಿ ನಡೆದಿದೆ. ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಇಂದು ಗದಗ ಗಣಿ ಇಲಾಖೆಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ಶಾಕ್ ನೀಡಿದ್ದಾರೆ.

ಲೋಕಾಯುಕ್ತ ದಾಳಿ 

ಲೋಕಾಯುಕ್ತ ಡಿವೈಎಸ್ಪಿ ವಿಜಯಕುಮಾರ ಬಿರಾದಾರ ನೇತೃತ್ವದಲ್ಲಿ ದಾಳಿ ಮಾಡಿ ಗಣಿ ಇಲಾಖೆ ಅಧಿಕಾರಿಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಿಪಿಎಸ್ ಗೋಲ್ಮಾಲ್ ಸೇರಿದ ಹಲವಾರು ದೂರುಗಳು ಇಟ್ಕೊಂಡು ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳು ಜಾಲಾಡಿದ್ದಾರೆ. ಈ ವೇಳೆ ಕೆಲ ದಾಖಲೆಗಳು ನೀಡಲು ಗಣಿ ಅಧಿಕಾರಿಗಳು ಆಟ ಮಾಡಿದ್ದರು. ಆಗ ಗರಂ ಆದ ಲೋಕಾಯುಕ್ತ ಡಿವೈಎಸ್ಪಿ ವಿಜಯಕುಮಾರ ಬಿರಾದಾರ ನೀವೇ ಕೇಳದೇ ದಾಖಲೆ, ಮಾಹಿತಿ ಕೊಡಿ. ಇಲ್ಲಾಂದರೆ ನಮ್ಮ ಅಧಿಕಾರಿಗಳೇ ಹುಡುಕ್ತಾರೇ ಅಂತ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಳಿಕ ಲೋಕಾಯುಕ್ತ ಅಧಿಕಾರಿಗಳು ಕೇಳಿದ ದಾಖಲೆ ನೀಡಿದ್ದಾರೆ.

ಇದನ್ನೂ ಓದಿ: ಹದಿನೈದು ದಿನಗಳಿಂದ ಅಲೆದ್ರೂ ಸಿಗಲಿಲ್ಲ ರೇಷನ್ ಕಾರ್ಡ್: ಜಿಲ್ಲಾಡಳಿತ ವಿರುದ್ಧ ಮಹಿಳೆಯರು ಆಕ್ರೋಶ

ಸುಮಾರು ಎರಡು ಗಂಟೆ ಇಂಚಿಂಚು ದಾಖಲೆಗಳ ಪರೀಶೀಲನೆ ಮಾಡಿ ಕೆಲ ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯ ನರಗುಂದ, ರೋಣ, ಗಜೇಂದ್ರಗಢ, ಶಿರಹಟ್ಟಿ ತಾಲೂಕಿನಲ್ಲಿ ಪಟ್ಟಾ ಭೂಮಿಯಲ್ಲಿ ಮರಳು ದಂಧೆ ನಡೆದಿದೆ. ಸರ್ಕಾರದ ಕಾನೂನುಗಳು ಉಲ್ಲಂಘಿಸಿ ಮರಳು ದಂಧೆ ನಡೆದಿದೆ. ಮರಳು ಪರ್ಮಿಟ್ ನೀಡುವಲ್ಲಿ ಮರಳು ಗುತ್ತಿಗೆದಾರರು ಸರ್ಕಾರಕ್ಕೆ ಕೋಟ್ಯಾಂತರ ರೂ. ತೆರೆಗೆ ವಂಚನೆ ಮಾಡ್ತಾಯಿದ್ದಾರೆ.

ದೂರದ ಉಡುಪಿಗೆ ಪರ್ಮಿಟ್ ನೀಡಿದ್ರು ಸಾಕಷ್ಟು ಸಮಯಾವಕಾಶ ಸಿಗುತ್ತೆ ಅದೇ ಸಮದಯದಲ್ಲಿ ಪಕ್ಕದ ಹುಬ್ಬಳಿಗೆ ಮೂರು ಟಿಪ್ಪರ್ ಸಾಗಾಟ ಮಾಡುವ ಮೂಲಕ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡ್ತಾಯಿದ್ದಾರೆ. ಒಂದೇ ಒಂದು ಮರಳು ಟಿಪ್ಪರ್ ಉಡುಪಿಗೆ ಹೋಗಲ್ಲ. ಜಿಪಿಎಸ್ ಟ್ರ್ಯಾಕ್ ಮಾಡಬೇಕಾದ ಗಣಿ ಇಲಾಖೆ ಗಪ್ ಚುಪ್ ಆಗುವ ಮೂಲಕ ಸರ್ಕಾರಕ್ಕೆ ಮೋಸ ಮಾಡ್ತಾಯಿದ್ದಾರೆ ಅಂತ ಹೋರಾಟಗಾರ ಭಾಷಾಸಾಬ್ ಮಲ್ಲಸಮುದ್ರ ಆರೋಪಿಸಿದ್ದಾರೆ.

ಮರಳಿಗೆ ನೀಡುವ ಪರ್ಮಿಟ್​ನಲ್ಲಿ ಜಿಲ್ಲೆಯಲ್ಲಿ ಭಾರಿ ಗೋಲ್ಮಾಲ್ ನಡೆದಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಮರಳು ಪರ್ಮಿಟ್ ಮಾಫಿಯಾದಲ್ಲಿ ಗಣಿ, ಕಂದಾಯ ಇಲಾಖೆ ಅಧಿಕಾರಿಗಳು ಶಾಮಿಲಾಗಿದ್ದಾರಂತೆ. ಈ ವಿಷಯ ಗೋತ್ತಿದ್ದರು ಗಣಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಸರ್ಕಾರಕ್ಕೆ ತೆರಿಗೆ ವಂಚನೆ ಆದರೆ ಪರವಾಗಿಲ್ಲ ನಮ್ಮ ಜೇಬು ಭರ್ತಿಯಾಗ್ತಾಯಿದೆ ಸಾಕು ಅಂತಿದ್ದಾರಂತೆ.

ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಖಜಾನೆ ಖಾಲಿ ಮಾಡಿಕೊಂಡಿದೆ. ಈ ನಡುವೆ ಸರ್ಕಾರಕ್ಕೆ ಬರುವ ತೆರಿಗೆ ಗದಗ ಜಿಲ್ಲೆಯಲ್ಲಿ ಕೋಟ್ಯಾಂತರ ರೂ. ವಂಚನೆ ಆಗ್ತಾಯಿರೋದು ವಿಪರ್ಯಸವೇ ಸರಿ ಅಂತ ಜನರು ಕಿಡಿಕಾರಿದ್ದಾರೆ. ಇಷ್ಟೊಂದು ದೊಡ್ಡ ಗೋಲ್ಮಾಲ್ ನಡೆದರೂ ಅಧಿಕಾರಿಗಳು ಗಪ್ ಚುಪ್ ಆಗಿರೋದು ಯಾಕೇ ಅನ್ನೋ ಪ್ರಶ್ನೆ ಕಾಡ್ತಾಯಿದೆ. ಇವತ್ತು ಲೋಕಾಯುಕ್ತ ದಾಳಿಯಲ್ಲೂ ಅಧಿಕಾರಿಗಳು ಇದೇ ವಿಷಯ ಪ್ರಮುಖವಾಗಿ ಪ್ರಶ್ನೆ ಮಾಡಿದ್ದಾರೆ. ಸಾಕಷ್ಟು ದಾಖಲೆ, ಮಾಹಿತಿ ಕಲೆ ಹಾಕಿದ್ದಾರೆ. ಈ ವಿಷಯವಾಗಿ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳ ವರದಿ ನೀಡುವುದಾಗಿ ಗಣಿ ಇಲಾಖೆ ಅಧಿಕಾರಿಗಳಿಗೆ ಲೋಕಾಯುಕ್ತ ಡಿಎಸ್ಪಿ ವಿಜಯಕುಮಾರ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಗದಗ ಆಯುಷ್ಯ ಇಲಾಖೆಯಲ್ಲಿ ಸರ್ಕಾರಿ ದಾಖಲೆಗಳಿಗಿಲ್ಲ ರಕ್ಷಣೆ; 2 ವರ್ಷದ ಬಳಿಕ ಬಯಲಾಯ್ತು SR ಬುಕ್ ಕಳ್ಳತನ

ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುವ ದಂಧೆಕೋರರಿಗೆ ಹಾಗೂ ಸಾಥ್ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಜನರು ಒತ್ತಾಯಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿಹೋದ ಬಳಿಕ ಅಲರ್ಟ್ ಆದ ಹಿರಿಯ ಗಣಿ ಅಧಿಕಾರಿ ಚಿದಂಬರ, ಅಧಿಕಾರಿಗಳು, ಸಿಬ್ಬಂದಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಡಿಸೆಂಬರ್ 25 ರಂದು ಡೆಡ್ ಲೈನ್ ಕೊಟ್ಟಿದ್ದಾರೆ. ಸಮಸ್ಯೆಗಳು ಸರಿ ಹೋಗದಿದ್ರೆ ನೀವೇ ಜವಾಬ್ದಾರಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಕೇಳಿದ್ರೆ ಮಾತನಾಡಲು ಗಣಿ ಇಲಾಖೆ ಅಧಿಕಾರಿ ನಿರಾಕರಿಸಿದ್ದಾರೆ.

ಇದೊಂದೆ ವಿಷಯವಲ್ಲ. ಗದಗ ಗಣಿ ಇಲಾಖೆ ಅಧಿಕಾರಿಗಳಿಗೆ ಹೇಳೋರು ಕೇಳೋರು ಇಲ್ಲದಂತಾಗಿದೆ. ಸಾಕಷ್ಟು ಸಮಸ್ಯೆಗಳು, ದೂರುಗಳು ಬಂದ್ರೂ ಇತ್ಯರ್ಥ ಮಾಡಿಲ್ಲ. ಜನರು ದೂರುಗಳು ಮೂರ್ನಾಲ್ಕು ತಿಂಗಳ ಆದರೂ ಇತ್ಯರ್ಥ ಮಾಡ್ತಿಲ್ಲ ಅಂತ ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ ಗಣಿ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿದ್ದಂತೂ ಸತ್ಯ. ಕಾನೂನು ಸಚಿವರ ತವರು ಜಿಲ್ಲೆಯಲ್ಲೇ ಕಾನೂನು ಉಲ್ಲಂಘಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ನಡೀತಾಯಿರೋದು ಮಾತ್ರ ವಿಪರ್ಯಾಸವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.