AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನತಾ ದರ್ಶನ: ಪದ್ಮಭೂಷಣ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿ, ಸಚಿವ ಹೆಚ್​ಕೆ ಪಾಟೀಲ್ ತಬ್ಬಿಬ್ಬು

ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಅಬ್ದುಲ್ ಖಾದರ್ ಸಾಬ್ ಎಂಬುವವರು ಜನತಾ ದರ್ಶನ ಕಾರ್ಯಕ್ರಮದಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮದ ಅಭಿವೃದ್ಧಿಗಾಗಿ 12 ವರ್ಷದಿಂದ ಹೋರಾಟ ಮಾಡಿದ್ದೇನೆ. ರಸ್ತೆ ಮೂಲ ಸೌಕರ್ಯ ಕಲ್ಪಿಸಲು ಹೋರಾಟ ಮಾಡಿದ್ದೇನೆ‌. ಕೇಂದ್ರ ಸರ್ಕಾರಕ್ಕೆ ನನ್ನ ಹೆಸರು ಶಿಫಾರಸು ಮಾಡಿ ಎಂದು ಅಬ್ದುಲ್ ಖಾದರ್ ಸಾಬ್ ಅವರು ಅರ್ಜಿ ಸಲ್ಲಿಸಿ ಸಚಿವರಿಗೆ ಮನವಿ ಮಾಡಿದ್ದಾರೆ.

ಜನತಾ ದರ್ಶನ: ಪದ್ಮಭೂಷಣ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿ, ಸಚಿವ ಹೆಚ್​ಕೆ ಪಾಟೀಲ್ ತಬ್ಬಿಬ್ಬು
ಗದಗ ಜನತಾ ದರ್ಶನ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಆಯೇಷಾ ಬಾನು|

Updated on: Sep 30, 2023 | 3:07 PM

Share

ಗದಗ, ಸೆ.2023: ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ (Janata Darshan) ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜನತಾ ದರ್ಶನ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಹೆಚ್​ಕೆ ಪಾಟೀಲ್ (HK Patil) ಹಾಗೂ ಶತಾಯುಷಿ ಕಮಲಾಬಾಯಿ ಜೋಶಿ (Kamalabai Joshi) ಅವರು ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿದರು. ಹಾಗೂ ಶತಾಯುಷಿ ಕಮಲಾಬಾಯಿ ಅವರ ಎರಡು ಅಹವಾಲುಗಳನ್ನು ಸಚಿವ ಹೆಚ್​ಕೆ ಪಾಟೀಲ್ ವೇದಿಕೆ ಮೇಲೆಯೇ ಈಡೇರಿಸಿದರು. ಆಧಾರ್ ಕಾರ್ಡ್ ಹಾಗೂ ಮಶಾಸನ ಪತ್ರ ನೀಡುವ ಮೂಲಕ ಅಜ್ಜಿಯ ಮೊದಲ ಬೇಡಿಕೆ ಈಡೇರಿಸಿದರು. ಇನ್ನು ಮತ್ತೊಂದೆಡೆ ವ್ಯಕ್ತಿಯೊಬ್ಬರು ಜನತಾ ದರ್ಶನದಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ಪ್ರಸಂಗ ನಡೆಯಿತು.

ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಅಬ್ದುಲ್ ಖಾದರ್ ಸಾಬ್ ಎಂಬುವವರು ಜನತಾ ದರ್ಶನ ಕಾರ್ಯಕ್ರಮದಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮದ ಅಭಿವೃದ್ಧಿಗಾಗಿ 12 ವರ್ಷದಿಂದ ಹೋರಾಟ ಮಾಡಿದ್ದೇನೆ. ರಸ್ತೆ ಮೂಲ ಸೌಕರ್ಯ ಕಲ್ಪಿಸಲು ಹೋರಾಟ ಮಾಡಿದ್ದೇನೆ‌. ಕೇಂದ್ರ ಸರ್ಕಾರಕ್ಕೆ ನನ್ನ ಹೆಸರು ಶಿಫಾರಸು ಮಾಡಿ ಎಂದು ಅಬ್ದುಲ್ ಖಾದರ್ ಸಾಬ್ ಅವರು ಅರ್ಜಿ ಸಲ್ಲಿಸಿ ಸಚಿವರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಪ್ರಶಸ್ತಿ ಅರ್ಜಿ ಸ್ವೀಕರಿಸಿದ ಸಚಿವ ಹೆಚ್​ಕೆ ಪಾಟೀಲ್ ಅವರು ಕೆಲಕಾಲ ವಿಚಲಿತರಾದರು. ಅಬ್ದುಲ್ ಖಾದರ್ ಸಾಬ್ ಮಾತು ಕೇಳಿ ಸಭೆಯಲ್ಲಿದ್ದ ಜನರೆಲ್ಲ ನಕ್ಕರು. ಬಳಿಕ ಸಮಾಜ ಸೇವೆ ಮಾಡುವವರು ಪ್ರಶಸ್ತಿ ಕೇಳಬಾರದು. ನಾನು ಜಿಲ್ಲಾಮಟ್ಟದ ಪ್ರಶಸ್ತಿಗೆ ಪರಿಗಣಿಸಲು ಪ್ರಯತ್ನಿಸೋದಾಗಿ ಸಚಿವ ಹೆಚ್​ಕೆ ಪಾಟೀಲ್ ಅವರು ಖಾದರ್ ಸಾಬ್​ಗೆ ಹೇಳಿದರು. ಸಚಿವರ ಮಾತು ಕೇಳಿ ಖಾದರ್ ವೇದಿಕೆಯಿಂದ ಕೆಳಗಿಳಿದರು.

ಇದನ್ನೂ ಓದಿ: ಜನತಾ ದರ್ಶನ: ದೂರು ಕೊಟ್ಟವರಿಂದಲೇ ಲಂಚ ಕೇಳುತ್ತಾರೆ: ಶಾಸಕ ವಿಠಲ ಕಟಕದೊಂಡ ಅಸಮಾಧಾನ

ಯಾವುದೇ ಕಾರಣಕ್ಕೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಬೇಡಿ

ಇನ್ನು ಮತ್ತೊಂದೆಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಹೆಚ್​ಕೆ ಪಾಟೀಲ್ ಜಿಲ್ಲಾಡಳಿತಕ್ಕೆ ಝಾಡಿಸಿದ್ದಾರೆ. ಜಿಡ್ಡು ಹಿಡಿದ ಆಡಳಿತ ಬಿಡಿಸುವುದೇ ಜನತಾ ದರ್ಶನ. ನಮ್ಮ ಸಿಎಂ ಸಿದ್ದರಾಮಯ್ಯ ಅವರ ಅಭಿಲಾಷೆ. ಆಧಾರ್ ಕಾರ್ಡ್ ಜಿಲ್ಲಾಧಿಕಾರಿ ಮಟ್ಟದಲ್ಲೇ ಆಗಬೇಕು. ಈಗ ಶತಾಯುಷಿ ಅಜ್ಜಿ ನನಗೆ ಅಹವಾಲು ಸಲ್ಲಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಧಾರ್ ಕಾರ್ಡ್ ಗಾಗಿ 101 ವರ್ಷ ಕಾಯಬೇಕಾಗಿದೆ. ಜಿಲ್ಲಾಡಳಿತದ ಮಟ್ಟದಲ್ಲಿ ಆಗಬೇಕಾದ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಡಿಸಿ ವೈಶಾಲಿ ಅವರಿಗೆ ಸಚಿವ ಪಾಟೀಲ್ ಖಡಕ್ ಸೂಚನೆ ಕೊಟ್ಟರು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡದಂತೆ ಸೂಚನೆ ನೀಡಿದರು.

ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ