ಗದಗ, ಮೇ.14: ಕಿಡಿಗೇಡಿಗಳ ಅಟ್ಟಹಾಸಕ್ಕೆ ಕುಟುಂಬವೊಂದು ನಲುಗಿದ ಘಟನೆ ಗದಗ-ಬೆಟಗೇರಿ(Gadag-Betageri) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೌದು, ಮಹಿಳೆ ಸೇರಿದಂತೆ ಆಕೆಯ ಅಪ್ರಾಪ್ತ ಇಬ್ಬರು ಹೆಣ್ಣು ಮಕ್ಕಳಿಗೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ‘ನನ್ನ ಕುಟುಂಬವನ್ನು ಕಾಪಾಡಿ ಎಂದು ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ. ಜೊತೆಗೆ ಇದನ್ನು ಪ್ರಶ್ನಿಸಿದ್ದಕ್ಕೆ ತಾಯಿ, ಮಕ್ಕಳ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಇನ್ನು ಘಟನೆ ಕುರಿತು ಬೆಟಗೇರಿ ಪೊಲೀಸ್ ಠಾಣೆಗೆ ಲಿಯಾಕತ್, ಅಲ್ತಾಫ್ ಎಂಬುವವರ ವಿರುದ್ದ ಲೈಂಗಿಕ ಕಿರುಕುಳ ಆರೋಪದ ಮೇಲೆ ದೂರು ನೀಡಿದರೂ ಪೊಲೀಸರು ಮಾತ್ರ ಈ ಕುರಿತು ಕ್ಯಾರೇ ಎಂದಿಲ್ಲ. ಜೊತೆಗೆ ದೂರು ನೀಡಿದ್ರೆ ನಿನ್ನ ಮತ್ತು ಮಕ್ಕಳನ್ನು ಒಳಗೆ ಹಾಕುತ್ತೇವೆ ಎಂದು ಪೊಲೀಸರು ಕೂಡ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪೊಲೀಸರ ವಿರುದ್ಧ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ನಿನ್ನೆ ರಾತ್ರಿ ಕೂಡ ತಾಯಿ ಸೈನಾಜ್, ಪುತ್ರ ಸದ್ಧಾಂ ಮೇಲೆ ಆರೋಪಿ ಲಿಯಾಕತ್, ಅಲ್ತಾಫ್ ಸೈಯದ್, ಸಮೀರ್, ರಿಯಾಜ್, ಜಾವೀದ್ ಎಂಬುವವರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಲೈಂಗಿಕ ಕಿರುಕುಳ ಆರೋಪ; ವೈದ್ಯನ ಮೇಲೆ ದೂರು ದಾಖಲಿಸಿದ ವೈದ್ಯೆ
ಬೆಂಗಳೂರು: ಕೆಲಸ ಮಾಡ್ತಿದ್ದ ಕಚೇರಿಯಲ್ಲಿಯೇ ಹಣ ಕದ್ದು ಎಸ್ಕೇಪ್ ಅಗಿದ್ದ ಆರೋಪಿ ಮಹೇಶ್ (32) ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ವಿಜಯ ನಗರ ಸರ್ವೀಸ್ ರಸ್ತೆಯಲ್ಲಿರುವ ಇನ್ಫ್ರಾಸ್ಟ್ರಕ್ಚರ್ ಕಂಪನಿಯಲ್ಲಿ ಆರೋಪಿ ಕೆಲಸ ಮಾಡಿಕೊಂಡಿದ್ದ. ಇತ ನಿವೃತ್ತಿ ಸಬ್ ಇನ್ಸ್ಪೆಕ್ಟರ್ ಮಗ ಕೂಡ ಹೌದು, ಕಚೇರಿಯ ಸಿಬ್ಬಂದಿಗಳಿಗೆ ಸಂಬಳ ಮಾಡಬೇಕಾಗಿದ್ದ 24 ಲಕ್ಷ ರೂ. ಹಣವನ್ನು ಕದ್ದು ಎಸ್ಕೇಪ್ ಅಗಿದ್ದ.ಇದೀಗ ಆತನನ್ನು ಬಂಧಿಸಿ ಆರೋಪಿಯಿಂದ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Tue, 14 May 24