ಗದಗ: ಮಹಿಳೆಯರ ಜೊತೆಗೆ ಕುಳಿತು ಊಟ ಮಾಡಿದ ಮಂಗ – ಈ ತಲೆಬರಹ ನಾನಾ ಅರ್ಥಗಳು, ಒಳಾರ್ಥಗಳು, ಗೂಡಾರ್ಥಗಳು ನೀಡುತ್ತಿದೆ. ಆದರೆ ಅದು ಅವರವರ ಭಾವಕ್ಕೆ, ಅನುಭವಕ್ಕೆ ಬಿಟ್ಟ ಸಂಗತಿಯಾಗಿದೆ. ಹೌದು ಗದಗ ಜಿಲ್ಲೆ ಶಿರಹಟ್ಟಿ (Shirahatti) ಪಟ್ಟಣದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಶಿರಹಟ್ಟಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಕಚೇರಿ ಆವರಣದಲ್ಲಿ ಇಂದು ಸೋಮವಾರ ಈ ದೃಶ್ಯಾವಳಿ ಕಂಡುಬಂದಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು (Anganavadi Karyakarte) ಮೀಟಿಂಗ್ ಅಂಗವಾಗಿ ಆಗಮಿಸಿದ್ದರು. ಸಹಜವಾಗಿಯೆ, ಊಟದ ಸಮಯವಾಗಿದ್ದರಿಂದ (Eating) ಮೂರ್ನಾಲ್ಕು ಅಂಗನವಾಡಿ ಕಾರ್ಯಕರ್ತೆಯರು ಮರದ ಕೆಳಗೆ ಊಟಕ್ಕೆ ಕುಳಿತಿದ್ದಾರೆ. ಆ ವೇಳೆ, ಮರದ ಮೇಲಿದ್ದ ಮಂಗವೊಂದು (Monkey) ಕೆಳಗಿಳಿದು ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟಿದೆ.
Buntings: ರಾಜಕೀಯ ಪಕ್ಷದ ಬಂಟಿಂಗ್ಸ್ಗೆ ಸಿಲುಕಿ ಅಮಾಯಕ ಕೋತಿಯ ದುರ್ಮರಣ
ಆ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಭಾಗಿರತಿ ಸಾತಪುತೆ ಅವರು ಮಂಗನಿಗೆ ತುತ್ತು ಮಾಡಿ ಊಟ ಮಾಡಿಸಿದರು. ನಾಗಲಕ್ಷ್ಮಿ ಕುಲಕರ್ಣಿ, ಲಕ್ಷ್ಮಿ ನವಲೆ, ರೂಪಾ ಕಟ್ಟಿಮನಿ ಹಾಗೂ ಭಾಗಿರತಿ ನಾಲ್ಕೂ ಜನ ಊಟ ಮಾಡುವಾಗ ಈ ಘಟನೆ ನಡೆದಿದೆ.
ಕಾರ್ಯಕರ್ತೆಯರು ಮಂಗನಿಗೆ ಊಟ ನೀಡಿ ಮಾನವೀಯತೆಯನ್ನು ಮೆರೆದರು. ಮಹಿಳೆಯರು ತಟ್ಟೆಯಲ್ಲಿ ಆಹಾರವನ್ನು ಹಾಕಿದ್ರು, ಅವರ ಜೊತೆಗೆ ಕುಳಿತು, ಹೆದರದೆ/ ಹೆಸರಿಸದೆ ಪಂಕ್ತಿ ಭೋಜನ ಮಾಡಿದ್ದಾನೆ ಮಂಗಣ್ಣ. ಅಪರೂಪದ ಈ ದೃಶ್ಯಗಳು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ