ಪ್ರೀತ್ಸೆ ಎಂದು 19ರ ಯುವತಿ ಹಿಂದೆ ಬಿದ್ದ 47ರ ವ್ಯಕ್ತಿ: ಅಂಕಲ್ ಕಿರುಕುಳಕ್ಕೆ ವಿದ್ಯಾರ್ಥಿನಿ ದುರಂತ ಸಾವು

| Updated By: ರಮೇಶ್ ಬಿ. ಜವಳಗೇರಾ

Updated on: Mar 21, 2025 | 4:06 PM

ಅವಳು ಸ್ಟೂಡೆಂಟ್, ಆತ 47 ವರ್ಷದ ಅಂಕಲ್. ಆದ್ರೆ, ಮಗಳ ವಯಸ್ಸಿನ ಯುವತಿಗೆ ಪ್ರೀತ್ಸೆ.. ಪ್ರೀತ್ಸೆ ಎಂದು ದುಂಬಾಲು ಬಿದ್ದಿದ್ದ. ಅಷ್ಟೇ ಅಲ್ಲ ಮದುವೆಯಾಗುವಂತೆ ಕಿರುಕುಳ ನೀಡಿದ್ದಾನೆ. ಸಾಲದಕ್ಕೆ ಮದುವೆಗೆ ಒಪ್ಪದಿದ್ದರೆ ಇಬ್ಬರ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಗೊಂಡ 9 ವರ್ಷದ ಯುವತಿ ದುರಂತ ಸಾವು ಕಂಡಿದ್ದಾಳೆ.

ಪ್ರೀತ್ಸೆ ಎಂದು 19ರ ಯುವತಿ ಹಿಂದೆ ಬಿದ್ದ 47ರ ವ್ಯಕ್ತಿ: ಅಂಕಲ್ ಕಿರುಕುಳಕ್ಕೆ ವಿದ್ಯಾರ್ಥಿನಿ  ದುರಂತ ಸಾವು
Follow us on

ಗದಗ, (ಮಾರ್ಚ್ 21): ಪ್ರೀತ್ಸೆ ಪ್ರೀತ್ಸೆ (Love) ಅಂತ ದುಂಬಾಲು, ಮದುವೆಯಾಗುವಂತೆ 47 ವರ್ಷದ ಅಂಕಲ್ 19 ವರ್ಷದ ಯುವತಿ ಹಿಂದೆಬಿದ್ದಿದ್ದು, ಇದೀಗ ಅಂಕಲ್​ನ ಕಿರುಕುಳ ತಾಳಲಾರದೇ ಯುವತಿ ದುರಂತ ಸಾವು ಕಂಡಿದ್ದಾಳೆ. ಹೌದು…ಗದಗ (Gadag) ಜಿಲ್ಲೆ ಮುಂಡರಗಿ ತಾಲೂಕಿನ ವೀರಾಪೂರ ತಾಂಡಾ ನಿವಾಸಿ ಕಿರಣ್ ಎನ್ನುವಾತ ಪ್ರೀತಿಸುವಂತೆ ಮಗಳ ವಯಸ್ಸಿನ ಯುವತಿ ಹಿಂದೆ ಬಿದ್ದು ಕಿರುಕುಳ ನೀಡಿದ್ದಾನೆ. ಇದರಿಂದ ಯುವತಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾಳೆ. ಕಿರಣ ಕಳೆದ ಹಲವು ದಿನಗಳಿಂದ ವಂದನಾಗೆ ನಿತ್ಯ ಫೋನ್ ‌ಮಾಡೋದು, ಮೆಸೇಜ್ ಮಾಡಿ, ಮದುವೆ ಆಗುವಂತೆ ಕಿರುಕುಳ ನೀಡುತ್ತಿದ್ದನಂತೆ. ಮದುವೆ ಆಗದಿದ್ದರೆ ಇಬ್ಬರ ಫೋಟೋ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಆತನ ಕಿರುಕುಳ ತಾಳಲಾರದೆ ವಂದನಾ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

47 ವರ್ಷದ ಕಿರಣ್​​​ಗೆ ಎರಡು ಕಾಲು ಇಲ್ಲ. ಆದರೂ ತನ್ನ ವಯಸ್ಸು ಆ ಯುವತಿ ವಯಸ್ಸು ಏನು ಎನ್ನುವುದನ್ನು ಯೋಚಿಸಿದೇ ಪ್ರೀತ್ಸೆ ಪ್ರೀತ್ಸೆ ಎಂದು ದುಂಬಾಲು ಬಿದ್ದಿದ್ದಾನೆ. ಕಿರಣ್​ನ ಕಿರುಕುಳ ತಾಳಲಾರದೇ ವಂದನಾ ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಇದಕ್ಕೆ ಕಾರಣನಾದ ಕಿರಣ್​ನಿಗೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಬೆಟಗೇರಿ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಕಿರಣ್​​ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಮಕ್ಕಳು ಮಾಡೋಕೆ ಬಿಡ್ತಿಲ್ಲ, ಜತೆ ಮಲಗಲು 5000 ರೂ.: ಪತ್ನಿ ವಿರುದ್ಧ ಪತಿಯ ಸಾಲು ಸಾಲು ಆರೋಪಕ್ಕೆ ಬಿಗ್ ಟ್ವಿಸ್ಟ್​

19 ವರ್ಷದ ವಂದನಾ ಗದಗ ಜಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ಮಗಳ ಬಗ್ಗೆ ಪೋಷಕರು ಸಾಕಷ್ಟು ಕನಸು ಕಂಡಿದ್ದರು. ಆದ್ರೆ, ಈ ಯುವತಿ ಹಿಂದೆ 47 ವರ್ಷದ ಕಿರಣ ಎನ್ನುವಾತ ಮದುವೆ ಆಗು ಎಂದು ನಿತ್ಯ ಫೋನ್​ ಮಾಡಿ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಇಬ್ಬರ ಫೋಟೋ ಎಡಿತ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಗದಗ ನಗರದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ವಂದನಾ ಫಿನಾಯಿಲ್ ಕುಡಿದಿದ್ದಾಳೆ. ಇದರಿಂದ ಅಸ್ವಸ್ಥಳಾಗಿದ್ದ ವಂದನಾಳನ್ನು ಗದಗ ಜಿಮ್ಸ್ ಆಸ್ಪತ್ರೆ ದಾಖಲು‌ ಮಾಡಲಾಗಿತ್ತು. ಆದ್ರೆಮ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.

ಇದನ್ನೂ ಓದಿ
ಇಬ್ಬರು ಹೆಂಡರ ನೀಚ ಗಂಡ: ಬಾಬುನ ಕ್ರೌರ್ಯಕ್ಕೆ ನರಳಿ ನರಳಿ ಪ್ರಾಣಬಿಟ್ಟಳು!
ಅಮ್ಮನಿಗೆ ಬೈದಿದ್ದಕ್ಕೆ ಮಾವನನ್ನೇ ಕೊಂದ ಪುತ್ರ!
ಮಕ್ಕಳು ಮಾಡೋಕೆ ಬಿಡ್ತಿಲ್ಲ, ಮಲಗಲು 5000:ಪತಿ ಆರೋಪಕ್ಕೆ ಬಿಗ್ ಟ್ವಿಸ್ಟ್​​!
ಇನ್ಸ್ಟಾಗ್ರಾಮ್ ಸುಂದ್ರಿ ಜತೆ ಹೋಗಿದ್ದವ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಅಂದಹಾಗೇ ಮೃತ ವಂದನಾ ಹಾಗೂ ಅಂಕಲ್ ಕಿರಣ ಇಬ್ಬರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ವೀರಾಪೂರ ತಾಂಡಾ ನಿವಾಸಿಗಳು. ವಂದನಾ ಕುಟುಂಬಸ್ಥರು ಚಿಕ್ಕದೊಂದು ಬೀಡಿ ಶಾಪ್ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಅದೇ ತಾಂಡಾದಲ್ಲಿ ಕಿರಣ್ ವಾಟರ್ ಮ್ಯಾನ್ ಕೆಲಸ ಮಾಡುತ್ತಿದ್ದ. ಆದ್ರೆ, ಕಳೆದ ಒಂದು ವರ್ಷದ ಹಿಂದೆ ಕಿರಣ್​, ವಂದನಾ ಜೊತೆಗೆ ಮದುವೆ ಮಾಡಿಕೊಂಡಿ ಎಂದು ಕುಟುಂಬಸ್ಥರನ್ನು ಕೇಳದ್ದನಂತೆ ಆಗ ವಯಸ್ಸಿನ ಅಂತರ ಹಾಗೂ ಕಿರಣ ವಿಶೇಷ ಚೇತನ ಇರೋದರಿಂದ ಮದುವೆಗೆ ಮೃತಳ ಕುಟುಂಬಸ್ಥರು ವಿರೋಧ ಮಾಡಿದ್ದರು. ಆಗ ಸುಮ್ಮನಾಗದ ಕಿರಣ ಪುನಃ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ನಮ್ಮ‌ ಕುಟುಂಬಕ್ಕೆ ಹಿರಿಯ ಮಗಳು ವಂದಾನ. ಗಂಡ ಇಲ್ಲವಾದರೂ ಸಹ ಕಷ್ಟಪಟ್ಟು ಮೂವರು ಮಕ್ಕಳನ್ನು ಚನ್ನಾಗಿ ಬೆಳೆಸಿದ್ದೆ. ಮೂವರ ಪೈಕಿ ಕಿರಿಯ ಮಗಳು ವಂದಾನ ಚೆನ್ನಾಗಿ ಓದಿ, ನೌಕರಿ ಮಾಡುತ್ತಾಳೆ.ದು ಕನಸು ಕಂಡಿದ್ದೆ. ಆದ್ರೆ ಈಗ ಕಿರಣ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವಂದನಾ ತಾಯಿ ಕಣ್ಣೀರಿಟ್ಟಿದ್ದಾರೆ. ಮಗಳ ವಯಸ್ಸಿನ ಯುವತಿ ಹಿಂದೆ ಬಿದ್ದ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ.

ಒಟ್ಟಿನಲ್ಲಿಬಾಳಿ ಬದುಕಬೇಕಾದ ಯುವತಿ ಅಂಕಲ್‌ ಕಾಟಕ್ಕೆ ಸಾವಿನ ಮನೆ ಸೇರಿದ್ದಾಳೆ. ಮತ್ತೊಂದೆಡೆ ಮನೆಗೆ ಆಧಾರವಾಗಬೇಕಾದ ಮಗಳನ್ನು ಕಳೆದುಕೊಂಡು ಹೆತ್ತವರು ಕಣ್ಣೀರು ಹಾಕುವಂತಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:04 pm, Fri, 21 March 25