AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಮಾಯ, ಮಲೆನಾಡಿನ ಸೊಬಗು! ದನಗಳ ಸಂತೆಯಲ್ಲಿ ಜೋಡೆತ್ತು ಬೆಲೆ ನ್ಯಾನೋ ಕಾರ್​​ ಬೆಲೆಯನ್ನೂ ಮೀರಿಸುತ್ತಿದೆ

North Karnataka rains: ಎತ್ತ ನೋಡಿದ್ರೂ ಜೋಡೆತ್ತುಗಳ ಕಲವರ ಜೋರಾಗಿದೆ. ನಿರಂತರ ಮಳೆಯಿಂದ ಗರಿಗೆದರಿದ ಕೃಷಿ ಚಟುವಟಿಕೆ. ಗದಗ ದನಗಳ‌ ಮಾರ್ಕೆಟ್ ನಲ್ಲಿ ಜೋಡೆತ್ತುಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ‌.

ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಮಾಯ, ಮಲೆನಾಡಿನ ಸೊಬಗು! ದನಗಳ ಸಂತೆಯಲ್ಲಿ ಜೋಡೆತ್ತು ಬೆಲೆ ನ್ಯಾನೋ ಕಾರ್​​ ಬೆಲೆಯನ್ನೂ ಮೀರಿಸುತ್ತಿದೆ
ದನಗಳ ಸಂತೆಯಲ್ಲಿ ಜೋಡೆತ್ತು ಬೆಲೆ ನ್ಯಾನೋ ಕಾರ್​​ ಬೆಲೆಯನ್ನೂ ಮೀರಿಸುತ್ತಿದೆ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Jul 24, 2023 | 6:46 PM

Share

North Karnataka Rains: ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಸ್ವಲ್ಪ ಮಾಯವಾಗಿದೆ. ನಾಲ್ಕೈದು ದಿನಗಳ ನಿರಂತರ ಮಳೆಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹೀಗಾಗಿ ರಾಸುಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ವಾರದ ಹಿಂದೆ ರಾಸುಗಳಿಗೆ ಕೇಳೋರೇ ಇರ್ಲಿಲ್ಲ. ಈಗ ರಾಸುಗಳ ಬೆಲೆ ನ್ಯಾನೋ ಕಾರ್​​ ಬೆಲೆಯನ್ನೂ ಮೀರಿಸುವಂತಿದೆ. ಉತ್ತರ ಕರ್ನಾಟಕದಲ್ಲಿ ಬರದ ಛಾಯೆ ಮಾಯ.. ಮಲೆನಾಡಿನ ಸೊಬಗು…! ನಾಲ್ಕೈದು ದಿನಗಳ ನಿರಂತರ ಮಳೆಗೆ ಗರಿಗೆದರಿದ ಕೃಷಿ ಚಟುವಟಿಕೆ! ದನಗಳ ಸಂತೆಯಲ್ಲಿ ರಾಸುಗಳಿಗೆ (Bullocks) ಭಾರಿ ಡಿಮ್ಯಾಂಡ್..! ಕಳೆದ ವಾರದ 70-80 ಸಾವಿರ, ಈ ವಾರ ಲಕ್ಷದ ಗಡಿ ದಾಟಿದ ಬೆಲೆ…! ಜೋಡೆತ್ತುಗಳ ಬಲೆ ಕೇಳಿ ಕಂಗಾಲಾದ ರೈತರು…!

ಎತ್ತ ನೋಡಿದ್ರೂ ಜೋಡೆತ್ತುಗಳ ಕಲವರ ಜೋರಾಗಿದೆ. ನಿರಂತರ ಮಳೆ ರೈತರ ಮುಖದಲ್ಲಿ ಮೂಡಿದ‌ ಮಂದಹಾಸ. ಗರಿಗೆದರಿದ ಕೃಷಿ ಚಟುವಟಿಕೆಗಳು. ರೈತ‌ ಮಿತ್ರ ಜೋಡೆತ್ತುಗಳಿಗೆ ಭಾರಿ ಡಿಮ್ಯಾಂಡ್. ಹೌದು ಗದಗ ದನಗಳ‌ ಮಾರ್ಕೆಟ್ ನಲ್ಲಿ ಜೋಡೆತ್ತುಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ‌. ಹೌದು‌ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಮುಂಗಾರು ಬೆಳೆ ಬಾರದ ಕಾರಣ ಅನ್ನದಾತರು ಕಂಗಾಲಾಗಿದ್ದಾರೆ. ಇದ್ದ ಎತ್ತುಗಳಿಗೆ ಮೇವು ಕೊರತೆಯಿಂದಾಗಿ ಕೈಗೆ ಬಂದ‌ ಬೆಲೆಗೆ ಮಾರಾಟ ಮಾಡಿದ್ದಾರೆ.

ಆದ್ರೆ, ಈಗ ನಾಲ್ಕೈದು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಹೀಗಾಗಿ ರೈತರ‌ ಮುಖದಲ್ಲಿ ಮಂದಹಾಸ ಮೂಡಿದೆ‌. ಕೃಷಿ ಚಟುವಟಿಕೆಗಳು ಗರಿಗೆದರಿದೆ. ಹೀಗಾಗಿ ಎತ್ತುಗಳ ಖರೀದಿ ಭರಾಟೆ ಜೋರಾಗಿದೆ. ಆದ್ರೆ ಗದಗ ಎಪಿಎಂಸಿ ಆವರಣದಲ್ಲಿ ನಡೆಯುವ ಜಾನುವಾರ ಸಂತೆಯಲ್ಲಿ ಜೋಡೆತ್ತುಗಳ ಬೆಲೆ ಕೇಳಿ ರೈತರು ಕಂಗಾಲಾಗಿದ್ದಾರೆ. ಜೋಡೆತ್ತುಗಳ ಬೆಲೆ ನ್ಯಾನೋ ಕಾರ್ ಬೆಲೆ ಮೀರಿಸುವಂತಿದೆ. ಹೌದು ಜೋಡೆತ್ತುಗಳ ರೇಟ್ 1.20 ರಿಂದ 1.40 ಲಕ್ಷ ಇದೆ. ಮೊದ್ಲೆ ಮುಂಗಾರು ಬೆಳೆ ಇಲ್ಲದೇ ಕಂಗಾಲಾದ ರೈತರು ಜೋಡೆತ್ತು ರೇಟ್ ಕೇಳಿ ಬೆಚ್ವಿಬಿದ್ದಿದ್ದಾರೆ‌. ಕಳೆದ ವಾರದಲ್ಲಿ 70-80 ಸಾವಿರ ಜೋಡಿ ಇದ್ದ ರಾಸುಗಳು ಬೆಲೆ ಈಗ ಲಕ್ಷದ ಗಡಿ ದಾಟಿದೆ. ಮುಂಗಾರು ಕೈಕೊಟ್ಟ ಕಾರಣ 70-80 ಸಾವಿರ ಮಾರಾಟ ಮಾಡಿದ್ದೇವೆ ಸರ್. ಈಗ 120-140 ಲಕ್ಷ ಜೋಡಿಗೆ ಹೇಳ್ತಾಯಿದ್ದಾರೆ ಅಂತ ರೈತ ಕಂಗಾಲಾಗಿದೆ.

ಗದಗ ಜಾನುವಾರಗಳ ಸಂತೆಯಲ್ಲಿ ವಿವಿಧ ತಳಿಯ ಜೋಡೆತ್ತುಗಳ ಭರಾಟೆ ಜೋರಾಗಿದೆ‌. ಖರೀದಿ ಮಾಡಲು ಬಂದ ರೈತರು ಜೋಡೆತ್ತುಗಳ ರೇಟ್ ಕೇಳಿ ಕಂಗಾಲಾಗಿದ್ದಾರೆ. ಇನ್ನೂ ಮಾರಾಟ ಮಾಡಲು ಬಂದ ರೈತರಿಗೆ ಬಂಪರ ಲಾಭ ಪಡೆಯುತ್ತಿದೆ. ಗದಗ ಜಿಲ್ಲೆ‌ ಮಾತ್ರವಲ್ಲ ಕೊಪ್ಪಳ, ಧಾರವಾಡ, ಹಾವೇರಿ, ಬಾಗಲಕೋಟ ಸೇರಿ ವಿವಿಧ ಜಿಲ್ಲೆಗಳ ರೈತರು ರಾಸುಗಳ ಖರೀದಿ ಮಾರಾಟಕ್ಕೆ ಆಗಮಿಸ್ತಾರೆ.

ಮುಂಗಾರು ಕೈಕೊಟ್ಟಿದೆ ಅಂತ ಎತ್ತುಗಳು‌ ಮಾರಾಟ ಮಾಡಿದ ರೈತರು‌ ಮತ್ತೆ ಖರೀದಿ ಹೆಣಗಾಡುತ್ತಿದ್ದಾರೆ. ರೈತ ಮಿತ್ರರಿಗೆ ಈಗ ಭಾರಿ ಡಿಮ್ಯಾಂಡ್ ಬಂದಿದೆ. ರಾಸುಗಳ ಖರೀದಿ ಜೊತೆ ಎತ್ತುಗಳ ಅಲಂಕಾರಿಕ ವಸ್ತುಗಳ ಮಾರಾಟದ ಭರಾಟೆಯೂ ಜೋರಾಗಿದೆ. ಮಳೆ ರೈತ ಸಮೂಹದಲ್ಲಿ ಸಂತಸ ತಂದಿದೆ. ಆದ್ರೆ ರಾಸುಗಳ ಬೆಲೆ ಗಗನಕ್ಕೆ ಏರಿದ್ದು, ಸಂಕಷ್ಟದಲ್ಲಿದ್ದ ರೈತರು ರಾಸುಗಳ ಖರೀದಿ ಹೇಗಪ್ಪಾ ಮಾಡೋದು ಅಂತಿದ್ದಾರೆ.

ಅನ್ನದಾತರಿಗೆ ಮಳೆ ಬಂದ್ರೂ ಕಷ್ಟ. ಮಳೆ ಬರದಿದ್ರೂ ಕಷ್ಟವಾಗಿದೆ. ಮುಂಗಾರು ಮಳೆ ಇಲ್ಲ ಅಂತ ಕಣ್ಣೀರು ಹಾಕಿದ. ರೈತರು ಈಗ ಮಳೆ ಬಂದಿದೆ ಅಂತ ಸಂತಸ ಪಡೆಬೇಕು ಅನ್ನೋದ್ರಲ್ಲಿ ರಾಸುಗಳ ಬೆಲೆ ರೈತರಿಗೆ ಶಾಕ್ ನೀಡಿದ್ದು ಮಾತ್ರ ವಿಪರ್ಯಾಸವೇ ಸರಿ.

ಗದಗ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ