ಪಿಎಫ್​ಐ ಜೊತೆ ಬಜರಂಗದಳ, ಆರ್​ಎಸ್​ಎಸ್​ ಹೋಲಿಸಿ ಸಮಸ್ಯೆ ಮೈಗೆಳೆದುಕೊಳ್ಳಬೇಡಿ: ಖರ್ಗೆಗೆ ಮಹೇಶ್ ಟೆಂಗಿನಕಾಯಿ ತಿರುಗೇಟು

ಪಿಎಫ್​ಐ, ಎಸ್​ಡಿಪಿಐ ಜೊತೆ ಬಜರಂಗದಳ ಹಾಗೂ ಆರ್​ಎಸ್​ಎಸ್​ ಅನ್ನು ಹೋಲಿಸಿ ಅನಗತ್ಯವಾಗಿ ಸಮಸ್ಯೆ ಮೈಗೆಳೆದುಕೊಳ್ಳಬೇಡಿ ಎಂದು ಪ್ರಿಯಾಂಕ್ ಖರ್ಗೆಗೆ ಮಹೇಶ್ ಟೆಂಗಿನಕಾಯಿ ತಿರುಗೇಟು ನೀಡಿದ್ದಾರೆ.

ಪಿಎಫ್​ಐ ಜೊತೆ ಬಜರಂಗದಳ, ಆರ್​ಎಸ್​ಎಸ್​ ಹೋಲಿಸಿ ಸಮಸ್ಯೆ ಮೈಗೆಳೆದುಕೊಳ್ಳಬೇಡಿ: ಖರ್ಗೆಗೆ ಮಹೇಶ್ ಟೆಂಗಿನಕಾಯಿ ತಿರುಗೇಟು
ಮಹೇಶ್ ಟೆಂಗಿನಕಾಯಿ ಮತ್ತು ಪ್ರಿಯಾಂಕ್ ಖರ್ಗೆ
Follow us
Rakesh Nayak Manchi
|

Updated on: May 25, 2023 | 2:59 PM

ಹುಬ್ಬಳ್ಳಿ: ಪಿಎಫ್​ಐ (PFI), ಎಸ್​ಡಿಪಿಐ (SDPI) ಜೊತೆ ಬಜರಂಗದಳ ಹಾಗೂ ಆರ್​ಎಸ್​ಎಸ್ (RSS)​ ಅನ್ನು ಹೋಲಿಸಿ ಅನಗತ್ಯವಾಗಿ ಸಮಸ್ಯೆ ಮೈಗೆಳೆದುಕೊಳ್ಳಬೇಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ಹುಬ್ಬಳ್ಳಿ ಧಾರವಾಡ ಕೇಂದ್ರ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginkai) ತಿರುಗೇಟು ನೀಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ, ಸಂವಿಧಾನಾತ್ಮಕವಾಗಿ ಕಟ್ಟಿ ಹಾಕ್ತೀವಿ. ಬಜರಂಗದಳ, ಪಿಎಫ್​ಐ, ಆರ್​ಎಸ್​ಎಸ್ ಇರಬಹುದು ನಿಷೇಧ ಮಾಡೋದಕ್ಕೂ ನಾವು ಹಿಂದೇಟು ಹಾಕೋದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು.

ಇದಕ್ಕೆ ತಿರುಗೇಟು ನೀಡಿದ ಟಿಂಗಿನಕಾಯಿ, ಕರ್ನಾಟಕ ರಾಜ್ಯದ ಜನತೆ ನಿಮಗೆ ಬಹುಮತ ಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀವು ನೀಡಿರುವ ಗ್ಯಾರಂಟಿ ಬಗ್ಗೆ ಮಾತಾಡಿ. 10 ಕೆಜಿ ಅಥವಾ 15 ಕೆಜಿ ಅಕ್ಕಿ ಕೊಡುತ್ತೀರೋ, ವಿದ್ಯುತ್ ಕೊಡುತ್ತೀರೋ ಹೇಳಿ. ಅದು ಬಿಟ್ಟು ಗ್ಯಾರಂಟಿ ಜಾರಿ ಮಾಡದೆ ವಿಷಯಾಂತರ ಮಾಡಲು ಪ್ರಯತ್ನಿಸಬೇಡಿ. ಬಜರಂಗದಳ, ಆರ್​​ಎಸ್​ಎಸ್​ ನಿಷೇಧಿಸುತ್ತೇವೆ ಅನ್ನೋದು ಸರಿಯಲ್ಲ. ರಾಜ್ಯದ ಜನ ನಿಮಗೆ ನೀಡಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಹೇಳಿದರು.

ಇದನ್ನೂ ಓದಿ: ಮೋದಿ ಸರ್ಕಾರದ 9ನೇ ವರ್ಷಾಚರಣೆ: ರಾಷ್ಟ್ರವ್ಯಾಪಿ ಸಂಪರ್ಕ ಅಭಿಯಾನ ಆಯೋಜಿಸಲಿದೆ ಬಿಜೆಪಿ

ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಕಾಂಗ್ರೆಸ್, ಪಿಎಫ್‌ಐ, ಭಜರಂಗದಳ, ಪಿಎಫ್​ಐ ಸೇರಿದಂತೆ ಮತೀಯ ಸಂಘಟನೆಗಳ ನಿಷೇಧಿಸುವುದಾಗಿ. ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿ ಬ್ಯಾನ್​ ಆಗಿರುವ ಪಿಎಫ್​ಐ ಮತ್ತು ಅದರ ರಾಜಕೀಯ ಪಕ್ಷ ಎಸ್​ಡಿಪಿಐ ಜೊತೆ ಬಜರಂಗದಳ ಹಾಗೂ ಆರ್​ಎಸ್​ಎಸ್​ ಅನ್ನು ಹೋಲಿಕೆ ಮಾಡಿ ನಿಷೇಧದ ಬಗ್ಗೆ ಭರವಸೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಮತ್ತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಪ್ರಿಯಾಂಕ್ ಖರ್ಗೆ, ಯಾವುದೇ ಸಂಘಟನೆ ಇರಬಹುದು ರಾಜಕೀಯ, ಸಾಮಾಜಿಕ, ನಮ್ಮ ರಾಜ್ಯದ ನೆಮ್ಮದಿಯನ್ನ ಶಾಂತಿ ಕೆಡಿಸಿದರೆ ಕಾನೂನು ಚೌಕಟ್ಟಿನಲ್ಲಿ, ಸಂವಿಧಾನಾತ್ಮಕವಾಗಿ ಕಟ್ಟಿಹಾಕುತ್ತೇವೆ. ಬಜರಂಗದಳ, ಪಿಎಫ್​ಐ, ಆರ್​ಎಸ್​ಎಸ್ ಇರಬಹುದು ನಿಷೇಧ ಮಾಡುವುದಕ್ಕೂ ನಾವು ಹಿಂದೇಟು ಹಾಕುವುದಿಲ್ಲ. ಅಸಂವಿಧಾನಿಕ ಚಟುವಟಿಕೆ, ಕಾನೂನು ಬಾಹಿರ ಚಟುವಟಿಕೆ, ಕೋಮು ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಕೊಂಡರೆ ಕಾನೂನು ಮೂಲಕ ಯಾವ ಕ್ರಮ ಕೈಗೊಳ್ಳಬೇಕೋ ಆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ