Gadag News: ಹಿಂದೂ ಪರ ಸಂಘಟನೆಗಳು ಶಾಂತಿ‌ ಕದಡುವ, ಕಾನೂನು ಬಾಹಿರ ಕೆಲಸ ಮಾಡಿಲ್ಲ- ಪ್ರಮೋದ್​ ಮುತಾಲಿಕ್ ತಿರುಗೇಟು

ಶಾಂತಿ‌ ಕದಡಿದ್ರೆ, ಸಂವಿಧಾನ ಶಕ್ತಿ ತೋರಿಸಬೇಕಾಗುತ್ತೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರ ‘ಇದು ಎಲ್ಲರೂ ಹೇಳುವಂಥ ಮಾತು, ಯಾರೂ ಕೂಡ ಶಾಂತಿ‌ ಕದಡುವ ಕೆಲಸ ಮಾಡಲೇಬಾರದು ಎಂದು ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ.

Gadag News: ಹಿಂದೂ ಪರ ಸಂಘಟನೆಗಳು ಶಾಂತಿ‌ ಕದಡುವ, ಕಾನೂನು ಬಾಹಿರ ಕೆಲಸ ಮಾಡಿಲ್ಲ- ಪ್ರಮೋದ್​ ಮುತಾಲಿಕ್ ತಿರುಗೇಟು
ಪ್ರಮೋದ್​ ಮುತಾಲಿಕ್​

Updated on: May 28, 2023 | 11:24 AM

ಗದಗ: ಶಾಂತಿ‌ ಕದಡಿದ್ರೆ, ಸಂವಿಧಾನ ಶಕ್ತಿ ತೋರಿಸಬೇಕಾಗುತ್ತೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ (Priyank kharge)ಹೇಳಿಕೆ ವಿಚಾರ ‘ಇದು ಎಲ್ಲರೂ ಹೇಳುವಂಥ ಮಾತು, ಯಾರೂ ಕೂಡ ಶಾಂತಿ‌ ಕದಡುವ ಕೆಲಸ ಮಾಡಲೇಬಾರದು. ಸಂವಿಧಾನ ಬದ್ಧವಾಗಿ, ಪ್ರಜಾಪ್ರಭುತ್ವದ ಆಧಾರದಲ್ಲಿ ಕಾನೂನ ಬದ್ಧ ಪ್ರಕ್ರಿಯೆ ಮಾಡಬೇಕು. ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್​, ಭಜರಂಗದಳ ಸಂಘಟನೆಗಳು ಶಾಂತಿ‌ ಕದಡುವ ಅನಾವಶ್ಯಕ ಕಾನೂನ ಬಾಹಿರ ಯಾವುದೇ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲವೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್(Pramod Muthalik) ತಿರುಗೇಟು ನೀಡಿದ್ದಾರೆ.

ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಗೋಹತ್ಯೆ ನಿಷೇಧ ಇದ್ದರೂ ಕಸಾಯಿಖಾನೆಗೆ ಗೋವುಗಳು ಹೋಗುತ್ತಿವೆ. ಇದು ಸರ್ಕಾರಕ್ಕೆ, ಕಾಂಗ್ರೆಸ್​ನವರಿಗೆ ಹಾಗೂ ಪೊಲೀಸ್ ಇಲಾಖೆಗೂ ಗೊತ್ತು. ಅದನ್ನು‌ ನಿಲ್ಲಿಸದಿದ್ರೆ, ಹೋರಾಟ ಮಾಡಬೇಕಾಗುತ್ತೆ. ಅಲ್ಲಿ ಸಂಘರ್ಷ ಆದ್ರೆ, ಸರ್ಕಾರ, ಪೊಲೀಸ್ ಇಲಾಖೆಯೇ ನೇರ ಕಾರಣ. ಆಜಾನ್, ಮತಾಂತರ ತಡೆಯದಿದ್ರೆ, ಕಾಯ್ದೆ ಯಾಕೇ ಮಾಡ್ತೀರಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ:ಬಿಜೆಪಿಯವರಿಗೆ ದುಡ್ಡಿನದ್ದೇ ಚಿಂತೆ, ಬಿಜೆಪಿ ನಾಯಕರ ವಿರುದ್ಧ ಪ್ರಮೋದ್​ ಮುತಾಲಿಕ್​ ವಾಗ್ದಾಳಿ

ಪಿಎಫ್ಐ ದೇಶದ್ರೋಹಿ ಚಟವಟಿಕೆಗೆಗೆ ಅವಕಾಶ ಕೊಡುತ್ತಿದ್ರು, ಜೊತೆಗೆ ಭತೋತ್ಪಾದನೆ ಸಂಘಟನೆ ಜೊತೆ ಕೈಜೋಡಿಸಿದೆ ಎಂದು ಆ ಸಂಘಟನೆಯನ್ನ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. 24 ಕೊಲೆ‌ ಕೇಸ್​, 13 ಕೊಲೆಯಲ್ಲಿ ಪಿಎಫ್ಐ, ಎಸ್​ಡಿಪಿಐ ಹೆಸರಿದೆ. ಇದನ್ನ ವಿರೋಧಿಸಿ ಪ್ರತಿಭಟನೆ ಮಾಡಿದಾಗ ಸಂಘರ್ಷ ಆದ್ರೆ, ಅದಕ್ಕೆ ಕಾರಣ ನೀವು. ನಾವು ಕಾನೂನು ಕೈಗೆ ತಗೊಳ್ಳಲ್ಲವೆನ್ನುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆಗೆ ಮುತಾಲಿಕ್ ತಿರುಗೇಟು ಕೊಟ್ಟಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ