CAA ವಿರೋಧಿಸಿ ಗೋಡೆಬರಹ ಬರೆದಿದ್ದ ನಾಲ್ವರು ಅರೆಸ್ಟ್​

|

Updated on: Jan 27, 2020 | 12:08 PM

ಗದಗ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗೋಡೆಗಳ ಮೇಲೆ ಬರಹ ಬರೆದಿದ್ದ ನಾಲ್ವರನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ. ನರಗುಂದ ನಿವಾಸಿಗಳಾದ ಮುಬಾರಕ್ ಪರಾಸ್, ಜೆಶಾನ್ ಆಸೀಫ್ ಬೈರಕದಾರ್ ಹಾಗು ರಿಯಾಜ್ ಸಕಲಿ ಬಂಧಿತ ಆರೋಪಿಗಳು. ನರಗುಂದ ಪಟ್ಟಣದಲ್ಲಿ ಜನವರಿ 15ರಂದು ವೆಂಕಟೇಶ್ವರ ದೇವಾಲಯ, ಸರ್ಕಾರಿ ಕಾಲೇಜು, ಗ್ರಂಥಾಲಯ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ನೋ NRC, ನೋ CAA ಮತ್ತು ನೋ NRP ಅಂತಾ ಗೋಡೆ ಬರಹ ಬರೆದಿದ್ದರು. ಹೀಗಾಗಿ ಆರೋಪಿಗಳನ್ನು ಬಂಧಿಸುವಂತೆ ಹಿಂದು ಪರ‌ ಸಂಘಟನೆಗಳು ಒತ್ತಾಯ […]

CAA ವಿರೋಧಿಸಿ ಗೋಡೆಬರಹ ಬರೆದಿದ್ದ ನಾಲ್ವರು ಅರೆಸ್ಟ್​
Follow us on

ಗದಗ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗೋಡೆಗಳ ಮೇಲೆ ಬರಹ ಬರೆದಿದ್ದ ನಾಲ್ವರನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ. ನರಗುಂದ ನಿವಾಸಿಗಳಾದ ಮುಬಾರಕ್ ಪರಾಸ್, ಜೆಶಾನ್ ಆಸೀಫ್ ಬೈರಕದಾರ್ ಹಾಗು ರಿಯಾಜ್ ಸಕಲಿ ಬಂಧಿತ ಆರೋಪಿಗಳು.

ನರಗುಂದ ಪಟ್ಟಣದಲ್ಲಿ ಜನವರಿ 15ರಂದು ವೆಂಕಟೇಶ್ವರ ದೇವಾಲಯ, ಸರ್ಕಾರಿ ಕಾಲೇಜು, ಗ್ರಂಥಾಲಯ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ನೋ NRC, ನೋ CAA ಮತ್ತು ನೋ NRP ಅಂತಾ ಗೋಡೆ ಬರಹ ಬರೆದಿದ್ದರು. ಹೀಗಾಗಿ ಆರೋಪಿಗಳನ್ನು ಬಂಧಿಸುವಂತೆ ಹಿಂದು ಪರ‌ ಸಂಘಟನೆಗಳು ಒತ್ತಾಯ ಮಾಡಿದ್ದವು.

CAA ವಿರೋಧಿಸಿ ಗೋಡೆ ಬರಹ ಹಿನ್ನೆಲೆಯಲ್ಲಿ ನರಗುಂದ ಪುರಸಭೆ ಅಧಿಕಾರಿಗಳು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Published On - 12:08 pm, Mon, 27 January 20