ಅನ್ನಭಾಗ್ಯ ಯೋಜನೆ ಅಕ್ಕಿ ಸಂಗ್ರಹಿಸಿದ್ದ ಖಾಸಗಿ ಗೋದಾಮಿನ ಮೇಲೆ ದಾಳಿ: ಅಪಾರ ಪ್ರಮಾಣದ ಅಕ್ಕಿ ವಶಕ್ಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 26, 2023 | 7:24 PM

ಅನ್ನಭಾಗ್ಯ ಯೋಜನೆ ಅಕ್ಕಿ ಸಂಗ್ರಹಿಸಿದ್ದ ಖಾಸಗಿ ಗೋದಾಮಿನ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್​ ಜಂಟಿ ದಾಳಿ ಮಾಡಿದ್ದು, ಅಪಾರ ಪ್ರಮಾಣದ ಅಕ್ಕಿ ವಶಕ್ಕೆ ಪಡೆದಿರುವಂತಹ ಘಟನೆ ಜಿಲ್ಲೆಯ ಗಜೇಂದ್ರಗಡದ ಹೊರವಲಯದ ಗೋದಾಮಿನಲ್ಲಿ ನಡೆದಿದೆ.

ಅನ್ನಭಾಗ್ಯ ಯೋಜನೆ ಅಕ್ಕಿ ಸಂಗ್ರಹಿಸಿದ್ದ ಖಾಸಗಿ ಗೋದಾಮಿನ ಮೇಲೆ ದಾಳಿ: ಅಪಾರ ಪ್ರಮಾಣದ ಅಕ್ಕಿ ವಶಕ್ಕೆ
ಖಾಸಗಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿರುವ ಅಕ್ಕಿ
Follow us on

ಗದಗ, ಆಗಸ್ಟ್​ 26: ಅನ್ನಭಾಗ್ಯ (Annabhagya) ಯೋಜನೆ ಅಕ್ಕಿ ಸಂಗ್ರಹಿಸಿದ್ದ ಖಾಸಗಿ ಗೋದಾಮಿನ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್​ ಜಂಟಿ ದಾಳಿ ಮಾಡಿರುವಂತಹ ಘಟನೆ ಜಿಲ್ಲೆಯ ಗಜೇಂದ್ರಗಡದ ಹೊರವಲಯದ ಗೋದಾಮಿನಲ್ಲಿ ನಡೆದಿದೆ. 2 ಗೋದಾಮುಗಳ ಪೈಕಿ 1 ಗೋದಾಮಿನ ಮೇಲೆ ಮಾತ್ರ ಅಧಿಕಾರಿಗಳು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಗೋದಾಮು ಪರಿಶೀಲನೆ ಮಾಡಿದ್ದು, ಅಕ್ರಮ ಮುಚ್ಚಿಹಾಕಲು ಅಧಿಕಾರಿಗಳು ಮತ್ತು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ಅನ್ನಭಾಗ್ಯಕ್ಕೆ ಕನ್ನ ಹಾಕುವರ ಹಾವಳಿ ಹೆಚ್ಚಾಗಿತ್ತು. 6ಕೆಜಿ ಅಕ್ಕಿ ನೀಡುತ್ತಿದ್ದಾಗಲೇ ಅಪಾರ ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಟ ಮಾಡಲಾಗುತಿತ್ತು. ಬಡವರಿಗಿಂತಲೂ ಅಕ್ರಮ ಅಕ್ಕಿ ಸಾಗಾಟಗಾರರಿಗೆ ಹಬ್ಬವಾಗಲಿದೆ ಅನ್ನೋ ಚರ್ಚೆ ಜೋರಾಗಿತ್ತು. ಅನ್ನಭಾಗ್ಯ ಅಕ್ಕಿ ಬಡವರ ಹೊಟ್ಟೆಗೆ ಎಷ್ಟು ಪ್ರಮಾಣ ಸೇರುತ್ತೋ ಗೋತ್ತಿಲ್ಲ, ಆದರೆ ಅಕ್ರಮ ಅಕ್ಕಿ ದಂಧೆಕೋರರು ಮಾತ್ರ ಭರ್ಜರಿ‌ ಕಮಾಯಿ ಮಾಡ್ತಾರೆ ಅನ್ನೋ ಚರ್ಚೆ ಜಿಲ್ಲೆಯಲ್ಲಿ ತೀವ್ರಗೊಂಡಿತ್ತು.

ಇದನ್ನೂ ಓದಿ: ಗದಗದಲ್ಲಿ ಎಗ್ಗಿಲ್ಲದೇ ಸಾಗಿದೆ ಅಕ್ರಮ ಮಣ್ಣು ದಂಧೆ; ಅಕ್ರಮ ಗೊತ್ತಿದ್ರೂ ಕ್ಯಾರೆ ಎನ್ನದ ಗಣಿ ಇಲಾಖೆ, ಜಿಲ್ಲಾಡಳಿತ

ಉತ್ತರ ಕರ್ನಾಟಕದಲ್ಲಿ ಅಕ್ಕಿ‌ ಮಾಫಿಯಾಕೋರರ ದೊಡ್ಡ ಜಾಲವೇ ಇದೆ. ಈಗಾಗಲೇ ಪ್ರತಿ‌ ಕುಟುಂಬಕ್ಕೆ 6 ಕೆಜಿ ನೀಡಲಾಗುತ್ತಿದೆ. ಇಷ್ಟರಲ್ಲೇ ಸಾಕಷ್ಟು‌ ಅಕ್ರಮ ಅಕ್ಕೆ ಸಾಗಾಟಾ ಜೋರಾಗಿತ್ತು. ಇನ್ನು 10 ಕೆಜಿ ವಿತರಣೆ ಆದರೆ ಅಕ್ಕಿ‌ ಕಳ್ಳರಿಗೆ ಹಬ್ಬವೇ ಸರಿ ಅಂತ ಜನರು ಕೆಂಡಕಾರಿದ್ದರು.

ಅಕ್ರಮ ಅನ್ನಭಾಗ್ಯ ದಂಧೆಕೋರರಿಂದ ಗೂಂಡಾಗಿರಿ

ಇತ್ತಿಚೆಗೆ ಗದಗನ ಬೆಟಗೇರಿಯ ಹೊರವಲಯದ ನರಸಾಪುರ ಕೈಗಾರಿಕಾ ಪರದೇಶದಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಣೆ ಮಾಡಲಾಗಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಪ್ತಿ ಮಾಡಿಕೊಂಡಿದ್ದರು. ಅಕ್ರಮವಾಗಿ ಅಕ್ಕಿ ಸಂಗ್ರಹಣೆ ಮಾಡಿರುವ ಮಾಹಿತಿಯನ್ನು ಕನ್ನಡಪರ ಸಂಘಟನೆ ಕಾರ್ಯಕರ್ತ ಮಂಜುನಾಥ ಎನ್ನುವಾತ ಆಹಾರ ಇಲಾಖೆ ಹಾಗೂ ಪೊಲೀಸ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಗದಗ: ಜಿಲ್ಲೆಯಲ್ಲೇ ಅತಿ ಹೆಚ್ಚು ಮಕ್ಕಳಿರುವ ಆದರಹಳ್ಳಿ ಸರ್ಕಾರಿ ಶಾಲೆಯಲ್ಲಿ ನೀರಿಗಾಗಿ ಪರದಾಟ

ಅಕ್ರಮ ಅಕ್ಕಿ ದಂಧೆ ಮೇಲೆ‌ ರೆಡ್ ಆದ ಮೇಲೆ, ದಂಧೆಕೋರರು ಆತನಿಗೆ ಧಮ್ಮಿ ಹಾಕಿದ್ದರು. ಅದು ಪೊಲೀಸ ಸಮ್ಮುಖದಲ್ಲಿ ಧಮ್ಮಿ ಹಾಕಿದ್ದರು. ಪೊಲೀಸರು ಮಾತ್ರ ಮೌನಕ್ಕೆ ಶರಣಾಗಿದ್ದರು. ಹೀಗಾಗಿ ನನಗೆ ಅವರಿಂದ ಜೀವ ಬೆದರಿಕೆಯಿದೆ. ನನ್ನ ಜೀವಕ್ಕೆ ಏನಾದ್ರು ಆದರೆ ಅದಕ್ಕೆ ಈ ದಂಧೆಕೋರರು ನೇರಹೊಣೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.