ಗದಗ: ಕಣ್ಣಿಲ್ಲದವರಿಗೆ ಕಂಠದಾನ ಮಾಡಿದ ಪುಟ್ಟರಾಜು ಗವಾಯಿಗಳ ಜಯಂತ್ಯೋತ್ಸವ

ಗದಗ: ಕತ್ತಲು ಕವಿದವರ ಬಾಳಿಗೆ ಬೆಳಕಾದವರು. ಕಣ್ಣಿಲ್ಲದವರಿಗೆ ಕಂಠದಲ್ಲೇ ಬದುಕಿನ ಪಾಠ ಹೇಳಿಕೊಟ್ಟವರು. ಇದ್ದಷ್ಟು ದಿನ ಬಂಗಾರದ ಮನುಷ್ಯನಂತೆ ಬಾಳಿದ್ದ ಕರುಣಾಮಯಿ ಆ ಗಾನಗಂಧರ್ವ. ಅದೇ ಅವ್ರ ಆ ನಿಸ್ವಾರ್ಥ ಸೇವೆ ಅವ್ರನ್ನ ದೇವರನ್ನಾಗಿಸಿದೆ. ಲಕ್ಷಾಂತರ ಭಕ್ತರು ಆರಾಧಿಸುವಂತಾಗಿದೆ. ರಸ್ತೆಯೇ ಕಾಣದಂತೆ ಕುಂಭಗಳ ಸಾಲು. ಕಿವಿಗಪ್ಪಳಿಸುವಂತೆ ಡೊಳ್ಳು, ತಮಟೆಯ ಸದ್ದು. ಹೆಜ್ಜೆಯಲ್ಲೇ ಮೋಡಿ ಮಾಡೋ ಕಲಾವಿದರು. ಅದೇನು ಸಂಭ್ರಮ.. ಅದೇನು ಸಡಗರ.. ದೇವರ ಜಾತ್ರೆಗಿಂತಲೂ ಇಲ್ಲಿ ತುಸು ಹೆಚ್ಚೇ ಖುಷಿ ಮನೆ ಮಾಡಿತ್ತು. ಎಲ್ಲರೂ ಒಗ್ಗೂಡಿ ದಯಾಮಯಿಯ […]

ಗದಗ: ಕಣ್ಣಿಲ್ಲದವರಿಗೆ ಕಂಠದಾನ ಮಾಡಿದ ಪುಟ್ಟರಾಜು ಗವಾಯಿಗಳ ಜಯಂತ್ಯೋತ್ಸವ
Follow us
ಸಾಧು ಶ್ರೀನಾಥ್​
|

Updated on: Mar 04, 2020 | 6:21 PM

ಗದಗ: ಕತ್ತಲು ಕವಿದವರ ಬಾಳಿಗೆ ಬೆಳಕಾದವರು. ಕಣ್ಣಿಲ್ಲದವರಿಗೆ ಕಂಠದಲ್ಲೇ ಬದುಕಿನ ಪಾಠ ಹೇಳಿಕೊಟ್ಟವರು. ಇದ್ದಷ್ಟು ದಿನ ಬಂಗಾರದ ಮನುಷ್ಯನಂತೆ ಬಾಳಿದ್ದ ಕರುಣಾಮಯಿ ಆ ಗಾನಗಂಧರ್ವ. ಅದೇ ಅವ್ರ ಆ ನಿಸ್ವಾರ್ಥ ಸೇವೆ ಅವ್ರನ್ನ ದೇವರನ್ನಾಗಿಸಿದೆ. ಲಕ್ಷಾಂತರ ಭಕ್ತರು ಆರಾಧಿಸುವಂತಾಗಿದೆ.

ರಸ್ತೆಯೇ ಕಾಣದಂತೆ ಕುಂಭಗಳ ಸಾಲು. ಕಿವಿಗಪ್ಪಳಿಸುವಂತೆ ಡೊಳ್ಳು, ತಮಟೆಯ ಸದ್ದು. ಹೆಜ್ಜೆಯಲ್ಲೇ ಮೋಡಿ ಮಾಡೋ ಕಲಾವಿದರು. ಅದೇನು ಸಂಭ್ರಮ.. ಅದೇನು ಸಡಗರ.. ದೇವರ ಜಾತ್ರೆಗಿಂತಲೂ ಇಲ್ಲಿ ತುಸು ಹೆಚ್ಚೇ ಖುಷಿ ಮನೆ ಮಾಡಿತ್ತು. ಎಲ್ಲರೂ ಒಗ್ಗೂಡಿ ದಯಾಮಯಿಯ ಜಯಂತ್ಯೋತ್ಸವ ಮಾಡಿದ್ರು.

ನಿಜ.. ಇಲ್ಲಿನ ಸಂತಸಕ್ಕೆ ಕಾರಣ ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳ 107 ನೇ ಜಯಂತ್ಯೋತ್ಸವ. ಗದಗ ಅಂದ್ರೆ ಥಟ್ ಅಂತ ನೆನಪಾಗೋದು ಅಂಧ ಅನಾಥರ ಬಾಳಿನ ಬೆಳಕು ಪಂಡಿತ ಪುಟ್ಟರಾಜ ಗವಾಯಿಗಳು. ಹೀಗಾಗೇ ನಿನ್ನೆ ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಗವಾಯಿಗಳ ಗದ್ದುಗೆ ದರ್ಶನ ಪಡೆದ ಭಕ್ತರು: ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳ ಗದ್ದುಗೆ ವಿವಿಧ ಬಣ್ಣಗಳ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಯಾಕಂದ್ರೆ ಪುಟ್ಟರಾಜ ಗವಾಯಿಗಳ 107 ನೇ ಹುಟ್ಟು ಹಬ್ಬವನ್ನ ಭಕ್ತ ಸಮೂಹವೇ ಸೇರಿ ಆಚರಿಸಿತ್ತು. ಕಳೆದ ಐದು ವರ್ಷಗಳಿಂದ ಜಯಂತ್ಯೋತ್ಸವ ಮಾಡಲಾಗ್ತಿದೆ. ಇನ್ನು 1008 ಸುಮಂಗಲೆಯರಿಂದ ಬೃಹತ್ ಕುಂಭ ಮೇಳ ನಡೆಯಿತು. ವೀರಗಾಸೆ, ಹಲಗೆ ಮೇಳ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳು ಶ್ರೀಗಳ ಜಯಂತ್ಯೋತ್ಸವದ ಮೆರಗು ಹೆಚ್ಚಿಸಿದ್ವು.

ನಗರದ ಅಲ್ಲಲ್ಲಿ ಭಕ್ತರು ಸ್ವಯಂಪ್ರೇರಿತವಾಗಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ರು. ಪುಣ್ಯಾಶ್ರಮದಲ್ಲಿ 107 ಕೆಜಿ ಬೃಹತ್ ಕೇಕ್​ನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಕಟ್ ಮಾಡಿದ್ರು. ಅದ್ರಲ್ಲೂ ಮಠದ ಆವರಣದಲ್ಲಂತೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಾಗಲಕೋಟೆ, ಹಾವೇರಿ, ಹುಬ್ಬಳ್ಳಿ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಯ ಭಕ್ತರು ಮಠಕ್ಕೆ ಆಗಮಿಸಿ ಗವಾಯಿಗಳ ಗದ್ದುಗೆ ದರ್ಶನ ಪಡೆದ್ರು.

ಇಂಥಾ ಕಾಲದಲ್ಲೂ ಪರರ ಸೇವೆಯೇ ಬದುಕು ಅಂತಾ ನಂಬಿದ್ದ ಗವಾಯಿಗಳು ಕಣ್ಣಿಂದ ಮರೆಯಾಗಿದ್ರೂ ಮನಸ್ಸಲ್ಲಿ ಅಚ್ಚು ಹೊತ್ತಿದಂತೆ ಉಳಿದಿದ್ದಾರೆ. ಇದೇ ಕಾರಣಕ್ಕಾಗೇ ಅವ್ರ ಭಕ್ತರು ಹುಟ್ಟಿದ ದಿನವನ್ನೇ ಹಬ್ಬದಂತೆ ಆಚರಿಸ್ತಿದ್ದಾರೆ.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ