ಭಕ್ತ ಸಾಗರದಲ್ಲಿ ಹಾಲಕೆರೆ ರಥೋತ್ಸವ: ಬೆಳ್ಳಿ ರಥ ಎಳೆದು ಸಂಭ್ರಮಿಸಿದ ಮಹಿಳೆಯರು

Gadag News: ಗಜೇಂದ್ರಗಡ ತಾಲೂಕಿನ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಲಿಂಗೈಕ್ಯ ಗುರು ಅನ್ನದಾನ ಸ್ವಾಮಿಯ 46ನೇ ಪುಣ್ಯಸ್ಮರಣೋತ್ಸವ, ಮಹಿಳಾ ಸಂಘಟನೆಗಳ ಸಮಾವೇಶ ಹಾಗೂ ಬೆಳ್ಳಿ ರಥೋತ್ಸವ ಇಂದು ವೈಭವಯುತವಾಗಿ ನೆರವೇರಿದೆ. ವಿಶೇಷ ಅಂದರೆ ಈ ಜಾತ್ರೆಯಲ್ಲಿ ಬೆಳ್ಳಿ ರಥೋತ್ಸವ ಮಹಿಳೆಯರೇ ಎಳೆಯುತ್ತಾರೆ.

ಭಕ್ತ ಸಾಗರದಲ್ಲಿ ಹಾಲಕೆರೆ ರಥೋತ್ಸವ: ಬೆಳ್ಳಿ ರಥ ಎಳೆದು ಸಂಭ್ರಮಿಸಿದ ಮಹಿಳೆಯರು
ಬೆಳ್ಳಿ ರಥ ಎಳೆದ ಮಹಿಳೆಯರು
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 28, 2023 | 7:40 PM

ಗದಗ, ಆಗಸ್ಟ್​ 28: ಗಜೇಂದ್ರಗಡ ತಾಲೂಕಿನ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಲಿಂಗೈಕ್ಯ ಗುರು ಅನ್ನದಾನ ಸ್ವಾಮಿಗಳ 46ನೇ ಪುಣ್ಯಸ್ಮರಣೋತ್ಸವ (Rathotsava), ಮಹಿಳಾ ಸಂಘಟನೆಗಳ ಸಮಾವೇಶ ಹಾಗೂ ಬೆಳ್ಳಿ ರಥೋತ್ಸವ ಕಾರ್ಯಕ್ರಮವು ಇಂದು ಸಂಜೆ ವೈಭವಯುತವಾಗಿ ನೆರವೇರಿದೆ. ಹಾಲಕೆರೆ ಕ್ಷೇತ್ರಕ್ಕೆ ಆಗಮಿಸಿದ್ದ ಎಲ್ಲ ಹಿರಿ-ಕಿರಿಯ ಸ್ವಾಮೀಜಿಗಳು ಹಾಗೂ ಹಾಲಕೆರೆ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳ್ಳಿ ರಥೋತ್ಸವಕ್ಕೆ ಪೂಜೆಗೈದರು. ನಂತರ ಸಂಜೆ 6:30ಕ್ಕೆ ಬೆಳ್ಳಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು.

ವಿಶೇಷ ಅಂದರೆ ಈ ಜಾತ್ರೆಯಲ್ಲಿ ಬೆಳ್ಳಿ ರಥೋತ್ಸವ ಮಹಿಳೆಯರೇ ಎಳೆಯುತ್ತಾರೆ. ಬೆಳ್ಳಿ ರಥೋತ್ಸವಕ್ಕೆ ಹಗರಿಬೊಮ್ಮನ ಹಳ್ಳಿಯ ಶಾಸಕಿ ಲತಾ ಮಲ್ಲಿಕಾರ್ಜುನ ಚಾಲನೆ ನೀಡಿದರು. ನಂತರ ಮಹಿಳೆಯರು, ವಿದ್ಯಾರ್ಥಿನಿಯರು ಬೆಳ್ಳಿ ತೇರನ್ನು ಎಳೆದು ಸಂಭ್ರಮಿಸಿದರು.

ಇದನ್ನೂ ಓದಿ: ಗದಗ: ಸೆ 3 ರಂದು ಟರ್ಫ ಹಾಕಿ ಕ್ರೀಡಾಂಗಣ ಲೋಕಾರ್ಪಣೆ: ಸಚಿವ ಎಚ್​ಕೆ ಪಾಟೀಲ

ಭಕ್ತರು ಅನ್ನದಾನೇಶ್ವರ ಮಹಾರಾಜ್ ಕೀ ಜೈ, ಗುರು ಕುಮಾರೇಶ್ವರ ಮಹಾರಾಜ್ ಕೀ ಜೈ, ಲಿಂಗೈಕ್ಯ ಗುರು ಅನ್ನದಾನ ಸ್ವಾಮೀಜಿ ಕೀ ಜೈ, ಅಭಿನವ ಅನ್ನದಾನ ಸ್ವಾಮೀಜಿ ಕೀ ಜೈ, ಮುಪ್ಪಿನ ಬಸವಲಿಂಗ ಸ್ವಾಮೀಜಿ ಕೀ ಜೈ ಎಂದು ಜಯ ಘೋಷಣೆಗಳೊಂದಿಗೆ ತೇರು ಎಳೆದರು. ರಥವು ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಚಪ್ಪಾಳೆ ತಟ್ಟಿದ ಭಕ್ತರು ಭಕ್ತಿಭಾವ ಮೆರೆದರು. ಮಹಿಳೆಯರು ಭಕ್ತಿ, ಶ್ರದ್ಧೆಯಿಂದ ತೇರಿಗೆ ಪುಷ್ಪ ಎರಚುವ ಮೂಲಕ ಸಂಭ್ರಮದಿಂದ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಇದನ್ನೂ ಓದಿ: ಗದಗ: ಸರ್ಕಾರಿ ಶಾಲೆಯ ಮೈದಾನದಲ್ಲಿ ತೆಲೆ ಎತ್ತಿದ ಅಕ್ರಮ ಮನೆಗಳು; ನಮ್ಮ ಶಾಲೆ ಉಳಿಸಿ ಎಂದು ವಿದ್ಯಾರ್ಥಿಗಳ ಆಕ್ರೋಶ!

ಈ ಸಂದರ್ಭದಲ್ಲಿ ಗದಗ, ಧಾರವಾಡ, ಕೊಪ್ಪಳ, ಬಾಗಲಕೋಟ, ವಿಜಯನಗರ, ಬಳ್ಳಾರಿ, ರಾಯಚೂರು, ದಾವಣಗೇರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಅದರಲ್ಲೂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು.

ನರೇಗಲ್ ಸಮೀಪದ ಹಾಲಕೆರೆ ಗ್ರಾಮದಲ್ಲಿ ಅನ್ನದಾನೇಶ್ವರ ಸಂಸ್ಥಾನಮಠದ ಲಿಂಗೈಕ್ಯ ಗುರು ಅನ್ನದಾನ ಸ್ವಾಮಿಗಳ 46ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಜರುಗಿದ ಬೆಳ್ಳಿ ತೇರನ್ನು ಮಹಿಳೆಯರು ಎಳೆದು ಸಂಭ್ರಮಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ