ಗದಗ: ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆಯ ದಾರುಣ ಅಂತ್ಯ

ರಂಜಾನ್​ ಹಬ್ಬಕ್ಕೆ ತನ್ನ ಮಗಳನ್ನು ಕರೆತರಲು ಪೋಷಕರು ಯೋಚಿಸುತ್ತಿದ್ದರು. ಆದರೆ ಇತ್ತ ಪತ್ನಿಯನ್ನು ಕೊಂದ ಪತಿ ಮೃತದೇಹ ಆಸ್ಪತ್ರೆಯಲ್ಲಿಟ್ಟು ತನ್ನ ಕುಟುಂಬದೊಂದಿಗೆ ಪರಾರಿಯಾಗಿದ್ದಾನೆ. ಗದಗದಲ್ಲಿ ನಡೆದ ಈ ಕೃತ್ಯದ ಮಾಹಿತಿ ಇಲ್ಲಿದೆ.

ಗದಗ: ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆಯ ದಾರುಣ ಅಂತ್ಯ
ಪತ್ನಿಯನ್ನು ಕೊಂದ ಪತಿ (ಸಾಂದರ್ಭಿಕ ಚಿತ್ರ)
Follow us
Rakesh Nayak Manchi
|

Updated on:Apr 21, 2023 | 3:38 PM

ಗದಗ: ರಂಜಾನ್​ ಹಬ್ಬಕ್ಕೆ ತನ್ನ ಮಗಳನ್ನು ಕರೆತರಲು ಪೋಷಕರು ಪ್ಲನ್ ಮಾಡಿಕೊಂಡಿದ್ದರು. ಇದಕ್ಕಾಗಿ ಎಲ್ಲಾ ತಯಾರಿಗಳನ್ನು ಮನೆಯವರು ನಡೆಸುತ್ತಿದ್ದರು. ಇಷ್ಟೊಂದು ಸಂತೋಷದಲ್ಲಿದ್ದ ತವರು ಮನೆಯಲ್ಲಿ ನೀರವ ಮೌನ ಆವರಿಸಿದೆ. ಪೋಷಕರು, ಸಂಬಂಧಿಗಳು ಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದಾರೆ. ಹೌದು, ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾದವಾಗಿದ್ದ ನವವಿವಾಹಿತೆಯನ್ನು ಪತಿಯೇ ಕೊಲೆ ಮಾಡಿ ತನ್ನ ಕುಟುಂಬದೊಂದಿಗೆ ಪರಾರಿಯಾದ ಘಟನೆ ಗದಗದ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

ನವವಿವಾಹಿತೆ ಶಹನಾಜ್ ಬೇಗಂ (24) ಒಂದೂವರೆ ತಿಂಗಳ ಹಿಂದೆಯಷ್ಟೇ ಧಾರವಾಡ ಜಿಲ್ಲೆ ಅಣ್ಣಿಗೇರಿ ಮೂಲದ ಶಹಬಾಜ್ ಮುಳಗುಂದ ಎಂಬಾತನನ್ನು ವಿವಾಹವಾಗಿದ್ದಳು. ಒಂದೆಡೆ ಶಹನಾಜ್ ಬೇಗಂ ತವರು ಮನೆಯಲ್ಲಿ ಮಗಳ ಮದುವೆಯಾದ ಸಂತಸವಿದ್ದರೆ, ಇನ್ನೊಂದೆಡೆ ರಂಜಾನ್ ಹಬ್ಬದ ಸಂಭ್ರಮ ಸಡಗರ. ಈ ಹಬ್ಬಕ್ಕೆ ನವವಿವಾಹಿತೆ ಶಹನಾಜ್​ ಬೇಗಂಳನ್ನು ಕರೆತರುವ ಪ್ಲಾನ್ ಕೂಡ ಪೋಷಕರು ಹಾಕಿಕೊಂಡಿದ್ದರು.

ಇದನ್ನೂ ಓದಿ: Hassan: ಮೊದಲು ಮಿಸ್ಸಿಂಗ್, ಆ ಮೇಲೆ ಕಿಡ್ನಾಪ್, ಕೊನೆಗೆ ಕೊಲೆ ಕೇಸ್: ಇದು ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಗೆಳೆಯರಿಂದಲೇ ನವವಿವಾಹಿತ ಹತ್ಯೆಯಾದ ಕತೆ

ಗಂಡನ ಮನೆಯಿಂದ ಶಹನಾಜ್ ಬೇಗಂಳ ತವರಿಗೆ ಬರುತ್ತಿರುವ ಹಿನ್ನೆಲೆ ಹಬ್ಬವನ್ನು ಪ್ರತಿ ವರ್ಷಕ್ಕಿಂತ ಅದ್ದೂರಿಯಾಗಿ ನಡೆಸಲು ಬೇಕಾದ ಎಲ್ಲಾ ತಯಾರಿಗಳನ್ನು ನಡೆಸಲಾಗುತ್ತಿತ್ತು. ಆಕೆಗೆ ನೀಡಲೆಂದೇ ಹೊಸ ಬಟ್ಟೆ, ಚಿನ್ನವನ್ನು ಖರೀದಿಸಿಟ್ಟಿದ್ದರು. ಆದರೆ, ಇತ್ತ ಕೆಟ್ಟ ಪಿಡುಗಿನ ಹಿಂದೆ ಬಿದ್ದ ಬೇಗಂ ಪತಿ ಶಹಬಾಜ್ ಮುಳಗುಂದ ಮತ್ತು ಆತನ ಕುಟುಂಬದ ಸದಸ್ಯರು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ರಂಜಾನ್ ಹಬ್ಬದಂದು ಮಗಳು ಬೇಗಂ ಬರುತ್ತಿದ್ದಾಳೆ ಎಂದು ಕಾಯುತ್ತಿದ್ದ ಪೋಷಕರಿಗೆ ತನ್ನ ಮಗಳ ಮೃತದೇಹ ಆಸ್ಪತ್ರೆಯಲ್ಲಿರುವ ಮಾಹಿತಿ ತಿಳಿದುಬಂದು ಬರ ಸಿಡಿಲು ಬಡಿದಂತಾಗಿದೆ. ಕೊಲೆ ನಂತರ ಶಹಬಾಜ್ ಮುಳಗುಂದ ಮತ್ತು ಕುಟುಂಬ ಪರಾರಿಯಾಗಿದ್ದು, ಇತ್ತ ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಬೇಗಂ ಕುಟುಂಬಸ್ಥರು ಆರೋಪಿಸಿದ್ದಾರೆ.

ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Fri, 21 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ