ಗದಗ-ಬೆಟಗೇರಿಯಲ್ಲಿ ಭೀಕರ ಮಳೆ: ತುತ್ತು ಅನ್ನಕ್ಕೂ ಪರದಾಟ, ಬೀದಿಗೆ ಬಿದ್ದ ಜನ
ಅಜ್ಜಿ ಯಶೋಧಾಳ ಪತಿಯ ಕಾಲು ಮುರಿದಿದೆ. ದುಡಿಮೆ ಇಲ್ಲದೇ ಮನೆ ಸೇರಿದ್ದಾನೆ. ಈಗ ಮನೆ ಕುಸಿದಿದೆ. ಜಿಲ್ಲಾಡಳಿತ ನೆರವಿಗೆ ಬಂದಿಲ್ಲ. ಪರ್ಯಾವ ವ್ಯವಸ್ಥೆ ಮಾಡಿಲ್ಲ.
ಗದಗ: ಅವಳಿ ನಗರದಲ್ಲಿ ರಣ ಭೀಕರ ಮಳೆ ಸುರಿಯುತ್ತಿದೆ. ಮಳೆಯಿಂದ ಹತ್ತಾರು ಅವಾಂತರ ಸೃಷ್ಟಿಯಾಗಿವೆ. ಅದರಲ್ಲೂ ಬಡ ಅಜ್ಜಿಯರ ಗೋಳಾಟ ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ. ಇಂಥ ಸ್ಥಿತಿ ಯಾರಿಗೂ ಬಾರದಿರಲಿ. ಮಕ್ಕಳು ಇದ್ರೂ ಇವ್ರ ಪಾಲಿಗೆ ಇಲ್ಲದಂತಾಗಿದೆ. ಮಕ್ಕಳು ಬಿಟ್ಟು ಹೋದ ಅಜ್ಜಿಯರ ಮನೆಗಳು ಕುಸಿದು ಅಕ್ಷರಶಃ ಕಂಗಾಲಾಗಿದ್ದಾರೆ. ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಇಷ್ಟೊಂದು ಸಂಕಷ್ಟ ಎದುರಾಗಿದ್ರು, ಸರ್ಕಾರ ಮಾತ್ರ ಕೇರ್ ಮಾಡ್ತಾಯಿಲ್ಲಾ ಎನ್ನುವುದೇ ದುರಂತ. ಮತ ಪಡೆದವ್ರು ಸಂಕಷ್ಟ ಕೇಳ್ತಾಯಿಲ್ಲ ಅಂತ ಶಾಸಕ, ಸಚಿವರ ವಿರುದ್ಧ ಕೆಂಡಕಾರಿದ್ದಾರೆ.
ರಕ್ಕಸ ಮಳೆಗೆ ಗದಗ-ಬೆಟಗೇರಿ ಅವಳಿ ನಗರದ ಜನ್ರ ಬದುಕು ಅಯೋಮವಾಗಿದೆ. ಇಡೀ ದಿನ ಬಿಸಿಲು, ರಾತ್ರಿಯಿಡೀ ಏಕಾಏಕಿ ಧೋ ಅಂತ ಸುರಿಯುವ ಮಳೆ ಅವಳಿ ಜನ್ರ ನಿದ್ದೆ ಕೆಡಿಸಿದೆ. ಧಾರಕಾರ ಸುರಿದ ಮಳೆಗೆ ಬೆಟಗೇರಿಯಲ್ಲಿ ನಾಲ್ಕೈದು ಬಡಾವಣೆಯ ಸಾವಿರಾರೂ ಮನೆಗಳಿಗೆ ನೀರು ಹೊಕ್ಕು ಬದುಕೇ ಅಲ್ಲೋಲ ಕಲ್ಲೋಲವಾಗಿದೆ. ಅದರಲ್ಲೂ ಬೆಟಗೇರಿ ಟರ್ನಲ್ ಪೇಟೆಯ ನಿವಾಸಿಗಳು ಅಕ್ಷರಶಃ ಸಂತ್ರಸ್ತರಾಗಿದ್ದಾರೆ. ಹೌದು ನಿರಂತರವಾಗಿ ಸುರಿದ ಮಳೆಯಿಂದ ಮನೆಗಳು ಕ್ಷಣ ಕ್ಷಣಕ್ಕೂ ಕುಸಿಯುತ್ತಿವೆ. ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ವಸ್ತುಗಳು ನೀರಿಗೆ ಆಹುತಿಯಾಗಿವೆ. ಮನೆಯ ಮೇಲ್ಛಾವಣಿ ಕುಸಿಯುತ್ತಿವೆ.
ಒಂಟಿ ಜೀವನ ನಡೆಸುತ್ತಿರುವ ವಯಸ್ಸಾದ ಅಜ್ಜಿಯರ ಗೋಳಾಟ ನೋಡಿದ್ರೆ ಕರಳು ಚುರ್ ಎನ್ನುತ್ತೇ. ಪಾಪ ಮನೆಯಲ್ಲಿ ದವಸ ಧಾನ್ಯಗಳು, ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗಿವೆ. ಇಡೀ ಮನೆಯಲ್ಲಿ ನೀರು ನುಗ್ಗಿ ಮನೆಗಳು ಕೆಸರುಮಯವಾಗಿವೆ. ಮನೆಗಳ ಮೇಲ್ಚಾವಣಿ ಕುಸಿದು ಈಗಲೋ ಆಗಲೋ ಬಿಳುವ ಹಂತವನ್ನು ತಲುಪಿವೆ. ಇಂತಹ ಮನೆಯಲ್ಲಿ ವಾಸ್ತವ್ಯ ಮಾಡ್ತಾಯಿದ್ದಾರೆ. ಅಕ್ಕಪಕ್ಕದ ಮನೆಯವರು, ಚಹಾ ಉಪಹಾರ ಕೊಡುತ್ತಿದ್ದಾರೆ. ಆದ್ರೆ ಈವರಿಗೆ ಜಿಲ್ಲಾಡಳಿತ ಕಾಳಜಿ ಕೇಂದ್ರವನ್ನು ತೆಗೆದಿಲ್ಲಾ, ಅಜ್ಜಿಯ ಸಹಾಯಕ್ಕೆ ಬಂದಿಲ್ಲಾ ಎಂದು ಗೋಳಾಡುತ್ತಿದ್ದಾರೆ. ಮತ ಕೇಳಲು ಬರೋ ಶಾಸಕರು ಎಲ್ಲಿದ್ದಾರೆ ಅಂತ ಅಜ್ಜಿ ಯಶೋಧಾ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಅಜ್ಜಿ ಯಶೋಧಾಳ ಪತಿಯ ಕಾಲು ಮುರಿದಿದೆ. ದುಡಿಮೆ ಇಲ್ಲದೇ ಮನೆ ಸೇರಿದ್ದಾನೆ. ಈಗ ಮನೆ ಕುಸಿದಿದೆ. ಜಿಲ್ಲಾಡಳಿತ ನೆರವಿಗೆ ಬಂದಿಲ್ಲ. ಪರ್ಯಾವ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಈಗಲೋ ಆಗಲೋ ಬೀಳುವ ಮನೆಯಲ್ಲೇ ಇಬ್ಬರು ಜೀವನ ಮಾಡ್ತಾಯಿದ್ದಾರೆ. ಹಿರಿಯ ಅಜ್ಜಿಗಳ ಮಕ್ಕಳ ಇದ್ರು ಅವರು ಬೇರೆ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ. ವಯಸ್ಸಾದ ಅಜ್ಜ ಅಜ್ಜಿ, ಹಾಗೂ ಇನ್ನು ಪಕ್ಕದ ಮನೆಯ ಒಂಟಿ ಅಜ್ಜಿ ಶಾಂತಾಬಾಯಿ ಕುಸಿದ ಮನೆಯಲ್ಲಿಯೇ ಜೀವನವನ್ನು ಸಾಗಿಸುತ್ತಿದ್ದಾರೆ. ಮಾಹಾ ಮಳೆಗೆ ಅಜ್ಜಿಯರ ಬದುಕು ಮೂರಾಬಟ್ಟೆಯಾಗಿದೆ.
ಕಷ್ಟದಲ್ಲಿ ಹೇಗೂ ಜೀವನವನ್ನು ನಡೆಸುತ್ತಿದ್ದರು. ಆದ್ರೆ ಇವಾಗ ರಣ ಭೀಕರ ಮಳೆಯಿಂದ ಅಜ್ಜಿಯರ ಬಾಳು ಮೂರಾಬಟ್ಟೆಯಾಗಿದೆ. ಇಷ್ಟೊಂದು ಸಂಕಷ್ಟದಲ್ಲಿದ್ರು, ಯಾರು ಸಹಾಯಕ್ಕೆ ಬರ್ತಾಯಿಲ್ಲಾ ಎನ್ನೊದೆ ದುರಂತ. ಸ್ಥಳೀಯ ಶಾಸಕ ಹೆಚ್ ಕೆ ಪಾಟೀಲ್ ಅವರು ಸಂತ್ರಸ್ತರ ಗೋಳು ಕೇಳ್ತಾಯಿಲ್ಲಾ. ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ಪಾಟೀಲ್ ಕೂಡಾ ಜಿಲ್ಲೆ ಕಡೇ ಮುಖ ಮಾಡಿಲ್ಲಾ, ಜಿಲ್ಲಾಡಳಿತ ಕಾಳಜಿ ಕೇಂದ್ರವನ್ನು ತೆರೆಯುತ್ತೇವೆ ಅಂತಾ ಹೇಳಿದ್ದಾರೆ. ಆದ್ರೆ ಈವರಿಗೆ ಕಾಳಜಿ ಕೇಂದ್ರವನ್ನು ತೆರದು, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು ಅದನ್ನು ಕೂಡಾ ಮಾಡಿಲ್ಲಾ. ಹೀಗಾಗಿ ಬಡ ಅಜ್ಜಿಯರು ಪರದಾಟ ನಡೆಸಿದ್ದಾರೆ. ಮಗ ಇದ್ದಾನೆ. ಹೆಂಡತಿ ಜೊತೆಗೆ ಹೋಗಿದ್ದಾನೆ. ಪತಿ ಸಾವನ್ನಪ್ಪಿದ್ದಾನೆ. ನನಗೆ ಯಾರೂ ದಿಕ್ಕಿಲ್ಲ. ಸರ್ಕಾರ ಸಹಾಯ ಮಾಡಬೇಕು ಅಂತ ಅಜ್ಜಿ ಶಾಂತಾಬಾಯಿ ಮನವಿ ಮಾಡಿದ್ದಾಳೆ.
ಒಟ್ನಲ್ಲಿ ಗದಗ ಬೆಟಗೇರಿ ಅವಳಿ ನಗರದಲ್ಲಿ ರಣ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಬಡ ಅಜ್ಜಿಯ ಗೋಳಾಟವನ್ನು ಯಾರು ಕೇಳದಂತ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರು ಜಿಲ್ಲಾಡಳಿತ ಎಚ್ಚೆತ್ತುಕೊಂಡ ಹಿರಿಯ ಜೀವಗಳ ಸಹಾಯಕ್ಕೆ ಬರಬೇಕಾಗಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:24 pm, Thu, 8 September 22