ಗದಗ ಆಯುಷ್ಯ ಇಲಾಖೆಯಲ್ಲಿ ಸರ್ಕಾರಿ ದಾಖಲೆಗಳಿಗಿಲ್ಲ ರಕ್ಷಣೆ; 2 ವರ್ಷದ ಬಳಿಕ ಬಯಲಾಯ್ತು SR ಬುಕ್ ಕಳ್ಳತನ

ಗದಗ ನಗರದ ಬೆಟಗೇರಿಯ ಆಯುಷ್​​​​ ಇಲಾಖೆ ಕಚೇರಿಯಲ್ಲಿ ಇಡಲಾಗಿದ್ದ ಐದು ಜನ ವೈದ್ಯರ SR ಬುಕ್ ಕಳ್ಳತನವಾಗಿದ್ದು ಎರಡು ವರ್ಷದ ಬಳಿಕ ಘಟನೆ ಬಯಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಮಹತ್ವದ ದಾಖಲೆ ನಾಪತ್ತೆಯಾದರೂ ಅಧಿಕಾರಿಗಳು ದೂರು ದಾಖಲಿಸಿಲ್ಲ. ಹೀಗಾಗಿ ಐದು ವೈದ್ಯರು ಆತಂಕದಲ್ಲಿದ್ದಾರೆ.

ಗದಗ ಆಯುಷ್ಯ ಇಲಾಖೆಯಲ್ಲಿ ಸರ್ಕಾರಿ ದಾಖಲೆಗಳಿಗಿಲ್ಲ ರಕ್ಷಣೆ; 2 ವರ್ಷದ ಬಳಿಕ ಬಯಲಾಯ್ತು SR ಬುಕ್ ಕಳ್ಳತನ
ಗದಗ ಆಯುಷ್ಯ ಇಲಾಖೆ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಆಯೇಷಾ ಬಾನು

Updated on: Dec 04, 2023 | 8:20 AM

ಗದಗ, ಡಿ.04: ಗದಗ ನಗರದ ಆಯುಷ್​ ಇಲಾಖೆಯಲ್ಲಿ (Ayush Department) ಭಾರಿ ಎಡವಟ್ಟು ನಡೆದಿದೆ. ಆಯುಷ್ಯ ಇಲಾಖೆಯಲ್ಲಿ ಸರ್ಕಾರಿ ದಾಖಲೆಗಳಿಗೆ (Government Documents) ರಕ್ಷಣೆಯೇ ಇಲ್ಲ ಎಂಬಂತಾಗಿದೆ. ಏಕೆಂದರೆ ಎರಡು ವರ್ಷಗಳ ಬಳಿಕ SR (ಸರ್ವಿಸ್ ರಿಜಿಸ್ಟರ್) ಬುಕ್ ಕಳ್ಳತನ ಪ್ರಕರಣ ಬಯಲಾಗಿದೆ. ಗದಗ ನಗರದ ಬೆಟಗೇರಿಯ ಆಯುಷ್​​​​ ಇಲಾಖೆ ಕಚೇರಿಯಲ್ಲಿ ಇಡಲಾಗಿದ್ದ ಐದು ಜನ ವೈದ್ಯರ SR ಬುಕ್ ಕಳ್ಳತನವಾಗಿದ್ದು ಎರಡು ವರ್ಷದ ಬಳಿಕ ಘಟನೆ ಬಯಲಾಗಿದೆ.

ಸರ್ಕಾರಿ ಕಚೇರಿಯಲ್ಲಿ ಮಹತ್ವದ ದಾಖಲೆ ನಾಪತ್ತೆಯಾದರೂ ಅಧಿಕಾರಿಗಳು ದೂರು ದಾಖಲಿಸಿಲ್ಲ. ಹೀಗಾಗಿ ಐದು ವೈದ್ಯರು ಆತಂಕದಲ್ಲಿದ್ದಾರೆ. ನಿವೃತ್ತಿ ಬಳಿಕ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಿದ್ದು ಮುಂದೆ ಏನಪ್ಪಾ ಗತಿ ಎಂಬ ಪ್ರಶ್ನೆ ಅವರನ್ನು ಆವರಿಸಿದೆ. SR ಬುಕ್ ಪತ್ತೆ ಹಚ್ಚುವಂತೆ ವೈದ್ಯರು ಮನವಿ ಮಾಡಿದರೂ ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪತ್ತೆ ಹಚ್ಚುವ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವೈದ್ಯರು ಆರೋಪಿಸಿದ್ದಾರೆ. ಜೊತೆಗೆ SR ಬುಕ್ ಕೇಳಿದರೆ ಕಳ್ಳತನವಾಗಿವೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಹಾಗಾದರೆ ಕದ್ದವರು ಯಾರೂ ಎಂಬ ಅನುಮಾನ ಬರುತ್ತಿದೆ. ಮಹತ್ವದ ದಾಖಲೆ ಕದ್ದವರು ಕಚೇರಿ ಕಳ್ಳರೋ, ಹೋರಗಿನ‌ ಕಳ್ಳರೋ ಎಂಬ ಪ್ರಶ್ನೆ ಹುಟ್ಟುಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜೈ ಶ್ರೀರಾಮ್ ಹೇಳುವಂತೆ ವೈದ್ಧನ ಮೇಲೆ ಹಲ್ಲೆ ಕೇಸ್; ಆಕ್ಷೇಪಾರ್ಹ ಪೋಸ್ಟ್ ಹಾಕಿದವನ ವಿರುದ್ಧ ಪ್ರಕರಣ ದಾಖಲು

ಇದೆಲ್ಲದರ ನಡುವೆ ಕಳ್ಳತನವಾದರೂ ಯಾಕೇ ದೂರು ಕೊಟ್ಟಿಲ್ಲ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮೇಲೆಯೇ ಅನುಮಾನ ವ್ಯಕ್ತವಾಗಿದೆ. ಆಯುಷ್ಯ ಇಲಾಖೆ ಅಧಿಕಾರಿ ಡಾ. ಎಂ ಎಸ್ ಉಪ್ಪಿನ ಅವ್ರನ್ನು‌ ಕೇಳಿದ್ರೆ ನನಗೆ ಗೊತ್ತಿಲ್ಲ ಎಂದು ಉತ್ತರಿಸಿ ಸುಮ್ಮನಾಗಿದ್ದಾರೆ. ನಾನು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಕಳ್ಳತನ ಆಗಿವೆ. ನಾನು ಚಾರ್ಜ್ ಪಡೆಯುವಾಗ ಐದು ಜನ ವೈದ್ಯರ ಸರ್ವಿಸ್ ರಿಜಿಸ್ಟಾರ್ ಇರಲಿಲ್ಲ. ತಕ್ಷಣ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಆಯುಷ್ಯ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಆಗಿಲ್ಲ. ಆಯುಷ್ಯ ಇಲಾಖೆಯಲ್ಲಿ ಸರ್ಕಾರಿ ದಾಖಲೆಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಎರಡು ವರ್ಷಗಳ ಬಳಿಕ ಈಗ SR ಬುಕ್ ಕಳ್ಳತನ ಪ್ರಕರಣ ಬಯಲಾಗಿದ್ದು ಯಾವ ಅಧಿಕಾರಿಗಳ ಅವಧಿಯಲ್ಲಿ ಕಳ್ಳತವಾಗಿವೆ ಅನ್ನೋ ಬಗ್ಗೆ ತನಿಖೆ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಗದಗ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ