ಗದಗ: ಆಸ್ಪತ್ರೆ ಬೆಡ್ನಲ್ಲಿ ನರಳಾಡುತ್ತಿರುವ ಮಾರಣಾಂತಿಕ ಹಲ್ಲೆಗೊಳಗಾದ ಯುವಕ, ಯುವಕನ ಸ್ಥಿತಿ ನೋಡಿ ಅಜ್ಜಿಯ ಕಣ್ಣೀರು. ಹೌದು ಈ ದೃಶ್ಯಗಳು ಕಂಡಿದ್ದು, ಗದಗ(Gadag) ಜಿಲ್ಲೆಯಲ್ಲಿ. ರಾತ್ರಿಯಾದ್ರೆ, ಸಾಕು ಮಹಿಳೆಯರು ಮನೆಯಿಂದ ಹೊರಗಡೆ ಹೋಗಲು ಭಯ ಪಡೋದು ಕಾಮನ್. ಆದ್ರೆ, ಯುವಕರು ಕೂಡ ಮನೆಯಿಂದ ಹೊರಗಡೆ ಹೋಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಗದಗ ನಗರದ ಹಾತಲಗೇರಿ ರಸ್ತೆಯಲ್ಲಿ ನಿನ್ನೆ(ಮೇ.31) ರಾತ್ರಿ 9 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ಯುವಕ ಸಂಜೀವಪ್ಪನನ್ನು ಬೈಕ್ ಮೇಲೆ ಬಂದ ದುಷ್ಕರ್ಮಿಯೊಬ್ಬ ಏಕಾಏಕಿ ರಾಡ್‌ನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ರಾಡ್‌ನಿಂದ ಬಲವಾಗಿ ತಲೆಗೆ ಹೊಡೆದಿದ್ರಿಂದ ಯುವಕ ಅಲ್ಲೇ ಕುಸಿದು ಬಿದ್ದು, ರಕ್ತದ ಮಡುವಿನಲ್ಲಿ ಒದ್ದಾಡಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಹಾಗೂ ಸಂಬಂಧಿಕರು ಆ್ಯಂಬುಲೆನ್ಸ್ ಮೂಲಕ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇನ್ನು ಹಲ್ಲೆಗೊಳಗಾದ ಸಂಜೀವಪ್ಪ ಗೊಲ್ಲರ್ ಪಾತ್ರೆಗಳ ವ್ಯಾಪಾರ ಮಾಡುತ್ತಾನೆ. ಅಂದು ವ್ಯಾಪಾರ ಮಾಡಿ ಬಂದ ಹಣದಿಂದ ಜೀವನ ನಡೆಸುತ್ತಿದ್ದಾನೆ. ಸಂಜೀವಪ್ಪ ಗೊಲ್ಲರ್ ಚಿಕ್ಕವನಿಂದಾಗಲೇ ತಂದೆ ಹಾಗೂ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಸಂಜೀವಪ್ಪ ಗೊಲ್ಲರ್ ಆತನ ಸಹೋದರ ಇಬ್ಬರನ್ನು, ಅವರ ಚಿಕ್ಕಮ್ಮ ಸಾಕುತ್ತಿದ್ದಾಳೆ. ಮದುವೆ ವಯಸ್ಸಿಗೆ ಬಂದ್ ಸಂಜೀವಪ್ಪ ಹೀಗೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವುದನ್ನು ನೋಡಿ ಅಜ್ಜಿ ಕಣ್ಣೀರು ಹಾಕುತ್ತಿದ್ದಾಳೆ. ಇನ್ನು ಅವರಿಗೆ ಯಾರ ದಿಕ್ಕು ಇಲ್ಲ, ನಾನೇ ಅಡುಗೆ ಮಾಡಿ ಕೊಡುತ್ತೇನೆ. ದುಡಿದು ತಿನ್ನುವ ಜನರ ಮೇಲೆ ಹೀಗೆ ಹಲ್ಲೆ ಮಾಡಿದ್ರೆ, ನಾವು ಹೇಗೆ ಬದುಕಬೇಕು. ಯಾವುದೇ ಜಗಳ ಇಲ್ಲ, ಏಕಾಏಕಿ ರಾಡ್‌ನಿಂದ ಹೊಡೆದು ದುಷ್ಕರ್ಮಿ ನಾಪತ್ತೆಯಾಗಿದ್ದಾನೆ. ಆತನ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲವೆಂದು ಗಾಯಾಳು ಚಿಕ್ಕಮ್ಮ ಕಣ್ಣೀರು ಹಾಕುತ್ತಿದ್ದಾರೆ.
ಗದಗದಲ್ಲಿ ವರ್ಷಗಳಿಂದ ಚಾಕೂ, ಚೂರಿ ಇರಿತದ ಪ್ರಕರಣಗಳು ಹಚ್ಚಾಗಿವೆ. ಶಾಂತವಾಗಿದ್ದ ಜಿಲ್ಲೆ ಕ್ರೈಂ ಸಿಟಿಯಾಗಿ ಪರಿವರ್ತನೆ ಆಗುತ್ತಿದೆ. ಬೆಟಗೇರಿ ಬಡಾವಣೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಿಂದ ಗದಗ ಬೆಟಗೇರಿ ಅವಳಿ ನಗರ ಬೆಚ್ಚಿಬಿದ್ದಿದೆ. ಯಾವುದೇ ಕಾರಣ ಇಲ್ಲದೆ ರಾಡ್ ನಿಂದ ಹಲ್ಲೆ ಮಾಡಿದಕ್ಕೆ, ರಾತ್ರಿ ವೇಳೆಯಲ್ಲಿ ಓಡಾಡಲು ಯುವಕರು ಭಯ ಪಡುತ್ತಿದ್ದಾರೆ. ಇನ್ನಾದರೂ ಪೊಲೀಸರು ರಾತ್ರಿ ವೇಳೆಯಲ್ಲಿ ರಾಡ್, ಮುಚ್ಚು, ಚಾಕು ಹಿಡಿದುಕೊಂಡು ಒಡಾಡುವ ಪುಡಿ ರೌಡಿಗಳ ಅಟ್ಟಗಾಸಕ್ಕೆ ಬ್ರೇಕ್ ಹಾಕಬೇಕಾಗಿದೆ. ಆಗ ಮಾತ್ರ ಅವಳಿ ನಗರದ ಜನರು ನೆಮ್ಮದಿ ಜೀವನ ನಡೆಸಲು ಸಾಧ್ಯ.
ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ